*ಹೇ ಮನ್ಯೋ... !! ನೀನು ಎನ್ನೊಡೆಯನಾಗಿ ಬಾ*

*ಹೇ ಮನ್ಯೋ... !! ನೀನು ಎನ್ನೊಡೆಯನಾಗಿ ಬಾ*
(ನರಸಿಂಹ ಜಯಂತೀ..)

"ಮನ್ಯೋ ಮನ್ಯುನಾಮಕ ನರಸಿಂಹನೇ ನೀನು ಬಾ"  ಇದು ವೇದಪುರುಷನ ವೇದವಾಣಿ.  ಇಂದು ಅನೇಕರನ್ನು ನಮ್ಮ ಮನೆಗೆ ನಮ್ಮ ಮನಕ್ಕೆ ಕರಿಯುತ್ತೇವೆ ಆದರ ಸತ್ಕಾರ ಗೌರವ ಕೊಡುತ್ತೇವೆ. ಸಹಾಯ ಬೇಡುತ್ತೇವೆ. ರಕ್ಷೆಣೆಗೆ ಒದಗು ಎಂದು ಹರಿಸುತ್ತೇವೆ. ಅದೇರೀತಿ ಎಂದಾದರೂ *ದೇವರನ್ನು ಕರೆದಿದ್ದೇವೆಯಾ...??* 

*ನರಸಿಂಹ ದೇವರನ್ನು ಏಕೆ ಕರೆಯುವದಿಲ್ಲ.... ??*

ನಾವು ನಿತ್ಯ ದೇವರನ್ನೇ ಕರೆಯುದಿಲ್ಲ, ಇನ್ನು ನರಸಿಂಹದೇವೆರನ್ನು ಕರೆಯುವದು ದೂರದ ಮಾತೇ. ದೇವರನ್ನು ಕರೆದರೆ ಅವನ‌ ಸೇವೆಗೋಸ್ಕರ ಎಲ್ಲ ಬಿಡಬೇಕು, ಮಡು ಮಾಡಬೇಕು, ಇದ್ದಲಿವಲಿಮೇಲೆ ಅಡಗಿ ಮಾಡಬೇಕು ಇಂತಹ ನೂರು ಸಮಸ್ಯೆ, ಹಾಗಾಗಿ ದೇವರನ್ನೇ ಕರಿಯುವದನ್ನು ಬಿಟ್ಟಾಗಿದೆ. ದೇವರನ್ನೇ ಬಿಟ್ಟ ಮೇಲೆ ನರಸಿಂಹ ದೇವರನ್ಬ ಕರಿಯುವದಾ.. ?? *ಆಚಾರ್ಯರೇ ..!!! ನಮ್ಕ ಮನೆಯಲ್ಲಿ ನರಸಿಂಹ ಸಾಲಿಗ್ರಾಮವಿದೆ.. ನಿಮಗೆ ದಾನವಾಗಿ ಕೊಡುತ್ತೇವೆ* ಮನೆಯಲ್ಲಿ ಇಟ್ಕೋಬಾರದಂತೆ, ನೀವು ತೆಗೆದುಕೊಳ್ಳಿ" ಎಂದು ಹೇಳಿ ಇರುವ ನರಸಪ್ಪನನ್ನು ಹೊರಗೆ ಹಾಕುವವರೇ ಅನೇಕ. 

*ಎಂಥವರು ನರಸಿಂಹ ದೇವರು...*

ಬಲಿಷ್ಠರಾದ ಬ್ರಹ್ಮಾದಿ ದೇವತೆಗಳಿಂತಲೂ ಅನಂತಪಟ್ಟು ಹೆಚ್ಚು ಬಲವುಳ್ಳವರು ನರಸಿಂಹ ದೇವರು. ಬ್ರಹಾದಿ ಕಲಿವರೆಗೆ ಇರುವ ಸಮಗ್ರವಾದ ಜಗತ್ತು ಒಂದಾಗಿ ಬಂದರು, ಎರಡಾಗಿ ಬಂದರೂ ಅಥವಾ ಅನಂತವಾಗಿ ಬಂದರೂ ಆ ಎಲ್ಲ ಜಗತ್ತನ್ನೂ ಒರಳಿನಲ್ಲಿ ಹಾಕಿ ರುಬ್ಬಿ ಇಡುವ ಮಹಾನ್ ಶಕ್ತಶಾಲಿ ಹೆದ್ದೊರೆ ನರಸಿಂಹ ದೇವರು. 


*ನರಸಿಂಹದೇವರನ್ನು ಕರಿಯುವದು ಅನಿವಾರ್ಯ...*

ದೇವರೋ ಅಥವಾ ನರಸಿಂಹ ದೇವರೋ ಮನೆ ಮನದಲ್ಲಿ ಕರೆಯುವದು ಇರುವದು ಅನಿವಾರ್ಯ.  ಮಹಾ ಬಲಿಷ್ಠರಾದ ವ್ಯಕ್ತಿಯವನು ನಾನು ಆದಾಗ ನಾನೂ ಬಲಿಷ್ಠ.  ನಾನು ಬಲಿಷ್ಠನಾದಾಗ ಚಿಲ್ಲರೆ ವಸ್ತುಗಳು ದೂರಾಗುತ್ತವೆ. ದೂರಾಗುವದು ಅಲ್ಲ ಪಲಾಯನ ಮಾಡಿಬಿಡುತ್ತವೆ. 

*ನನ್ನವನಾಗಿ ಬಾ.. ನನಗಾಗಿ ಬಾ... ನನ್ನೊಡೆಯನಾಗಿ ಬಾ....*

ನಮ್ಮ ಮನೆ ಮನದಲ್ಲಿ ನಮ್ಮ ತುಳಿಯುವ ಕುಗ್ಗಿಸುವ ಹಿತ ಶತೃಗಳೂ ನೂರು ಜನ ಬರುವದುಂಟು ಹಾಗೇ ನೀನು ಬರಬೇಡೋ... ನನ್ನವನಾಗಿಯೇ ಬಾ.... ನೀನು ಬರುವದೂ ನನಗೆ ಹಿತಮಾಡಲೇ. ನೂರಾರು ಸಾವಿರಾರು ಆಪತ್ತುಗಳಲ್ಲಿ ಸಿಕ್ಕುಬಿದ್ದಾಗ ನೀನಲ್ಲದೆ ಎನ್ನಗತಿ ಯಾರೂ ಇರುವದಿಲ್ಲ, ಆದ್ದರಿಂದ ನೋನೊಬ್ಬನೇ ಎನಗೋಸ್ಕರ ಇರುವವನು. ಹಾಗಾಗಿ ನೀನು ನನಗೋಸ್ಕರ ಬಾ. ನನ್ನಿಂದ ಧರ್ಮಮಾಡಿಸಲು ಬಾ. ನನಗೆ ಸುಖನೀಡಲು ಬಾ. ಆಪತ್ತುಗಳಿಗೆ ರಕ್ಷಕನಾಗಿ ಬಾ. 

೧) ನನ್ನ ಯಾವುದೇ ತರಹದ ಉನ್ನತಿಯನ್ನು ಸಹಿಸದ "ಅಮಿತ್ರ"ರ ಸೆದೆಬಡಿಯಲು ನೀನು ಬಾ..... ೨)  ವೃತ್ರಾಸುರನಂತೆ ದೇಹ ಇಂದ್ರಿಯ ಮನದಲ್ಲಿ ಆವರಿಸಿ ನಮ್ಮನ್ನು ಅಡ್ಡದಾರಿಗೆ ಎಳೆಯುವ "ವೃತ್ರ" ರನ್ನು ಸಂಹರಿಸಲು ನೀನು ಬಾ... ೩) ಸಮಯ, ಬುದ್ಧಿವಂತಿಕೆ, ನನ್ನವರು, ದೇವರು, ಶಾಸ್ತ್ರ, ಧರ್ಮ ಮೊದಲಾದ ನನ್ನದು ಏನಿದೆ ಅದನ್ನು ಅಪಹರಿಸುವ "ದಸ್ಯು" ಕಳ್ಳರನ್ನು ಹತಮಾಡಲು ನೀನು ಬಾ.... ಕೊನೆಗೆ ನನಗೆ ಯೋಗ್ಯವಾದ, ನಿನ್ನ ಇಚ್ಛೆಗೆ ಅನುಗುಣವಾದ ಜಗದ ಏನೆಲ್ಲ "ವಸು" ಐಶ್ವರ್ಯವಿದೆ ಅದೆಲ್ಲವನ್ನು ಎನಗೆ ತಂದು ಕೊಡುವವನಾಗಿ ನೀನು ಬಾ... ಎಂದು ನಿತ್ಯದಲ್ಲಿಯೂ ದೇವರಲ್ಲಿ ಪ್ರಾರ್ಥಿಸುವದು ಬೇಡುವದು ಕರಿಯುವದು ಅನಿವಾರ್ಯ. ಇಂದಂತೂ ನಾವೆಲ್ಲರೂ ಸೇರಿ ಪ್ರದಕ್ಷಿಣೆ ನಮಸ್ಕಾರ ಮೊದಲು ಮಾಡಿ ಏನೆಲ್ಲ ಸೇವೆ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿ ದೇವರಿಗೆ ನರಸಿಂಹ ದೇವರಿಗೆ ಬೇಡೋಣ *ನೀನು ನನ್ನವನಾಗಿ ಬಾ* ಎಂದು. 

*(ಸೂ.. ಪುರುಷರು ಸಂಧ್ಯಾವಂದನೆ/ಗಾಯತ್ರೀ ಜಪ/ ಪೂಜೆ, ಸ್ತ್ರೀಯರು ರಾಮಕೃಷ್ಣ/ ಅಚ್ಯುತಾನಂತಗೋವಿಂದ ನಾಮ ಜಪ ಇವುಗಳನ್ನು ಒಟ್ಟಾರೆ ತಪ್ಪಿಸುವಂತಾಗುವದುಬೇಡ.)*

*✍🏽✍ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*