Posts

Showing posts from May, 2019

*ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ.....*

Image
*ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ.....* ಜೀವನದ ದಿನದ ಸಾರ್ಥಕ ಕ್ಷಣಗಳು ಕೆಲವಾದರೂ ಇರಬೇಕು ಎಂದರೆ "ಶ್ರೀಕೃಷ್ಣ ಪರಮಾತ್ಮನ ಕ್ಷಣದ ನೋಟ, ಒಂದೇ ಮಾತಿನ ಉಪದೇಶ, ಕೃಷ್ಣ ಎಂಬೆರಡಕ್ಷರದ ಶ್ರವಣ, ಕೆಲಕ್ಷಣದ ಚಿಂತನ, ಒಂದರೆ ಆಜ್ಙಾಪಾಲನ" ಇವುಗಳು ಇದ್ದರೆ  ಸಾಕು. ಯೋಗ್ಯನೇ ಆಗಿದ್ದರೆ ಮಹಾ ಮೋಕ್ಷಾದಿ ಪುರುಷಾರ್ಥರೂಪ ಸಾರ್ಥಕವೇ ಆಗುತ್ತದೆ.  ಇಲ್ಲವೋ ಪಾಪಕಳೆದು ಪುಣ್ಯ ಕೊಟ್ಟು ಸುಖವಾಗಿ ಇರಿಸುತ್ತದೆ, ಅಂತೆಯೇ ಶ್ರೀ ವಾದಿರಾಜರು *ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ* ಎಂದರು.  ಯೋಗ್ಯನಾಗಿರಬೇಕು, ಯೋಗ್ಯತೆ ಇರಬೇಕು ಇದು ನೂರರಷ್ಟು ನಿಜ.  *ದುರ್ಯೋಧನ - ಅರ್ಜುನ* ಭೀಷ್ಮ, ದ್ರೋಣ, ವಿದುರ, ಧೃತರಾಷ್ಟ್ರ, ಮೈತ್ರೇಯರು, ಈ ಎಲ್ಲ ಮಹನೀಯರುಗಳು ದುರ್ಯೋಧನನಿಗೆ ಮಾಡಿದಷ್ಟು ಉಪದೇಶ ಇನ್ಯಾರಿಗೂ ಮಾಡಿರಲಿಕ್ಕಿಲ್ಲ. ಮಹಾಭಾರತದಲ್ಲಿಯೂ ಸಿಗುವದಿಲ್ಲ. ಆದರೆ ಈ ಎಲ್ಲ ಉಪದೇಶ ಬೋರ್ಬಂಡೆಯ ಮೇಲೆ ನೀರು ಚೆಲ್ಲಿದಂತಾಯ್ತು.  ಅದೇ ಶ್ರೀಕೃಷ್ಣ ಪರಮಾತ್ಮ ಹದಿನೆಂಟು ಅಧ್ಯಾಯದ ಗೀತೆಯನ್ನು ಹೇಳಿ  *....ತಸ್ಮಾದ್ಯುಧ್ಯಸ್ವ ಭಾರತ*  ಅರ್ಜುನ..!! ಅರ್ಜುನ ನೀನು ಯುದ್ಧಮಾಡು ಎಂದಿಷ್ಟು ಹೇಳಿದ. ಯುದ್ಧಕ್ಕೆ ಸಿದ್ಧನೇ ಆದ. ಇದು ಕೃಷ್ಣಪರಮಾತ್ಮನ *ಕ್ಷಣದ ಉಪದೇಶದ* ಫಲ.  *ನಾವು - ಪರೀಕ್ಷಿತ* ಹುಟ್ಟಿದಾಗಿನಿಂದ ಎಷ್ಟು ಜನ್ಮಗಳಲ್ಲಿ ಭಾಗವತ ಕೇಳಿದ್ದೇವೆಯೋ ಗೊತ್ತಿಲ್ಲ. ಎ...

ಆಪತ್ತುಗಳ ಸುಳಿಯಲ್ಲಿ.......*

Image
* ಆಪತ್ತುಗಳ ಸುಳಿಯಲ್ಲಿ.......* ಆಪತ್ತುಗಳು ಸಹಜ. ಆಪತ್ತುಗಳ ಪರಿಹಾರವೂ ಅಷ್ಟೇ ಸರಳ. ಆದರೆ ಆಪತ್ತುಗಳನ್ನೇ ಪ್ರೀತಿಸುವದರಿಂದ ಪರಿಹಾರವೂ ಕಷ್ಟವಾಗಿದೆ. ಪರಿಹಾರೋಪಾಯವೂ ತಿಳಿಯದಾಗಿದೆ.  *ಆಪತ್ತುಗಳು ಎಷ್ಟುವಿಧ... ಹೇಗೆ ಬರುತ್ತವೆ* ಒಂದು ತರಹದ ಆಪತ್ತುಗಳು ನಮ್ಮ ಪ್ರಾರಬ್ಧಕರ್ಮಾನುಸಾರ. ಮತ್ತೊಂದು ತರಹದ ಆಪತ್ತುಗಳು ನಮ್ಮ ಕೈಯಿಂದಲೇ ತಂದುಕೊಂಡಿರುವಂತಹದ್ದು. ಇನ್ನೊಂದು ದೇವರೇ ಕೊಟ್ಟಿರೋದು. ಹೀಗೆ ಮೂರು ವಿಭಾಗವಾಗಿ ಆಪತ್ತುಗಳನ್ನು ವಿಭಜಿಸಬಹುದು.  *೧) ಪ್ರಾರಬ್ಧ ಕರ್ಮಾನುಸಾರ ಆಪತ್ತುಗಳು....* ಇಂದು ನಾವು ಏನು ಅನುಭವಿಸಿದರೂ ಪ್ರಾರಬ್ಧ ಕರ್ಮಾನುಸಾರವೇ ಇದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಎಲ್ಲದರಲ್ಲಿ ಆಪತ್ತುಗಳೂ ಒಂದು. ಅವುಗಳೂ ಪ್ರಾರಬ್ಧಕ್ಕೆ ಅನುಗುಣವಾಗಿಯೇ ಬರುವಂತಹದ್ದು.  *೨) ಆಪತ್ತುಗಳನ್ನು ನಾನೇ ತಂದುಕೊಳ್ಳುವದು.....* ಎಂದಿಗೂ ಆಪತ್ತುಗಳ ಸುಳಿಯಲ್ಲಿ ಬೀಳುವದನ್ನೂ ಯಾರೂ ಅಪೇಕ್ಷಿಸರು. ಆದರೆ ಯಾರಿಗೆ ಸಹನೆ ತಾಳ್ಮೆಗಳಿಲ್ಲವೋ ಅವರು ಆಪತ್ತುಗಳನ್ನು ಎಳೆದುಕೊಳ್ಳುತ್ತಾರೆ.... ಹೇಗದು...?? ಕ್ರಮಬದ್ಧ ಜೀವನದಲ್ಲಿ ಶಿಸ್ತುಕ್ರಮವನ್ನು ಅನುಸರಿಸಿದಾಗ ಯಾವ ಆಪತ್ತುಗಳಿರದು.  ಯಾವಾಗ ಶಿಸ್ತು ಕ್ರಮವನ್ನು ಮೀರಿದನೋ ಆರಂಭವಾದವು ಆಪತ್ತುಗಳ ಸುರುಮಳಿ.  ರಸ್ತೇ ನಿಯಮ ಪಾಲಿಸುವದು ಧರ್ಮ. ಆ ನಿಯಮವನ್ನು ಯಾವಾಗ ಘಾಳಿಗೆ ತೂರಿದನೋ, ಆಪತ್ತುಗಳು ...

