*ಎಂಥ ವ್ಯಕ್ತಿ ಎಂದು ಮನಸ್ಸಿನ ಆಳದಲ್ಲಿ ಚಿತ್ರಿಸಿಕೊಂಡಿರುತ್ತೆವೇಯೋ ಅದಕ್ಕನುಗುಣವಾಗಿಯೇ ವರ್ತಿಸುತ್ತೇವೆ.....*

*ಎಂಥ ವ್ಯಕ್ತಿ ಎಂದು  ಮನಸ್ಸಿನ ಆಳದಲ್ಲಿ ಚಿತ್ರಿಸಿಕೊಂಡಿರುತ್ತೆವೇಯೋ ಅದಕ್ಕನುಗುಣವಾಗಿಯೇ ವರ್ತಿಸುತ್ತೇವೆ.....*

ನಾವು ಮಾಡಲೇಬೇಕಾದ ಅರಿಯಲೇಬೇಕಾದ  ಮೊಟ್ಟಮೊದಲ ಕಾರ್ಯ ಎಂದರೆ ನಾವು "ಏನಿದ್ದೇವೆ... ಹೇಗಿದ್ದೇವೆ" ಎನ್ನುವದನ್ನು ಅರಿತುಕೊಳ್ಳವದು. ಈ ಅರಿಕೆ ಮನವರಿಕೆಯಾದಂತೆಯೇ ನಮ್ಮ ವ್ಯಕ್ತಿತ್ವದ ಅನಾವರಣೆ ಆಗುತ್ತಾ ಸಾಗುತ್ತದೆ.

ನಾನೊಬ್ಬ ಜ್ಙಾನಿ, ರಾಜ, ಸ್ನೇಹಿ, ಪರಿಸರಪ್ರೇಮಿ, ಸಾಧಕ, ಇತ್ಯಾದಿ ಇತ್ಯಾದಿ "ಏನಿದ್ದೇನೆ" ಎಂಬ  ಅರಿವು ಸದಾ ಅತ್ಯಗತ್ಯ.  ನಮ್ಮ ತನದ ಅರಿವಿನಲ್ಲಿಯೇ ನಮ್ಮ ವ್ಯಕ್ತಿತ್ವದ ಅರಳುವಿಕೆ ಅಡಗಿದೆ.

*ನಾನು ಏನಿದ್ದೇನೆ ಎಂಬ ಅರಿವು ಮೂಡುವದು ಹೇಗೆ.... ???*

ಈ ಅರಿವು ಮೂಡುವದು, ಮೂಡಿದ ಅರಿವು ಮನದಲ್ಲಿ ತಳವೂರಿನಿಲ್ಲುವದೂ ತುಂಬ ಕಠಿಣವೇ. ವ್ಯಕ್ತಿತ್ವದ ಅಭಿವ್ಯಕ್ತಿ ತುಂಬ ಕಷ್ಟವೇ ಸರಿ. ಆದರೆ ದೇವರ ಪಾರ್ಶದರಾದ ಗುರುಗಳ ಸಾನ್ನಿಧ್ಯವಿದ್ದರೆ ಕಷ್ಟವಾದದ್ದು,  ಕಠಿಣವೆಂಬವದೂ ಯಾವದೂ ಇರದು. ಆದರೆ ಗುರುಶಿಷ್ಯರ ತುಂಬ ಶ್ರಮಬೇಕು.

ಒಂದು ಸುಂದರ ಕಥೆ....

ವಿಷಘಳಿಗೆಯಲ್ಲಿ ರಾಜನಿಗೆ ಒಂದು ಮಗು ಆಯಿತು. ಆ ಮಗುವಿನಿಂದ ನಿನಗೆ ಹಿತವಿಲ್ಲ ಎಂದರು ಭವಿ಼ಷ್ಯಗಾರರು. ಹುಟ್ಟಿದ ಆ ಮಗುವನ್ನು ಕಾಡಿನಲ್ಲಿ ಗಿಡದ ಕೆಳೆಗೆ ಮಲಗಿಸಿ, ಹಣವನ್ನೂ ಇರಿಸಿ ಬಂದರು ರಾಜಭಟರು.

ಆ ಕೂಸನ್ನು ಮಕ್ಕಳೇ ಇಲ್ಲದ ಒಬ್ಬ ಅಗಸ ತಂದು ಸಾಕಿದ. ಸಲುಹಿದ. ಬೆಳಿಸಿದ. ಅವನ ನಾಮಕರಣ ಮಾಡಿದರು ಕಟ್ಯಪ್ಪ ಎಂದು. ಅಪ್ಪನ ಕುಸುಬಿನಂತೆ ಕತ್ತೆ ಕಾಯಲು ಆರಂಭಿಸಿದ.  ಮುಂದೊಂದು ದಿನ ಆ ಕಟ್ಯಪ್ಪ ಕತ್ತಿ ಕಾಯ್ದು ಸುಸ್ತಾಗಿ ಒಂದು ಗಿಡದ ಅಡಿಯಲ್ಲಿ ವಿಶ್ರಮಿಸಿದ.

ಆ ಪ್ರಸಂಗದಲ್ಲಿ ಒಬ್ಬ ಋಷಿಯ ಆಗಮನವಾಯಿತು. ಈ ಹುಡುಗನ ಕೈ ಕಾಲು ಮುಖ ಲಕ್ಷಣ ನೋಡಿ ನೀನು ಯಾರು..?? ಎಂದು ಕೇಳಿದಾಗ ನಾನು ಕಟ್ಯಪ್ಪ, ನನ್ನ ಕುಸುಬು ಕತ್ತೆ ಕಾಯುವದು ಎಂದುತ್ತರಿಸಿದ....

ಋಷಿ...) ನಿನ್ನ ಮುಂದಿನ ಧ್ಯೇಯೋದ್ದೇಶ್ಯಗಳೇನು...

ಕಟ್ಯಪ್ಪ...) ಕತ್ತೆ ಕಾಯುವ ಕುಸುಬವನ್ನು ಊರೆಲ್ಲ ವಿಸ್ತರಿಸಿ, ಇನ್ನೂ ಹೆಚ್ಚು ಕತ್ತೆಗಳನ್ನೂ ಬೆಳಿಸಿ, ಸಿರಿವಂತನಾಗುವದು ಎಂದನು.

ಋಷಿ...) ನಕ್ಕು... ಹೇಳಿದರು... ನೀನು ಕತ್ತೆ ಕಾಯುವವನ ಮಗನು ನೀನಲ್ಲ. ನೀನು ಈ ದೇಶದ ರಾಜನ ಮಗನಿದ್ದೀಯ. ಜಗತ್ತನ್ನು ಕಾಯುವ ತಾಕತ್ತು ನಿನಗಿದೆ. ನಡೆ ರಾಜನ ಮನೆಗೆ. ಎಂದು ಕರೆದೊಯ್ದರು.

ಕಟ್ಯಪ್ಪ...) ದಾರಿ ಮಧ್ಯದಲ್ಲಿ ಕೇಳಿದ "ರಾಜಮನೆಯಲ್ಲಿ ಒಗೆಯಲು ಬಟ್ಟೆಗಳು ತುಂಬ ಸಿಗಬಹುದಲ್ಲವೇ...?? ಎಂದು.

ಋಷಿ....) ಹೇ ಮಹಾಪ್ರಭು..!! ಈ ಹುಡುಗ ತಮ್ಮ ಪುತ್ರ. ಇವನನ್ನು ಸ್ವೀಕರಿಸಿ. ನಿಮ್ಮ ವಿಷಘಳಿಗೆ ಕೊನೆಗೊಂಡಿದೆ. ವಿಚಾರ ಮಾಡದೇ ಸ್ವೀಕರಿಸಬೇಕು ಎಂದು ಮನವಿ.

ಈ ಮನವಿಯನ್ನು ಗಮನಿಸಿದ ರಾಜನಿಗೂ ಹಾಗೂ  ಈ ಹುಡುಗನಿಗೂ ಮನಸ್ಸಿನಲ್ಲಿ ತಳಮಳ. ಕೊನೆಗೆ ಒಪ್ಪಿದ ರಾಜ ಅವನನ್ನು ಸ್ವೀರಿಸಿದ.  ಕಟ್ಯಪ್ಪ ಯುವರಾಜನಾದ.

ರಾಜ...) ಯುವರಾಜರೇ ನಿಮ್ಮ ಧ್ಯೇಯೋದ್ದೇಶ್ಯಗಳೆನು...??

ಕಟ್ಯಪ್ಪ...) ರಾಜ್ಯಗಳಲ್ಲಿ ಕತ್ತೆಕಾಯುವ ಕುಸುಬನ್ನು ಬೆಳಿಸುವದು. ರಾಜಮನೆಯಲ್ಲಿ  ಅಗಸರಿಗೆ ಹೆಚ್ಚೆಚ್ಚು ಬಟ್ಟೆಗಳನ್ನು ಒಗಿಯಲು ಕೆಲಸ ಕೊಡುವದು. ಎಂದುತ್ತರಿಸಿದ.

ಉತ್ತರವನ್ನು ಕಂಡೇ ತತ್ತರಿಸಿ ಹೋದ ರಾಜನನ್ನು ಗಮನಿಸಿದ ಋಷಿಗಳು ಆ ಕಟ್ಯಪ್ಪನನ್ನು ಯುವರಾಜನನ್ನಾಗಿ ಮಾರ್ಪಾಡು ಮಾಡಲು ತುಂಬ ಶ್ರಮಿಸಿದರು. ಆದರೆ ಕಟ್ಯಪ್ಪನಿಗೆ ಕತ್ತೆಕಾಯುವ ಬಟ್ಟೆ ವಗೆಯುವ ವಿಚಾರ ಬಿಟ್ಟು ಬೇರೆಯದು ಬರಲೇ ಇಲ್ಲ. ಹತಾಶರಾಗಿ ಹೊರಟೇ ಹೋದರು ಋಷಿಗಳು. ಇವನು ಕತ್ತೆಕಾಯುವದೇ ಕುಸುಬು ಮಾಡಿಕೊಂಡು ಉಳಿದೇಬಿಟ್ಟ.

ಹೀಗೇಯೇ ಇಂದಿನ ನಮ್ಮ ಸ್ಥಿತಿಯಾಗಿದೆ. ನಮ್ಮ ಮನದ ಆಳದಲ್ಲಿ ಹುಟ್ಟಿನಿಂದ ಕ್ಷುದ್ರವಿಷಯಗಳೇ ಬೇರೂರಿ ಬಿಟ್ಟಿವೆ. ಅಂತೆಯೇ ಇಂದಿಗೂ ನಾವೂ ಕ್ಷುದ್ರರಾಗಿಯೇ ಉಳಿದಿದ್ದೇವೆ.

ಉಚ್ಚ ವಿಚಾರಗಳ ಆದರ್ಶಗಳು ಎಮ್ಮದಾಗಬೇಕು. ಜ್ಙಾನಿಯಾಗಬೇಕು. ಸಾಧಕನಾಗಬೇಕು. ಧಾರ್ಮಿಕನಾಗಬೇಕು. ಸಾಧಕನು ಆಗಲೇಬೇಕು. ದೈವಭಕ್ತನಾಗಿರಬೇಕು. ವಿಷ್ಣು ವೈಷ್ಣವರ ಪ್ರಿಯನಾಗಿಯೇ ಜೀವಿಸಬೇಕು. ಈ ತರಹದ ಆಳವಾದ ವಿಚಾಗಳು ಮನಸದಸಿನಲ್ಲಿ ತಳವೂರಿ ನಿಂತಾಗ ಮಾತ್ರ ಸಾಧ್ಯ ಆ ತರಹದ ವ್ಯಕ್ತಿಯಾಗಲು. ಇಲ್ಲವೇ ego ವಿಗೆ ಬಲಿಯಾಗಿ ಕ್ಷುದ್ರವಿಚಾರಗಳ ದಾಸನಾಗಿ, ದ್ವೇಶ, ಹಗೆ, ತಾತ್ಸಾರ, ಮಾತಾಡದಿರುವದು, ಇತ್ಯಾದಿ ಇತ್ಯಾದಿಗಳ ಬಲಿಯಲ್ಲಿ ಬೀಳುವ ಪ್ರಸಂಗ ಎದುರಾಗಲೂ ಬಹುದು.

ಮನಸ್ಸಿನಲ್ಲಿ ತಳೂರಿಸಿಕೊಳ್ಳುವ ವಿಚಾರ ಮಹಾನ್ ಆಗಿರಲು  ಉತ್ತಮ ಗುರುಗಳ, ನಿರಂತರ ಹಿತವನ್ನೇ ಬಯಸುವ ಹಿತೈಷಿಗಳ, ಜ್ಙಾನಿಗಳ, ಪುಣ್ಯವಂತರುಗಳ,  ಸಾನ್ನಿಧ್ಯ ಖಂಡಿತವಾಗಿಯೂ ಇರಲೇಬೆಕು. ಇಲ್ಲವೇ ಈತರಹದ ಕ್ಷುದ್ರತೆಯಲ್ಲಿಯೇ ಜೀವನ ಕೊನೆಯಾಗುವದು ಅತ್ಯಂತ ಸಹಜ.

ಆದ್ದರಿಂದ ಇಂದು ನಮ್ಮ ವ್ಯಕ್ತಿತ್ವದ ಅಭಿವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿಯ ವಿಚಾರಗಳ ಆಳತೆ ಕಾರಣವಾಗಿದೆ. ಆ ಆಳವಾದ ವಿಚಾರಗಳನ್ನು ತಿಳುಹಿಸಿ, ಉಳಿಸಿ, ಸ್ಥಿರವಾಗಿ ನಿಲ್ಲಿಸುವವರು ಒಂದು ಗುರುಗಳೇ ಆಗಿರಬೇಕು. ಇಲ್ಲವೇ ಅತ್ಯಂತ ಹಿತವನ್ನೇ ಬಯಸುವ ಹಿತೈಷಿಯೇ ಆಗಿರಬೇಕು. ಋಷಿಯಂತೆ ನಮ್ಮ ಜೀವನದಲ್ಲಿ  ಈ ಈರ್ವರಲ್ಲಿ ಯಾರಾದರೂ ಬಂದಿದ್ದರೆ, ನಮ್ಮ ಬಳಿ ಉಪದೇಶಿಸುತ್ತಾ ಇರುವಂಹವರು ಆಗಿದ್ದರೆ, ಆ ಗುರು ಹಿತೈಷಿಗಳನ್ನು ಕಟ್ಯಪ್ಪನ ಹಾಗೆ  ನಮ್ಮ ಕ್ಷುದ್ರತನದಿಂದ ಸರ್ವಥಾ ಕಳೆದುಕೊಳ್ಳುವದು ಬೇಡ. ಕಟ್ಯಪ್ಪನಂತಾಗಿ ಉಳಿಯುವದಂತೂ ಸರ್ವಥಾ ಬೇಡ..... ಕ್ಷುದ್ರವಿಚಾರಗಳ ದಾಸರಾಗದೇ, ಉನ್ನತ ವಿಚಾರಗಳನ್ನೇ ಅಲಂಕರಿಸಿಕೊಡು ಉನ್ನತವಾದದ್ದನ್ನು ಪಡೆಯೋಣ....

*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*