*ದೇವನು ನಮ್ಮ ಕೈಯಲಿ ಬಂದ ಎಂದಾದರೆ ವಿಘ್ನಗಳೆಲ್ಲಿ.....*

*ದೇವನು ನಮ್ಮ  ಕೈಯಲಿ ಬಂದ ಎಂದಾದರೆ ವಿಘ್ನಗಳೆಲ್ಲಿ.....*

ಇಂದು ವಿಘ್ನಗಳು ಸಾಮಾನ್ಯವಾಗಿ ನಮಗೇ ಇವೆ. ವಿಘ್ನಗಳಿಗೆ ಆಗರರು ನಾವೇ ಆಗಿದ್ದೇವೇ. ವಿಘ್ನಗಳು ನಮ್ಮನ್ನೇ ಅರಿಸಿ ಬರುತ್ತವೆ. ಅಂತೆಯೇ ಸಂಧ್ಯಾವಂದನೆ ಗಾಯತ್ರೀಜಪ ದೇವರ ಪೂಜೆ ಮೊದಲು ಮಾಡಿ ಎಲ್ಲ ಸತ್ಕಾರ್ಯಗಳಿಗೂ ನಮ್ಮನ್ನು ಪ್ರೀತಿಯಿಂದ ಎದುರುಗೊಳ್ಳುವದು  ವಿಘ್ನಗಳೇ ಮೊದಲು. 

*ವಿಘ್ನಗಳು ಏಕೆ ಬರುತ್ತವೆ....*

ಯಾರ ಬೆನ್ನಿಗೆ ಪುಣ್ಯವಿಲ್ಲ, ಯಾರಿಗೆ ಧರ್ಮದ ಬಲವಿಲ್ಲ, ಯಾರು ಪಾಪಗಳನ್ನೇ ಹೆಚ್ಚೆಚ್ಚು ಮಾಡಿದ್ದಾನೆ,  ಯಾರು ದೇವರಿಂದ ದೂರಿದ್ದಾನೆ ಮತ್ತು ಯಾರನ್ನು ದೇವ ಹತ್ತಿರ ಮಾಡಿಕೊಳ್ಳಬೇಕು ಎಂದು ಬಯಸಿದ್ದಾನೆ ಅವರಿಗೇ ವಿಘ್ನಗಳು ಬರುವದು ಸಹಜ. 

ಕೊನೆಯದಂತೂ ನಾವಾಗಲು ಸಾಧ್ಯವಿಲ್ಲ. ದೇವರು ನಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುವಷ್ಟು ನಾವು ದೇವರನ್ನು ಪ್ರೀತಿಸಿಯೇ ಇಲ್ಲ ಆದ್ದರಿಂದ ನಾವಂತೂ ಆಗಲು ಸಾಧ್ಯವಿಲ್ಲ. ನಮಗೆ ವಿಘ್ನಗಳು ಇವೆ ಎಂದರೆ ಮೇಲಿನವುಗಳಲ್ಲಿಯೇ ಒಂದು ಕೆಟಗೆರಿಯಲ್ಲಿ ನಾವು ಬಂದಿರುತ್ತೇವೆ.. 

*ನಮಗೆ ವಿಘ್ನಗಳ ಪರಿಹಾರ ಹೇಗೆ.... ????*

ಧರ್ಮ ಮಾಡುವದು, ತಪ್ಪಸ್ಸು ಆಚರಿಸುವದು, ಪುಣ್ಯವಂತನಾಗಿ ಬಾಳುವದು, ದೇವರವನಾಗಿ ಇರುವದರಿಂದಲೇ ನಮ್ಮ ವಿಘ್ನಗಳನ್ನು ಪರಿಹರಿಸಿಕೊಳ್ಳಬಹುದು. *ಇದೆಲ್ಲದರ ಮೇಲೆ ನಿರಂತರ ದೇವರ ಆರಾಧನೆ ಮಾಡಿ, ಭಕ್ತಿಮಾಡಿ, ಸೇವೆಯನ್ನು ಮಾಡಿ, ದೇವರ ಭೃತ್ಯನೆಂದಾಗಿ,  ದೇವರನ್ನು ನಮ್ಮ ಕೈಯಲ್ಲಿ ಇಟ್ಟುಕೊಂಡರೆ ಆಯಿತು ಎಲ್ಲ ವಿಘ್ನಗಳೂ ಪರಿಹಾರವಾಯಿತು* ಎಂದೇ ಅರ್ಥ. 

*ಒಂದು ಸುಂದರ ಕಥೆ......*

ವಸುದೇವ ದೇವಕಿಯರನ್ನು ಕಾರಾಗೃಹದಲ್ಲಿ ಇಟ್ಟಿದ್ದಾನೆ ಕಂಸ. ಆ ಕಾರಾಗೃಹಕ್ಕೆ ಬಿಗು ಭದ್ರತೆ. ಆರೆಂಟು ದ್ವಾರಗಳು, ಪ್ರತೀ ದ್ವಾರಕ್ಕೂ ನಾಲ್ಕಾರು ಬಲಾಢ್ಯ ಸೈನಿಕರು, ರಸ್ತೆಯಲ್ಲಿ ಕಾವಲು ಭಟರು ಹೀಗೆ ಬಿಗು ಭದ್ರತೆಯ ಕಾರಾಗೃಹ. 

ಕೃಷ್ಣ ರಾತ್ರಿ ಹನ್ಬೆರಡರ ಆಸುಪಾಸಿಗ ಅವತರಿಸಿದ. ಅವತರಿಸಿ‌ದ ಕೃಷ್ಣನನ್ನು ಕಂಡ ದೇವಕಿ ವಸುದೇವರು ಹುಚ್ಚೆದ್ದು ಸ್ತೋತ್ರ ಮಾಡಿದರು. *ನಾನು ನಿನ್ನ ದಾಸ, ನೀನು ಎನ್ನ ದೊರೆ, ಜಗತ್ತಿನ ದೊರೆ* ಎನ್ನುವದನ್ನು ಪ್ರತೀ ಶ್ಲೋಕದಲ್ಲಿಯೂ ಕೊಂಡಾಡಿದರು. ದೇವರು ಆಜ್ಙಾಪಿಸಿದ *ನನ್ನನ್ನು ಒಯ್ದು ನಂದ ಗೋಕುಲದಲ್ಲಿರಿಸು* ಎಂದು. 

ಆಜ್ಙೆ ಹೊತ್ತ ವಸುದೇವನಿಗೆ ನೂರುಕೋಟಿ ವಿಘ್ನಗಳು. "ದೇವರ ಆಜ್ಙೆಯನ್ನು ಹೊತ್ತ ಜೊತೆಗೆ ದೇವರನ್ನೂ ಹೊತ್ತ ಈ ಎರಡು ಕಾರಣಕ್ಕೇನೆ ಆ ಎಲ್ಲ ವಿಘ್ನಗಳು ಅತ್ಯಂತ ಅನಾಯಾಸೇನೆ ಒಂದೊಂದರಂತೆ ಕ್ರಮವಾಗಿ ಪರಿಹೃತವಾದವು."

ಕೈ ಕಾಲಿನ ಸರಪಳಿ ಕಳಿಚಿಬಿತ್ತು, ಬಾಗಿಲ ಕೀಲಿ ಸೀಳಿ ತೆರೆದವು, ಸೈನಿಕರು ನಿದ್ರಾಕ್ರಾಂತರಾದರು, ಯಮುನೆ ದಾರಿಬಿಟ್ಟಲು, ಮಳೆ ಆರಂಭಿಸಿದರೆ ಶೇಷ ಬಂದು ಛತ್ರೆಯಾದ, ಕೂಸು ಒಟ್ಟಾರೆ ಅಳ್ಳಿಲ್ಲ, *ಬಾರವೋ ವಿಘ್ನಗಳು, ಬಂದರೋ ನಿಲ್ಲವು, ಹಾರಿಹೋಗುವವು ದಶದಿಕ್ಕುಗಳಿಗೆ* ಎಂದಂತೆ ಎಲ್ಲ ವಿಘ್ನಗಳೂ ದಿಕ್ಕಪಾಲಾಗಿ ಓಡಿ ಹೋದವು. ವಸುದೇವನ ಕಾರ್ಯ ನೂರರಷ್ಟು ಯಶಸ್ವೀ ಆಯಿತು. ಹೀಗಿರುವಾಗ..... 

*ನಾವೆಲ್ಲರೂ ನಿತ್ಯ ಸಂಧ್ಯಾವಂದನೆ/ ಗಾಯತ್ರೀಜಪ/ ದೇವರಪೂಜೆ ತಪ್ಪದೇ ಮಾಡೋಣ. ಸ್ತ್ರೀಯರೆಲ್ಲರೂ ರಾಮಕೃಷ್ಣ/ ಅಚ್ಯುತಾನಂತ ಗೋವಿಂದ ಎಂಬ ನಾಮಜಪವನ್ನು ಅವಷ್ಯವಾಗಿ ಮಾಡುವಂತಾಗಲಿ.*  ದೇವರು ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮ್ಮ ಕೈಯಲಿ ಬಂದ ಎಂದಾದರೆ ನಮಗೆ ವಿಘ್ನಗಳೇ ಇರುವದಿಲ್ಲ. ಎಲ್ಲ ಸತ್ಕಾರ್ಯವೂ ನೂರರಷ್ಟು ಯಶಸ್ವಿ ಆಗಿಯೇ ತೀರುತ್ತದೆ....

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*