*ಶ್ರೀ ಸತ್ಯವಿಜಯತೀರ್ಥರು*
*ಶ್ರೀ ಸತ್ಯವಿಜಯತೀರ್ಥರು*
ಮಹಾಜ್ಙಾನಿಗಳಾದ ದೇವಾಂಶ ಸಂಭೂತರಾದ ಜ್ಙಾನಿತಿಲಕರಾದ *ಶ್ರೀಸತ್ಯವಿಜಯತೀರ್ಥರ ೨೮೨ ನೇಯ ಆರಾಧನಾ ಮಹೋತ್ಸವ.*
"ಪೂರ್ಣನಾಗಿರಬೇಕು, ವಿಜಯಿಯಾಗಿರಬೇಕು, ದೇವ ಪ್ರಿಯನೂ ಆಗಿರಬೇಕು" ಇದು ಮನವನ ಮಹೋದ್ಯೇಶ್ಯ. ಈ ಉದ್ಯೇಶ್ಯದಲ್ಲಿ ಸಫಲನಾಗುವದಕ್ಕಿಂತಲೂ ವಿಫಲನಾಗುವದೇ ಹೆಚ್ಚು. ಸಫಲನಾಗಲು ಬೇಕು ಸತ್ಯವಿಜಯ ತೀರ್ಥರ ಮಹಾ ಅನುಗ್ರಹ.
*ಸತ್ಯಪೂರ್ಣಾಂಬುಧೇರ್ಜಾತೋ ವಿದ್ವಜ್ಜನವಿಜೃಂಭಿತಃ. ದನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪಃ* ಈ ಶ್ಲೋಕದ ಚಿಂತನೆ ಸಾಫಲ್ಯಕ್ಕೆ ಕಾರಣವಾಗಿದೆ.
ದೇಹಬಲ, ಬುದ್ಧಿಬಲ,ಇಂದ್ರಿಯ ಚಾಕಚಕ್ಯತೆ, ಉತ್ತಮ ಕುಲ, ಮಹೈಶ್ವರ್ಯ ಏನೆಲ್ಲವಿದ್ದರೂ ವ್ಯಕ್ತಿ ಪರಿಪೂರ್ಣನೆಂದೆನಿಸಿಕೊಳ್ಳುವದು ಕೇವಲ knowledge ಜ್ಙಾನ ಇದ್ದಾಗ ಮಾತ್ರ. ಜ್ಙಾನವಿಲ್ಲದವ ಏನೆಲ್ಲವನ್ನು ಪಡೆದಿದ್ದರೂ ಅವನು ಅಪೂರ್ಣನೇ.
*ಸೋಲುವವನಾರು.. ??*
ದೈಹಿಕ, ಐಂದ್ರಿಯಿಕ, ಮಾನಸಿಕ, ಸಾಮಾಜಿಕ ಹೀಗೆ ಯಾವುದರಲ್ಲೂ ವ್ಯಕ್ತಿಗೆ ಸೋಲಾಗತ್ತೆ ಎಂದರೆ ಆ ವ್ಯಕ್ಯಿ ಅಪೂರ್ಣ ಎಂದೇ ಅರ್ಥ. ಅಪೂರ್ಣನಿಗೆ ಗೆಲವು ಹಗಲ್ಗನಸು ಮಾತ್ರ.
*ವಿಜಯ ಮಾಲೆ ಯಾರಿಗೆ ... ??*
ಯಾರು ಜ್ಙಾನಿಯೋ ಅವನಿಗೆ ಪರಾಭವಗಳು ಇರಲಾರವು. ಜ್ಙಾನವಿರುವಲ್ಲಿ ಕುಂದುಗಳು ಇಲ್ಲ. ಕುಂದು ಕೊರತೆಗಳು ಇಲ್ಲದಿರುವಲ್ಲಿ ಪೂರ್ಣತೆ ಇದೆ. ಪೂರ್ಣತೆ ಇರುವಲ್ಲಿ ಸೋಲು ಪರಾಭವ ಸರ್ವಥಾ ಇಲ್ಲ.
*ಜಯಶಾಲಿ ಯಾರು... ??*
ಜಯ ಜ್ಙಾವಿದ್ದು ಪೂರ್ಣನಾದವನಿಗಿಂತಲೂ ಜ್ಙಾನವಿಲ್ಲದ ಅಪರಿಪೂರ್ಣನಿಗೆ ಬೇಗ ಒಲಿದು ಬರುತ್ತದೆ. ಬಂದಷ್ಟೇ ವೇಗದಲ್ಲಿ ಸತ್ತೂ ಹೋಗುತ್ತದೆ. ದುರ್ಯೋಧನ ಕಂಸ ಹಿರ್ಕಸಿಪು ಇವರುಗಳೆ ನಿದರ್ಶನ. ತಡವಾದರೂ ಜ್ಙಾನಪಡೆದು, ಜ್ಙಾನಬಲದಿಂದ ಯುಕ್ತವಾದ ಅನೇಕ ಬಲಗಳಿಂದ ಸಹಿತನಾದವನ, ಅಂತೆಯೇ ಪೂರ್ಣನಾದವನಿಗೆ ಒಲಿದು ಬಂದ ವಿಜಯ ಶಾಶ್ವತವಾಗಿ ಉಳಿಯುತ್ತದೆ. ಧರ್ಮರಾಜ, ಇಂದ್ರ ಇವುರುಗಳೇ ಇದಕ್ಕೆ ಒಂದು ನಿದರ್ಶನ.
*ಜ್ಙಾನವಿದ್ದು, ಪೂರ್ಣನಾಗಿ, ವಿಜಯಿ ಆದವನಿಗೆ ಲಾಭವೇನು... ??*
ಜ್ಙಾನವಂತರು ಧರ್ಮ ಇಂದ್ರರು. ಅಂತೆಯೇ ಅವರು ಪೂರ್ಣರು. ಪೂರ್ಣರಿಗೆ ಜಯ ಒಲಿಯುವದು ತಡವಾದರೂ ಶಾಶ್ವತ ಜಯ ಸಿಕ್ಕಿತು. ಆ ಜಯ ವಿಜಯ, ದುರ್ಯೋಧನಾದಿಗಳ ಜಯದಂತೆ ಕೃಷ್ಣನಿಗೆ ಅಪ್ರಿಯವಾಗದೇ.... ಈ ವಿಜಯ ಕೃಷ್ಣ ನಾರಾಯಣರಿಗೆ ಅತ್ಯಂತ ಪ್ರಿಯವೂ ಆಯಿತು.
*ಸತ್ಯವಿಜಯರ ಆರಾಧನೆಗೇನು ಸಂಬಂಧ....*
ಶ್ರೀಮನ್ಯಾಯಸುಧಾ ಮೊದಲು ಮಾಡಿ ಸರ್ವಮೂಲವನ್ನು ಒಲಿಸಿಕೊಂಡು ಮಹಾಜ್ಙಾನವಂತರಾದ ಕಾರಣಕ್ಕೇ *ಶ್ರೀ ಸತ್ಯಪೂರ್ಣತೀರ್ಥರು* ಪೂರ್ಣರು ಎಂದು ಆದರು.
ಶ್ರೀಸತ್ಯಪೂರ್ಣರ ಸಂಪೂರ್ಣ ಅನುಗ್ರಹಕ್ಕೇ ಪಾತ್ರರಾಗಿರುವದರಿಂದಲೇ ಮಹಾ ವಿಜಯಿಶಾಲಿಯಾದರು ಇಂದಿನ ಕಥಾನಾಯಕರಾದ *ಶ್ರೀ ಸತ್ಯವಿಜಯ ತೀರ್ಥರು.*
ಸತ್ಯಪೂರ್ಣರ ಅನುಗ್ರಹದಿಂದ, ಮಹಾವಿಜಯಿಶಾಲಿಗಳಾದ, ಶ್ರೀಸತ್ಯವಿಜಯರ ಅನುಗ್ರಹ ಇರುವದರಿಂದಲೇ ಮುಂದಿನ ಯತಿಗಳು *ಶ್ರೀಸತ್ಯಪ್ರಿಯರು* ಎಂದು ಆದರು.
ಈ ನಿದರ್ಶನದಿಂದ ನಾವೂ ಜ್ಙಾನಪಡೆದು, ಪೂರ್ಣರು ಎಂದಾಗಿ, ಶತ್ರುಗಳನ್ನು ಮೆಟ್ಟಿನಿಂತು, ವಿಜಯಿಶಾಲಿಗಳಾಗಿ, ಸತ್ಯನಾಮಕ ಶ್ರೀಹರಿಗೆ ಹಾಗೂ ದೇವತಾ ಗುರುಗಳಿಗೆ *ಪ್ರಿಯರು* ಎಂದಾಗಿ ಬಾಳುವಂತಾಗಬೇಕು.
ಶ್ರೀಸತ್ಯಪೂರ್ಣರ ಕರಕಮಲ ಸಂಜಾತರಾದ, ಶ್ರೀಸತ್ಯಪ್ರಿಯರಿಂದ ನಿಂತರ ಆರಾಧಿತರಾದ, *ಶ್ರೀ ಸತ್ಯವಿಜಯತೀರ್ಥರ* ನಿರಂತರ ಸೇವೆ ಮಾಡಿ, ಅವರ ಚರಮ ಶ್ಲೊಕವನ್ನು ಪಠಿಸಿ, ವೃಂದಾವನ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾದರೆ ಎಲ್ಲವೂ ಒಲಿದು ಬರುವದರಲ್ಲಿ ಸಂಶಯವೇ ಇರುವದಿಲ್ಲ. *ಶ್ರೀಸತ್ಯವಿಜಯ ಸ್ವಾಮಿಪಾದೇಭ್ಯೋ ನಮಃ...🙏🏽🙏🏽*
ಈ ನಡುವೆ ಲೇಖನವನ್ಬೇ ಬರೆದಿರಲಿಲ್ಲ. ಇಂದು ಈ ಲೇಖನ ಬರಿಯಲು ಪ್ರೇರಿಸಿದ ನನ್ನ ಆತ್ಮೀಯರಿಗೆ *ಶ್ರೀಸತ್ಯವಿಜಯರ* ಅನುಗ್ರಹ ನಿರಂತರ ಇರಲಿ ಎಂದೂ ಪ್ರಾರ್ಥಿಸುವೆ..
ಶ್ರೀಸತ್ಯಪೂರ್ಣಾಂಬುಧೇರ್ಜಾತಃ ವಿದ್ವಜ್ಜನವಿಜೃಂಭಿತಃ
ದನೀಧ್ವಂಸೀತು ನಸ್ತಾಪಂ ಶ್ರೀಸತ್ಯವಿಜಯೋಡುಪಃ
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
It's on a entirely different topic but it has pretty much the same
page layout and design. Outstanding choice of colors!