*ಅಂದಿನ ಇತಿಹಾಸ ಪುರಾಣಗಳು - ಇಂದಿನ ದಾರಾವಾಹಿಗಳು*

*ಅಂದಿನ ಇತಿಹಾಸ ಪುರಾಣಗಳು - ಇಂದಿನ ದಾರಾವಾಹಿಗಳು*

ಹಿಂದು ಅನೇಕ ನಡೆದ ಅನೇಕ ನೈಜ  ಘಟನೆಗಳನ್ನು ಕಥೆಯಲ್ಲಿ ಗ್ರಂಥಗಳ ಮುಖಾಂತರ ಬರೆದಿಟ್ಟಿರುತ್ತಿದ್ದರು ಆ ಗ್ರಂಥಗಳು ಇತಿಹಾಸ ಪುರಾಣಗಳು ಎಂದು ಪ್ರಸಿದ್ಧವಾದವು. ಅವುಗಳೇ *ಮಹಾಭಾರತ ಹಾಗೂ ಭಾಗವತ ಮೊದಲಾದ ಗ್ರಂಥಗಳು.* 

ಇಂದು ಕಾಲ್ಪನಿಕವಾದ ನಮ್ಮ ಬುದ್ಧಿಗೆ ತೋಚಿದ ವಿಷಯಗಳನ್ನು ಹೆಣೆದು ಅತ್ಯಂತ ರೋಚಕತೆ ಹುಟ್ಟಿಸುವಂತೆ ಮಾಡಿ, ಆಕರ್ಷಣೀಯವಾಗಿರುವಂತೆ ನೋಡಿಕೊಂಡು ಹೆಣೆದು ಬರೆದವುಗಳೇ *ಇಂದಿನ ಧಾರಾವಾಹಿಗಳು.*

ಇಂದು ನಮಗೆ ಧಾರಾವಾಹಿಗಳಲ್ಕಿ ಇರುವ ಅತೀ ಆಸಕ್ತಿ ಮಹಾಭಾರತ ಭಾಗವತದಲ್ಲಿ ಇಲ್ಲ. ನಿತ್ಯದಲ್ಲಿಯೂ ಅತ್ಯಂತ ಆಸಕ್ತಿಯಿಂದ ಧಾರಾವಾಹಿಗಳನ್ನು ನೋಡುವದರಿಂದ ಅದರ ಪರಿಣಾಮಗಳು ನಮ್ಮ ಮೇಲೆ ಇಂದು ತುಂಬಾ ಕಾಣುತ್ತಿದ್ದೆವೆ. 

ಅದುವೇ ಅತೀ ಆಸಕ್ತಿಯಿಂದ  *ಮಹಾಭಾರತ - ಭಾಗವತ* ಇವುಗಳನ್ನು ಆಲಿಸಿದ್ದರೆ ಆ ಗ್ರಂಥಗಳ ಪರಿಣಾಮ ನಮ್ಮ‌ ಮೇಲೆ ಚೆನ್ಬಾಗಿ ಆಗುತ್ತಿತ್ತು.... 

*ಧಾರಾವಾಹಿ - ಭಾಗವತ*

ಇಂದು ಧ್ರುವರಾಜನ ಭಾಗವತದ ಒಂದು ಕಥೆ ತೆಗೆದುಕೊಳ್ಳೋಣ. ಮಲತಾಯಿಯಾದ ಸುರೂಚಿ ಧೃವಮಹಾರಾಜನಿಗೆ ಅವಮಾನ ಮಾಡುತ್ತಾಳೆ. ಪ್ರಸಿದ್ಧ ಕಥೆ. ಈ ಕಥೆ ಇಂದಿನ ಧಾರಾವಾಹಿಗಳಲ್ಲಿ ನಾವು ಕಂಡಿದ್ದರೆ, ಸೂರೂಚಿಯನ್ನು ಹೇಗೆ ಪೀಡಿಸಬೇಕು, ರಾಜ್ಯವನ್ನು ಹೇಗೆ ಕಸಿದುಕೊಳ್ಳಬೇಕು, ತಂದೆಯಾದ ಉತ್ತಾನಪಾದನಿಗೆ ಹೇಗೆ ಪೀಡೆ ಕೊಡಬಹುದು, ಇವುಗಳಿಗೆ ಸುನೀತಿಯ ಸಪೋರ್ಟ, ಹೀಗೆ ನಕಾರಾತ್ಮಕವಾಗಿ negative ಆಗಿ ಸಾಗುತ್ತಿತ್ತು. 

ಅದುವೇ ಭಾಗವತ *ಏನು "ಪಡೆಯುವದಿದೆ ಅದನ್ನು ತಪಸ್ಸಿನಿಂದ ಪಡೆ" "ಇನ್ನೊಬ್ಬರಲ್ಲಿ ದೋಷ ಸರ್ವಥಾ ಹುಡಕಬೇಡ" "ದೇವರನ್ನು ಒಲಿಸಿಕೊಂಡು ಬಾ"* ಹೀಗೆ ಸಕಾರಾತ್ಮಕವಾಗಿ ಬೋದಿಸಿ, ಉದ್ಬೋಧಿಸಿ ಧೃವನನ್ನು ತಪಸ್ಸಿಗೆ ಕಳುಹಿಸುತ್ತಾಳೆ ತಾಯಿ ಸುನೀತಿ. 

*ಮಹಾಭಾರತ - ಧಾರವಾಹಿ*

ಧರ್ಮರಾಜ ಲೆತ್ತವಾಡಿದ, ರಾಜ್ಯ ಕಳೆದುಕೊಂಡ, ತಮ್ಮಂದಿರನ್ನೂ ಕಳೆದುಕೊಂಡ, ದ್ರೌಪದಿಗೆ ಘೋರ ಅವಮಾನವಾಯಿತು, ದ್ರೌಪದಿಯ ಬುದ್ಧಿವಂತಿಕೆಯುಂದ ರಾಜ್ಯ ಪಡೆದ, ಮತ್ತೆ ಲೆತ್ತವಾಡಿದ, ಹನ್ಬೆರಡು ವರ್ಷ ವನಕ್ಕೆ ತೆರಳಿದ. 

ಈ ಘಟನೆ ಮುಂದಿನ ಭಾಗ  ದಾರಾವಾಹಿಲ್ಲಿ ಕಂಡಿದ್ದರೆ, ಅಣ್ಣ ತಮ್ಮಂದಿರಲ್ಕಿ ಝಗಳ, ಗಂಡಹೆಂಡತಿಯರಲ್ಲಿ ಕಲಹ, ಹೀಗೇ ಏನೇನೋ ಕ್ರಿಯೇಟ್ ಮಾಡಿ ತೊರಿಸುತ್ತಿದ್ದರು... ಆದರೆ ಅದು ಮಹಾಭಾರತ ಅವರ ಐಕಮತ್ಯ, ಅನ್ಯೋನ್ಯತೆ, ದಾರ್ಢ್ಯತೆ, ವಿಷ್ಣುಭಕ್ತಿ, ಕೃಷ್ಣಾನುಗ್ರಹ ಇವುಗಳನ್ನು ಸಾರಿ, ವನದಲ್ಲಿಯೂ ರಾಜ್ಯ ಭೋಗ ಹೇಗೆ ಮಾಡಿದರೆಂದು ತೋರಿಸಿ, ಹಗೆ ದ್ವೇಷ ಇವುಗಳಿಗೆ ಆಸ್ಪದ ಕೊಡದೆ,  ಹನ್ಬೆರಡು ವರ್ಷ ಕಳೆದಮೇಲೆ ಕೇವಲ ಹದಿನೆಂಟು ದುನದಲ್ಕಿ ರಾಜ್ಯ ಪಡೆದು ತೀರುತ್ತಾರೆ ಹೀಗೆ ಸಕಾರಾತ್ಮಕವಾಗಿ  ಎಲ್ಲವನ್ನೂ ಬಿಂಬಿಸುತ್ತಾರೆ. 

ಇಂದಿನ ಅನೇಕ ಧಾರಾವಾಹಿಗಳಲ್ಲಿ ತಂದೆ ಮಗಳನ್ನು ದ್ವೇಶಿಸುವದು, ಅಣ್ಣ ತಮ್ಮಂದಿರನ್ನು ದ್ವೇಶಿಸುವದು, ಅತ್ತೆ ಸೊಸಿಯರನ್ನು, ಅತ್ತಿಗೆ ನಾದನಿಯರನ್ನು, ಗೆಳೆಯರಲ್ಕಿ ಪರಸ್ಪರ ಹೀಗೆ ನೂರಾರು ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗಿರುತ್ತವೆ, ಅವುಗಳೆ ಮನ ಮನಸ್ಸಿನಲ್ಲಿ   ತಳವೂರುತ್ತವೆ. ಅದಾಗದೆ ಮಹಾಭಾರತ ಭಾಗವತ ಇವುಗಳನ್ನು ನಿತ್ಯ ಕೇಳುತ್ತಾ ಸಾಗಿದಾಗ ಸಾಕಾರಾತ್ಮಕ ವಿಚಾರಗಳನ್ನು ಅಭಿವೃದ್ಧಿಸಿಕೊಳ್ಳಬಹುದು.

ಸಕಾರಾತ್ಮಕ ವಿಚಾರಗಳು ನಮ್ಮನ್ನು ಮೇಲಸ್ತರಕ್ಕೆ ಒಯ್ದು ಮೇಲ್ಪಂಕ್ತಿಯಲ್ಲಿ ಕೂಡಿಸಿದರೆ, ನಕಾರಾತ್ಮಕತೆ ನಮ್ಮನ್ನು ಪಾತಾಳಕ್ಕೆ ವಯ್ಯತ್ತೆ... ಮುಂದಿನದ ನಮ್ಮ ಭಾವ. .. ....

*(ನಿತ್ಯ ಸಂಧ್ಯಾವಂದನೆ/ ಜಪ/ ಪೂಜೆ ಹಾಗೂ ಸ್ತ್ರೀಯರು ರಾಮಕೃಷ್ಣ / ಅಚ್ಯತಾನಂತ ಗೋವಿಂದ ಇವುಗಳ ಜಪ ತಪ್ಪದೇ ಆಚರಿಸೋಣ..)*

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*