*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನಿ ಅನ್ನವೇ ವಾಸಿ......೨*

*ಬ್ರಹ್ಮಾಂಡದೊಳು ಆರಿಸಿ ನೋಡಲು ನಮ್ಮ ಮನಿ ಅನ್ನವೇ ವಾಸಿ......೨*

ನಮ್ಮ ಮನಿಯಲ್ಲಿ ತಾಯಿಯೋ, ಹೆಂಡತಿಯೋ, ಅಥವಾ ತಾನೇ ಮಾಡಿಕೊಂಡ ಅನ್ನವೋ, ವಟ್ಟಾರೆಯಾಗಿ ಮನೆಯ ಅನ್ನವೇ ನಮಗೆ ಅತ್ಯಂತ ಹಿತಕಾರಿ ಅನ್ನ. ಅದರಲ್ಲಿಯೂ ದೇವರ ನೈವೇದ್ಯವಾಗಿದ್ದರಂತೂ ಅತ್ಯತ್ತುಮ ಅನ್ನವೇ ಸರಿ.

ನಿನ್ನೆ ಭೀಷ್ಮಾಚಾರ್ಯರ ವೃತ್ತಾಂತವನ್ನು ಕೇಳಿದೆವು. ಇಂದು ದ್ರೋಣಾಚಾರ್ಯರ  ಒಂದು ಪುಟ್ಟ ವೃತ್ತಾಂತವನ್ನು ತಿಳಿಯೋಣ.

ಉಂಛ ವೃತ್ತಿ, ಶೀಲ ವೃತ್ತಿ ಇರುವ ಬ್ರಾಹ್ಮಣ ದ್ರೋಣಾಚಾರ್ಯ. ಸಂತೆ ಎಲ್ಲ ತಿರುಗಿ ಹೋದ ಮೇಲೆ ಆ ಆ ಜಾಗದಲ್ಲಿ ಬಿದ್ದ ಕಾಳುಗಳನ್ನು ಅಥವಾ ರಾಶಿ ಆದಮೇಲೆ ಉಳಿದ ಕಾಳುಗಳನ್ನೋ ಆರಿಸಿ ತಂದು, ಆ ಕಾಳುಗಳನ್ನು ಆಕಳಿಗೆ ತಿನ್ನಿಸಿ, ಗೋಮಯದಲ್ಲಿ ಬಂದ ಕಾಳುಗಳನ್ನು ಅಡಿಗೆಯಲ್ಲಿ ಬಳಿಸಿ ತಿನ್ನುವಂತಹ ಶ್ರೇಷ್ಠ ಧಾರ್ಮಿಕೋತ್ತಮ ದ್ರೋಣಾಚಾರ್ಯ. ಆ ಕಾಳುಗಳನ್ನೂ ಎಂದಿಗೂ ನಾಳೆಗೆ ಎಂದು ಇಟ್ಟುಕೊಳ್ಳದಂತಹ ಆಚಾರ್ಯ ದ್ರಣಾವಾರ್ಯ.

ಮಗನಾದ ಅಶ್ವತ್ಥಾಮನಿಗೆ ಇವೇ ಕಾಳುಗಳನ್ನೇ ಬೀಸಿ, ಹಿಟ್ಟು ಮಾಡಿ, ಅದನ್ನು ನೀರಲ್ಲಿ ಕಲಿಸಿ, ಹಾಲು ಎಂದು ಕುಡಿಸುತ್ತಿದ್ದರು. ಅವನೂ ಅಷ್ಟೇ ಪ್ರೀತಿ ಇಂದ ಕುಡಿಯುತ್ತಿದ್ದ.

ಒಂದು ದಿನ ಅಶ್ವತ್ಥಾಮನ ಆಪ್ತ ಮಿತ್ರ, ದುರ್ಯೋಧನ‌ ಕೇಸರ ಪಚ್ಚಕರಗಪೂರ, ಬದಾಮಿ ಮಿದಲಾದ ಭೋಗದ್ರವ್ಯ ಮಿಶ್ರಿತ, ಖಮ್ಮಾಗಿ ಕಾಯಿಸಿದ, ಹಾಲನ್ನು ಭಂಗಾರದ ಲೋಟದಲ್ಲಿ ಕುಡಿಸಿದ.

