*ಆಧ್ಯಾತ್ಮಿಕತೆಯ ಸಂಪರ್ಕ ಕೆಲ ಹೊತ್ತಾದರೂ ಇರಬೇಕು...*
*ಆಧ್ಯಾತ್ಮಿಕತೆಯ ಸಂಪರ್ಕ ಕೆಲ ಹೊತ್ತಾದರೂ ಇರಬೇಕು...*
ಭವ್ಯ ಭಾರತೀಯ ತತ್ವಜ್ಙಾನದ ಮೂಲ ಆಧ್ಯಾತ್ಮಿಕತೆ. ಹೊರಗಿನ ನೂರಾರು ಬಲಗಳು ಒಂದೆಡೆಯಾದರೆ, ಮತ್ತೊಂದೆಡೆ ದೈವ ಬಲ ಹಾಗೂ ಆಧ್ಯಾತ್ಮಿಕ ಬಲಗಳು ಮಾತ್ರ. ಕೊನೆಗೆ ಆಸರೆಯಾಗುವದು ಆಧ್ಯಾತ್ಮಿಕ ಬಲವೇ....
ಪ್ರತಿಕೂಲವಾದ ಎಲ್ಲ ಬಲಗಳನ್ನೂ ಮೆಟ್ಟಿನಿಲ್ಲುವ ಸಾಮರ್ಥ್ಯವಿರುವದು ಕೇವಲ ಆಧ್ಯಾತ್ಮಿಕ ಬಲಕ್ಕೆ ಮಾತ್ರ. ಕೆಲೊಂದು ಸಲ ದೈವೀ ಬಲವನ್ನೂ ಆಧ್ಯಾತ್ಮಿಕ ಬಕ ಬದಲಾಯಿಸುತ್ತದೆ.
ಆತ್ಮನಿಷ್ಠವಾದ ವಿಚಾರಗಳು ಅಧ್ಯಾತ್ಮ. ಆತ್ಮನಿಷ್ಠ ವಿಚಾರಗಳನ್ನು ಅಂದರೆ ಮುಖ್ಯವಾಗಿ ಪರಮಾತ್ಮನನ್ನು ಹೊರತೋರುವಂತೆ ಆತ್ಮನಲ್ಲಿ ಅಭಿವ್ಯಕ್ತಪಡಿಸಿದಾಗಲೇ ಆತ್ಮ ಬಲಿಷ್ಠನಾಗುತ್ತಾನೆ.
ದಿನದ ಅಥವಾ ಈ ಜೀವನದ ಸಂಘರ್ಷಗಳಿಂದ ಶ್ರಾಂತವಾದ ಈ ದೇಹಕ್ಕೆ, ಪ್ರಶಾಂತವಾದ ಏಕಾಂತವಾದ ಕೆಲಹೊತ್ತಿನ ನಿದ್ರೆ ಬಲ ಉತ್ಸಾಹಗಳನ್ನು ಕೊಟ್ಟರೆ.... ಅನಾದಿಯಿಂದ crush ಸಂಘರ್ಷಗಳಿಗೆ ಬಲಿಯಾದ ಈ ಆತ್ಮನಿಗೆ ಶಾಂತಿ ಉತ್ಸಾಹಗಳನ್ನು ತುಂಬುವದೇ ಈ ಅಧ್ಯಾತ್ಮ. ಹಾಗಾಗಿ ನಿತ್ಯದಲ್ಲಿಯೂ ಕೆಲ ಹೊತ್ತಾದರೂ ಆಧ್ಯಾತ್ಮದೆಡೆಗೆ ಮನಸ್ಸು ಮಾಡುವದುಚಿತ....
ನಮ್ಮ ತನವನ್ನು ಬಿಡದಂತೆ ಅನಿರತ ಕಾಪಾಡುವದು ಆಧ್ಯಾತ್ಮಿಕ ಬಲ ಮಾತ್ರ.
ಹಿಂದೆ ಎಲ್ಲ ತರಹದ ಪಾಖಂಡ ಮತಗಳ information ತತ್ವಜ್ಙಾಗಳನ್ನು ಅನೇಕರು ಪಡೆದುಕೊಂಡಿದ್ದರೂ ಆ ಯಾವ ಮತಗಳಿಗೂ ಬಲಿಯಾಗದೆ, ತಾ ನಂಬಿದ ಮತವನ್ನೇ ಪಾಲಿಸುತ್ತಿದ್ದ. ತತ್ವಜ್ಙಾನ ಸಂಪಾದಿಸುತ್ತಿದ್ದ. ಯಾವಕಾರಣಕ್ಕೂ ತನ್ನನ್ನು ತಾನು ಇನ್ನೊಂದು ಮತಕ್ಕೆ ಮಾರಿಕೊಳ್ಳತ್ತಿದ್ದಿಲ್ಲ. ಏಕೆಂದರೆ ಆಧ್ಯಾತ್ಮಿಕ ಬಲ ಇವನನ್ನು ಬಿಡುತ್ತಿರಲಿಲ್ಲ.
ಇಂದು ಹೀಗಿಲ್ಲ ಜ್ಙಾನ informetion ಇಲ್ಲದಿದ್ದರೂ ಕೇವಲ advertises ಇದ್ದರೆ ಸಾಕು ಅದನ್ನು ಅನುಸರಿಸಲು follow ಮಾಡಲು ಸಿದ್ಧನಾಗುತ್ತಾನೆ. ಯಾಕೆಂದರೆ ಆಧ್ಯಾತ್ಮಿಕ ಬಲ ಇಲ್ಲದೇ ಇರುವದರಿಂದ.
*ಆಧ್ಯಾತ್ಮಿಕ ಬಲವಿದ್ದಲ್ಲಿ ಎಂದಿಗೂ ಜಾರಲಾರ, ಆಧ್ಯಾತ್ಮಿಕ ಬಲವಿಲ್ಲದಿರೆ ಜಾರುವದು ನಿಶ್ಚಿತ. ಇದು ಅನುಭವಸಿದ್ಧವೂ ಹೌದು*
ಆಧ್ಯಾತ್ಮಿಕತೆಯಲ್ಲಿ ದೇವರು ಸಿಗುತ್ತಾನೋ ಇಲ್ಲವೋ ವಿಚಾರ ಬೇಡ ಇಂದಿಲ್ಲ ನಾಳೆ ಸಿಗುತ್ತಾನೆ. ಆದರೆ ಇಂದು ಶಾಂತಿ ಸೌಖ್ಯ ಸಮೃದ್ಧಿ ಏಕಾಗ್ರತೆ ಸಿಕ್ಕೆ ಸಿಗುತ್ತದೆ. ಧರ್ಮವಿದೆಯೋ ಇಲ್ಲವೋ ಎಂಬ ವಿಚಾರ ಅಪ್ರಸ್ತುತ, ಅಧರ್ಮದಲ್ಲಂತೂ ಜಾರುವದಿಲ್ಲ. ತತ್ವ ಜ್ಙಾನದ ಮುಖಾಂತರ ಮುಕ್ತಿ ಇಂದೋ ನಾಳೆಯೋ, ಆಧ್ಯಾತ್ಮಿಕತೆ ನಮ್ಮದು ಏನೆಲ್ಲ ಇದರ ಅದನ್ನಂತೂ ತಿಳಿಸದೇ ಬಿಡದು.
ಎಲ್ಲ ಬಲಗಳು ಹೊರಗಿನ ಬಲಗಳು, ಹೊರಗಿನ ದೇಹ ಇಂದ್ರಿಯಗಳ ಜೊತೆ ಹೋಗುವವು. ಅವುಗಳಂತೆ ದುರ್ಬಲವಾದವುಗಳು. ಒಳಗಿನ ಆತ್ಮನ ಜೊತೆಗೆ ಇರುವ ಬಲ ಆಧ್ಯಾತ್ಮಿಕ ಬಲ ಒಂದೆ. ಆ ಆದ್ಯಾತ್ಮಿಕ ಬಲ ಸಂಪಾದಿಸಿಕೊಳ್ಳುವತ್ತ ದಿನದ ಒಂದು ಘಂಟೆಯಾದರೂ ಪರಿಶ್ರಮಿಸೋಣ.
*(ಸೂ... ನಿತ್ಯ ಎರಡು ಹೊತ್ತು ಸಂಧ್ಯಾವಂದನೆ/ ಗಾಯತ್ರೀ ಜಪ/ ಪೂಜೆ ಮಾಡೋಣ. ಸ್ತ್ರೀಯರೆಲ್ಲರಿಂದ ರಾಮಕೃಷ್ಣ/ ಅಚ್ಯುತಾನಂತಗೋವಿಂದ ಜಪ ಸಾಗಲಿ.)*
*✍🏼✍🏼✍🏼ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments