*ಏಕಾದಶೀ ಏಕಾದಶೀ ಏಕಾದಶೀ*


*ಏಕಾದಶೀ ಏಕಾದಶೀ ಏಕಾದಶೀ*

ವೈಶಾಖ ಶುದ್ಧದಲ್ಲಿ ಬರುವ *ಮೋಹಿನೀ ಏಕಾದಶೀ.*  

ಮೂವತ್ತು ದಿನಗಳನ್ನು ಒಬ್ಬೋಬ್ಬ ದೇವತೆಗಳಿಗೆ ಕೊಟ್ಟ ದೇವ,  ಏಕಾದಶೀ ದಿನವನ್ನು ತನ್ನ ಬಳಿಯೇ ಇರಿಸಿಕೊಂಡ. ಅಂತೆಯೇ ಇಂದಿನ ಈ ದೀನಕ್ಕೆ *ಹರಿವಾಸರ - ಹರಿದಿನ* ಎಂದೂ ಕರಿಯುವದಿದೆ. 

*ಧಾರ್ಮಿಕರಿಗೆ ಬೋನಸ್....*

ಧರ್ಮ ದೇವರು ಶಾಸ್ತ್ರದಲ್ಲಿ ಅಭಿರುಚಿ ಇದ್ದು, ಪುಣ್ಯ ಪಾಪಗಳನ್ನು ಒಪ್ಪಿದ ಮಹಾಂತರಿಗೆ ಏಕಾದಶೀ ಎಂದರೆ ಒಂದು ಬೋನಸ್ ಕೊಡುವ ದಿನವೆಂದೇ ಭಾವಿಸುವವರು. *ಇಂದು ಆಚರಿಸುವ ಕ್ಷಣ ಕ್ಷಣದ  ಉಪವಾಸ ಆ ಉಪವಾಸದ ದುಃಖ ಪಾಪಗಳನ್ನು ಸುಟ್ಟು ಹಾಕಿದರೆ, ಇಂದಿನ ಒಂದೊಂದು ಸಾಧನೆಯೂ ಸಿದ್ದಿಯನ್ನು ತಂದು ಕೊಡುವಲ್ಲಿ ಮಹಾ ಉಪಕಾರಿಯೂ ಆಗುತ್ತದೆ* ಅಂತೆಯೇ ಏಕಾದಶಿ ಬಂದರೆ ಸಾಧಕರಿಗೆ ಎಲ್ಲಿಲ್ಲದ ಉತ್ಸಾಹ.

*ಸರ್ವೋತ್ತಮ ವ್ರತ....* 

ಸಾಧಕರಿಗೆ ಅನೇಕ ವ್ರತಗಳು ಇವೆ. ಕೆಲ ವ್ರತೋಪವಾಸಗಳು ಶೀಘ್ರಫಲಕಾರಿಯೂ ಆಗಬಹುದು. ಯಾವ ವ್ರತವೂ ನಿಷ್ಠುರ ಉಪವಾಸ ವ್ರತವಿಲ್ಲ. ಜೊತೆಗೆ ಸಕಾಮ ವ್ರತಗಳೂ ಆಗಿರುತ್ತವೆ. ಆ ಅಪೇಕ್ಷೆ ಎಷ್ಟು ಈಡೇರತ್ತೋ ಗೊತ್ತಿಲ್ಲ. ನಮ್ಮ ಅಪೇಕ್ಷೆ ಫಲಕೊಡುವ ದೇವರ ಇಚ್ಚೆಗೆ ಅನುಗುಣವಾಗಿದ್ದರೆ ಈಡೇರುವ ಸಂಭವ ಹೆಚ್ಚು. ವಿರುದ್ಧವೇ ಆಗಿದ್ದರೆ ಗೋವಿಂದ..... 
ಆದರೆ ಏಕಾದಶೀ ವ್ರತ  ಹಾಗಲ್ಲ. ನಮ್ಮ ಅಪೇಕ್ಷಗಳ ಈಡೇರಿಕೆ ಈ ವ್ರತದಲ್ಕಿ ಮಹತ್ವ ಪಡದೇ ಇಲ್ಲ, ಫಲ ಕೊಡುವ ದೇವರ ಸಂತೃಪ್ತಿಯೇ ಈ ವ್ರತದ ಉದ್ಯೇಶ್ಯ.‌ ಫಲ ಕೊಡುವ ದೇವ ಸಂತೃಪ್ತನಾಗಿ ಇದ್ದರೆ, ಫಲ ಪಡೆಯುವ ನಾವು ಸಂತೃಪ್ತರಾಗಿಯೇ ಇರುತ್ತೇವೆ‌. ಕೇವಲ ವಿಷ್ಣು ಪ್ರೀತಿ ಗೋಸ್ಕರವೇ ಇರುವ ವ್ರತ *ಏಕಾದಶೀ ವ್ರತ.* ಅಂತೆಯೇ ಏಕಾದಶೀ ವ್ರತ ಉಳಿದ ವ್ರತಗಳಿಗಿಂತಲೂ ಅತ್ಯುತ್ತಮ ವ್ರತ.  

*ಏಕಾದಶೀ....*

ಏಕಾದಶೀ ಉಪವಾಸ ಮುಖದ ಕಾಂತಿಯನ್ನು ಬೆಳಗಿಸುತ್ತದೆ. ದೇಹದ ವಳಾಂಗಣವನ್ನು ಶುದ್ಧೀಕರಿಸುತ್ತದೆ. ರೋಗಾಣುಗಳನ್ನು ಕೊಂದು ಹಾಕುತ್ತದೆ. ಆಪತ್ತಿನಲ್ಲಿ ತುಂಬ ಉಪಯುಕ್ತವಾದ ಉಪವಾಸ ಇರುವ ಶಕ್ತಿಯನ್ನು  ಒದಗಿಸುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಕೌಶಲವೂ ಒದಗಿ ಬರುತ್ತದೆ. ಇಂತಹ ನೂರಾರು ಲಾಭಗಳು ಇವೆ..... 

*ಮೋಹಿನೀ ಏಕಾದಶೀ...*

ಇಂದಿನ ಈ ಏಕಾದಶೀ ವ್ರತ ನಮ್ಮನ್ನು ಕೆಡಿಸುವ  ಮಯಾ ಮೋಹಗಳೇನಿವೆ ಅವೆಲ್ಲವನ್ನೂ ಕತ್ತರಿಸಿ ಹಾಕುತ್ತದೆ. ಸನ್ಮಾರ್ಗದಲ್ಲಿ ಇರಿಸಿ, ವೈಷ್ಣವನನ್ನಾಗಿಸಿ, ಧರ್ಮಮಾರ್ಗದಲ್ಲಿ ಪ್ರೇರೇಪಿಸುತ್ತದೆ. 

ಇಂದು ತಿನ್ನುವ ಒಂದೊಂದು ಕಣದಲ್ಲೂ ಪಾಪಗಳ ಆರ್ಭಟ ಜೋರಿರುತ್ತದೆ. ಯಾರೆಲ್ಲರಿಗೆ ಸಾಧ್ಯವೋ ಸಂಪೂರ್ಣ ನಿರಾಹಾರ ಮಾಡಿ, ಮಾಡಲೇಬೇಕು ಇದು ಪ್ರೀತಿಯ ಆಗ್ರಹ. (ಉಪವಾಸ ಇರಲು ಸಾಧ್ಯವೇ ಇಲ್ಲ ಎಂದಾದರೆ ಕೇವಲ ನೀರು ಮಾತ್ರ ಕುಡಿದು ಉಪವಾಸ ಆಚರಿಸಿ....) ಹರಿಯ ಅನುಗ್ರಹಕ್ಕೆ ನಾವೆಲ್ಲರೂ ನಿರಂತರ ಪಾತ್ರರಾಗೋಣ.....

*(ಸೂ.... ಸಂಧ್ಯಾವಂದನೆ/ ಗಾಯತ್ರೀ ಜಪ/ ಪೂಜೆ ಇವುಗಳನ್ನು ನಾವೆಲ್ಲರೂ ಮಾಡೋಣ. ಸ್ತ್ರೀಯರೆಲ್ಲರೂ ರಾಮ ಕೃಷ್ಣ / ಅಚ್ಯತಾನಂತಗೋವಿಂದ ಇವುಗಳ ಮಂತ್ರ ಜಪವನ್ನು ಖಂಡಿತ ಮಾಡುವಂತಾಗಲಿ.)*

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*