*ಆಪತ್ತುಗಳನ್ನು ಸ್ವಾಗತಿಸಲು ಇರುವ ಮೂರು ದಾರಿಗಳು......*

ಜೀವನದಲ್ಲಿ ಆಪತ್ತುಗಳು ಬರುವದು ಅನೇಕ ವಿಧಗಳಿಂದ. ಆ ಅನೇಕ ವಿಧಗಳಲ್ಲಿ ನಾವು ಕೈಯ್ಯಾರೆ ತಂದುಕೊಳ್ಳುವ ವಿಧಾನಗಳು ಮೂರುವಿಧ. ಆ ಮುರೂ ವಿಧದ ಮಾರ್ಗಗಳನ್ನೂ ಶ್ರೀಮನ್ಮಹಾಭಾರತ ಪರಮ ಸುಂದರವಾಗಿ ತಿಳುಹಿಸಿಕೊಡುತ್ತದೆ.
"ಪರನಿಂದಾಸು ಪಾಂಡಿತ್ಯಂ
ಸ್ವೇಷು ಕಾರ್ಯೇಷ್ವನುದ್ಯಮಃ |
ಪ್ರದ್ವೇಷಶ್ಚ ಗುಣಜ್ಞೇಷು
ಪಂಥಾನೋ ಹ್ಯಾಪದಾಂ ತ್ರಯಃ ||" ಈ ರೀತಿಯಾಗಿ.
*ಪರನಿಂದಾಸು ಪಾಂಡಿತ್ಯಂ*
"ಪರರ ನಿಂದನೆಗೆ ನಾಲಿಗೆ ಬಲು ಮುಂದೆ" ಇದು ಒಂದು ಸಹಜ ನಿಯಮ. ತನ್ನ ದೋಷಗಳನ್ನು ಮುಚ್ಚಿಹಾಕಲೋ, ತಾನು ಭಾರೀ ಎಂದು ತೋರಿಸಿಕೊಳ್ಳಲೋ, ಅಥವಾ ಇನ್ನೇನೋ ಕಾರಣಕ್ಕೋ *ಪರನಿಂದೆ* ಸಹಜವಾಗಿ ನಡೆಯುತ್ತಿರತ್ತೆ. ಪರನಿಂದೆಯಲ್ಲಿಯ ಪಾಂಡಿತ್ಯ ಅದ್ಭುತವೇ. ಗುರೂಪದೇಶ, ಗುರುಮಾರ್ಗದರ್ಶನ ಸಿಗದೆ ಬರುವ ಪಾಂಡಿತ್ಯ ಎಂದರೆ ಅದು ಪರನಿಂದೆ. ಅಂತೆಯೇ ಶ್ರೀಮನ್ಮಹಾಭಾರತ ತಿಳಿಸುತ್ತದೆ ಪರನಿಂದೆ ನಮ್ಮ ಆಪತ್ತಿಗೆ, ಅನರ್ಥಗಳಿಗೆ ಮೊದಲ ಮಾಹಾ ಮಾರ್ಗ ಎಂದು.
ನಿದರ್ಶನ.... ನಿತ್ಯ ಬ್ರಾಹ್ಮಣ, ದೇವತಾ, ದೇವರ ನಿಂದೆಯಲ್ಲಿಯೇ ತೊಡಗಿದ ಕಾರಣ ಶಿಶುಪಾಲ ಮಹಾ ಬಲಿಷ್ಠನಾದರೂ ಅರ್ಥವತ್ತಾದ ಕಾರ್ಯ ಒಂದೂ ಮಾಡಲಿಲ್ಲ. ಅವನಿಗಾಗಿರುವದು ಮಾತ್ರ ಅನರ್ಥಗಳೆ.....
*ಸ್ವೇಶು ಕಾರ್ಯೇಷು ಅನುದ್ಯಮಃ*
ಯಶಸ್ಸಿನ ಚಿತ್ತಾರದಲ್ಲಿ ತೇಲಿಸುವಂತಹದ್ದು ಎಂದರೆ ಅದು ಪ್ರಯತ್ನಪೂರ್ವಕ ಸ್ವಕರ್ಮಾಚರಣೆ. ಅಂತೆಯೇ ಕೃಷ್ಣ ಗೀತೆಯಲ್ಲಿ "ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ" ಎಂದುಪದೇಶಿಸಿದ.
ಆದರೆ ಇಂದು ಪರರ ಕರ್ಮಗಳನ್ನು ಆಚರಿಸುವದರಲ್ಲಿಯ ಅಭಿರುಚಿ, ಆಸಕ್ತಿ, ಪ್ರಯತ್ನ, ತಾದಾತ್ಮ್ಯ ಇದ್ಯಾವದೂ ಸ್ವಕರ್ಮಾಚರಣೆಯಲ್ಲಿ ಕಿಂಚಿತ್ತೂ ಇಲ್ಲ. ಅಂತೆಯೇ ಸ್ವಧರ್ಮವಾದ ಸಂಧ್ಯೆ, ಪೂಜೆ, ಜಪ, ತಪಸ್ಸುಗಳು ಶೂನ್ಯ. ಸಾರ್ಥಕತೆಗೆ ಸ್ವಕರ್ಮಾಚರೆಣೆ ಪೂರ್ವಕ ತಪಸ್ಸೇ ಬೇಕು. ಸ್ವಕರ್ಮಾಚರಣೆಯೇ ಇಲ್ಲದಿರುವದರಿಂದ ಜೀವನದಲ್ಲಿ ಹೆಚ್ಚು ಅನರ್ಥಗಳ ಮಹಾಪೂರಗಳನ್ನೇ ಎದುರಿಸುವಂತಾಗಿದೆ.