*ಓಡುವದು ಬೇಡ.... ನಿಲ್ಲೋಣ... ಎದುರಿಸೋಣ*

Image
*ಓಡುವದು ಬೇಡ.... ನಿಲ್ಲೋಣ... ಎದುರಿಸೋಣ* ವಿದ್ಯಾಪೀಠದಲ್ಲಿ ಇರುವಾಗ ಆಟ ಓಟಗಳಲ್ಲಿಯೂ ತುಂಬ ಅಭಿರುಚಿ. ಬೇಳಿಗ್ಗೆ ನಾಲಕು ಗಂಟೆಗೆ ಇಂದ ಒಂದು ಗಂಟೆಯ ಕಾಲ ಅನೇಕ ವರ್ಷಗಳವರೆಗೆ ರನ್ನಿಂಗ್ ಮಾಡಿಸುತ್ತಿದ್ದರು. ಅದರಲ್ಲಿ ಅನೇಕ ಹಿರಿಯರೂ ಕಿರಿಯರೂ ಭಾಗವಹಿಸುತ್ತಿದ್ದರು.  ಒಂದು ದಿನ ಬೆಳಗ್ಗಿನ ಝಾವಾ ಓಡ್ತಾ ಇದ್ದೇವೆ, ನಾಯಿಗಳ ಗುಂಪು ನಮ್ಮನ್ನು ಅಟ್ಟಿಸಿಕೊಂಡು ಬಂತು. ನಾವು ಇನ್ನೂ ಜೋರಾಗಿ ಓಡಿದೆವು, ಅವುಗಳೂ ಇನ್ನೂ ಜೋರಾಗಿ ಅಟ್ಟಿಸಿಕೊಂಡು ಕಡಿಯಲೇ ಬಂದವು. ಆಗ ನಮ್ಮಕಿಂತಲೂ ಮೊದಲೇ ಹೊರಟ ಕೆಲ‌ಹಿರಿಯರ ಗುಂಪು ಬಂತು. ಅವರು ಹೇಳಿದರು *ಏ ಗೋಪ್ಯಾ !!!* "ಓಡಬೇಡ ಮೊದಲು ನಿಲ್ಲು...." ಎಂದರು. ನಿಂತೆವು. ಮಜಾ ಅಂದರೆ ನಾವು ನಿಂತ ಕ್ಷಣಕ್ಕೇ ಓಡಿ ಬರುತ್ತಿರುವ ನಾಯಿಗಳೂ ನಿಂತವು. ಆಗ ಆ ಹಿರಿಯರು ಅಂದರು "ಆ ನಾಯಿಗಳನ್ನು ಎದುರಿಸು..." ಎಂದು. ಧೈರ್ಯದಿಂದ ಎದುರಿಸಿದೆವು, ಆ ನಾಯಿಗಳೋ ಕೆಲ‌ಕ್ಷಣದಲ್ಲಿಯೇ  ದಿಕ್ಕಪಾಲಾಗಿ ಓಡಿ ಹೋದವು. ಇದು ಅಂದು ನಡೆದ ನೈಜ ಘಟನೆ. ಆದರೆ ಇಂದು ನಿಜವಾಗಿ ಜೀವನದ ಪಾಠವೂ ಆಗಿದೆ...  ಇಂದು ನಮ್ಮ ಜೀವನದಲ್ಲಿ ಆಪತ್ತುಗಳು ಬರುತ್ತವೆ, ಕಷ್ಟಗಳೂ ಬರುತ್ತವೆ, ಅನೇಕ ಉತ್ತಮೋತ್ತಮ ಕಾರ್ಯಗಳಲ್ಲಿ ಕಂಟಕಗಳೂ ಬರುತ್ತವೆ, "ಭಯ ವಿಹ್ವಲರಾಗಿ ಓಡಿ ಹೋಗದೆ, ದೃಢ ನಿಷ್ಠೆಯಿಂದ ಎದುರಿಸಿದೆವು ಎಂದಾದರೆ ಆ ನಾಯಿಗಳಂತೆ ಇವೆಲ್ಲವೂ ಓಡಿಹೋಗುತ್ತವೆ....." ಇದು ಅಷ್ಟೇ ನ...

*ಸು-ನಮೋ ಸುನಾಮಿ....*

Image
*ಸು-ನಮೋ  ಸುನಾಮಿ....* ದೇಶಹ ಹಾಳು ಮಾಡುವ, ದೇಶವನ್ನು ಕೊಳ್ಳೆ ಹೊಡೆಯುವ *ಸುನಾಮಿ* ಗಳೇನಕ ಬರುತ್ತಿದ್ದವು. ಆದರೆ ನಿನ್ನೆ ಬಂದ *ಸುನಾಮಿ*  ದೇಶದ ಮನ ಮನೆಗಳಲ್ಲಿ ಆಕ್ರಮಿಸುವ, ದೇಶ ರಕ್ಷಿಸುವ, ದೇಶದ ಕೀರ್ತಿ ಪತಾಕೆಯನ್ನು ಜಗದಿ ಹರಡಿಸುವ, ಭ್ರಷ್ಟರ ಹುಟ್ಟಡಗಿಸುವ, ಕೇಸರಿಮಯವಾದ, *ಸು* ಪ್ರಾಮಾಣಿಕವಾದ *ನಮೋ* ಎಂಬ *ಸುನಾಮಿ* ದೇಶದ ಮೂಲೆ ಮೂಲೆಗೂ ತನ್ನ ಅಲೆಗಳಿಂದ ತಂಪೆರಗಿದೆ.  ರಾಷ್ಟ್ರವಾದವನ್ನು ಬಿಗಿದಪ್ಪಿದ, ದೇಶದರಕ್ಷಣೆಯೇ ನಮ್ಮ ಧ್ಯೇಯ ಎಂದು ನಿಶ್ಚಯಿಸಿ  ಜಾತಿವಾದವನ್ನು ಮೂಲೆಗೆ ಸರಿಸಿದ. ಧೈರ್ಯ ಹಾಗೂ ಶೌರ್ಯದ ಅನೇಕ ನಿರತಣಯಗಳನ್ನು ತೆಗೆದುಕೊಂಡು ಯಶಸ್ವಿಯೂ ಆದ *ಸು-ನಮೋ ಸುನಾಮಿ* ಯಂತೆ ಅಬ್ಬರಿಸಿದ ನಮ್ಮ ಪ್ರೀತಿಯ ಆದರದ *ಪ್ರಧಾನಮಂತ್ರಿಯೂ ಆದ "ಮೋದಿಜಿ" ಅವರಿಗೆ* ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಪ್ರಧಾನಿಯಾಗಿರುವದಕ್ಕೆ ಹರುಷದ ಶುಭಾಷಯಗಳನ್ನು ಹೇಳೋಣ.  ವೇದ ಸ್ಮೃತಿ ಇತಿಹಾಸಗಳ ಅನೇಕ ಕಥೆ ನಿದರ್ಶನಗಳನ್ನು ಅಧ್ಯಯನ ಮಾಡಿದ, ಆಧ್ಯಾತ್ಮಿಕತೆಯಲ್ಲಿ ಒಲವು ಹೊಂದಿದ, ದುರ್ಗಾ ಶಿವ ಆರಾಧಕನೂ ಆದ, ಅಂತೆಯೇ  ದೇಶದಮೇಲೆ ಅಪಾರ ಗೌರವ ಪ್ರೀತಿ ಹೊಂದಿದ, ದೇಶದ ಸಮಸ್ತ ನಾಗರಿಕರ ಬಂಧು ಎಂದು ಬಿಂಬಿಸುವ, ವಿದೇಶದ ವಿದೇಶಗಳ ಪ್ರತಿನಿಧಿಗಳಿಗೂ ಅತ್ಯಂತ ಆಪ್ತರಾಷ್ಟ್ರವನ್ನಾಗಿ ಮಾಡಿದ, ಹಿಂದಿನ ರಾಜರುಗಳಂತೆ ಸಮಸ್ತ ದೇಶದ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತವರು ನಮ್ಮ ಮೋದಿಜಿ...

*ಆಧ್ಯಾತ್ಮಿಕತೆಯ ಸಂಪರ್ಕ ಕೆಲ ಹೊತ್ತಾದರೂ ಇರಬೇಕು...*

Image
*ಆಧ್ಯಾತ್ಮಿಕತೆಯ ಸಂಪರ್ಕ ಕೆಲ ಹೊತ್ತಾದರೂ ಇರಬೇಕು...* ಭವ್ಯ ಭಾರತೀಯ ತತ್ವಜ್ಙಾನದ ಮೂಲ ಆಧ್ಯಾತ್ಮಿಕತೆ. ಹೊರಗಿನ ನೂರಾರು ಬಲಗಳು ಒಂದೆಡೆಯಾದರೆ, ಮತ್ತೊಂದೆಡೆ ದೈವ ಬಲ ಹಾಗೂ ಆಧ್ಯಾತ್ಮಿಕ ಬಲಗಳು ಮಾತ್ರ. ಕೊನೆಗೆ ಆಸರೆಯಾಗುವದು ಆಧ್ಯಾತ್ಮಿಕ ಬಲವೇ.... ಪ್ರತಿಕೂಲವಾದ ಎಲ್ಲ ಬಲಗಳನ್ನೂ ಮೆಟ್ಟಿನಿಲ್ಲುವ ಸಾಮರ್ಥ್ಯವಿರುವದು ಕೇವಲ ಆಧ್ಯಾತ್ಮಿಕ ಬಲಕ್ಕೆ ಮಾತ್ರ. ಕೆಲೊಂದು ಸಲ ದೈವೀ ಬಲವನ್ನೂ ಆಧ್ಯಾತ್ಮಿಕ ಬಕ ಬದಲಾಯಿಸುತ್ತದೆ.  ಆತ್ಮನಿಷ್ಠವಾದ ವಿಚಾರಗಳು ಅಧ್ಯಾತ್ಮ. ಆತ್ಮನಿಷ್ಠ ವಿಚಾರಗಳನ್ನು ಅಂದರೆ ಮುಖ್ಯವಾಗಿ ಪರಮಾತ್ಮನನ್ನು  ಹೊರತೋರುವಂತೆ ಆತ್ಮನಲ್ಲಿ ಅಭಿವ್ಯಕ್ತಪಡಿಸಿದಾಗಲೇ ಆತ್ಮ ಬಲಿಷ್ಠನಾಗುತ್ತಾನೆ.  ದಿನದ ಅಥವಾ ಈ ಜೀವನದ ಸಂಘರ್ಷಗಳಿಂದ ಶ್ರಾಂತವಾದ ಈ ದೇಹಕ್ಕೆ,  ಪ್ರಶಾಂತವಾದ ಏಕಾಂತವಾದ ಕೆಲಹೊತ್ತಿನ ನಿದ್ರೆ  ಬಲ ಉತ್ಸಾಹಗಳನ್ನು ಕೊಟ್ಟರೆ....  ಅನಾದಿಯಿಂದ crush ಸಂಘರ್ಷಗಳಿಗೆ ಬಲಿಯಾದ ಈ ಆತ್ಮನಿಗೆ ಶಾಂತಿ ಉತ್ಸಾಹಗಳನ್ನು ತುಂಬುವದೇ ಈ ಅಧ್ಯಾತ್ಮ. ಹಾಗಾಗಿ ನಿತ್ಯದಲ್ಲಿಯೂ ಕೆಲ ಹೊತ್ತಾದರೂ ಆಧ್ಯಾತ್ಮದೆಡೆಗೆ ಮನಸ್ಸು ಮಾಡುವದುಚಿತ.... ನಮ್ಮ ತನವನ್ನು ಬಿಡದಂತೆ ಅನಿರತ  ಕಾಪಾಡುವದು ಆಧ್ಯಾತ್ಮಿಕ ಬಲ ಮಾತ್ರ. ಹಿಂದೆ ಎಲ್ಲ ತರಹದ ಪಾಖಂಡ ಮತಗಳ information ತತ್ವಜ್ಙಾಗಳನ್ನು ಅನೇಕರು  ಪಡೆದುಕೊಂಡಿದ್ದರೂ ಆ ಯಾವ ಮತಗಳಿಗೂ ಬಲಿಯಾಗದೆ...

*ಅಂದಿನ ಇತಿಹಾಸ ಪುರಾಣಗಳು - ಇಂದಿನ ದಾರಾವಾಹಿಗಳು*

*ಅಂದಿನ ಇತಿಹಾಸ ಪುರಾಣಗಳು - ಇಂದಿನ ದಾರಾವಾಹಿಗಳು* ಹಿಂದು ಅನೇಕ ನಡೆದ ಅನೇಕ ನೈಜ  ಘಟನೆಗಳನ್ನು ಕಥೆಯಲ್ಲಿ ಗ್ರಂಥಗಳ ಮುಖಾಂತರ ಬರೆದಿಟ್ಟಿರುತ್ತಿದ್ದರು ಆ ಗ್ರಂಥಗಳು ಇತಿಹಾಸ ಪುರಾಣಗಳು ಎಂದು ಪ್ರಸಿದ್ಧವಾದವು. ಅವುಗಳೇ *ಮಹಾಭಾರತ ಹಾಗೂ ಭಾಗವತ ಮೊದಲಾದ ಗ್ರಂಥಗಳು.*  ಇಂದು ಕಾಲ್ಪನಿಕವಾದ ನಮ್ಮ ಬುದ್ಧಿಗೆ ತೋಚಿದ ವಿಷಯಗಳನ್ನು ಹೆಣೆದು ಅತ್ಯಂತ ರೋಚಕತೆ ಹುಟ್ಟಿಸುವಂತೆ ಮಾಡಿ, ಆಕರ್ಷಣೀಯವಾಗಿರುವಂತೆ ನೋಡಿಕೊಂಡು ಹೆಣೆದು ಬರೆದವುಗಳೇ *ಇಂದಿನ ಧಾರಾವಾಹಿಗಳು.* ಇಂದು ನಮಗೆ ಧಾರಾವಾಹಿಗಳಲ್ಕಿ ಇರುವ ಅತೀ ಆಸಕ್ತಿ ಮಹಾಭಾರತ ಭಾಗವತದಲ್ಲಿ ಇಲ್ಲ. ನಿತ್ಯದಲ್ಲಿಯೂ ಅತ್ಯಂತ ಆಸಕ್ತಿಯಿಂದ ಧಾರಾವಾಹಿಗಳನ್ನು ನೋಡುವದರಿಂದ ಅದರ ಪರಿಣಾಮಗಳು ನಮ್ಮ ಮೇಲೆ ಇಂದು ತುಂಬಾ ಕಾಣುತ್ತಿದ್ದೆವೆ.  ಅದುವೇ ಅತೀ ಆಸಕ್ತಿಯಿಂದ  *ಮಹಾಭಾರತ - ಭಾಗವತ* ಇವುಗಳನ್ನು ಆಲಿಸಿದ್ದರೆ ಆ ಗ್ರಂಥಗಳ ಪರಿಣಾಮ ನಮ್ಮ‌ ಮೇಲೆ ಚೆನ್ಬಾಗಿ ಆಗುತ್ತಿತ್ತು....  *ಧಾರಾವಾಹಿ - ಭಾಗವತ* ಇಂದು ಧ್ರುವರಾಜನ ಭಾಗವತದ ಒಂದು ಕಥೆ ತೆಗೆದುಕೊಳ್ಳೋಣ. ಮಲತಾಯಿಯಾದ ಸುರೂಚಿ ಧೃವಮಹಾರಾಜನಿಗೆ ಅವಮಾನ ಮಾಡುತ್ತಾಳೆ. ಪ್ರಸಿದ್ಧ ಕಥೆ. ಈ ಕಥೆ ಇಂದಿನ ಧಾರಾವಾಹಿಗಳಲ್ಲಿ ನಾವು ಕಂಡಿದ್ದರೆ, ಸೂರೂಚಿಯನ್ನು ಹೇಗೆ ಪೀಡಿಸಬೇಕು, ರಾಜ್ಯವನ್ನು ಹೇಗೆ ಕಸಿದುಕೊಳ್ಳಬೇಕು, ತಂದೆಯಾದ ಉತ್ತಾನಪಾದನಿಗೆ ಹೇಗೆ ಪೀಡೆ ಕೊಡಬಹುದು, ಇವುಗಳಿಗೆ ಸುನ...

*ದೇವನು ನಮ್ಮ ಕೈಯಲಿ ಬಂದ ಎಂದಾದರೆ ವಿಘ್ನಗಳೆಲ್ಲಿ.....*

Image
*ದೇವನು ನಮ್ಮ  ಕೈಯಲಿ ಬಂದ ಎಂದಾದರೆ ವಿಘ್ನಗಳೆಲ್ಲಿ.....* ಇಂದು ವಿಘ್ನಗಳು ಸಾಮಾನ್ಯವಾಗಿ ನಮಗೇ ಇವೆ. ವಿಘ್ನಗಳಿಗೆ ಆಗರರು ನಾವೇ ಆಗಿದ್ದೇವೇ. ವಿಘ್ನಗಳು ನಮ್ಮನ್ನೇ ಅರಿಸಿ ಬರುತ್ತವೆ. ಅಂತೆಯೇ ಸಂಧ್ಯಾವಂದನೆ ಗಾಯತ್ರೀಜಪ ದೇವರ ಪೂಜೆ ಮೊದಲು ಮಾಡಿ ಎಲ್ಲ ಸತ್ಕಾರ್ಯಗಳಿಗೂ ನಮ್ಮನ್ನು ಪ್ರೀತಿಯಿಂದ ಎದುರುಗೊಳ್ಳುವದು  ವಿಘ್ನಗಳೇ ಮೊದಲು.  *ವಿಘ್ನಗಳು ಏಕೆ ಬರುತ್ತವೆ....* ಯಾರ ಬೆನ್ನಿಗೆ ಪುಣ್ಯವಿಲ್ಲ, ಯಾರಿಗೆ ಧರ್ಮದ ಬಲವಿಲ್ಲ, ಯಾರು ಪಾಪಗಳನ್ನೇ ಹೆಚ್ಚೆಚ್ಚು ಮಾಡಿದ್ದಾನೆ,  ಯಾರು ದೇವರಿಂದ ದೂರಿದ್ದಾನೆ ಮತ್ತು ಯಾರನ್ನು ದೇವ ಹತ್ತಿರ ಮಾಡಿಕೊಳ್ಳಬೇಕು ಎಂದು ಬಯಸಿದ್ದಾನೆ ಅವರಿಗೇ ವಿಘ್ನಗಳು ಬರುವದು ಸಹಜ.  ಕೊನೆಯದಂತೂ ನಾವಾಗಲು ಸಾಧ್ಯವಿಲ್ಲ. ದೇವರು ನಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುವಷ್ಟು ನಾವು ದೇವರನ್ನು ಪ್ರೀತಿಸಿಯೇ ಇಲ್ಲ ಆದ್ದರಿಂದ ನಾವಂತೂ ಆಗಲು ಸಾಧ್ಯವಿಲ್ಲ. ನಮಗೆ ವಿಘ್ನಗಳು ಇವೆ ಎಂದರೆ ಮೇಲಿನವುಗಳಲ್ಲಿಯೇ ಒಂದು ಕೆಟಗೆರಿಯಲ್ಲಿ ನಾವು ಬಂದಿರುತ್ತೇವೆ..  *ನಮಗೆ ವಿಘ್ನಗಳ ಪರಿಹಾರ ಹೇಗೆ.... ????* ಧರ್ಮ ಮಾಡುವದು, ತಪ್ಪಸ್ಸು ಆಚರಿಸುವದು, ಪುಣ್ಯವಂತನಾಗಿ ಬಾಳುವದು, ದೇವರವನಾಗಿ ಇರುವದರಿಂದಲೇ ನಮ್ಮ ವಿಘ್ನಗಳನ್ನು ಪರಿಹರಿಸಿಕೊಳ್ಳಬಹುದು. *ಇದೆಲ್ಲದರ ಮೇಲೆ ನಿರಂತರ ದೇವರ ಆರಾಧನೆ ಮಾಡಿ, ಭಕ್ತಿಮಾಡಿ, ಸೇವೆಯನ್ನು ಮಾಡಿ, ದೇವರ ಭೃತ್ಯನೆ...

*ಹೇ ಮನ್ಯೋ... !! ನೀನು ಎನ್ನೊಡೆಯನಾಗಿ ಬಾ*

Image
*ಹೇ ಮನ್ಯೋ... !! ನೀನು ಎನ್ನೊಡೆಯನಾಗಿ ಬಾ* (ನರಸಿಂಹ ಜಯಂತೀ..) "ಮನ್ಯೋ ಮನ್ಯುನಾಮಕ ನರಸಿಂಹನೇ ನೀನು ಬಾ"  ಇದು ವೇದಪುರುಷನ ವೇದವಾಣಿ.  ಇಂದು ಅನೇಕರನ್ನು ನಮ್ಮ ಮನೆಗೆ ನಮ್ಮ ಮನಕ್ಕೆ ಕರಿಯುತ್ತೇವೆ ಆದರ ಸತ್ಕಾರ ಗೌರವ ಕೊಡುತ್ತೇವೆ. ಸಹಾಯ ಬೇಡುತ್ತೇವೆ. ರಕ್ಷೆಣೆಗೆ ಒದಗು ಎಂದು ಹರಿಸುತ್ತೇವೆ. ಅದೇರೀತಿ ಎಂದಾದರೂ *ದೇವರನ್ನು ಕರೆದಿದ್ದೇವೆಯಾ...??*  *ನರಸಿಂಹ ದೇವರನ್ನು ಏಕೆ ಕರೆಯುವದಿಲ್ಲ.... ??* ನಾವು ನಿತ್ಯ ದೇವರನ್ನೇ ಕರೆಯುದಿಲ್ಲ, ಇನ್ನು ನರಸಿಂಹದೇವೆರನ್ನು ಕರೆಯುವದು ದೂರದ ಮಾತೇ. ದೇವರನ್ನು ಕರೆದರೆ ಅವನ‌ ಸೇವೆಗೋಸ್ಕರ ಎಲ್ಲ ಬಿಡಬೇಕು, ಮಡು ಮಾಡಬೇಕು, ಇದ್ದಲಿವಲಿಮೇಲೆ ಅಡಗಿ ಮಾಡಬೇಕು ಇಂತಹ ನೂರು ಸಮಸ್ಯೆ, ಹಾಗಾಗಿ ದೇವರನ್ನೇ ಕರಿಯುವದನ್ನು ಬಿಟ್ಟಾಗಿದೆ. ದೇವರನ್ನೇ ಬಿಟ್ಟ ಮೇಲೆ ನರಸಿಂಹ ದೇವರನ್ಬ ಕರಿಯುವದಾ.. ?? *ಆಚಾರ್ಯರೇ ..!!! ನಮ್ಕ ಮನೆಯಲ್ಲಿ ನರಸಿಂಹ ಸಾಲಿಗ್ರಾಮವಿದೆ.. ನಿಮಗೆ ದಾನವಾಗಿ ಕೊಡುತ್ತೇವೆ* ಮನೆಯಲ್ಲಿ ಇಟ್ಕೋಬಾರದಂತೆ, ನೀವು ತೆಗೆದುಕೊಳ್ಳಿ" ಎಂದು ಹೇಳಿ ಇರುವ ನರಸಪ್ಪನನ್ನು ಹೊರಗೆ ಹಾಕುವವರೇ ಅನೇಕ.  *ಎಂಥವರು ನರಸಿಂಹ ದೇವರು...* ಬಲಿಷ್ಠರಾದ ಬ್ರಹ್ಮಾದಿ ದೇವತೆಗಳಿಂತಲೂ ಅನಂತಪಟ್ಟು ಹೆಚ್ಚು ಬಲವುಳ್ಳವರು ನರಸಿಂಹ ದೇವರು. ಬ್ರಹಾದಿ ಕಲಿವರೆಗೆ ಇರುವ ಸಮಗ್ರವಾದ ಜಗತ್ತು ಒಂದಾಗಿ ಬಂದರು, ಎರಡಾಗಿ ಬಂದರೂ ಅಥವಾ ಅನಂತವಾಗಿ ಬಂದರೂ ಆ ಎಲ್ಲ ಜಗತ್ತನ...

*ವೇದವ್ಯಾಸ ಜಯಂತೀ....*

Image
*ವೇದವ್ಯಾಸ ಜಯಂ ತೀ ....* ಅನಂತ ರೂಪಗಳಿಂದ ನಿರಂತರ ಅವತರಿಸುವ ಭಗವಂತನ ಒಂದೊದ್ಭುತ ಹಾಗೂ ನಮಗೆ ಅತ್ಯುಪಕೃತ ರೂಪ *ವೇದವ್ಯಾಸರೂಪ.*  ಪರಾಶರೃಷಿಗಳಿಂದ ಕನ್ಯಾವಸ್ಥೆಯಲ್ಲಿಯೇ ಸತ್ಯವತೀದೆವಿಯಲ್ಲಿ ಪ್ರಾದುರ್ಭವಿಸಿದ ದಿನ ಇಂದೆ. ಹಾಗಾಗಿ ಇಂದು  *ಶ್ರೀ ವೇದವ್ಯಾಸ ಜಯಂತೀ ಮಹೋತ್ಸವ.* ನಮ್ಮ ಮಕ್ಕಳ ಜಯಂತೀ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸುತ್ತೇವೆ. ಕಾರಣವಿಷ್ಟೆ ಅವರು ಮುಂದಿಂದು ದಿನ ನಮ್ಮನ್ನು ರಕ್ಷಿಸಬಹುದು ಸಂರಕ್ಷಿಸಬಹುದೆಂದು.  ನಿರಂತರ ಅನುದಿನ ಅನುಕ್ಷಣ ದೇಹ ಇಂದ್ರಿಯ ಮನಸ್ಸು ಬುದ್ಧಿ ಇವುಗಳನ್ನು ಶೋದಿಸಿ ರಕ್ಷಿಸುವವರು, ಜ್ಙಾನಾದಿಗಳನ್ನು ಕೊಟ್ಟು ರಕ್ಷಿಸುವವರು, ಮೋಕ್ಷ ಕೊಡುವವರು, ಅನಂತ ಆನಂದವನ್ನೇ ಸುರಿದು ರಕ್ಷಿಸುವವರು ಶ್ರೀವೇವ್ಯಾಸದೇವರು. ಹೀಗಿರುವಾಗ ಈ ವೇದವ್ಯಾಸರ ಜಯಂತಿಯನ್ನು ಎಷ್ಟು ವೈಭವದಿಂದ, ಎಷ್ಟು ಅದ್ದೂರಿಯಿಂದ ಆಚರಿಸಬೇಕು ಎನ್ನುವದನ್ನು ನಾವೇ ವಿಚಾರಿಸಿ ಆಚರಿಸಬೇಕು.  *ಯಾವತರಹದ ರಕ್ಷಣೆಗೆ ಶ್ರೀವೇದವ್ಯಾಸರು ಒದಗುತ್ತಾರೆ...* ತಾನು ಸರಿ ಮಾರ್ಗದಲ್ಲಿ ಇರುವದೇ ತಾನು ಮಾಡಿಕೊಳ್ಳಬಹುದಾದ ತನ್ನ ರಕ್ಷಣೆ. ಯಾವುದೇ ಸನ್ಮಾರ್ಗದಲ್ಲಿ, ಸರಿದಾರಿಯಲ್ಲಿ ಇರಬೇಕಾದರೆ *ಪರಿಶುದ್ಧ ಜ್ಙಾನ* ವಿರಲೇ ಬೇಕು. ಜ್ಙಾನವಿದ್ದಷ್ಟು ಜ್ಙಾನ ಬೆಳೆದಷ್ಟು ಸನ್ಮಾರ್ಗದಲ್ಲಿ ದಾಪುಗಾಲು ಹಾಕುವ.  *ಜ್ಙಾನ ಕೊಡುವ ದೊರೆ...* ಜ್ಙಾನ ಕೊಡುವ ಪ್ರಣವಪ್ರತಿ...

*ಏಕಾದಶೀ ಏಕಾದಶೀ ಏಕಾದಶೀ*

Image
*ಏಕಾದಶೀ ಏಕಾದಶೀ ಏಕಾದಶೀ* ವೈಶಾಖ ಶುದ್ಧದಲ್ಲಿ ಬರುವ *ಮೋಹಿನೀ ಏಕಾದಶೀ.*   ಮೂವತ್ತು ದಿನಗಳನ್ನು ಒಬ್ಬೋಬ್ಬ ದೇವತೆಗಳಿಗೆ ಕೊಟ್ಟ ದೇವ,  ಏಕಾದಶೀ ದಿನವನ್ನು ತನ್ನ ಬಳಿಯೇ ಇರಿಸಿಕೊಂಡ. ಅಂತೆಯೇ ಇಂದಿನ ಈ ದೀನಕ್ಕೆ *ಹರಿವಾಸರ - ಹರಿದಿನ* ಎಂದೂ ಕರಿಯುವದಿದೆ.  *ಧಾರ್ಮಿಕರಿಗೆ ಬೋನಸ್....* ಧರ್ಮ ದೇವರು ಶಾಸ್ತ್ರದಲ್ಲಿ ಅಭಿರುಚಿ ಇದ್ದು, ಪುಣ್ಯ ಪಾಪಗಳನ್ನು ಒಪ್ಪಿದ ಮಹಾಂತರಿಗೆ ಏಕಾದಶೀ ಎಂದರೆ ಒಂದು ಬೋನಸ್ ಕೊಡುವ ದಿನವೆಂದೇ ಭಾವಿಸುವವರು. *ಇಂದು ಆಚರಿಸುವ ಕ್ಷಣ ಕ್ಷಣದ  ಉಪವಾಸ ಆ ಉಪವಾಸದ ದುಃಖ ಪಾಪಗಳನ್ನು ಸುಟ್ಟು ಹಾಕಿದರೆ, ಇಂದಿನ ಒಂದೊಂದು ಸಾಧನೆಯೂ ಸಿದ್ದಿಯನ್ನು ತಂದು ಕೊಡುವಲ್ಲಿ ಮಹಾ ಉಪಕಾರಿಯೂ ಆಗುತ್ತದೆ* ಅಂತೆಯೇ ಏಕಾದಶಿ ಬಂದರೆ ಸಾಧಕರಿಗೆ ಎಲ್ಲಿಲ್ಲದ ಉತ್ಸಾಹ. *ಸರ್ವೋತ್ತಮ ವ್ರತ....*  ಸಾಧಕರಿಗೆ ಅನೇಕ ವ್ರತಗಳು ಇವೆ. ಕೆಲ ವ್ರತೋಪವಾಸಗಳು ಶೀಘ್ರಫಲಕಾರಿಯೂ ಆಗಬಹುದು. ಯಾವ ವ್ರತವೂ ನಿಷ್ಠುರ ಉಪವಾಸ ವ್ರತವಿಲ್ಲ. ಜೊತೆಗೆ ಸಕಾಮ ವ್ರತಗಳೂ ಆಗಿರುತ್ತವೆ. ಆ ಅಪೇಕ್ಷೆ ಎಷ್ಟು ಈಡೇರತ್ತೋ ಗೊತ್ತಿಲ್ಲ. ನಮ್ಮ ಅಪೇಕ್ಷೆ ಫಲಕೊಡುವ ದೇವರ ಇಚ್ಚೆಗೆ ಅನುಗುಣವಾಗಿದ್ದರೆ ಈಡೇರುವ ಸಂಭವ ಹೆಚ್ಚು. ವಿರುದ್ಧವೇ ಆಗಿದ್ದರೆ ಗೋವಿಂದ.....  ಆದರೆ ಏಕಾದಶೀ ವ್ರತ  ಹಾಗಲ್ಲ. ನಮ್ಮ ಅಪೇಕ್ಷಗಳ ಈಡೇರಿಕೆ ಈ ವ್ರತದಲ್ಕಿ ಮಹತ್ವ ಪಡದೇ ಇಲ್ಲ, ಫಲ ಕೊಡ...

*ನರಕಕ್ಕಿರುವ ಹಾದಿಯನ್ನು ಉತ್ತಮ ಇಂಗಿತಗಳಿಂದಲೇ ಸಜ್ಜುಗೊಳಿಸಲಾಗಿರುತ್ತದೆ.....*

Image
*ನರಕಕ್ಕಿರುವ ಹಾದಿಯನ್ನು ಉತ್ತಮ ಇಂಗಿತಗಳಿಂದಲೇ ಸಜ್ಜುಗೊಳಿಸಲಾಗಿರುತ್ತದೆ.....* "ನರಕಕ್ಕಿರುವ ಹಾದಿಯನ್ನು ಉತ್ತಮ ಇಂಗಿತಗಳಿಂದಲೇ ಸಜ್ಜುಗೊಳಿಸಲಾಗಿರುತ್ತದೆ" ಎಂಬ ಹೇಳಿಕೆ ಕೇಳಲು ತುಂಬ ಚೆನ್ನಾಗಿಯೇ ಇದೆ. ಆದರೆ ಇದರ ಮರ್ಮ ಘೋರವಾಗಿದೆ.  ನಿಧನದ ನಂತರ ತಿರುಗಿಬರಲು ಎರಡು ಮಾರ್ಗಗಳು, ತಿರುಗಿ ಬಾರದಿರಲು ಒಂದು ಮಾರ್ಗ ಹೀಗೆ ಮೂರು ದಾರಿಗಳು ಇವೆ. ಮೊದಲ ದಾರಿ ಜ್ಙಾನ ಭಕ್ತಿಗಳ ದಾರಿ. ಆ ದಾರಿಯಲ್ಲಿ ಸಾಗಿದವ ತಿರುಗಿ ಬಾರ. ತಿರುಗಿ ಬರುವ ದಾರಿಗಳು ಇನ್ನೆರಡು ದಾರಿಗಳು. ಒಂದು ಸ್ವರ್ಗ ಮಾರ್ಗ, ಇನ್ನೊಂದು ನರಕ ಮಾರ್ಗ.  ಸುಖಮಾರ್ಗವಾದ ಸ್ವರ್ಗ ಮಾರ್ಗವನ್ನು ಸಿದ್ದಮಾಡಿಕೊಳ್ಳುವದು ತುಂಬ ಕಠಿಣ. ದುಃಖದ ದಾರಿಯಾದ ನರಕ ಮಾರ್ಗ ಅತ್ಯಂತ ಸಹಜ.  ಸ್ವರ್ಗ ಮಾರ್ಗವನ್ನು ನಿರ್ಮಿಸಲು ತುಂಬ ತ್ಯಾಗ ಅತ್ಯಾವಷ್ಯಕ. ನರಕ ಮಾರ್ಗವನ್ನು ನಿರ್ಮಿಸಲು ಭೋಗ ಸಾಕು.  ಸ್ವರ್ಗಮಾರ್ಗಕ್ಕಾಗಿ ದೇವತಾ ದೇವರು, ಇವರುಗಳ ನಿರಂತರ ಆರಾಧನೆ ಅತ್ಯವಷ್ಯಕ.  ನಾನಾವಿಧ ಧರ್ಮಾನುಷ್ಠಾನ ಕಡ್ಡಾಯ.  ಗುರುಗಳು ಬೇಕು. ನರಕ ಮಾರ್ಗಕ್ಕಾಗಿ ಕೇವಲ ನಾನೊಬ್ಬ ಸಾಕು. (ನಾನೊಬ್ಬ ಇರುವಲ್ಲಿ ಅಧರ್ಮ ಸಹಜ ಪ್ರವೃತ್ತಿಯಾಗಿರುತ್ತದೆ.) ಗುರು ದೇವತಾ ಧರ್ಮ ಇವುಗಳಿಗೆ ತಲೆಬಾಗಿ ನಡೆದರೆ ಸ್ವರ್ಗಮಾರ್ಗ. ಇವುಗಳನ್ನು ಕೆಕ್ಕರಿಸಿ ತಲೆ ಎತ್ತಿ ನಡೆದರೆ ನರಕ ಮಾರ್ಗ.  ಧರ್ಮ ಶಾಸ್ತ್ರ ದೇವ ಇವರುಗಳಿಗೆ ದೇಹವ...

*ಅತ್ಯುತ್ತಮವಾದದ್ದನ್ನು ಹುಡುಕುವ ಭರದಲ್ಲಿ, ಉತ್ತಮವಾದದ್ದನ್ನು ಕಳೆದುಕೊಳ್ಳುವಂತಾಗಬಾರದು....*

Image
*ಅತ್ಯುತ್ತಮವಾದದ್ದನ್ನು ಹುಡುಕುವ ಭರದಲ್ಲಿ, ಉತ್ತಮವಾದದ್ದನ್ನು ಕಳೆದುಕೊಳ್ಳುವಂತಾಗಬಾರದು....* ಹುಡುಕುವದು, ಹುಡುಕುತ್ತಾ ಇರುವದು, ಅದಕ್ಕಾಗಿ ಅಲೆಯುವದು ಇದು ಸಹಜ ಪ್ರವೃತ್ತಿ ಯಾಗಿದೆ. ಇದು ಎರಡು ತರಹ... ೧)ಅತ್ಯುತ್ತಮವಾದದ್ದನ್ನು ಹುಡುಕುವ ಹಂಬಲದಲ್ಲಿ ಉತ್ತಮವಾದದ್ದನ್ನು ಕಳೆದುಕೊಳ್ಳುವದು.. ೨)ಉತ್ತಮವಾದದ್ದನ್ನು ಹುಡುಕುತ್ತಿರುವಾಗಲೇ ಅತ್ಯುತ್ತಮವಾದದ್ದನ್ನು ಪಡೆದು ಕೊಳ್ಳುವದು.... ಸಾಮಾನ್ಯವಾಗಿ ಇಂದು ನಮಗೆ ಮೊದಲನೆಯದೇ ಆಯ್ಕೆಯನ್ನೇ ಅನುಸರಿಸಿರುತ್ತೇವೆ. ಅತ್ಯುತ್ತಮವಾದ "ಹಣ - ಪ್ರತಿಷ್ಠೆ" ಇವುಗಳನ್ನು ಪಡೆಯುವ ಹಂಬಲದಲ್ಲಿ ಕನಿಷ್ಠವಾದ ಒತ್ತಡದ, ಉಸಿರಾಡಲೂ ಅಸಾಧ್ಯವಾದ ಜೀವನವನ್ನು ಆರಿಸಿಕೊಂಡಿರುತ್ತೇವೆ. ಒಂದರ ಸಂಪಾದನೆಯ ಒತ್ತಡದಲ್ಲಿ ಮನೆಯ ಲವಲವಿಕೆಯ ನೆಮ್ಮಿದಿಯ ವಾತಾವರಣವನ್ನೇ ಧೂಳಿಪಟ ಮಾಡಿರುತ್ತೇವೆ...  ಹಾಗಾಗದೆ... ಎರಡನೇಯ ಆಯ್ಕೆ ಅತ್ಯುತ್ತಮ ಎಂದೆನಿಸುತ್ತದೆ... ಉತ್ತಮವಾದ ಜ್ಙಾನ ಸಂಪಾದನೆಯ ಹಂಬಲದಲ್ಲಿ ತೊಡಗಿ, ಅತ್ಯುತ್ತಮವಾದ *ವಿಷ್ಣುವನ್ನು - ವಿಷ್ಣುವಿನ ಭಕ್ತಿಯನ್ನು* ಸಂಪಾದಿಸಿಕೊಳ್ಳಬಹುದಾಗಿದೆ. ಯಾವುದೇ ವಿಷಯಕ ಜ್ಙಾನ ಬಂದಾಗ ಸಿಗುವದು ತೃಪ್ತಿ. ದೇವರಲ್ಲಿ ಭಕ್ತಿ ಬೆಳೆದಾಗ ಮೂಡುವದು ಭರವಸೆ. ದೇವರೇ ಬಂದಾದಾಗ ಎಲ್ಲವೂ ಒಲಿದು ಬರುತ್ತದೆ. ಪಡೆಯುವದು ಎನ್ನುವದೇನು ಇರುವದಿಲ್ಲ.  ಉತ್ತಮವಾದ ಜ್ಙಾನ‌ ಸಂಪಾದನೆಯ ಹಂಬಲವಿಟ್ಟುಕೊಂಡು ಅತ್ಯುತ್ತಮ ದೇವರನ್ನು ಒಲಿ...

*ಬೆಳಕನ್ನು ಹೊರ ನೂಕಲು ಹೊರಟಾಗ, ಆವರಿಸುವದು ಕತ್ತಲೇ.....*

Image
*ಬೆಳಕನ್ನು ಹೊರ ನೂಕಲು ಹೊರಟಾಗ, ಆವರಿಸುವದು ಕತ್ತಲೇ.....* ಬೆಳಕು ಕತ್ತಲು, ಸುಖ ದುಃಖ, ಮಾನ ಅವಮಾನ, ಗುಣ ದೋಷ, ಯಶ ಅಯಶ, ಪ್ರೀತಿ ದ್ವೇಶ, ದೇವ ದೈತ್ಯ, ಇತ್ಯಾದಿಗಳು ಒಂದಿರುವಾಗ ಇನ್ನೊಂದು ಇರುವದಿಲ್ಲ. ಒಂದನ್ನು ಹೊರ ಹಾಕಿಯೇ ಮತ್ತೊಂದು ರಾಜ್ಯವಾಳುವಂತಹದ್ದು.  ಬೆಳಕು ಇದೆ, ಜೀವನ ಒದಗಿಸುವ, ಎಲ್ಲ ಪದಾರ್ಥಗಳಲ್ಲಿ ಬೆಳಕು ಚೆಲ್ಲುವ ಬೆಳಕನ್ನು ನಾವು ದ್ವೇಶಿಸಿದರೆ, "ನಮಗೆ ಸಿಗುವದು ಕತ್ತಲು" ಎಂಬ  ಎಚ್ಚರಿಕೆಯಂತೂ ಇರಲೇಬೇಕು.  ಗುಣವಂತರನ್ನೋ, ಗುಣವಂತಿಕೆಯನ್ನೋ ಅಥವಾ ಗುಣಗಳನ್ನೋ ನಾವು ದ್ವೇಶಿಸಿದರೆ, ದೋಷಿಗಳು ದೋಷಗಳು ನಮ್ಮನ್ನಾಳುತ್ತವೆ.  ಅದೇರೀತಿಯಾಗಿ ದೈತ್ಯರನ್ನು ದುಷ್ಟರನ್ನು ನಾವು ದ್ವೇಶಿಸಲು ಆರಂಭಿಸಿದರೆ ದೇವತೆಗಳು ನಮ್ಮಲ್ಲಿಗೇ ಓಡಿ ಬರುತ್ತಾರೆ. ಅಥವಾ ದೇವತಾ ಸ್ವಭಾವದವರ ಸಹವಾಸವಾದರೂ ದೊರೆಯುತ್ತದೆ.  ಯಶಸ್ಸನ್ನು ಹಂಬಲಿಸಿದಾಗ, ಪ್ರೀತಿಸಿದಾಗ ಅಯಶಸ್ಸು ಹಾಗೂ ಅಯಶಸ್ಸಿಗೆ ಬೇಕಾದ ಕಾರ್ಯಗಳನ್ನು ದ್ವೇಶಿಸುವಂತಾಗುತ್ತದೆ. ಯಶಸ್ಸು ಇರುವಾಗ ಅಯಶಸ್ಸಿಗೆ ಪ್ರವೇಶವೇ ಇರುವದಿಲ್ಲ. ಆದ್ದರಿಂದ ಯಾವದನ್ನು ಪ್ರೀತಿಸಬೇಕು, ಯಾವದನ್ನು ದ್ವೇಶಿಸಬೇಕು ಪ್ರತಿಯೊಬ್ಬರ ಕೈಲಂತೂ ಇದ್ದೇ ಇದೆ... *ಚಕ್ರವತ್ಪರಿವರ್ತಂತೆ ದುಃಖಾನಿ ಚ ಸುಖಾನಿ ಚ* ದುಃಖ ಇರುವಾಗ ಸುಖ ಇರುವದಿಲ್ಲ. ಸುಖ ಇರುವಾಗ ದುಃಖ ಇರುವದಿಲ್ಲ. "ಸುಖ ದುಃಖಗಳಲ್ಲಿ ಯಾವುದನ್ನು ಇಟ್ಟುಕೊಳ್ಳಲು ನಮ್...

*ಕಾಲಕಾಲಕ್ಕೆ ನಮನಗಳು....*

Image
*ಕಾಲಕಾಲಕ್ಕೆ ನಮನಗಳು....* "ಕಾಲ ಕಾಲಕ್ಕೆ ನಮಸ್ಕಾರಗಳನ್ನು ಹಾಗೂ ಕೃತಜ್ಙತೆಯನ್ನು ಸಲ್ಲಿಸುವದು" ಮಾನವನ ಅನೇಕ ಜವಾಬ್ದಾರಿಗಳಲ್ಲಿ ಇದುವೂ ಒಂದಾಗಿದೆ. ಅದರಲ್ಲಿಯೂ ವಿಶೇಷ ಪಿತೃ- ಗುರು- ದೇವತಾ- ದೇವರಿಂದ ತುಂಬ ಉಪಕಾರವನ್ನು ಪಡೆದವನು ಪಿತೃಗಳಿಗೆ- ಗುರುಗಳಿಗೆ- ದೇವತೆಗಳಿಗೆ  ದೇವರಿಗೆ ಕೃತಜ್ಙತೆಯನ್ನು ಸಲ್ಲಿಸದಿರೆ ಕೃತಘ್ನನಾಗುವ.  ಉಸಿರು ಕೊಟ್ಟ ದೇವರು, ಉಸಿರಿರುವವರೆಗೆ ರಕ್ಷಣೆ ಕೊಟ್ಟ, ಅನ್ನ ಕೊಟ್ಟ, ನಿದ್ರೆ ಕೊಟ್ಟ, ಬುದ್ಧಿ ಮನಸ್ಸುಗಳನ್ನು ಕೊಟ್ಟ, ಇಂದ್ರಿಯ ಹಾಗೂ ಇಂದ್ರಿಯಗಳಿಗೆ ಶಕ್ತಿಯನ್ನೂ ಒದಗಿಸಿದ, ಮಾನ ಮರ್ಯಾದೆಗಳನ್ನು ಒದಗಿಸಿದ, ವಸ್ತ್ರಗಳನ್ನು ಕೊಟ್ಟ, ಬಂಧು ಬಾಂಧವರನ್ನು ಕೊಟ್ಟ, ಸ್ನೇಹ ಪ್ರೀತಿ ಮಮತೆ ಅಂತಃಕರಣ ಇವುಗಳನ್ನೂ ಒದಗಿಸಿದ, ನೆನಪಿನ ಶಕ್ತಿ ಕೊಟ್ಟ, ಮನೆ ಹಣ ಧನ ಕನಕ ಮಕ್ಕಳು ಮೊದಲು ಮಾಡಿ ಎಲ್ಲ ಕೊಟ್ಟ, ಹೀಗೆ ಉಸಿರುರುವವರೆಗೆ ಏನು ಬೇಕೋ ಎಲ್ಲವನ್ನೂ ಹೆಚ್ಚುಕಡಿಮೆ ಮಾಡದೆ, ತಡ ಮಾಡದೆ, ಆಲಸ್ಯ ತೋರದೆ, ದಯಪಾಲಿಸಿ ಅನುಗ್ರಹಿಸಿ ಕರುಣೆ ಮಾಡಿದವ ದೇವರು.. *ಆ ದೇವರಿಗೆ ಕಾಲ ಕಾಲಕ್ಕೆ (ಬೆಳಿಗ್ಗೆ ಹಾಗೂ ಸಾಯಂಕಾಲ) "ಸಂಧ್ಯಾವಂದನೆ ಮಾಡಿ, ಒಂದು ಹೊತ್ತು ದೇವರ ಪೂಜೆ ಮಾಡುವದು" ಎಂದರೆ - ದೇವರಿಗೆ ಕೃತಜ್ಙತೆ ಸಲ್ಲಿಸಿದಂತೆ, ಇಲ್ಲವಾದಲ್ಲಿ ಕೃತಘ್ನರಾಗುವದು ನಿಶ್ಚಿತ.*  ಹಾಗಾಗಿ ನಿತ್ಯ ಬಿಡದೆ, ಕನಿಷ್ಠ ಎರಡು ಹೊತ್ತಾದರೂ ಐದು ಐದು ನಿಮಿಷವಾದರೂ ಸಂಧ್ಯಾವಂದನೆ ಮಾಡು...

*ಅಕ್ಷಯಾಶ್ರಿತ ಸುನಜನ ಸಂರಕ್ಷಕ....*

Image
*ಅಕ್ಷಯಾಶ್ರಿತ ಸುನಜನ ಸಂರಕ್ಷಕ....* ವರ್ಷದ ಮುನ್ಮೂರಾ ಆರವತ್ತು ದಿನಗಳಲ್ಲಿ ಅತ್ಯುತ್ತಮವಾದ ಅನೇಕ ದಿನಗಳಲ್ಲಿ ನಾಳೆಯೂ *ಅಕ್ಷಯ ತೃತೀಯಾ* ಒಂದು ಉತ್ತಮ ದಿನ . ಈ ದಿನ ಭಂಗಾರ ಸ್ವೀಕಾರ ಮಾಡುತ್ತೇವೆ. ಉತ್ತಮ ಅಡುಗೆ ತೊಡುಗೆಗಳನ್ನು ಸ್ವೀಕರಿಸುತ್ತೇವೆ. ಏಕೆಂದರೆ *ಇಂದು ಆರಂಭಿಸಿದ ಸ್ವೀಕರಿಸಿದ ವಸ್ತು ಅಕ್ಷಯವಾಗಿ ಸಿಗತ್ತೆ* ಎಂಬ ವಿಚಾರ ಅಡಿಗಿರತ್ತೆ. ಅಂತೆಯೇ  ಇದೊಂದು ಹಬ್ಬದ ದಿನ. ಇದರ ಪೂರ್ಣ ಸದುಪಯೋಗ ಪ್ರತಿ ವರ್ಷ ಸಾಧನೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಾಗ ಆಗುವ ಲಾಭ ತುಂಬ ಇದೆ. ಅಕ್ಷಯವಾಗಿಯೇ ಒದಗಿ ಬರುತ್ತದೆ.  ಸಾಧನೆಯ ಮೊದಲ ಹೆಜ್ಜೆಯಲ್ಲಿ ಇರುವ ನಾವು ಏನನ್ನು ಆರಂಭಿಸಬಹುದು.... ?? ಈ ಪ್ರಶ್ನೆಗೆ  ಶ್ರೀಮದಾಚಾರ್ಯರು ಉತ್ತರಿಸುತ್ತಾರೆ....  "ಅಚ್ಯುತಾನಂತ ಗೋವಿಂದ  ನಾಮೋಚ್ಚಾರಣ ಭೇಷಜ | ನಶ್ಯಂತಿ ಸಕಲಾ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್" ||  ಕೃಷ್ಣಾಮೃತ ಮಹಾರ್ಣವ. ನಿತ್ಯ ಅನುದಿನ *ಅಚ್ಯುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ, ಅಚ್ಯುತಾನಂತಗೋವಿಂದೇಭ್ಯೋ ನಮೋನಮಃ* ಎಂದು ಶುದ್ಧವಾಗಿ,  ಶುದ್ಧ ಮಡಿಯುಟ್ಟು, ಮಡಿಯಿಂದ,  1008 1008 ಸಲ ಯಾರು ಪಠಿಸುತ್ತಾರೆಯೋ ಸಾಧನೆಯ ಪ್ರತಿಬಂಧಕ ಎಲ್ಲ ರೋಗಗಳೂ ಉಪದ್ರವಗಳೂ ದೂರಾಗಿ, ಸಂಸಾರ ರೋಗವೇ ಬತ್ತಿ ಹೋಗುತ್ತದೆ. ಸಾಧನೆಯ ಫಲ ಪರಿಪೂರ್ಣವಾಗಿ ದೊರೆಯುತ್ತದೆ. ಹಾಗಾಗಿ ನಿತ್ಯ ಸ್ಮರಿಸಬೇಕು ಎಂದ...

*ನಾಲಕು ಘಂ. IPL ನೋಡಲು ಸಮಯವಿದೆ, ಹತ್ತು ನಿಮಿಷದ ಸಂಧ್ಯಾವಂದನೆಗೇಕೆ ಉತ್ಸಾಹವಿಲ್ಲ.....??*

Image
*ನಾಲಕು ಘಂ. IPL ನೋಡಲು ಸಮಯವಿದೆ, ಹತ್ತು ನಿಮಿಷದ ಸಂಧ್ಯಾವಂದನೆಗೇಕೆ ಉತ್ಸಾಹವಿಲ್ಲ.....??* ಇಂದು ಯಾವ ಲೇಖನ ಬರಿಯಬೇಕು... 🤔🤔 ಎಂದು ವಿಚಾರಿಸುತ್ತಿರುವಾಗ, ನಮ್ಮ ಆತ್ಮೀಯರೊಬ್ಬರು ಕೇಳಿದ ಪ್ರಶ್ನೆ ಇದು..... ಟ್ಯೂಶೆನ್ಸ, ಸ್ಕೂಲು, ಕಾಲೇಜು, ಆಫೀಸು, ಮಾಲ್, ಕ್ರೀಡಾಂಗಣ, ಫಿಲ್ಮ, ಟೀವಿ, ಮೋಬೈಲು, ಹರಟೆ, ಮೊದಲು ಮಾಡಿ ಎಲ್ಲದಕ್ಕೂ ನಮಗೆ ತುಂಬ ಸಮಯವಿದೆ,  (ಕೆಲವರಿಗಂತೂ ಶಾಸ್ತ್ರ ಬೇಡ ಎಂದು ಹೇಳಿದ್ದು ಮಾಡಲೇ ಪರಮೋತ್ಸಾಹ)  ಉತ್ಸಾಹವಿದೆ, ತಾದಾತ್ಮ್ಯವಿದೆ..... ಆದರೆ *ಹತ್ತು ನಿಮಿಷದ ಸಂಧ್ಯಾವಂದನೆ, ಹತ್ತು ನಿಮಿಷದ ನೂರೆಂಟು ಗಾಯತ್ರೀಜಪ, ಇಪ್ಪತ್ತೇ ನಿಮಿಷದ ದೇವರ ಪೂಜೆ, ಮೂವತ್ತು ನಿಮಿಷದ ಪಾಠ, ಆರವತ್ತೇ ನಿಮಿಷದ ಉಪನ್ಯಾಸ , ಐದಾರು ನಿಮಿಷದ ಧ್ಯಾನ ಮುಂತಾದವುಗಳಿಗೇಕೆ  ಸಮಯವಿಲ್ಲ... ?? ಉತ್ಸಾಹವಿಲ್ಲ, ಮಾಡಿದರೂ ಕೇವಲ ಯಾಂತ್ರಿಕ, ತಾದಾತ್ಮ್ಯ ಬರುವದೇ ಇಲ್ಲ, ಯಾಕೆ ಹೀಗಾಗುವದು... ?? ಇದಕ್ಕೆಲ್ಲ ಹೊಣೆಗಾರರು ಯಾರು... ??*  ಆಕರ್ಷಣೀಯವಾದ ಎಲ್ಲ ಪದಾರ್ಥಗಳೂ ೯೦% ಕೆಟ್ಟದ್ದೇ ಆಗಿರುತ್ತದೆ. ಹಿತಕಾರಿಯಾದ ಯಾವ ಪದಾರ್ಥವೂ ಆಕರ್ಷಣೀಯವಾಗಿರುವದೇ ಇಲ್ಲ.  ಆಕರ್ಷಣೀಯ ಪದಾರ್ಥಗಳಿಗೆ ಬಲಿ ಬೀಳುವದು ಸಣ್ಣ ಹುಡುಗರ, ಯುವಕರ ಕಾಯಕ. ಆಕರ್ಷಣೀಯ ಪದಾರ್ಥಗಳಿಗೆ ಬಲಿಬೀಳದಂತೆ ಮಾಡುವದು ಹಿರಿಯರ ತಂದೆ ತಾಯಿಗಳ ಮೂಲ ಕರ್ತವ್ಯ.  ರಾಜ್ಯ ರಾಜಕಾರಣದಲ್ಲಿ ಧರ್ಮವಿಲ್ಲ. ರಾ...

*ಯಾರೂ ಇಲ್ಲ.........????*

Image
*ಯಾರೂ ಇಲ್ಲ.........????* *ಯಾರೂ ಇಲ್ಲ*  ಯಾರಿದ್ದಾರೆ ನಮ್ಮ ಕಷ್ಟದಲ್ಲಿ. ನಮ್ಮವರ ಕಣ್ಣೀರೊರಿಸಿಯೇ ಕೈ ಸವೆದವು, ನಮ್ಮ ಕಣ್ಣೀರೊರೆಸಲು ಒಂದು ಟವೆಲ್ಲೂ ಇಲ್ಲ. ಕೈಗಳಂತೂ ದೂರದ ಮಾತು. ನೂರಾರು ಜನ ಇದ್ದಾರೆ ಅಲ್ಲವೇ.... ಕೊರಗು ಯಾಕೆ.. ??  ಎಲ್ಲರಿದ್ದರೂ ನಮ್ಮ ಸಮಯಕ್ಕೆ ಯಾರೂ ಇರುವದಿಲ್ಲ. ಬರುವದೂ ಇಲ್ಲ.  ದ್ರೌಪದಿ ಮಹಾಧಾರ್ಮಿಕಳು. ಮಹಾ ಬಲಿಷ್ಠರ ಮಡದಿ. ಮಾವಂದಿರೂ ಧಾರ್ಮಿಕೋತ್ತಮರು. ಹಾಗಿದ್ದಾಗಲೂ ವಸ್ತ್ರಾಪಹರಣ ವಾಗುತ್ತಿರುವಾಗ *ಯಾರೂ ಇರಲಿಲ್ಲ.* ಧರ್ಮರಾಜನ ಮಾನ ಹಾಗೂ ಮರ್ಯಾದೆ ಉಳಿಸಲು ಅಭಿಮನ್ಯು ಬೇಕಾದ, ಅವನ ಪ್ರಾಣ ಉಳಿಸಲು *ಯಾರೂ ಇಲ್ಲವಾದರು.*  ಇದು ಕಟು ಸತ್ಯ. ಅತ್ಯಂತ ಘೋರ ಪರಿಸ್ಥಿತಿ. ಅಭಿಮನ್ಯು ಸಾಮನ್ಯನೇನಲ್ಲ. ಸ್ವಯಂ ಪರಾಕ್ರಮಿ, ಅರ್ಜುನನ ಮಗ, ಭೀಮ ಧರ್ಮರ ಮಗ, ಕೃಷ್ಣನ ಸೋದರ ಅಳಿಯ, ಇಷ್ಟಿದ್ದರೂ ಅವನ ಕಷ್ಟಕಾಲಕ್ಕೆ *ಯಾರೂ ಇಲ್ಲದಾದರು.* ಈ ಅವಸ್ಥೆಯನ್ನು ಇಂದಿಗೂ ಜೀರ್ಣ ಮಾಡಿಕೊಳ್ಳಲು ನಮಗಾಗದು. ಇಂತಹ ನೂರು ನಿದರ್ಶನ ಸಿಗತ್ತೆ. ಎಲ್ಲರ ಆಪತ್ತಿಗೆ ಕೃಷ್ಣ ಬೇಕಾದ, ಅವನಿಗೆ ಬೇಡರವ ಬಾಣ ಬಿಟ್ಟಾಗ ಯಾರಿದ್ದರು.. ?? *ಯಾರೂ ಇಲ್ಲ...*  ನಮ್ಮ ಕಷ್ಟದಲ್ಲಿ ನಮ್ಮ ಕಣ್ಣೀರು ಒರೆಸಲು ಎರಡು ಕೈಗಳು ಬೇಕಾಗುತ್ತದೆ. ಆದರೆ ಅದೇ ಕೈಗಳು ಕಷ್ಟದಲ್ಲಿ ಸಿಲುಕಿದಾಗ ಆ ಕೈಗಳ ಕಡೆ ಗಮನವೇ ಇಲ್ಲದಾಗುತ್ತದೆ. ಇದು ಇಂದಿನ ಸ್ಥಿತಿ. ಹಣವಿದ್ದಾಗ ಎಲ್ಲರೂ ಇರುತ್ತಾರೆ, ಸಮೃದ್...

