*ಯುದ್ಧ ನಡೆಯುವದು ಮೊದಲು ಅಂತರಂಗದಲ್ಲಿ, ನಂತರ ರಣರಂಗದಲ್ಲಿ*

ಯುದ್ಧಕ್ಕೆ ನೇರ ಕಾರಣ ದ್ವೇಷ ಅಸೂಯೆ, ವೈರ ಮನೋಭಾವನೆ. ಅಂದರೆ ಪ್ರೀತಿಯ ಕೊರತೆಯೇ ಯುದ್ಧಕ್ಕೆ ಮೂಲಕಾರಣ.
ಪಾಂಡವರ ಹಾಗೂ ದರ್ಯೋಧನಾದಿಗಳ ಘನಘೋರ ಯುದ್ಧವಾಯಿತು. ಈ ಯುದ್ಧದ ಹಿಂದಿನ ಐವತ್ತು ಆರವತ್ತು ವರ್ಷಗಳನ್ನು ಸ್ವಲ್ಪ ಹಿಂದುರಿಗಿ ನೋಡಿದಾಗ ಒಂದು ಸ್ಪಷ್ಟವಾಗತ್ತೆ ಪಾಂಡವರಲ್ಲಿ ಪ್ರೀತಿ ಇಲ್ಲದಿರುವದೇ ಮೂಲ ಎಂದು. ಪ್ರೀತಿ ಇಲ್ಲದಾದಾಗ ಕ್ಷಣ ಕ್ಷಣದಲ್ಲಿಯೂ ದ್ವೇಶ ಹಗೆತನ ವೃದ್ಧಿಸುತ್ತಾ ಸಾಗತ್ತೆ.
ಪ್ರೀತಿ ಇಲ್ಲದಿರುವದರಿಂದಲೇ, ಅಥವಾ ಕ್ಷೀಣಿಸಿರುವದರಿಂದಲೇ ಏನೋ ಮೊದಲಿಗೆ ಅಂತರಂಗದಲ್ಲಿ ಅವನೊಟ್ಟಿಗೆ ಯುದ್ಧ ಸಾರುತ್ತಾನೆ. ಆ ಯುದ್ಧ ರಣರಂಗದಲ್ಲಿ ಕೊನೆಯಾಗತ್ತೆ.
*ದ್ವೇಶ ಅಸೂಯೆ ವೈರ ಇವುಗಳಿಗೆ ಕಾರಣವೇನು....??*
ದ್ವೇಶ ಅಸೂಯೆ ವೈರ ಇವುಗಳಿಗೆ ಮೂಲ ಕಾರಣ *ಪ್ರೀತಿಯ ಕೊರತೆಯೇ,* ಅದರಿಂದಾಗಿಯೇ ಮನದಲ್ಲಿ ಕಿಡಿ ಏಳತ್ತೆ. ಹೃದಯವನ್ನೇ ಸುಡತೊಡಗುತ್ತದೆ. ಪರಸ್ಪರ ಅಸೂಯ, ಅಶಾಂತಿ, ಅಸಮಾಧಾನಗಳು ಭುಗಿಲೇಳುತ್ತವೆ. ಕ್ರೋಧ ತಾಂಡವ ಆಡುತ್ತದೆ. ಪೂರ್ವಾಪರ ವಿವೆಕ ಕಣ್ಮರೆಯಾಗುತ್ತದೆ. ಈ ಅವಸ್ಥೆಯೇ ಯುದ್ಧದ ಸಿದ್ಧತೆ....
*ಪ್ರೀತಿಯ ಕೊರೆತೆಯಿಂದ ಏನೆಲ್ಲ ಅನರ್ಥಗಳಿವೆ... ??*
ಪ್ರೀತಿ ಕಣ್ಮರೆ ಆಯಿತು ಎಂದರೆ, ಆಗದವನ ರೀತಿ ನೀತಿ, ಅಂದ ಆಯು, ಆಚಾರ ವಿಚಾರ, ಅಲಂಕಾರ ವ್ಯವಹಾರ, ಮಾತು ಮೌನ ಇವೆಲ್ಲವೂ ಅಸಹನೀಯವಾಗುತ್ತವೆ. ಆ ಬಗ್ಗೆ ಮನಸ್ಸು ರೋಸಿಹೋಗಲು ಆರಂಭಿಸುತ್ತದೆ. "ಅವನ ಅವನತಿಯ ಹಾರೈಕೆಯೇ ಹಿತವೆನಿಸುತ್ತದೆ" ಆತನ ನೋವು ಇವನ ನಲಿವಿಗೆ ಕಾರಣವಾಗುತ್ತದೆ. ಆತನ ಯಾತನೆ ಈತನ ನೆಮ್ಮದಿಗೆ ಮೂಲವೆನಿಸುತ್ತದೆ. ಇದೆಂಥ ವಿಪರ್ಯಾಸವಲ್ಲವೇ.....??? *ಈ ಅವಸ್ಥೆಯೇ ಅಂತರಂಗದಿಂದ ರಣರಂಗಕ್ಕೆ ತಂದು ನಿಲ್ಲಿಸುತ್ತದೆ.* ಆ ಯುದ್ಧ ಸರ್ವಥಾ ನಮಗೆ ಬೇಡವೇ ಬೇಡ.
*ಈ ಯುದ್ಧದಿಂದ ಹೊರಬರುವದು ಹೇಗೆ.....?*
ಈ ಯುದ್ಧಗಳು ಎಲ್ಲ ಸಂಬಂಧಗಳಲ್ಲಿಯೂ ಇರುವದೇ. ಈ ಯುದ್ಧಗಳಿಂದ ಹೊರಬರುವದು ಅನಿವಾರ್ಯವೂ ಹೌದು.
*ಹೊರಬರುವದು ಹೇಗೆ....??*
"ಸರ್ವೇ ಜನಾಃ ಸುಖಿನೋ ಭವಂತು" ಎಂಬ ಎಲ್ಲರಲ್ಲಿಯೂ ಸುಖಕಾಣುವ ಹೆಬ್ಬಯಕೆಯ ಪ್ರೀತಿಯೇ ಅತ್ಯಂತ ಸುಸೂತ್ರ. *ಪ್ರೀತಿಯೇ ಪರಮೌಷಧ* ಪ್ರೀತಿಯೇ ಈ ಎಲ್ಲದಕ್ಕೂ ಅತ್ಯುತ್ತಮ ಔಷಧ.
*ಪ್ರೀತಿ ಇದು ಕಾಮಧೇನುವಿದ್ದಂತೆ*
ದೇವರು ನಮ್ಮ ಮೇಲೆ ಪ್ರೀತಿಯ ಪ್ರವಾಹವನ್ನೇ ಹರಿಸಿದ್ದಾನೆ, ಅಂತೆಯೇ ಇಂದು ನಾವು ಸುಖದಿಂದ ಇದ್ದೇವೆ. ದೇವರು ನಮ್ಮ ಮೇಲೆ ಮಾಡುವ ಪ್ರೀತಿಯಿಂದಲೇ ದೇವರಿಂದ ಏನೆಲ್ಲವನ್ನು ಪಡೆದಿದ್ದೇವೆ.
ನಮ್ಮ ಮೇಲಿನ ಪ್ರೀತಿಯ ಪರಾಕಾಷ್ಠೆ ಇರುವದರಿಂದಲೇ ದೇವರು ಇನ್ನೊಂದು ದೊಡ್ಡ ಕಾರ್ಯವನ್ನು ಮಾಡಿದ್ದಾನೆ. ಅದೇನೆಂದರೆ *ನಮ್ಮೆಲ್ಲರಲ್ಲಿ ಪರಸ್ಪರ ಪ್ರೀತಿಯನ್ನು ಇರಿಸಿದ್ದಾನೆ.*
*ಪ್ರೀಯ ಅಭಿವ್ಯಕ್ತಿ ಹೇಗೆ...??*
ಅಸೂಯೆ, ದ್ವೇಶ, ಮಾತ್ಸರ್ಯಗಳು ದೂರ ಮಾಡಿಕೊಳ್ಳಲೇಬೇಕು. ಅದಕ್ಕಾಗಿ ಸಕಾರಾತ್ಮಕ ವಿಚಾರಗಳನ್ನು ಮನೋಭೂಮಿಯಲ್ಲಿ ಬಿತ್ತಬೇಕು. ಪರಸ್ಪರ ಗೌರವ, ಆದರಗಳು ಅಭಿವೃದ್ಧಿಸಬೇಕು. ಅದಕ್ಕಾಗಿ ಆ ವ್ಯಕ್ತಿಯ ಸ್ಪಷ್ಟ ಜ್ಙಾನ ತಿಳುವಳಿಕೆ ಅನಿವಾರ್ಯ. ಸಕಾರಾತ್ಮಕ ವಿಚಾರ. ಅವನ ಉಪಕಾರಗಳ ಮೆಲಕು. ಹಿತೈಷಿತನದ ಅರಿವು. ಅವನಂಥವರು ಮತ್ತೊಬ್ಬರು ಸಿಗರು ಎಂಬ ಭಯ. ಪರಸ್ಪರ ಕಾಳಜಿ. ಒಂದೆರಡು ಹಿತಮಾತುಗಳು ಇತ್ಯಾದಿಗಳೇ ಪ್ರೀತಿ ಅಭಿವೃದ್ಧಿಗೆ ಕಾರಣ.
*ಒಂದಂತೂ ನಿಜ......*
ಪರಿಶುದ್ಧ ಹೃದಯವಂತನಾದರೆ ಪ್ರೀತಿಯ ತವರು ಆಗುತ್ತಾನೆ. ಪ್ರೇಮದ ಗಣಿಯಾಗುತ್ತಾನೆ. ವಾತ್ಸಲ್ಯದ ನಿಧಿಯಾಗುವ. ಕ್ಷಮೆಯ ಮೂರ್ತಿಯಾಗುವ. ಪ್ರತಿಯೊಂದಕ್ಕೂ ಸ್ಪಂದಿಸುವ suggestion box ಎಂದೇ ಆಗುವ. ಈ ಎಲ್ಲ ಗುಣಗಳೂ ನಮ್ಮ ಗುರುಗಳಿಂದಾರಂಭಿಸಿ ದೇವರವರೆಗೆ ಹೆಚ್ಚು ಹೆಚ್ಚು ಕಾಣುತ್ತಾ ಸಾಗುತ್ತೇವೆ.
ಅಂತರಂಗದ ಯುದ್ದದಿಂದ ಆರಾಂಭಿಸಿ, ರಣರಂಗದ ಯುದ್ಧ ನಿಲ್ಲಿಸುವದು ಪ್ರೀತಿಯೇ. ಸರ್ವತ್ರ ಸರ್ವಕಾಲದಲ್ಲಿಯೂ ಅಶಾಂತಿ, ದ್ವೇಶ, ಮಾತ್ಸರ್ಯಗಳನ್ನು ಮಟ್ಟುಹಾಕುವ ಒಂದೇನಾದರೂ ಉಪಾಯವಿದ್ದರೆ ಅದು ಪ್ರೀತಿಯೇ. ದೋಷ ದುರಿತಗಳನ್ನು ನೀಗಿಸುವ ದಿವ್ಯೌಷಧಿ ಎಂದರೆ ಅದು ಪ್ರೀತಿಯೇ. ಶಾಂತಿ ಸಮೃದ್ಧಿಗಳನ್ನು ಒದಗಿಸುವ ಒಂದೇನಾದರೂ ಔಷಧವಿದೆ ಎಂದರೆ ಅದು ಪ್ರೀತಿಯೇ ಆಗಿರುತ್ತದೆ. ಪ್ರಕೃತಿದತ್ತವಾದ ಎಲ್ಲವನ್ನೂ ಪ್ರೀತಿಸೋಣ. ಎಲ್ಲರೂ ಸುಖವಾಗಿಯೇ ಇರಲಿ ಎಂದು ಹರಿಸೋಣ. ಇನ್ನೊಬ್ಬರಪರವಾಗಿ ಅಥವಾ ನಮವರ ಪರವಾಗಿ ನಮ್ಮಲ್ಲಿ ಅಂತೂ ಶುದ್ಧವಿಚಾರಗಳನ್ನೇ ಮಾಡೋಣ. ಗುರು ದೇವತಾ ದೇವರುಗಳು ಹಾಗೆಯೇ ಪ್ರೇರಿಸಲಿ ಎಂದು ಬೇಡೋಣ.....
*ಸರ್ವೇ ಜನಾಃ ಸುಖಿನೋ ಭವಂತು, ಸರ್ವ ಸನ್ಮಂಗಳಾನಿ ಸಂತು.*
*✍🏽✍🏽✍ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments