*ಬೆಳಕನ್ನು ಹೊರ ನೂಕಲು ಹೊರಟಾಗ, ಆವರಿಸುವದು ಕತ್ತಲೇ.....*
*ಬೆಳಕನ್ನು ಹೊರ ನೂಕಲು ಹೊರಟಾಗ, ಆವರಿಸುವದು ಕತ್ತಲೇ.....*
ಬೆಳಕು ಕತ್ತಲು, ಸುಖ ದುಃಖ, ಮಾನ ಅವಮಾನ, ಗುಣ ದೋಷ, ಯಶ ಅಯಶ, ಪ್ರೀತಿ ದ್ವೇಶ, ದೇವ ದೈತ್ಯ, ಇತ್ಯಾದಿಗಳು ಒಂದಿರುವಾಗ ಇನ್ನೊಂದು ಇರುವದಿಲ್ಲ. ಒಂದನ್ನು ಹೊರ ಹಾಕಿಯೇ ಮತ್ತೊಂದು ರಾಜ್ಯವಾಳುವಂತಹದ್ದು.
ಬೆಳಕು ಇದೆ, ಜೀವನ ಒದಗಿಸುವ, ಎಲ್ಲ ಪದಾರ್ಥಗಳಲ್ಲಿ ಬೆಳಕು ಚೆಲ್ಲುವ ಬೆಳಕನ್ನು ನಾವು ದ್ವೇಶಿಸಿದರೆ, "ನಮಗೆ ಸಿಗುವದು ಕತ್ತಲು" ಎಂಬ ಎಚ್ಚರಿಕೆಯಂತೂ ಇರಲೇಬೇಕು.
ಗುಣವಂತರನ್ನೋ, ಗುಣವಂತಿಕೆಯನ್ನೋ ಅಥವಾ ಗುಣಗಳನ್ನೋ ನಾವು ದ್ವೇಶಿಸಿದರೆ, ದೋಷಿಗಳು ದೋಷಗಳು ನಮ್ಮನ್ನಾಳುತ್ತವೆ.
ಅದೇರೀತಿಯಾಗಿ ದೈತ್ಯರನ್ನು ದುಷ್ಟರನ್ನು ನಾವು ದ್ವೇಶಿಸಲು ಆರಂಭಿಸಿದರೆ ದೇವತೆಗಳು ನಮ್ಮಲ್ಲಿಗೇ ಓಡಿ ಬರುತ್ತಾರೆ. ಅಥವಾ ದೇವತಾ ಸ್ವಭಾವದವರ ಸಹವಾಸವಾದರೂ ದೊರೆಯುತ್ತದೆ.
ಯಶಸ್ಸನ್ನು ಹಂಬಲಿಸಿದಾಗ, ಪ್ರೀತಿಸಿದಾಗ ಅಯಶಸ್ಸು ಹಾಗೂ ಅಯಶಸ್ಸಿಗೆ ಬೇಕಾದ ಕಾರ್ಯಗಳನ್ನು ದ್ವೇಶಿಸುವಂತಾಗುತ್ತದೆ. ಯಶಸ್ಸು ಇರುವಾಗ ಅಯಶಸ್ಸಿಗೆ ಪ್ರವೇಶವೇ ಇರುವದಿಲ್ಲ. ಆದ್ದರಿಂದ ಯಾವದನ್ನು ಪ್ರೀತಿಸಬೇಕು, ಯಾವದನ್ನು ದ್ವೇಶಿಸಬೇಕು ಪ್ರತಿಯೊಬ್ಬರ ಕೈಲಂತೂ ಇದ್ದೇ ಇದೆ...
*ಚಕ್ರವತ್ಪರಿವರ್ತಂತೆ ದುಃಖಾನಿ ಚ ಸುಖಾನಿ ಚ*
ದುಃಖ ಇರುವಾಗ ಸುಖ ಇರುವದಿಲ್ಲ. ಸುಖ ಇರುವಾಗ ದುಃಖ ಇರುವದಿಲ್ಲ. "ಸುಖ ದುಃಖಗಳಲ್ಲಿ ಯಾವುದನ್ನು ಇಟ್ಟುಕೊಳ್ಳಲು ನಮ್ಮ ಬಯಕೆ ಇದೆ, ಯಾವುದು ನಮ್ಮಲ್ಲೇ ಇರಲು ಹಂಬಲಿಸುತ್ತೇವೆ, ಯವುದನ್ನು ನಾವು ಪ್ರೀತಿಸುತ್ತೇವೆ, ಯಾವದನ್ನು ಪಡೆಯುವದಕ್ಕಾಗಿ ನಮ್ಮ ಕರ್ಮಗಳು ಇವೆ" ಇದು ತುಂಬ ಮುಖ್ಯ. ಅದಕ್ಕನುಗಣ ಸುಖವೋ ದುಃಖವೋ ನಮ್ಮಲ್ಲಿ ಮನೆ ಮಾತಾಗಿ ಉಳಿಯುತ್ತವೆ. ಒಂದಿರುವಾಗ ಇನ್ನೊಂದು ಇರುವದಿಲ್ಲ. ಅದುವೂ ಅಷ್ಟೇ ನಿಜ.
ಗುಣ, ದೇವ, ಸುಖ, ಯಶ, ಬೆಳಕು, ಇವುಗಳನ್ನು ಪ್ರೀತಿಸುವವರಿಗೆ ಒಂದು ಉತ್ಕೃಷ್ಟ ಲಾಭವಿದೆ.
"ಪಾಂಡವರು ಗುಣವಂತರು, ಅಂತೆಯೇ ತಾವು ಪದರೀತಿಸಿರುವದು ಗುಣವನ್ನೇ. ದುರ್ಗುಣಗಳ ಅತಿಯಾದ ಪ್ರಭಾವದಿಂದ ರಾಜ್ಯ ಕಳೆದುಕೊಂಡರು, ಆದರೆ ಹನ್ನೆರಡು ವರ್ಷಗಳಲ್ಲಿ ಎರೆಡು ವರ್ಷ ಮಾತ್ರ ಕಾಡಲ್ಲಿ ಇದ್ದರು, ಅದುವೂ *ಅಕ್ಷಯಪಾತ್ರೆಯೊಂದಿಗೆ ಲಕ್ಷ ಲಕ್ಷ ಜನರಿಗೆ ಭಂಗಾರದ ತಟ್ಟೆಯಲ್ಲಿ ಊಟಕ್ಕೆ ಹಾಕುತ್ತಾ* ಇನ್ನುಳಿದ ಎಂಟು ಒಂಭತ್ತು ವರ್ಷ ಕುಬೇರನ ಸದನದಲ್ಲಿ ಅತ್ಯಂತ ವೈಭವದುಂದ ಇದ್ದರು" ಇದರಿಂದ ಸ್ಪಷ್ಟ ತಿಳಿಸುತ್ತಾರೆ ಧರ್ಮವನ್ನು ಪ್ರೀತಿಸು, ಗುಣವನ್ನು ಪ್ರೀತಿಸು ದೇವರನ್ನು ಪ್ರೀತಿಸು ನಿನಗೆ ಸುಖ ಸಮೃದ್ಧಿ ಯಶಸ್ಸು ನಿನ್ನ ಕಾಲಿಗೆ ಇದೆ. ದುರ್ಯೋಧನಾದಿಗಳಂತೆ ಅಧರ್ಮವನ್ನೋ ಮೋಸವನ್ನೋ ಪ್ರೀತಿಸಿದೀ ಎಂದಾದರೆ ರಾಜ್ಯ ಹಣ ಸಿಕ್ಕೀತು, ಸುಖವಾದ ನಿದ್ರೆಯೂ ಮಾಡದ ದುರವಸ್ಥೆಗೆ ಬಲಿಯಂತೂ ಆದರು.....
ಧರ್ಮವನ್ನು ಪ್ರೀತಿಸೋಣ ಅಧರ್ಮ ದೂರಾಗತ್ತೆ, ದ್ವೇಶ ಮಾಡುವದೇ ಆದರೆ ಅಧರ್ಮವನ್ನು ದ್ವೇಶಿಸೋಣ ಧರ್ಮ ನಮ್ಮ ಮನೆ ಬಾಗಿಲಿಗೆ ಓಡಿ ಬರತ್ತೆ... ಹೀಗೆಯೇ ಗುಣ ದೋಷ, ಬೆಳಕು ಕತ್ತಲು, ದೇವ ದೈತ್ಯ, ಪ್ರೀತಿ ದ್ವೇಶ ಇತ್ಯಾದಿಗಳಲ್ಲಿಯು ಸಹ ಯಾಬುದನ್ನು ದ್ವೇಶಿಸಬೇಕು, ಯಾವದನ್ನು ಪ್ರೀತಿಸಬೇಕು ನಿರ್ಧರಿಸೋಣ...
*(ವಿ.ಸೂ. ಪರುಷರೆಲ್ಲರೂ ಸಂದ್ಯಾವಂದನೆ / ದೇವರಪೂಜೆ ಮಾಡೋಣ. ಸ್ತ್ರೀಯರೆಲ್ಲರೂ ರಾಮ ಕೃಷ್ಣ ಜಪ/ ಅಚ್ಯುತಾನಂತ ಗೊವಿಂದ ಜಪ ಮಾಡುವಂತಾಗಲಿ.)*
*✍🏽✍ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
what this site is providing.