*ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು💐💐💐*

*ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು💐💐💐*

(ನಾಲಕು ವರ್ಷದ ಹಳೆಯ ಲೇಖನ)

"ನಾನು ಹೋದರೆ ಹೋದೆನು" ಕನಕ ದಾಸರ ಪ್ರಸಿದ್ಧಮಾತು. ನನ್ನಲ್ಲಿ ಬೀಡುಬಿಟ್ಟಿರುವ, ನನ್ನನ್ನು ತನ್ನ ದಾಸನನ್ನಾಗಿ ಇಟ್ಟು ಕೊಂಡ,  ನನ್ನನ್ನು ಆಳುತ್ತಿರುವ "ನಾನು ಅಹಂಕಾರ". ಈ ಅಹಂಕಾರ ಹೋದರೆ ನಾನು ಹೋಗುವೆ. ಅಂದರೆ ಮುಕ್ತನಾಗುವೆ. ಅಂದರೆ  ಕೇವಕ ದೈವಾಧೀನನಾಗಿ ಸ್ವತಂತ್ರನಾಗಿ ಬಾಳುವೆ.  ಅಹಂಕಾರವನ್ನು ಓಡಿಸಿ ಸ್ವತಂತ್ರರಾಗುವ ಸನ್ನಿವೇಶ ಇಂದು ಬಂದಿದೆ.

ನನ್ನ  ಭೂಮಿ, ನನ್ನ ದೇಹ, ನನ್ನ ಇಂದ್ರಿಯ ಮನಸ್ಸುಗಳು, ವಿದ್ಯೆ, ಧನ, ಕನಕ,  ಮೊದಲಾದ ಎಲ್ಲವೂ ನಾನು ಸಂಪಾದಿಸಿರುವದೆ. ಆದರೆ ಅವುಗಳನ್ನು ಆಳುವದು ಮಾತ್ರ ಅಹಂಕಾರ.  ಇಂತಹ ಅಹಂಕಾರ ಎಂದು ನನ್ನಿಂದ ಹೊರ ಹೋಗುತ್ತದೋ ಅಥವಾ ನಾನು ಎಂದು   ಹೊರ ಹಾಕುತ್ತೆನೆಯೋ ಅಂದೆ ನಾನು ಸ್ವತಂತ್ರ. ಇಲ್ಲವಾದಲ್ಲಿ ನಾನು ಇನ್ನೊಬ್ಬರ ಅಂದರೆ ಅಹಂಕಾರದ ಆಳೆ.

"ನಾನು ಅಪರಾಧಿ ಖರೆ.. ಆದರೆ ಆ ಅಪರಾಧಗಳು ಹೆಚ್ಚು ಪ್ರತಿಶತ ಅಹಂಕಾರದಿಂದಲೇ ಘಟಿಸಿವೆ. ಕೆಲವೆ ನನ್ನ ಅಜ್ಙಾನದಿಂದ. ಅಹಂಕಾರವೇ  ನನ್ನಿಂದ ಒತ್ತಾಯಪೂರ್ವಕ ಮಾಡಿಸಿದೆ" ಇದು ನಿಶ್ಚಿತ.

ಹೀಗಾಗಲು ಕಾರಣ ನನ್ನದೊಂದು ಊಹೆ...
ಒಂದು ದಿನ ನನ್ನಲ್ಲೇ ಒಂದು ನ್ಯಾಯಾಲಯ ನಿರ್ಮಾಣ ಮಾಡಿಕೊಂಡೆ. ನ್ಯಾಯಾಲಯದ ಅಪರಾಧಿಸ್ಥಾನದ ಕಟಕಟೆಯಲ್ಲಿ ಅಹಂಕಾರವನ್ನು ನಿಲ್ಲಿಸಿದೆ.

ವಾದಿ..  ಇಂದು ಬಂದ ಈ  ಅಹಂಕಾರ ನನ್ನನ್ನು ಲೂಟಿ ಮಾಡಿ ಹಾಕಿದೆ. ನನ್ನಿಂದ ನೂರಾರು ಅಪರಾಧಗಳನ್ನು ಮಾಡಿಸಿ, ನನ್ನನ್ನೇ ದೋಷಿಯನ್ನಾಗಿ ಮಾಡಿದೆ. ಕಷ್ಟಪಟ್ಟು ಧರ್ಮವನ್ನೋ ದಾನವನ್ನೋ ಮಾಡುವವ ನಾನು. ಅದನ್ನು ಕೆಡಿಸುವದು ಅಹಂಕಾರ . ವಿದ್ಯೆ ಧನ ಸಂಪಾದನೆ ನಂದು. ಅದನ್ನು ಹಾಳು ಮಾಡುವದು ಅಹಂಕಾರ. ಈ ಅಹಂಕಾರವನ್ನು ಹೊರ ಹೋಗುವಂತೆ ಮಾಡಿ, ಎನಗೆ ಅಹಂಕಾರದಿಂದ ಮುಕ್ತಿ ಕೊಡಿಸಿ ಎಂದು ಗೋಪಾಲನ ವಿಜ್ಙಪ್ತಿ.

