*ನಾಲಕು ಘಂ. IPL ನೋಡಲು ಸಮಯವಿದೆ, ಹತ್ತು ನಿಮಿಷದ ಸಂಧ್ಯಾವಂದನೆಗೇಕೆ ಉತ್ಸಾಹವಿಲ್ಲ.....??*
ಇಂದು ಯಾವ ಲೇಖನ ಬರಿಯಬೇಕು... 🤔🤔 ಎಂದು ವಿಚಾರಿಸುತ್ತಿರುವಾಗ, ನಮ್ಮ ಆತ್ಮೀಯರೊಬ್ಬರು ಕೇಳಿದ ಪ್ರಶ್ನೆ ಇದು.....
ಟ್ಯೂಶೆನ್ಸ, ಸ್ಕೂಲು, ಕಾಲೇಜು, ಆಫೀಸು, ಮಾಲ್, ಕ್ರೀಡಾಂಗಣ, ಫಿಲ್ಮ, ಟೀವಿ, ಮೋಬೈಲು, ಹರಟೆ, ಮೊದಲು ಮಾಡಿ ಎಲ್ಲದಕ್ಕೂ ನಮಗೆ ತುಂಬ ಸಮಯವಿದೆ, (ಕೆಲವರಿಗಂತೂ ಶಾಸ್ತ್ರ ಬೇಡ ಎಂದು ಹೇಳಿದ್ದು ಮಾಡಲೇ ಪರಮೋತ್ಸಾಹ) ಉತ್ಸಾಹವಿದೆ, ತಾದಾತ್ಮ್ಯವಿದೆ..... ಆದರೆ *ಹತ್ತು ನಿಮಿಷದ ಸಂಧ್ಯಾವಂದನೆ, ಹತ್ತು ನಿಮಿಷದ ನೂರೆಂಟು ಗಾಯತ್ರೀಜಪ, ಇಪ್ಪತ್ತೇ ನಿಮಿಷದ ದೇವರ ಪೂಜೆ, ಮೂವತ್ತು ನಿಮಿಷದ ಪಾಠ, ಆರವತ್ತೇ ನಿಮಿಷದ ಉಪನ್ಯಾಸ , ಐದಾರು ನಿಮಿಷದ ಧ್ಯಾನ ಮುಂತಾದವುಗಳಿಗೇಕೆ ಸಮಯವಿಲ್ಲ... ?? ಉತ್ಸಾಹವಿಲ್ಲ, ಮಾಡಿದರೂ ಕೇವಲ ಯಾಂತ್ರಿಕ, ತಾದಾತ್ಮ್ಯ ಬರುವದೇ ಇಲ್ಲ, ಯಾಕೆ ಹೀಗಾಗುವದು... ?? ಇದಕ್ಕೆಲ್ಲ ಹೊಣೆಗಾರರು ಯಾರು... ??*
ಆಕರ್ಷಣೀಯವಾದ ಎಲ್ಲ ಪದಾರ್ಥಗಳೂ ೯೦% ಕೆಟ್ಟದ್ದೇ ಆಗಿರುತ್ತದೆ. ಹಿತಕಾರಿಯಾದ ಯಾವ ಪದಾರ್ಥವೂ ಆಕರ್ಷಣೀಯವಾಗಿರುವದೇ ಇಲ್ಲ.
ಆಕರ್ಷಣೀಯ ಪದಾರ್ಥಗಳಿಗೆ ಬಲಿ ಬೀಳುವದು ಸಣ್ಣ ಹುಡುಗರ, ಯುವಕರ ಕಾಯಕ. ಆಕರ್ಷಣೀಯ ಪದಾರ್ಥಗಳಿಗೆ ಬಲಿಬೀಳದಂತೆ ಮಾಡುವದು ಹಿರಿಯರ ತಂದೆ ತಾಯಿಗಳ ಮೂಲ ಕರ್ತವ್ಯ.
ರಾಜ್ಯ ರಾಜಕಾರಣದಲ್ಲಿ ಧರ್ಮವಿಲ್ಲ. ರಾಷ್ಟ್ರರಾಜ್ಯಕಾರಣದಲ್ಕಿ ಧರ್ಮವಿಲ್ಲ. ಮಾಲ್ ಗಳಲ್ಲಿ ಧರ್ಮವಿಲ್ಲ. ಕಾಲೇಜು ಮೊದಲಾದವುಗಳಲ್ಲಿಯೂ ಧರ್ಮವಿಲ್ಲ. ಗೆಳೆಯ ಗೆಳಯತಿಯರಲ್ಲಿ ಧರ್ಮದ ವಾಸನೆಯೂ ಇಲ್ಲ. ಹೀಗೆ ಎಲ್ಲಿಯೂ ಧರ್ಮವಿಲ್ಲದಿರುವಾಗ, *ಮನೆಯಲ್ಲಿಯೂ ಧರ್ಮವಿಲ್ಲ ಎಂದಾದಾಗ, ಆ ಪುಟ್ಟ ಬಾಲಕ, ನವ ಯುವಕನಿಗೆ ಧರ್ಮದಲ್ಲಿ ರುಚಿ ಹುಟ್ಟೀತು ಆದರೂ ಹೇಗೆ... ????*
ನ್ಯಾಸಾಚಾರ್ಯರೇ..!!! ನಮ್ಮ ಮಗ ವಾರಕ್ಕೊಮ್ಮೆ ಸಂಧ್ಯಾವಂದನವನ್ನೂ ಮಾಡಲಾರ.... ಅವನಿಗೆ ಹೇಗೆ ಹೇಳಬೇಕು ??? ಎಂಬ ಪ್ರಶ್ನೆ ನನಗೆ ಕೇಳಿದರು. ಉತ್ತರ ಕೊಡಲಿಕ್ಕೂ ನಾನು ಹೋಗಲಿಲ್ಲ.
ಮೂರು ಹೊತ್ತಿನ ಸಂಧ್ಯರ ಮಣ್ಣುಪಾಲು ಆಗಿದೆ. ಎರಡು ಹೊತ್ತು ಕೆಲವೆಡೆ ಉಳಿದಿದೆ. ಒಂದುಹೊತ್ತು ಅನೇಕ ಮನೆ ಮಂದಿರಗಳಲ್ಲಿ ನಡೆಯುತ್ತಿದೆ. ವರ್ಷ ವರ್ಷಗಳಿಂದ ಸಂಧ್ಯಾವಂದನವೂ ಇಲ್ಲದ ಲಕ್ಷ ಲಕ್ಷ ಮನೆಗಳು ಇವೆ. ಕೆಲವೊಮ್ಮೆ ಸಂಕಟವಾದರೆ, ಕೆಲವೊಮ್ಮೆ ಯಾತನೆಯಾಗುತ್ತದೆ... ದಾರಿ ಏನು... ???
ಮನೆಯಲ್ಲಿಯ ವಾತಾವರಣವನ್ನು ಹೇಗೆ ಕ್ರಿಯೇಟ್ ಮಾಡುತ್ತೇವೆ ಹಾಗೆ ಮನೆ ಮನೆ ಜನರ ಭಾವನೆಗಳು ಇರುತ್ತವೆ. ಮನೆಯಲ್ಲಿ ವಾತಾವರಣವನ್ನು ಹುಟ್ಟೆಬ್ಬಿಸುವ ದೊಡ್ಡ ಜವಾಬ್ದಾರಿ ಇಂದು ಹಿರಿಯರದ್ದೇ ಆಗಿದೆ......
ಸಂಧ್ಯಾವಂದನೆ ಮಾಡು ಎಂದು ಹೇಳುವ ಜವಾಬ್ದಾರಿ ಅಪ್ಪನದು. ಅಪ್ಪನೇ ಮಾಡಲಾರ. ಮಗನಿಗೇನು ಹೇಳುವ.. ?? ಹಿರಿಯರೇ IPL ಮುಂದೇ ಕುಳಿತಾಗ, ಮಕ್ಕಳಿಗೆ ಕೂಡಬೇಡ ಎಂದು ಹೇಳುವರು ಯಾರು... ??? ಕಂಡದ್ದು ಹಿರಿಯರೇ ಮನೆಯಲ್ಕಿ ತಿನ್ನುವಾಗ, ಮಕ್ಕಳಿಗೆ ನೀ ತಿನ್ನಬೇಡ ಎಂದು ಹೇಳಲು ಹೇಗೆ ಸಾಧ್ಯ... ???
ಮುಂದೆ ಮಕ್ಕಳು ದುಶ್ಚಟಕ್ಕೆ ಬಲಿ ಬಿದ್ದಿದಾರೆ ಎಂದು ಅಳುವ ದೌರ್ಭಾಗ್ಯಬೇಡವಾಗಿದ್ದರೆ, ಇಂದು ಹಿರಿಯರು ಬದಲಾಗುವ ಅನಿವಾರ್ಯತೆ ತುಂಬ ಇದೆ. ಧಾರ್ಮಿಕ ವಾತಾವರಣ ಸೃಷ್ಟಿ ಮಾಡುವದು ಅತ್ಯಂತ ಅನಿವಾರ್ಯವಾಗಿದೆ.
ಎಲ್ಲ ಹಿರಿಯರಲ್ಲಿ ಕಳಕಳಿಯ ನಮಸ್ಕಾರ ಪೂರ್ವಕ ವಿನಂತಿಸುವದೇನೆಂದರೆ *ನಾವು ಬದಲಾಗೋಣ, ನಮ್ಮ ಮನೆಯ ವಾತಾವರಣವನ್ನು ಬದಲಿಸೋಣ, ನಮ್ಮ ಮಕ್ಕಳ ಬದಲಾವಣೆಯನ್ನು ಕಾಣೋಣ.* ಇದುವೇ ಹಿತ. ಹತ್ತೇ ನಿಮಿಷದ ಬದಲಾವಣೆಯೂ ಉನ್ನತ ಮಾರ್ಗಕ್ಕೆ ನಾಂದಿಯಾಗುವದರಲ್ಲಿ ಸಂಶಯವೇ ಇಲ್ಲ.......
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments
on the web the easiest thing to be aware of. I say
to you, I definitely get irked while people consider worries that they plainly don't know
about. You managed to hit the nail upon the top and defined out the whole thing without having side effect ,
people can take a signal. Will probably be back to get more.
Thanks