*ಗೆಳೆಯರು ಒಂದು ಆಯಾಮ*
*ನಿಃಸ್ವಾರ್ಥ ತ್ಯಾಗ ಮೊದಲಾದವುಗಳ ಸಂಕೇತವೇ ಗೆಳೆತನ*
ವಿಶ್ವಾಸ, ತ್ಯಾಗ, ಭರವಸೆ, ಪ್ರೇಮ, ಅಂತಃಕರಣ, ಅಭಿಮಾನ, ಪ್ರೀತಿ, ಸರಳತೆ, ನಿಃಸ್ವಾರ್ಥ ಇತ್ಯಾದಿಗಳ ಪ್ರತೀಕವೇ ಗೆಳೆತನ.
*ಸಂಕಷ್ಟಕ್ಕೆ ಇರುವವ....*
ಕಷ್ಟ ಅನ್ನುವದು ಎಲ್ಲರಿಗೂ ಸಮ. ಕಷ್ಟಗಳು ಎದುರಾದಾಗಲೇ ಎಲ್ಲರ ಭಾವಗಳು ಬಯಲಾಗುವದು. ಕೆಲ ಕೆಲ ಕಷ್ಟಗಳಿಗೆ ಕೆಲವರೇ ಸಹಾಯಕರು. ಆದರೆ ಸಕಲ ಕಷ್ಟಗಳಿಗೂ ಹಗಲು ರಾತ್ರಿ ಎನ್ನದೇ ಸದಾಕಾಲ ಬೆನ್ನಿಗೆ ನಿಲ್ಲುವವನೇ ಗೆಳೆಯ.
*ಎಲ್ಲ ದುಃಖಗಳಿಗೆ ಭಾಗಿಯಾಗುವವ....*
ಸುಖದ ಸಮಯದಲ್ಲಿ ಎಲ್ಲರೂ ಸನಿಹ ಇರುತ್ತಾರೆ. ದುಃಖದ ಪ್ರಸಂಗದಲ್ಲಿ ಜೊತೆಗೆ ಇರುವವನು ಗೆಳೆಯ ಮಾತ್ರ. ತನ್ನ ಎಲ್ಲ ವಿಧದ ದುಃಖಗಳನ್ನು ಗಾಳಿಗೆ ತೂರಿ, ನಮ್ಮ ದುಃಖಕ್ಕೆ ಸ್ಪಂದಿಸುವ, ನಮ್ಮ ಕಣ್ಣೀರಿಗೆ ತಮ್ಮ ಕಣ್ಣೀರು ಸುರಿಸಿ, ನಮ್ಮ ಕಣ್ಣೀರು ಒರಿಸಿ, ನಮ್ಮನ್ನು ನಗಿಸಿ, ಸಕಾರಾತ್ಮಕ ವಿಚಾರಗಳನ್ನು ಹೇಳಿ, ಇರುವ ಶಕ್ತಿಯನ್ನು ಬಡಿದೆಬ್ಬಿಸಿ ಒಂದ ಹಂತಕ್ಜೆ ಕ್ಷಣ ಬಿಡದೆ ಎಮ್ಮೊಡೆಗೆ ಇದ್ದವರೇ ಗೆಳೆಯರು.
*Suggestion box*
ತಾನು ಅನೇಕ ಸಮಸ್ಯೆಗಳ ಸುಳಿಯಲ್ಲಿ ಇದ್ದರೂ, ನಮ್ಮೆಲ್ಲ ತರಹದ, ಸಕಲವಿಧ ಸಮಸ್ಯೆಗಳಿಗೂ ಸುಲಭದಲ್ಲಿ ಉಪಾಯಗಳನ್ನು ಹುಡುಕಿ ಎಮಗೆ ಅತ್ಯಂತ ಸುಲಭರೀತಿಯಲ್ಲಿ ಒದಗಿಸಿಕೊಡುವವ ಗೆಳೆಯ.
*ಭರವಸೆಯ ಪ್ರತೀಕ*
ಅಪೇಕ್ಷಿಸಿದ ಎಲ್ಲವನ್ನೂ ಪಡೆಯಲು ಆಗಲ್ಲ. ಪಡೆಯದೇ ಇರುವಾಗ ಹಾತಾಶೆಯೂ ಅಷ್ಟೇ ಸಹಜ. ಕೆಲೊಮ್ಮೆ ಹತಾಶೇ ಆತ್ಮಹತ್ಯೆಗೂ ದಾರಿಯಾಗಿರುತ್ತದೆ. ಆ ಎಲ್ಲ ಪ್ರಸಂಗದಲ್ಲಿಯೂ ಉತ್ಸಾಹ ತೋರಿಸಿ ಜೀವನದಲ್ಲಿ ಹತಾಶನಾಗದಿರುವಂತೆ ಭರವಸೆ ಮೂಡಿಸುವವ ಗೆಳೆಯ.
*ವಿಶ್ವಸ್ತ ಬ್ಯಾಂಕ್*
ಸಮಸ್ಯೆಗಳು ಇರುವಂತಹದ್ದೇ. ಕೆಲೆ ಕೆಲ ಸಮಸ್ಯೆಗಳು ಕೇವಲ ವಿಶ್ವಸ್ತರಾದ ಕೆಲವರ ಮುಂದೆಯೇ ಹೇಳಬಹುದು. ಆದರೆ ಸಕಲ ಸಮಸ್ಯೆ, ದುಃಖ, ಎಲ್ಲವನ್ನೂ, ಅತ್ಯಂತ ಅಂತರಂಗ, ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳ ಬಹುದಾದ ಒಂದೊಳ್ಳೆ ವಿಶ್ವಸ್ತ ಬ್ಯಾಂಕ ಅಂದರೆ ಅದು ಗೆಳೆಯ ಎಂದು ಹೇಳಬಹುದು.
*ಪ್ರೀತಿ ಅಭಿಮಾನ ಅಂತಃಕರಣದ ಗಣಿ*
ಮನುಷ್ಯ ಉತ್ಸಾಹಭರಿತನಾಗಿರಲು ಬೇಕು ಪ್ರೀತಿ ಅಭಿಮಾನ ಅಂತಃಕರಣಗಳು. ಅವುಗಳನ್ನು ನಿರಂತರ ಸುರಿಸುವವರು ಗೆಳೆಯರೇ ಆಗಿರುತ್ತಾರೆ.
*ನಿಃಸ್ವಾರ್ಥ ಹಾಗೂ ತ್ಯಾಗ ಮೂರ್ತಿ*
ತನ್ನ ಸಮಯ, ತನ್ನ ಹಣ, ತನ್ನ ವಿದ್ಯೆ, ತನ್ನ ತಪಸ್ಸು, ತನ್ನ ಮನೆ, ತನ್ನ ವಸ್ತ್ರ, ತನ್ನ ಕೀರ್ತಿ, ಹೀಗೆ ಪ್ರತಿಯೊಂದನ್ನೂ ತನ್ನ ಗೆಳೆಯನಿಗೋಸ್ಕರ ತ್ಯಾಗ ಮಾಡಲು ಸರ್ವಥಾ ಸಿದ್ಧ. ಸ್ವಾರ್ಥಕ್ಕಾಗಿ ಏನಿಟ್ಟುಕೊಳ್ಳದೇ ಏನಿದೆ ಎಲ್ಲವೂ ಗೆಳಿಯನಿಗೋಸ್ಕರ ಎಂದು ಹಪಿಹಪಿಸುವ.
*ಅಜ್ನಾನ ನಾಶಕ....*
ಗುರು ಅಜ್ಙಾನ ನಾಶಮಾಡಿ ಜ್ಙಾನ ದಯಪಾಲಿಸುತ್ತಾರೆ. ಆದರೆ ಗುರುಗಳ ಮಾತನ್ನು ಸರಿಯಾಗಿ ಅರ್ಥೈಸಿ, ಅಧ್ಯಯನದಲ್ಲಿ ಮುಂದೆ ಬರುವಂತೆ ಮಾಡಿ. ದಾರಿತಪ್ಪಿದಾಗ ಅಜ್ಙಾನಗಳನ್ನು ದೂರೋಡಿಸಿ ಸರಿಯಾದದ್ದನ್ನು ತಿಳಿದು ತಿಳಿಸಿ ಕೊಡುವವ ಗೆಳೆಯ.
*ಆಪತ್ತಿಗೆ ಒದಗುವವ....*
ಎಂತಹದೇ ಪ್ರಸಂಗದಲ್ಲಿ ಎಂತಹದ್ದೇ ಆಪತ್ತು ಒದಗಿ ಬಂದರೂ ಆ ಎಲ್ಲ ಆಪತ್ತುಗಳಿಗೆ ಪ್ರತ್ಯಕ್ಷವೋ ಅಥವಾ ಪರೋಕ್ಷವೋ ಒದಗಿಬರುವವ ಗೆಳೆಯಮಾತ್ರ.
ಈ ಮೇಲೆ ಹೇಳಿದ ಎಲ್ಲ ಗುಣಗಳೂ ಅರ್ಜುನ ಕೃಷ್ಣನಲ್ಲಿ ಕಂಡ. ಸುಧಾಮನೂ ಕೃಷ್ಣನಲ್ಲಿ ಕಂಡ. ದ್ರೌಪದಿಯೂ ಕೃಷ್ಣನಲ್ಕಿ ಕಂಡಳು. ಅಂತೆಯೇ ಅರ್ಜುನನೋ ಅಥವಾ ಸುಧಾಮನೋ ಎಂದಿಗೂ ಅವಿಜ್ಙಾತ ಸಖನಾದ ಕೃಷ್ಣನನ್ನು ಕೆಳೆದುಕೊಳ್ಳಲು ಯೋಚಿಸಲೂ ಇಲ್ಲ.
ಇಷ್ಟೆಲ್ಲ ಲಾಭವನ್ನು ತಂದು ಕೊಡುವ ಗೆಳಯನನ್ನು ಏನೋ ಒಂದು ಸಣ್ಣ ಕಾರಣಕ್ಕೆ ಕಳೆದುಕೊಳ್ಳುವ ಸಾಹಸ ಮಾಡುವದು ಸರ್ವಥಾ ಬೇಡ. ಗೆಳೆಯರು ಸಿಗುವದು ಅತ್ಯಂತ ಅಪರೂಪ. ಗೆಳೆಯರು ಸಿಗುವದು ಕೇವಲ ಕೆಲವರಿಗೇ ಮಾತ್ರ. ಇದ್ದ ಗೆಳಯನನ್ನು ಕಳೆದುಕೊಂಡರೆ ಇಂತಹ ಮತ್ತೊಬ್ಬ ಗೆಳೆಯ ಸಿಗ.
*ನಾವು ನಮ್ಮ ಪ್ರಸಂಗಳು ಬಂದ ಹಾಗೆ ಬದಲಾದರೂ, ಬದಲಾಗದವ ಗೆಳೆಯ ಮಾತ್ರ.*
ಅಂತರ್ಯಾಮಿ ಗೆಳೆಯ ದೇವರು. ಪ್ರೇರಕ ಗೆಳೆಯರು ದೇವತೆಗಳು. ಉಪದೇಶಕ ಗೆಳೆಯರು ಗುರುಗಳು ಈ ಎಲ್ಲ ಗೆಳೆಯರಿಗೂ ನನ್ನ ಪ್ರೀತಿಯ ನಮಸ್ಕಾರಗಳು. ನನ್ನ ಜೊತೆಗೆ ನಿಂತು ನನ್ನನ್ನು ತಿದ್ದಿ ನಿರಂತರ ಪ್ರೋತ್ಸಾಹಿಸುವ ಸಹಪಾಠಿ ಮಿತ್ರರಿಗೂ ನನ್ನ ನಮಸ್ಕಾರಗಳು.
ನನ್ನ ಲೇಖನಗಳನ್ನು ಓದಿ, ಪ್ರೋತ್ಸಾಹಿಸುವ ತಮ್ಮೆಲ್ಲ ಗೆಳೆಯರೆಲ್ಲರಿಗೂ ಹಾರ್ದಿಕ ಶುಭಾಷಯಗಳು.
*✍🏽✍🏽✍🏽✍ನ್ಯಾಸ......*
ಪಂ. ಗೋಪಾಲ ದಾಸ
(ವಿಜಯಾಶ್ರಮ, ಸಿರವಾರ)

Comments