ಈ ಒಂದು ವಾಟಗ ಹಾಲಿನ ಪ್ರಭಾವ ಇಷ್ಟು ಘೋರವಾಗಿತ್ತುದರೆ, ದ್ರೋಣ- ದ್ರೋಣಾಚಾರ್ಯರ ಹೆಂಡತಿಯ ಅಣ್ಣ ಕೃಪಾಚಾರ್ಯ, ದ್ರೋಣರ ಮಗ ಅಶ್ವತ್ಥಾಮ, ಕೃಪಾಚಾರ್ಯರ ಸಾಕು ಅಣ್ಣ ಭೀಷ್ಮಾಚಾರ್ಯ ಎಲ್ಲರೂ  ಧಾರ್ಮಿಕ ಪಾಂಡವರನ್ನು ವಿರೋಧಿಸಿ, ಅಧಾರ್ಮಿಕ ದುರ್ಓಧನನ  ಪರ ಹೋರಾಟ ಮಾಡಿ ಸಾಯುವ ಪ್ರಸಂಗ ಎದುರಾಯ್ತು. ಇದು ದ್ರೋಣಾಚಾರ್ಯರಂಥ ದ್ರೋಣ, ಆಸ್ವತ್ಥಾಮ, ಕೃಪಾಚಾರ್ಯ ಅವಸ್ಥೆ. ಹಾಗಾಗಿ ಆದಷ್ಟು ಪರಿಶುದ್ಧ ಅನ್ನವನ್ನೇ ಉಣ್ಣುವ ತಿನ್ನುವ ಕಲೆ ಹೆಚ್ಚಾಗಲೇಬೇಕು.

ಹಾಗಾದರೆ ಮತ್ಯಾವ್ಯಾವ ಅನ್ನವನ್ನು ಉಣ್ಣಬಾರದು.... ??

ಸ್ನಾನವಿಲ್ಲದೇ ಊಟಮಾಡುವವನ ಅನ್ನವನ್ನು ಉಣ್ಣಬಾರದು. ಸಂಧ್ಯಾವಂದನೆ, ದಾನ‌ಮಾಡದವನ ಅನ್ನ ಸರ್ವಥಾ ತ್ಯಾಜ್ಯ.

ಬಡ್ಡಿ ಹಣದಿಂದ ಅನ್ನ ಕೊಡುವವನ ಅನ್ನವನ್ನು, ಅನ್ಮ ಮಾರುವವನ ಅನ್ನವನ್ನು, ಗುರು ಅಥವಾ ಸ್ತ್ರೀ ವಧೆ ಮಾಡಿದ ಅನ್ನುವನ್ನು, ಸರ್ಥಾ ತಿನ್ನಬಾರದು.

ಬ್ರಾಹ್ಮಣೋತ್ತಮನ ದ್ವೇಶಿಸುವ ಅನ್ನವನ್ನು, ಪಂಚ ಯಜ್ಙಮಾಡದವನ ಅನ್ನ, ಕುಲದೇವತೆ, ತಂದೆ ತಾಯಿಯರನ್ನು ದೂರ ಮಾಡಿದ ಅನ್ಮವನ್ನು ತಿನ್ನಲೇ ಬಾರದು.

ತಂದೆ ತಾಯಿಗಳ ಶ್ರಾದ್ಧವನ್ನು ಆದರದಿಂದ ಮಾಡದವನ ಅನ್ನವನ್ನು ಎಂದಿಗೂ ಮಾಡಲೇ ಬಾರದು. ಹೀಗೆ ನೂರಾರು ತ್ಯಜಿಸಲೇ ಬೇಕಾದ ಅನ್ನಗಳ ಅತಿದೊಡ್ಡದಾದ ಲಿಸ್ಟ ಅನ್ನೇ ಶಾಸ್ತ್ರ ಕೊಡುತ್ತದೆ.

