ಆಪತ್ತುಗಳ ಸುಳಿಯಲ್ಲಿ.......*
*ಆಪತ್ತುಗಳ ಸುಳಿಯಲ್ಲಿ.......*
ಆಪತ್ತುಗಳು ಸಹಜ. ಆಪತ್ತುಗಳ ಪರಿಹಾರವೂ ಅಷ್ಟೇ ಸರಳ. ಆದರೆ ಆಪತ್ತುಗಳನ್ನೇ ಪ್ರೀತಿಸುವದರಿಂದ ಪರಿಹಾರವೂ ಕಷ್ಟವಾಗಿದೆ. ಪರಿಹಾರೋಪಾಯವೂ ತಿಳಿಯದಾಗಿದೆ.
*ಆಪತ್ತುಗಳು ಎಷ್ಟುವಿಧ... ಹೇಗೆ ಬರುತ್ತವೆ*
ಒಂದು ತರಹದ ಆಪತ್ತುಗಳು ನಮ್ಮ ಪ್ರಾರಬ್ಧಕರ್ಮಾನುಸಾರ. ಮತ್ತೊಂದು ತರಹದ ಆಪತ್ತುಗಳು ನಮ್ಮ ಕೈಯಿಂದಲೇ ತಂದುಕೊಂಡಿರುವಂತಹದ್ದು. ಇನ್ನೊಂದು ದೇವರೇ ಕೊಟ್ಟಿರೋದು. ಹೀಗೆ ಮೂರು ವಿಭಾಗವಾಗಿ ಆಪತ್ತುಗಳನ್ನು ವಿಭಜಿಸಬಹುದು.
*೧) ಪ್ರಾರಬ್ಧ ಕರ್ಮಾನುಸಾರ ಆಪತ್ತುಗಳು....*
ಇಂದು ನಾವು ಏನು ಅನುಭವಿಸಿದರೂ ಪ್ರಾರಬ್ಧ ಕರ್ಮಾನುಸಾರವೇ ಇದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಎಲ್ಲದರಲ್ಲಿ ಆಪತ್ತುಗಳೂ ಒಂದು. ಅವುಗಳೂ ಪ್ರಾರಬ್ಧಕ್ಕೆ ಅನುಗುಣವಾಗಿಯೇ ಬರುವಂತಹದ್ದು.
*೨) ಆಪತ್ತುಗಳನ್ನು ನಾನೇ ತಂದುಕೊಳ್ಳುವದು.....*
ಎಂದಿಗೂ ಆಪತ್ತುಗಳ ಸುಳಿಯಲ್ಲಿ ಬೀಳುವದನ್ನೂ ಯಾರೂ ಅಪೇಕ್ಷಿಸರು. ಆದರೆ ಯಾರಿಗೆ ಸಹನೆ ತಾಳ್ಮೆಗಳಿಲ್ಲವೋ ಅವರು ಆಪತ್ತುಗಳನ್ನು ಎಳೆದುಕೊಳ್ಳುತ್ತಾರೆ.... ಹೇಗದು...??
ಕ್ರಮಬದ್ಧ ಜೀವನದಲ್ಲಿ ಶಿಸ್ತುಕ್ರಮವನ್ನು ಅನುಸರಿಸಿದಾಗ ಯಾವ ಆಪತ್ತುಗಳಿರದು. ಯಾವಾಗ ಶಿಸ್ತು ಕ್ರಮವನ್ನು ಮೀರಿದನೋ ಆರಂಭವಾದವು ಆಪತ್ತುಗಳ ಸುರುಮಳಿ.
ರಸ್ತೇ ನಿಯಮ ಪಾಲಿಸುವದು ಧರ್ಮ. ಆ ನಿಯಮವನ್ನು ಯಾವಾಗ ಘಾಳಿಗೆ ತೂರಿದನೋ, ಆಪತ್ತುಗಳು ಮೈಮೇಲೆರಗಿದವು ಎಂದೇ ಅರ್ಥ.
ರೈಲು ಬ್ರಿಡ್ಜ ಇದೆ. ಸಂಯಮ ತಾಳ್ಮೆ ಇಲ್ಲದಿರುವದರಿಂದ, ಬ್ರಿಡ್ಜ ಮೇಲೇರದೇ, ರೇಲ್ವೆ ಹಳಿಯ ಕ್ರಾಸಿಗೆ ಇಳಿದರೆ ಆಪತ್ತು ಬರುವದೇ ನಿಶ್ಚಿತ. ಎರಡುಬಾರಿ ಬಚಾವ್ ಆಗಬಹುದು ಮೂರನೇ ಬಾರಿ ಮೇಲೇ ಹೋಗುವದಾಗುತ್ತದೆ.. *ಸಂಯಮ ತಾಳ್ಮೆಗಳನ್ನು ಕಳೆದುಕೊಂಡು ಶಿಸ್ತಾದ ಕ್ರಮಬದ್ಧ ಜೀವನವನ್ನು ಆರಿಸಿಕೊಳ್ಳದೇ ಇರುವದರಿಂದಲೇ* ಆಪತ್ತುಗಳು.
*೩) ದೇವರು ಕೊಡುವ ಆಪತ್ತುಗಳು....*
ಯಾರ ಮೇಲೆ ಅನುಗ್ರಹಿಸಬೇಕು ಎಂದಿದೆ, ಯಾರಿಗೆ ತನ್ನ ಸ್ಮರಣೆ ನಿರಂತರ ಕೊಡಬೇಕೆಂದಿದೆ ಅವರಿಗೆ ಕೆಲ ಆಪತ್ತುಗಳನ್ನು ದೇವರೇ ಕೊಡುತ್ತಾನೆ. ಕೆಲೊಮ್ಮೆ ಭಕ್ತರೇ ಬೇಡಿ ಪಡೆಯುತ್ತಾರೆ....
*ಈ ಮೂರೂ ವಿಧ ಆಪತ್ತುಗಳ ಪರಿಹಾರ ಹೇಗೆ...*
ಎರಡು ವಿಧದ ಆಪತ್ತುಗಳ ಪರಿಹಾರ ಸರ್ವಥಾ ಇದೆ. ೧) ಪ್ರಾರಬ್ಧವಶಾತ್ ಬಂದ ಬರುವ ಆಪತ್ತುಗಳನ್ನು *ಸಂಧ್ಯಾವಂದನ/ ಪೂಜೆ/ ಜಪ / ಏಕಾದಶೀ ವ್ರತ* ಇತ್ಯಾದಿಗಳನ್ನು ಮಾಡಿ ಕೊಂಚ ಆಪತ್ತಿನ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳ ಬಹುದು. ೨) ಸಂಯಮ ತಾಳ್ಮೆ ಕಳೆದುಕೊಳ್ಳದೇ ಶಿಸ್ತಾದ ಕ್ರಮಬದ್ಧ ಜೀವನವನ್ನು ಆರಿಸಿಕೊಂಡರೆ ಅನೇಕ ಆಪತ್ತುಗಳನ್ನಿ ನಾವೇ ಪರಿಹರಿಸಿಕೊಳ್ಳಬಹುದು. ೩) ದೇವರೇ ಕೋಡುವ ಆಪತ್ತುಗಳು ನಮಗೆ ತನ್ನ ಸ್ಮರಣೆ ಕೊಡಲು, ಪ್ರಾರಬ್ಧ ನಾಶ ಮಾಡಲು, ನಾವು ಸರಿ ಮಾರ್ಗದಲ್ಲಿರಲು ಹೀಗೆ ನಾನಾ ಕಾರಣಗಳಿಂದ ನಮ್ಮ ಹಿತಕ್ಕಾಗಿಯೇ ಕೋಡ ಬಹುದು, ಹಾಗಾಗಿ ಆ ತರಹದ ಆಪತ್ತುಗಳನ್ನು ಪರಿಹರಿಸಿಕೊಳ್ಳಧೆ *ವಿಪದಃ ಸಂತು ನಃ ಶಶ್ವತ್- ಆಪತ್ತುಗಳು ಮೇಲಿಂದ ಮೇಲೆ ಬರಲಿ* ಎಂದು ಅಪ್ಪಿಕೊಳ್ಳಲೂ ಬಹುದು.
ಏಕಾದಶೀ / ದೇವರ ಪೂಜೆ / ಸಂಧ್ಯೆ/ ಜಪ ಇವುಗಳನ್ನು ಬಹಳ ಉನ್ನತಮಟ್ಟದಲ್ಲಿ ಮಾಡೋಣ ಪ್ರಾರಬ್ಧಕರ್ಮವನ್ನೇ ಬದಲಾಯಿಸೋಣ. ಶಿಸ್ತಾದ ಕ್ರಮಬದ್ಧವಾದ ಸಂಯಮ ತಾಳ್ಮೆ ಯುಕ್ತ, *shortcut ರಹಿತ* ಜೀವನವನ್ನು ಆರಂಭಿಸೋಣ. ದೇವರುಕೊಟ್ಟದ್ದನ್ನು ಪ್ರೀತಿಯಿಂದ ಸ್ವೀಕರಿಸೋಣ ಆಪತ್ತುಗಳೇ ಇಲ್ಲದ ಜೀವನ ನಮ್ಮದಾಗಿಸಿಕೊಳ್ಳೋಣ.....
*ನ್ಯಾ✍🏽ಸ✍🏽*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments