*ಸು-ನಮೋ ಸುನಾಮಿ....*

*ಸು-ನಮೋ  ಸುನಾಮಿ....*

ದೇಶಹ ಹಾಳು ಮಾಡುವ, ದೇಶವನ್ನು ಕೊಳ್ಳೆ ಹೊಡೆಯುವ *ಸುನಾಮಿ* ಗಳೇನಕ ಬರುತ್ತಿದ್ದವು. ಆದರೆ ನಿನ್ನೆ ಬಂದ *ಸುನಾಮಿ*  ದೇಶದ ಮನ ಮನೆಗಳಲ್ಲಿ ಆಕ್ರಮಿಸುವ, ದೇಶ ರಕ್ಷಿಸುವ, ದೇಶದ ಕೀರ್ತಿ ಪತಾಕೆಯನ್ನು ಜಗದಿ ಹರಡಿಸುವ, ಭ್ರಷ್ಟರ ಹುಟ್ಟಡಗಿಸುವ, ಕೇಸರಿಮಯವಾದ, *ಸು* ಪ್ರಾಮಾಣಿಕವಾದ *ನಮೋ* ಎಂಬ *ಸುನಾಮಿ* ದೇಶದ ಮೂಲೆ ಮೂಲೆಗೂ ತನ್ನ ಅಲೆಗಳಿಂದ ತಂಪೆರಗಿದೆ. 

ರಾಷ್ಟ್ರವಾದವನ್ನು ಬಿಗಿದಪ್ಪಿದ, ದೇಶದರಕ್ಷಣೆಯೇ ನಮ್ಮ ಧ್ಯೇಯ ಎಂದು ನಿಶ್ಚಯಿಸಿ  ಜಾತಿವಾದವನ್ನು ಮೂಲೆಗೆ ಸರಿಸಿದ. ಧೈರ್ಯ ಹಾಗೂ ಶೌರ್ಯದ ಅನೇಕ ನಿರತಣಯಗಳನ್ನು ತೆಗೆದುಕೊಂಡು ಯಶಸ್ವಿಯೂ ಆದ *ಸು-ನಮೋ ಸುನಾಮಿ* ಯಂತೆ ಅಬ್ಬರಿಸಿದ ನಮ್ಮ ಪ್ರೀತಿಯ ಆದರದ *ಪ್ರಧಾನಮಂತ್ರಿಯೂ ಆದ "ಮೋದಿಜಿ" ಅವರಿಗೆ* ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಪ್ರಧಾನಿಯಾಗಿರುವದಕ್ಕೆ ಹರುಷದ ಶುಭಾಷಯಗಳನ್ನು ಹೇಳೋಣ. 

ವೇದ ಸ್ಮೃತಿ ಇತಿಹಾಸಗಳ ಅನೇಕ ಕಥೆ ನಿದರ್ಶನಗಳನ್ನು ಅಧ್ಯಯನ ಮಾಡಿದ, ಆಧ್ಯಾತ್ಮಿಕತೆಯಲ್ಲಿ ಒಲವು ಹೊಂದಿದ, ದುರ್ಗಾ ಶಿವ ಆರಾಧಕನೂ ಆದ, ಅಂತೆಯೇ  ದೇಶದಮೇಲೆ ಅಪಾರ ಗೌರವ ಪ್ರೀತಿ ಹೊಂದಿದ, ದೇಶದ ಸಮಸ್ತ ನಾಗರಿಕರ ಬಂಧು ಎಂದು ಬಿಂಬಿಸುವ, ವಿದೇಶದ ವಿದೇಶಗಳ ಪ್ರತಿನಿಧಿಗಳಿಗೂ ಅತ್ಯಂತ ಆಪ್ತರಾಷ್ಟ್ರವನ್ನಾಗಿ ಮಾಡಿದ, ಹಿಂದಿನ ರಾಜರುಗಳಂತೆ ಸಮಸ್ತ ದೇಶದ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತವರು ನಮ್ಮ ಮೋದಿಜಿಯವರು. 

ಈತರಹದ  ಎಲ್ಲ ಶಕ್ತಿಗಳು ಬರುವದು ಕೇವಲ ಅಧ್ಯಾತ್ಮ ಪ್ರವಣನಾದವನಿಗೆ ಮಾತ್ರ. ಉನ್ನತ ಪದವಿಗೆ ಏರಿದ ಮನುಷ್ಯರಿಗೆ ಸಾಮಾನ್ಯಾವಾಗಿ ಸುಖಾಸನದಲ್ಲಿಯೋ ಅಥವಾ ಪದ್ಮಾಸನದಲ್ಲಿಯೋ ಕೂಡಲು ಸರ್ವಥಾ ಆಗದು. 

ಯಾವ ವ್ಯಕ್ತಿ ಯಾವ ಹುದ್ದೆಯಲ್ಲಿ ಇರುತ್ತಾನೆ ವ್ಯಸ್ತನಾಗಿರುತ್ತಾನೆ ಆ ಹುದ್ದೆ ಬಿಟ್ಟು ಬೇರೆಯ ಕೆಲಸಗಳಲ್ಲಿ ಆಸಕ್ತಿ ಇರುವದಿಲ್ಲ. ಲೌಕಿಕ ವ್ಯಾಹಾರಿಕ ಕೆಲಸಗಳಲ್ಲಿ ಇರುವ ವರಿಗೆ ೯೯% ಪ್ರತಿಶತ ದೇವರು ಸಾಧನೆ ಆಧ್ಯಾತ್ಮ ಇವುಗಳಿಂದ ದೂರಿರುತ್ತಾರೆ. ಇವುಗಳಲ್ಲಿ ಇದ್ದರೂ ಕೆಲಹೊತ್ತು ಮಾತ್ರ ಮೀಸಲು ಇಟ್ಟಿರುತ್ತಾರೆ.  ಈ ಎರಡೂ ವಿಷಯಗಳೂ ಮೋದಿಜಿ ಅವರ ಹತ್ತಿರ ಸುಳ್ಳಾಗುತ್ತವೆ. 

ಹದಿನೈದು ವರ್ಷ ಮುಖ್ಯಮಂತ್ರಿಯಾಗಿ, ಐದು ವರ್ಷ ಪ್ರಧಾನಿಯಾಗಿ ದೇಶದ ದೊಡ್ಡ ಹುದ್ದೆಗಳಲ್ಲಿಯೇ ಜೀವನ ಕಳೆದರೂ  "ಗಂಟೆ  ಗಂಟೆಗಳ ಕಾಲ ಧ್ಯಾನ ಮಾಡುತ್ತಾ ಸುಖಾಸನದಲ್ಲಿ ಕೂಡುತ್ತಾರೆ, ವರ್ಷದಲ್ಕಿ ನೂರುದಿನಕ್ಕೂ ಹೆಚ್ಚು ದಿನ ಉಪವಾಸ ವ್ರತಗಳನ್ನು" ಮಾಡುತ್ತಾರೆ ಎಂದರೆ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ. 

ಈ ತರಹದ ದೇಶಪ್ರೇಮ, ಆಧ್ಯಾತ್ಮಿಕ ಶಕ್ತಿ, ಜೊತೆಗೆ ಮಹಾ ಮಹಾ ಜ್ಙಾನಿಗಳಾದ ಪುಣ್ಯವಂತರಾದ  ಸಾತ್ವಿಕರೆಲ್ಲರ ಸಂಪೂರ್ಣ ಹಾರೈಕೆ ಇವುಗಳ ಬಲದಿಂದಲೇ ಇಂದು ಪುನಜ ಆರಿಸಿಬಂದು ನಮ್ಮ ಪ್ರಧಾನಿಯಾಗಿ ಬಂದಿದ್ದಾರೆ. ಅವರನ್ನು ನಾವೆಲ್ಲರೂ ನಿತ್ಯ ಹರಿಸೋಣ. ಹಾರೈಸೋಣ.......

*ಸರ್ವಗುಣವಂತಿಕೆಯನ್ನು ನೀಡು ರಾಮ, ಪಾಪ ಪರಿಹಾರಕ ಗಂಗೆ, ಸಿದ್ಧಿಪ್ರದ ಗೋ ಶಿವ ಇವರ ಭಕ್ತರಿಗೆ ಪರಭಾವ ಬರಲು ಸಾಧ್ಯವಿಲ್ಲ. ವಿಜಯದ ಮಾಲೆ ನಿಶ್ಚಿತ.... ✌🏽✌🏽✌🏽*

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*