ಒಂದು ಕಥೆ, ಪರಾನ್ನ ಬಿಟ್ಟ ಶ್ರೋತ್ರಿಯ ಬ್ರಾಹ್ಮಣ. ಹೆಂಡತಿಗೋ ಪರಾನ್ನದ ಆಸೆ. ಅವಳು ತಮ್ಮ ಗುರುವಿಗೆ ಬೇಡುತ್ತಾಳೆ. ಗುರು ಒಪ್ಪಿಗೆ ಕೊಡುತ್ತಾನೆ. ಗುರ್ವಾಜ್ಙೆ ಎಂದು ಇಬ್ಬರೂ ಒಂದು ಕಾರ್ಯಕ್ರಮಕ್ಕೆ ಊಟಕ್ಕೆ ತೆರಳುತ್ತಾರೆ. ಅಲ್ಲಿ ಊಟಕ್ಕೆ ಕುಳಿತ ಜನರೆಲ್ಲರೂ ತಮ್ಮ ತಮ್ಮ ಪಾಪಗಳ ಪ್ರಭಾವದಿಂದ ಅನೇಕ ಪ್ರಾಣಿಗಳ ರೂಪದಲ್ಲಿ ಕಾಣುತ್ತಾರೆ. ಅದನ್ನು ಕಣ್ಣಾರೆ ಕಂಡ ದಂಪತಿಗಳು ಮುಂದಿನ ಜೀವನದಲ್ಲಿ ಪರಾನ್ಮವನ್ನೇ ತ್ಯಜಿಸಿಬಿಡುತ್ತಾರೆ.

ಈ ಎರಡು ಲೇಖನದಲ್ಲಿ ದೋಷಯುಕ್ತ ಅನ್ನದವರ ಪಟ್ಟಿಯು ವಿಪರೀತ ವಿಶಾಲವಾದಂತೆ ತೋರಬಹುದು. ಅದನ್ನು ನಮ್ಮ ದೃಷ್ಟಿಯಿಂದು ತಿಳಿಯಲು ಅಸಾಧ್ಯವೆಂದೇ ಶಾಸ್ತ್ರ ತನ್ನ ದಿವ್ಯದೃಷ್ಟಿ ಇಂದ ತಿಳುಹಿಸಿ ಕೊಟ್ಟಿದೆ. *ಸಾಧಕನಿಗೆ ಕೇವಲ ದುಷ್ಟಾನ್ನವಷ್ಟೆ ವರ್ಜ್ಯವಲ್ಲ, ಕಿಂತು ದುಷ್ಟರಲ್ಲದವರ ಅನ್ನವೂ ವರ್ಜ್ಯ ತ್ಯಾಜ್ಯ ಎಂದು ಶಾಸ್ತ್ರ ಈ ಮಟ್ಟದಲ್ಲಿ ಹೇಳಿದೆ* ಈ ದೊಡ್ಡ ಪಟ್ಟಿಯಲ್ಲಿ ಬಿಟ್ಟಿದ್ದೇ ಹೆಚ್ಚು.

ಅನಂತ ಪಾಪ ಪರಿಹಾರಕ ಮನೆಯಲ್ಲಿಯ, ದೇವರ ನಿವೇದಿತ ಅನ್ನ. ಅಷ್ಟೇ ದೋಷಾಪದಕ ಪರಾನ್ನ.

ನಮ್ಮ ಮನಿಯಲ್ಲಿಯೇ, ದೇವರಿಗೆ ನೈವೇದ್ಯಮಾಡಿಯೇ ಅನ್ನ ತಿನ್ನುವ ಸಮಯ ಬರುವದಿಲ್ಲ. ನಾವೇ ಹುಟ್ಟಿ ಹಾಕೋಣ. ಆ ಕಡೆ ಗಮನ ಹರಿಸೋಣ. ಅನ್ನದಿಂದ ಆರಂಭಿಸಿ ಎಲ್ಲವನ್ನೂ ವರಕೊಡುವ ದೇವತೆಗಳಿಗೆ ವರಪ್ರದನಾದ ಶ್ರೀಹರಿಗೆ ನಮ್ಮ ನಮ್ಮ ನಿತ್ಯದ ನೂರು ಬೇಡಿಕೆಗಳಲ್ಲಿ ಈ ಬೇಡಿಕೆಯನ್ನೂ ಸೇರಿಸಿಕೊಳ್ಳೋಣ........

*ಸಂ. ✍🏽✍🏽✍ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*