*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್*
*ತಸ್ಯ ಕುಕ್ಷಿಗತಾಃ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್* ಶ್ರೀಶ್ರೀ೧೦೦೮ಶ್ರೀ ಶ್ರೀರಾಘವೇಂದ್ರಸ್ವಾಮಿಗಳ ೩೪೭ ನೇಯ ಆರಾಧನಾ ಮಹೋತ್ಸವ. ಇಂದು ನಮ್ಮ ದೇಹ ಇಂದ್ರಿಯ ಮನಸ್ಸುಗಳು ಕಲುಷಿತವಾಗಿವೆ, ಕಲ್ಮಷವಾಗಿವೆ. ಕಲುಷಿತವಾದ ದೇಹೇಂದ್ರಿಯ ಮನಸ್ಸುಗಳು ಇರುವದರಿಂದಲೇ ಸುತ್ತಲ ಪರಿಸರವೆಲ್ಲವೂ ಕಲುಷಿತವಾಗಿವೆ. ಸ್ವಚ್ಛಗೊಳಿಸುವ ಒಬ್ಬ ವ್ಯಕ್ತಿಯ ಆವಶ್ಯಕತೆ ತುಂಬ ಇದೆ. ಆ ವ್ಯಕ್ತಿಯೆ ಇಂದಿನ ಆರಾಧಕರಾದ ಗುರು ಸಾರ್ವಭೌಮರು. *ಗುರು ಸ್ಮರಣೆಯಿಂದ ಆಪತ್ತು ಪರಿಹಾರ* ಕಲುಷಿತ ಮನಸ್ಸೇ ಇಂದಿನ ಒಂದು ದೊಡ್ಡ ಆಪತ್ತು. ಆ ಆಪತ್ತಿನ ಪರಿಹಾರದ ಮಾರ್ಗವೇ ಗುರುಸ್ಮರಣೆ. ಇದುವೇ ದಾಸರೆಲ್ಲರ ಧರ್ಮವೂ ಸಹ ಆಗಿದೆ. ಆದ್ದರಿಂದ ನಿರಂತರ *ಶ್ರೀಗುರುಭ್ಯೋ ನಮಃ* *ಶ್ರೀರಾಘವೇಂದ್ರಾಯ ನಮಃ* ಎಂಬ ಮಂತ್ರಗಳ ನಿರಂತರ ಸಂಸ್ಮರಣೆ ಜಪ ಅತ್ಯವಶ್ಯಕ. *ಯಃ ಪಿಪೇಜ್ಜಲಮೇತೇನ ಸ್ತೋತ್ರೇಣೈವ ಅಭಿಮಂತ್ರತಮ್* ಕೇವಲ ಗುರುಮಂತ್ರದ ಜಪ ಮಾತ್ರವಲ್ಲದೇ *ನೀರನಲ್ಲಿ ಗುರುಸ್ತೋತ್ರವನ್ನು ಜಪಿಸುತ್ತಾ ಅಭಿಮಂತ್ರಣೆ ಮಾಡಿ, ಆ ಜಲವನ್ನು ಕುಡಿದರೆ ಆಯ್ತು* ಎಲ್ಲತರಹದ ಎಲ್ಲ ರೋಗಗಳೂ ದೇಹ ಇಂದ್ರಿಯ ಮನಸ್ಸಿನ ಸಕಲ ಕಲ್ಮಷಗಳೂ ಬೇರುಸಹಿತ ಸ್ವಚ್ಛವಾಗಿ ತೊಳೆದು ಹೋಗುತ್ತವೆ ಎಂದು ಅಪ್ಪಣ್ಣಾಚಾರ್ಯರು ತಿಳುಹಿಸುತ್ತಾರೆ. ಜ್ಙಾನದ ವಿರೋಧಿಯಾದ ಅಜ್ಙಾನ ವಿಸ್ಮೃತಿ ಭ್ರಾಂತಿ ಸಂಶಯ ಅಪಸ್ಮೃತಿ ಆಲಸ್ಯ ತೊದಲ್ನುಡಿವಿಕೆ ಇವೇ ಮೊದಲಾದ ಸಕಲ ಇಂದ್ರಿಯ ದೋಷಗಳೂ ಪರಿಹಾರವಾಗು...