ನಮ್ಮ ದುಃಖವನ್ನು ನಾವು ಎಂದಿಗೂ ಅವಮಾನಿಸಬಾರದು.....

Image
ನಮ್ಮ ದುಃಖವನ್ನು ನಾವು ಎಂದಿಗೂ ಅವಮಾನಿಸಬಾರ ದು.... ಸುಖ ದುಃಖಗಳು ದೇವರು ಕೊಟ್ಟ ಒಂದದ್ಭುತ ವರ. ಕೆಲವರು ಸುಖವನ್ನು ಗೌರವಿಸುತ್ತಾರೆ. ದುಃಖವನ್ನು ಅವಮಾನಿಸುತ್ತಾರೆ.ಸುಖವನ್ನೂ ಅವಮಾನಿಸುವವರು ಮತ್ತೆ ಕೆಲವರು. ಸುಖ ದುಃಖಗಳು ಗಾಲಿಗಳು ಇದ್ದಹಾಗೆ. ಒಂದರನಂತರ ಮತ್ತೊಂದು, ಸುಖದನಂತರ ದುಃಖ, ದುಃಖದ ಕೊನೆ ಸುಖ ಹೀಗೆಯೇ ಬರುವಂತಹದ್ದು ಯಾವದೂ ಶಾಶ್ವತವಲ್ಲ. ಸುಖಬಂದಾಗ ಒಳಗೊಳಗೇ ಖುಶಿ, ಚೆನ್ನಾಗಿ ಭೋಗಿಸುತ್ತಾನೆ. ಆದೇ *ದುಃಖಬಂದಾಗ ಕಣ್ಣೀರು ಸುರಿಸಿ ರಂಪ ಮಾಡುತ್ತಾನೆ. ಇದುವೇ ದುಃಖಕ್ಕೆ ಮಾಡುವ ದೊಡ್ಡ ಅವಮಾನ.*  ಸುಖ ಬಂದಾಗ *ಹೇ ಶ್ರೀಹರಿ ನೀನೇ ಕೊಟ್ಟದ್ದು* ಎಂದು ಬಾಯಿಮಾತಿಗೂ ಒಪ್ಪಿಕೊಳ್ಳದ ಮಾನವ, ದುಃಖ ಬಂದಾಕ್ಷಣ ದೇವರಿಗೆ ಕೈ ಮಾಡಿ ತೋರಿಸುವದೇನಿದೆ ಸುಖ ದುಃಖಗಳ ನಿಯಮಿಸುವ ಶ್ರೀಹರಿಗೂ ಮಾಡುವ ಒಂದು ದೊಡ್ಡ ಅವಮಾನವೇ ಸರಿ. ದುಃಖ ಅಪ್ಪಳಿಸಿದಾಗ ಗುರು, ಜೋತಿಷಿ, ಆಚಾರ್ಯ, ಗೆಳೆಯ, ಸ್ನೇಹಿತ, ಹೋಮಕ್ಕೆ ದೇವತೆಗಳು, ಶಾಸ್ತ್ರ, ಪಾರಾಯಣ, ಜಪ,  ಇವೆಲ್ಲದರ ಅವಷ್ಯಕತೆ ಇನ್ನಿಲ್ಲದಂತೆ ಬೇಕಾಗುವದು. ಆದರೆ ಅದೇ ಸುಖ ಬಂದ ಕ್ಷಣದಲ್ಲಿ ಆ ಎಲ್ಲ ಉಪಕಾರಿಗಳನ್ನು ಮರೆಯುವದೋ ಅಥವಾ ಉಪಕಾರವನ್ನು ಸ್ಮರಿಸದೇ ಇರುವದು ಏನಿದೆ ಅದು ಆ ಎಲ್ಲರಿಗೂ ಮಾಡುವ ಅವಮಾನವೇ ಸರಿ.....  ಹಾಗಾಗಿ ದುಃಖವನ್ನೋ, ದುಃಖಕೊಟ್ಟ ದೇವತೆಯನ್ನೋ, ಅಥವಾ ದುಃಖ ಪರಿಹಾರಕ್ಕೆ ಬೆನ್ನೆಲುಬು ಆಗಿ ನಿಂತವರನ್ನೋ ಅವಮಾನಿಸ...

*ಶ್ರೀ ಸತ್ಯವಿಜಯತೀರ್ಥರು*

Image
*ಶ್ರೀ ಸತ್ಯವಿಜಯತೀರ್ಥರು* ಮಹಾಜ್ಙಾನಿಗಳಾದ ದೇವಾಂಶ ಸಂಭೂತರಾದ ಜ್ಙಾನಿತಿಲಕರಾದ *ಶ್ರೀಸತ್ಯವಿಜಯತೀರ್ಥರ ೨೮೨ ನೇಯ ಆರಾಧನಾ ಮಹೋತ್ಸವ.*  "ಪೂರ್ಣನಾಗಿರಬೇಕು, ವಿಜಯಿಯಾಗಿರಬೇಕು, ದೇವ ಪ್ರಿಯನೂ ಆಗಿರಬೇಕು" ಇದು  ಮನವನ ಮಹೋದ್ಯೇಶ್ಯ. ಈ ಉದ್ಯೇಶ್ಯದಲ್ಲಿ ಸಫಲನಾಗುವದಕ್ಕಿಂತಲೂ ವಿಫಲನಾಗುವದೇ ಹೆಚ್ಚು. ಸಫಲನಾಗಲು ಬೇಕು ಸತ್ಯವಿಜಯ ತೀರ್ಥರ ಮಹಾ ಅನುಗ್ರಹ.  *ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತಃ. ದನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪಃ* ಈ  ಶ್ಲೋಕದ ಚಿಂತನೆ ಸಾಫಲ್ಯಕ್ಕೆ ಕಾರಣವಾಗಿದೆ.  ದೇಹಬಲ, ಬುದ್ಧಿಬಲ,ಇಂದ್ರಿಯ ಚಾಕಚಕ್ಯತೆ, ಉತ್ತಮ ಕುಲ, ಮಹೈಶ್ವರ್ಯ ಏನೆಲ್ಲವಿದ್ದರೂ ವ್ಯಕ್ತಿ ಪರಿಪೂರ್ಣನೆಂದೆನಿಸಿಕೊಳ್ಳುವದು ಕೇವಲ knowledge ಜ್ಙಾನ ಇದ್ದಾಗ ಮಾತ್ರ.  ಜ್ಙಾನವಿಲ್ಲದವ ಏನೆಲ್ಲವನ್ನು ಪಡೆದಿದ್ದರೂ ಅವನು ಅಪೂರ್ಣನೇ.  *ಸೋಲುವವನಾರು.. ??* ದೈಹಿಕ, ಐಂದ್ರಿಯಿಕ, ಮಾನಸಿಕ, ಸಾಮಾಜಿಕ ಹೀಗೆ ಯಾವುದರಲ್ಲೂ ವ್ಯಕ್ತಿಗೆ ಸೋಲಾಗತ್ತೆ ಎಂದರೆ ಆ ವ್ಯಕ್ಯಿ ಅಪೂರ್ಣ ಎಂದೇ ಅರ್ಥ. ಅಪೂರ್ಣನಿಗೆ ಗೆಲವು ಹಗಲ್ಗನಸು ಮಾತ್ರ.  *ವಿಜಯ ಮಾಲೆ ಯಾರಿಗೆ ... ??* ಯಾರು ಜ್ಙಾನಿಯೋ ಅವನಿಗೆ ಪರಾಭವಗಳು ಇರಲಾರವು. ಜ್ಙಾನವಿರುವಲ್ಲಿ ಕುಂದುಗಳು ಇಲ್ಲ. ಕುಂದು ಕೊರತೆಗಳು ಇಲ್ಲದಿರುವಲ್ಲಿ ಪೂರ್ಣತೆ ಇದೆ. ಪೂರ್ಣತೆ ಇರುವಲ್ಲಿ ಸೋಲು ಪರಾ...