*ವೇದವ್ಯಾಸ ಜಯಂತೀ....*

*ವೇದವ್ಯಾಸ ಜಯಂತೀ....*

ಅನಂತ ರೂಪಗಳಿಂದ ನಿರಂತರ ಅವತರಿಸುವ ಭಗವಂತನ ಒಂದೊಂದು ರೂಪವೂ ಅದ್ಬ್ಭುತ ಹಾಗೂ ನಮಗೆ ಅತ್ಯುಪಕೃತ ರೂಪಗಳು. ಆ ಎಲ್ಲ ರೂಪಗಳಲ್ಲಿ   ವೇದವ್ಯಾಸರೂಪವೂ ಒಂದು. 

ವೇದವ್ಯಾಸದೇವರು ಪರಾಶರ ಋಷಿಗಳಿಂದ ಸತ್ಯವತೀದೆವಿಯಲ್ಲಿ ಪ್ರಾದುರ್ಭವಿಸಿದ ದಿನ ಇಂದೆ. ಹಾಗಾಗಿ ಇಂದು  *ಶ್ರೀ ವೇದವ್ಯಾಸ ಜಯಂತೀ ಮಹೋತ್ಸವ.*

ನಮ್ಮ ಮಕ್ಕಳ ಜಯಂತೀ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸುತ್ತೇವೆ. ಕಾರಣವಿಷ್ಟೆ ಅವರು ಮುಂದೊದು ದಿನ ನಮ್ಮನ್ನು ರಕ್ಷಿಸಬಹುದು ಸಂರಕ್ಷಿಸಬಹುದೆಂಬ ಆಸೆಯಿಂದ.‌ ಅದೇರೀತಿ....

ನಿರಂತರ ಅನುದಿನ ಅನುಕ್ಷಣ ದೇಹ ಇಂದ್ರಿಯ ಮನಸ್ಸು ಬುದ್ಧಿ ಇವುಗಳನ್ನು ಶೋದಿಸಿ ರಕ್ಷಿಸುವವರು, ಜ್ಙಾನಾದಿಗಳನ್ನು ಕೊಟ್ಟು ರಕ್ಷಿಸುವವರು, ಮೋಕ್ಷ ಕೊಡುವವರು, ಅನಂತ ಆನಂದವನ್ನೇ ಸುರಿದು ರಕ್ಷಿಸುವವರು ಶ್ರೀವೇವ್ಯಾಸದೇವರು. ಹೀಗಿರುವಾಗ ಈ ವೇದವ್ಯಾಸರ ಜಯಂತಿಯನ್ನು ಎಷ್ಟು ವೈಭವದಿಂದ, ಎಷ್ಟು ಅದ್ದೂರಿಯಿಂದ ಆಚರಿಸಬೇಕು ಎನ್ನುವದನ್ನು ನಾವೇ ವಿಚಾರಿಸಿ ಆಚರಿಸಬೇಕು. 

*ಯಾವತರಹದ ರಕ್ಷಣೆಗೆ ಶ್ರೀವೇದವ್ಯಾಸರು ಒದಗುತ್ತಾರೆ...*


ತಾನು ಸರಿ ಮಾರ್ಗದಲ್ಲಿ ಇರುವದೇ, ತಾನು ಮಾಡಿಕೊಳ್ಳಬಹುದಾದ ತನ್ನ ರಕ್ಷಣೆ. ಯಾವುದೇ ಸನ್ಮಾರ್ಗದಲ್ಲಿ, ಸರಿದಾರಿಯಲ್ಲಿ ಇರಬೇಕಾದರೆ *ಪರಿಶುದ್ಧ ಜ್ಙಾನ* ವಿರಲೇ ಬೇಕು. ಜ್ಙಾನವಿದ್ದಷ್ಟು ಜ್ಙಾನ ಬೆಳೆದಷ್ಟು ಸನ್ಮಾರ್ಗದಲ್ಲಿ ದಾಪುಗಾಲು ಹಾಕುವ. ಜ್ನ್ಙಾನಸ್ವರೂಪಿ ವೇದವ್ಯಾಸರ ದಯೆ ಪಡೆದವಗೆ ಜ್ನ್ಙಾನ ದುಪಾಲಿಸುವ ಮುಖಾಂತರ ಸರಿದಾರಿಯಲ್ಲಿ ಇರಿಸುತ್ತಾರೆ, ನಡೆಸುತ್ತಾರೆ.

*ಜ್ಙಾನ ಕೊಡುವ ದೊರೆ...*


ಜ್ಙಾನ ಕೊಡುವ ಪ್ರಣವಪ್ರತಿಪಾದ್ಯ ರೂಪ, ನಾರಾಯಣ ಮಂತ್ರಪ್ರತಿಪಾದ್ಯರೂಪ, ವ್ಯಾಹೃತಿ ಹಾಗೂ ಗಾಯತ್ರಿ ಮಂತ್ರ ರೀ ಪ್ರತಿಪಾದ್ಯ, ಕಪಿಲ ದತ್ತಾತ್ರೇಯ ಮೊದಲಾದ  ರೂಪಗಳು ನೂರಾರು. ಅವುಗಳಲ್ಲಿ ಅತೀ ವಿಶೇಷವಾದ ರೂಪ *ಶ್ರೀವೇದವ್ಯಾಸರೂಪ.*

ಮಹಾಭಾರತ ಪುರಾಣ ಬ್ರಹ್ಮಸೂತ್ರಗಳನ್ನು ರಚಿಸಿದವರು ವೇದವ್ಯಾಸದೆವರು, ಅವುಗಳನ್ನು ಬ್ರಹ್ಮಾದಿಗಳಿಗೆ ನಿರಂತರ ಬೋಧಿಸುವವವರು ವೇದವ್ಯಾಸದೆವರು. ಈ ರೀತಿಯಾಗಿ  ನಿತ್ಯ ಚಿಂತಿಸುವ ನಮಗೂ ಬೋಧಿಸುವ ರೂಪ *ಶ್ರೀವೇದವ್ಯಾಸರೂಪ.* 

*ಜ್ಙಾನ ನಿರ್ಭೀತಿಗೂ ಕಾರಣ....*


ಭಯಗಳು ಇರುವದೇ ತಪ್ಪು ಮಾಡಿದವನಿಗೆ. ತಪ್ಪು ಮಾಡುವವ ಅಜ್ಙಾನಿಯೇ ಆಗಿರುತ್ತಾನೆ. ಸರಿಯಾದ ಜ್ಙಾನ ಇಲ್ಲದಿರುವದರಿಂದಲೇ ತಪ್ಪುಗಳು ಘಟಿಸುತ್ತವೆ. ಜ್ಙಾನಿ ತನ್ನ ತಪ್ಪು ಮಾಡಲಾರ. ತಪ್ಪುಮಾಡಲಾರದ ಜ್ಙಾನಿಗೆ ಭಯಗಳು ಎಂದಿಗೂ ಇರಲಾರವು. ಅಂತೆಯೇ ಜ್ಙಾನ ಅನಿವಾರ್ಯ. ಜ್ಙಾನ ಕೊಡುವ ದೇವನ ಅನುಗ್ರಹವಿದ್ದರೆ  ಅವ ನಿರ್ಭೀತ. 

*ಜ್ಙಾನ ಅಭಯಪ್ರದಾಯಕರೂ ಆಗಿದ್ದಾರೆ..*


"ಜ್ಙಾನೇನೈವ ಪರಂ ಪದಂ" "ಜ್ಙಾನವಿದ್ದರೇ ಮೋಕ್ಷ" ಎಂದು  ಸಾರಿರುವದರಿಂದ ಜ್ಙಾನವಿದ್ದರೆ, ಬಂದರೆ, ಬಂದ ಜ್ಙಾನ ನಿಂತ ನೀರಾಗದೇ ಬೆಳಿತಾ ಸಾಗಿದರೇನೆ ಮೋಕ್ಷ. ಆ ಮೋಕ್ಷ ಪಡೆಯುವದು ಎಂದರೆ ಇನ್ಯಾವುದರ ಭಯಗಳೂ ಕಳೆದವೂ ಎಂದರ್ಥ. ಹೀಗೆ ಜ್ಙಾನ ಕೊಡುವದಲ್ಲದೇ, ಜ್ಙಾನ ಕೊಡುವದರ ಮುಖಾಂತರ ಅಭಯಪ್ರದನೂ ಆಗಿದ್ದೇನೆ ಎಂದು ತೋರಿಸುವ ರೂಪ *ಶ್ರೀವೇದವ್ಯಾಸರೂಪ.* ಇಂದೇ ಜಯಂತಿ ಇದೆ. ಅನಂತ ನಮನಗಳೊಂದಿಗೆ ಚೆನ್ನಾಗಿ ಚಿಂತಿಸೋಣ ಧೇನಿಸೋಣ ಭಕ್ತಮಾಡೋಣ ಕಾಲಿಗೆರಗೋಣ ಅನುಗ್ರಹಕ್ಕೆ ಪಾತ್ರರೂ ಆಗೋಣ.... *ನಾಳೆ ನರಸಿಂಹ ಜಯಂತಿಯೂ ಇದೆ, ವಿಷೇಷವಾಗಿ ಆಚರಿಸಲು ಸಿದ್ಧರಾಗೋಣ.*

*(ಸೂ..) ಸಂಧ್ಯಾವಂದನೆ/ ಗಾಯತ್ರೀ ಜಪ/ ಪೂಜೆ ನಾವ್ಯಾರೂ ತಪ್ಪಿಸುವದು ಬೇಡವೇ ಬೇಡ. ಯಾವ ಸ್ತ್ರೀಯರೂ ರಾಮಕೃಷ್ಣ/ ಅಚ್ಯುತಾನಂತಗೋವಿಂದ ಈ ಜಪವನ್ನು ತಪ್ಪಿಸುವದೇ ಬೇಡ....)*

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*