*ಓಡುವದು ಬೇಡ.... ನಿಲ್ಲೋಣ... ಎದುರಿಸೋಣ*

*ಓಡುವದು ಬೇಡ.... ನಿಲ್ಲೋಣ... ಎದುರಿಸೋಣ*

ವಿದ್ಯಾಪೀಠದಲ್ಲಿ ಇರುವಾಗ ಆಟ ಓಟಗಳಲ್ಲಿಯೂ ತುಂಬ ಅಭಿರುಚಿ. ಬೇಳಿಗ್ಗೆ ನಾಲಕು ಗಂಟೆಗೆ ಇಂದ ಒಂದು ಗಂಟೆಯ ಕಾಲ ಅನೇಕ ವರ್ಷಗಳವರೆಗೆ ರನ್ನಿಂಗ್ ಮಾಡಿಸುತ್ತಿದ್ದರು. ಅದರಲ್ಲಿ ಅನೇಕ ಹಿರಿಯರೂ ಕಿರಿಯರೂ ಭಾಗವಹಿಸುತ್ತಿದ್ದರು. 

ಒಂದು ದಿನ ಬೆಳಗ್ಗಿನ ಝಾವಾ ಓಡ್ತಾ ಇದ್ದೇವೆ, ನಾಯಿಗಳ ಗುಂಪು ನಮ್ಮನ್ನು ಅಟ್ಟಿಸಿಕೊಂಡು ಬಂತು. ನಾವು ಇನ್ನೂ ಜೋರಾಗಿ ಓಡಿದೆವು, ಅವುಗಳೂ ಇನ್ನೂ ಜೋರಾಗಿ ಅಟ್ಟಿಸಿಕೊಂಡು ಕಡಿಯಲೇ ಬಂದವು. ಆಗ ನಮ್ಮಕಿಂತಲೂ ಮೊದಲೇ ಹೊರಟ ಕೆಲ‌ಹಿರಿಯರ ಗುಂಪು ಬಂತು. ಅವರು ಹೇಳಿದರು *ಏ ಗೋಪ್ಯಾ !!!* "ಓಡಬೇಡ ಮೊದಲು ನಿಲ್ಲು...." ಎಂದರು. ನಿಂತೆವು. ಮಜಾ ಅಂದರೆ ನಾವು ನಿಂತ ಕ್ಷಣಕ್ಕೇ ಓಡಿ ಬರುತ್ತಿರುವ ನಾಯಿಗಳೂ ನಿಂತವು. ಆಗ ಆ ಹಿರಿಯರು ಅಂದರು "ಆ ನಾಯಿಗಳನ್ನು ಎದುರಿಸು..." ಎಂದು. ಧೈರ್ಯದಿಂದ ಎದುರಿಸಿದೆವು, ಆ ನಾಯಿಗಳೋ ಕೆಲ‌ಕ್ಷಣದಲ್ಲಿಯೇ  ದಿಕ್ಕಪಾಲಾಗಿ ಓಡಿ ಹೋದವು. ಇದು ಅಂದು ನಡೆದ ನೈಜ ಘಟನೆ. ಆದರೆ ಇಂದು ನಿಜವಾಗಿ ಜೀವನದ ಪಾಠವೂ ಆಗಿದೆ... 

ಇಂದು ನಮ್ಮ ಜೀವನದಲ್ಲಿ ಆಪತ್ತುಗಳು ಬರುತ್ತವೆ, ಕಷ್ಟಗಳೂ ಬರುತ್ತವೆ, ಅನೇಕ ಉತ್ತಮೋತ್ತಮ ಕಾರ್ಯಗಳಲ್ಲಿ ಕಂಟಕಗಳೂ ಬರುತ್ತವೆ, "ಭಯ ವಿಹ್ವಲರಾಗಿ ಓಡಿ ಹೋಗದೆ, ದೃಢ ನಿಷ್ಠೆಯಿಂದ ಎದುರಿಸಿದೆವು ಎಂದಾದರೆ ಆ ನಾಯಿಗಳಂತೆ ಇವೆಲ್ಲವೂ ಓಡಿಹೋಗುತ್ತವೆ....." ಇದು ಅಷ್ಟೇ ನಿಜ ಎಂದೆನಿಸುತ್ತದೆ. 

*ಹೇಡಿಗಳು ಎಂದಿಗೂ ವಿಜಯಿಗಳು ಎಂದಾಗಲಾರರು- ಎದುರಿಸುವವರು ಎಂದಿಗೂ ಸೋಲಲಾರರು*  ಅಜ್ಙಾನ, ಭಯ, ತೊಂದರೆ, ವಿನಾಕಾರಣ ಶತ್ರುತ್ವ, ಪರಾಜಯ, ರೋಗ, ಶತ್ರುಗಳು, ಯಾವುದೇ ತರಹದ ಪೀಡೆ, ಹೀಗೆ ಏನೇ ಬಂದರೂ ಹೇಡಿಯಾಗಿ ಓಡದೇ ಎದುರಿಸಿ ಅವುಗಳನ್ನೇ ಓಡಿಹೋಗುವಂತೆ ಮಾಡಬೇಕು.... *ಓಡಬೇಡ- ನಿಲ್ಲು- ನಿಂತು ಎದುರಿಸು* ಈ ಸೂತ್ರ ತುಂಬ ಉಪಯುಕ್ತ ಸೂತ್ರ ಎಂದು ಆಗಾಗ ಅನಿಸುತ್ತಿರುತ್ತಿರುತ್ತದೆ. 

ಆದರೆ..... ನಿಲ್ಲುವ ನಿಂತು ಎದುರಿಸುವ ಧೈರ್ಯವೇ ಕೆಲ‌ವೊಂದು ಸಲ ಅಲ್ಲ ಅನೇಕ ಸಲ ಬರುವದೇ ಇಲ್ಲ. ಏನು ಮಾಡಬೇಕು....

ಬೆನ್ನು ಬಿದ್ದ ಬೇತಾಗಳನ್ನು ನೋಡಿ ಓಡದೇ, ನಿಲ್ಲುವ ನಿಂತು ಎದುರಿಸುವ, ಅವುಗಳನ್ನೇ ದಿಕ್ಕಪಾಲಾಗಿ ಓಡಿಸಲು ಬೇಕು *ದೈವೀ ಶಕ್ತಿ* ಆ ಶಕ್ತಿ ಬರುವದೇ *ಎರಡು ಹೊತ್ತು ಸಂಧ್ಯಾವಂದನೆ/ ಗಾಯತ್ರೀಜಪ/ ದೇವರ ಪೂಜೆ ಇವುಗಳಿಂದ. ಹಾಗೆಯೇ ಸ್ತ್ರೀಯರೆಲ್ಲರಿಗೆ ರಾಮಕೃಷ್ಣ/ ಅಚ್ಯುತಾನಂತಗೋವಿಂದ* ಇವುಗಳ ಪಾರಾಯಣಗಳ ಪ್ರಭಾವದಿಂದ. 

ಆದ್ದರಿಂದ ಆಪತ್ತುಗಳಿಗೆ ಬೆನ್ನುಮಾಡಿ ಓಡುವದು ಬೇಡ. ನಿಲ್ಲೋಣ. ನಿಂತು ಎದುರಿಸೋಣ. ಅದಕ್ಕಾಗಿ ಬೇಕಾದ ದೈವೀಶಕ್ತಿಯನ್ನು ಪಡೆಯೋಣ.....

*✍🏽✍🏽ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*