ಪರಿಶುದ್ಧ ಬ್ರಾಹ್ಮಣ ದ್ರೋಣಾಚಾರ್ಯ, ಕೃಪಾಚಾರ್ಯ, ಅಶ್ವತ್ಥಾಮಾಚಾರ್ಯ ಮೊದಲಾದವರು. ಆದರೆ ದುರ್ಯೋಧನಪ್ರೀತ್ಯರ್ಥವಾಗಿ ಅಭಿರುಚಿ ಆಸಕ್ತಿ ಪ್ರಯತ್ನ ತಾದಾತ್ಮ್ಯ ಇವುಗಳನ್ನು ಬೆಳಿಸಿಕೊಂಡಿದ್ದು ಮಾತ್ರ ಕ್ಷಾತ್ರ ಧರ್ಮದಲ್ಲಿ. ಅಂತೆಯೇ ಅವರ ವ್ಯಕ್ತಿತ್ವಕ್ಕೆ ಸಿಗಲೇಬೇಕಾದ ಯಾವ ಯಶಸ್ಸೂ ದೊರೆಯಲಿಲ್ಲ. ಅನರ್ಥವೇ ಹೆಚ್ಚು ಪಡೆದಂತೆಯೇ ಆಯಿತು....
*ಪ್ರದ್ವೇಶಶ್ಚ ಗುಣಜ್ಙೇಷು*
ಅನರ್ಥಕ್ಕಿರುವ ಕೊನೇಯದಾದ ಮೂರನೇಯ ದಾರಿ "ಗುಣವಂತರನ್ನೇ ದ್ವೇಶಿಸುವದು."
ದ್ವೇಶ ನಿಂದೆ ಇವುಗಳು ಸಾಮಾನ್ಯವಾಗಿ ತನಗಿಂತಲೂ ಕಿರಿಯರ ಮೇಲಿರದು. ಗುಣವಂತರಮೇಲೇಯೆ ಇರುತ್ತದೆ. ಈ ಅವಸ್ಥೆ ಬರುವದು ತನ್ನಲ್ಲಿ ಯಾವ ಗುಣ ಇಲ್ಲವೆಂದಾದಾಗ ಮಾತ್ರ. ತನ್ನ ದೋಷಗಳನ್ನು ಮುಚ್ಚಿಹಾಕಿಕೊಳ್ಳಲು ಇರುವ ಸಹಜ ಮಾರ್ಗ ಎಂದರೆ ಗುಣವಂತರನ್ನು ದ್ವೇಶಿಸುವದು.
ಅದಕ್ಕೆ ನಿದರ್ಶನ ಕರ್ಣ.
ನಿಜವಾಗಿಯೂ ಕರ್ಣ ಗುಣವಂತ. ಆದರೆ ದುಷ್ಟರ ಸಹವಾಸದಿಂದ ಆ ಎಲ್ಲ ಗುಣಗಳೂ ಪ್ರಕಾಶಕ್ಕೇ ಬಾರದಂತೆ ಆಗಿದ್ದವು. ಅವುಗಳನ್ನು ಮುಚ್ಚುಹಾಕಲು ಉಳಿದ ಮಾರ್ಗ *ಗುಣವಂತರ ದ್ವೇಶ* ಹಾಗಾಗಿ ಪಾಂಡವರ ದ್ವೇಶದಲ್ಲಿಯೇ ಕಾಲ ಕಳೆದ.
ದಾನ, ವೀರ್ಯ, ಪರಾಕ್ರಮ, ಶೌರ್ಯ ಪರೋಪಕಾರ ಮೊದಲಾದ ಗುಣಗಳ ಹಾಗೂ ಗುಣವಂತಿಕೆಯ ಲಾಭವಾಗಲಿಲ್ಲ. ಅಪಜಯ ಪರಾಜಯ ಬೆನ್ನು ಬಿಡಲಿಲ್ಲ. ಅನೇಕ ಕೆಟ್ಟ ಕೆಲಸಗಳಿಗೆ master plan ಕೊಟ್ಟವ ಕರ್ಣ ಎಂದಾದ. ಕೊನೆಗೆ ಸೋತು ಸತ್ತು ಹೋದ. ಹೀಗಾಗಲು ಮೂಲ ಕಾರಣ *ಗುಣವಂತರಾದ ಪಾಂಡವರ ದ್ವೇಶ.*
ಈ ರೀತಿಯಾಗಿ ಗುಣವಂತರ ದ್ವೇಶ, ಸ್ವಕರ್ಮಾಚರಣೆಯಲ್ಕಿಯ ಅನಾಸಕ್ತಿ, ಪರನಿಂದೆಯಲ್ಲಿಯ ಮಹಾಪಾಂಡಿತ್ಯ ಇವಗಳೇ ನಮ್ಮ ನಮ್ಮ ಅನರ್ಥ ಅಪಾಯ ಗಳನ್ನು ತಂದುಕೊಡುವ ಮೂರು ಮಹಾಮಾರ್ಗಗಳಾಗಿವೆ ಎಂದು ಮಹಾಭಾರತ ಬಹಳಸುಂದರವಾಗಿ ತಿಳುಹಿಸಿಕೊಡುತ್ತದೆ.
*✍🏽✍🏽✍🏽ನ್ಯಾಸ....*
(ಪಂ. ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
9449644808)

Comments