ನ್ಯಾಯಾಧೀಶ.. ಓ ಅಹಂಕಾರ !! ಇವನಲ್ಲಿ ಎಂದು ಬಂದು ಸೇರಿದಿ.. ??

ಅಹಂಕಾರ. .. ಅವನು ಹುಟ್ಟಿದ ದಿನವೇ.

ನ್ಯಾ.. ಬಲಿಷ್ಠ ಎಂದು ಆದಿ.. ?? ನಿನ್ನನ್ನು ಇಷ್ಟು ಬಲಿಷ್ಠ ಯಾರು ಮಾಡಿದರು..??

ಅ.. ಗೋಪಾಲ ಬೆಳೆದ  ಹಾಗೆ ನಾನೂ ಬೆಳಿತಾ ಸಾಗಿದೆ. ನನ್ನನ್ನು ಇಷ್ಟು ಬಲಿಷ್ಠನನ್ನಾಗಿ ಮಾಡಿದವನು ಈ ಗೋಪಾಲನೆ.

ನ್ಯಾ.. ಗೋಪಾಲನದೇ ಆದವುಗಳು ದೇಹ ಇಂದ್ರಿಯ ಮನಸ್ಸುಗಳು. ಅಲ್ಲಿ  ನೀ ಯಾಕಿದ್ದೀ ನಿನಗೇನು ಕೆಲಸ.??

ಅ.. ಓ ದೇವರೆ! ! ಈ ವಾದಿ ಹುಟ್ಟಿದ ಕ್ಷಣದಲ್ಲಿಯೇ ನಾನು ಮತ್ತು ನನ್ನ ಮಿತ್ರ ಇಬ್ಬರು ಬಂದೆವು. ಮಿತ್ರ ಮಹಾ ಬಲಿಷ್ಠ. "ನಗು ನಗುತ್ತಾ ನನ್ನ ಸಮಯ ಬಂದಾಗ ನಾ ಬರುವೆ" ಎಂದು ಹೇಳಿ ಹೊರಟು ಹೋದ. ಅವನ ಹೆಸರು ಮೃತ್ಯು.

ನಾನೋ ತುಂಬ ಆಲಸಿ.  ನನಗೆ ಪೋಷಕರೊಬ್ಬರು ಬೇಕು. ಎಲ್ಲಿ ನನ್ನನ್ನು ಪೋಷಣೆ ಮಾಡುತ್ತಾರೆ ಅಲ್ಲಿ ನಾ ಬೆಳೆಯುತ್ತೇನೆ. ಎಲ್ಲಿ ಪೋಷಣೆ ಸಿಗುವದಿಲ್ಲ ಅಲ್ಲಿ ನಾ ಇರುವದಿಲ್ಲ ಹೊರಟೇ ಹೋಗಿ ಬಿಡುತ್ತೀನಿ. ಹೀಗಿರುವಾಗ ನನ್ನನ್ನು ಪೋಷಣೆ ಮಾಡಿರುವವರು ಈ ವಾದಿಯೇ ಆಗಿರುವಾಗ ನನಗೇಕೆ ಅಪರಾಧಿಸ್ಥಾನ... ??

ನ್ಯಾ... ಗೋಪಾಲ! ! ಅಹಂಕಾರಕ್ಕೆ ಆಹಾರವನ್ನು ಒದಗಿಸಿ ಪಾಲಿಸಿ ಪೋಷಿಸಿದವ ನೀನೆ ತಾನೆ.. ??

*ನಿನ್ನದಲ್ಲದ ಪದಾರ್ಥವನ್ನು ನೀನು ಎಷ್ಟು ಪೋಷಿಸಿದರೂ, ಅದು ನಿನ್ನನ್ನು ತುಳಿಯುತ್ತದೆ.* ನಿನ್ನದಲ್ಲದ ರೋಗ,  ರುಜಿನ, ಅಜ್ಙಾನ, ದಾರಿದ್ರ್ಯ ಇವುಗಳನ್ನು ಹೊರ ಓಡಿಸಲು ಶ್ರಮ ಪಡುತ್ತಿಯಾ ?? ಅಥವಾ ಪೋಷಣೆ ಮಾಡುತ್ತೀಯಾ.. ?? ಹೊರ ಓಡಿಸುತ್ತೀಯಲ್ಲವೆ... ಹಾಗೆಯೇ ಈ ಅಹಂಕಾರವನ್ನು ಪೋಷಿಸದೆ, ಹೊರ ಓಡಿಸು.

ವಾದಿ... ಖಂಡಿತಾ..

ನ್ಯಾ.. ಹಾಗಾದರೆ ನಿನ್ನಲ್ಲಿರುವ, ನಿನ್ನದಲ್ಲದ ಈ ಅಹಂಕಾರವನ್ನು ಪೋಷಿಸದೆ ಇರು. ಹೊರ ಓಡಿಸಲು ಶ್ರಮಿಸು.

ವಾದಿ..) ಉಪಾಯವೇನು...‌????

ನ್ಯಾ...)  ಅಧ್ಯಾತ್ಮಬಲವನ್ನು ಒಗ್ಗೂಡಿಸಿಕೊ. ಅಧ್ಯಾತ್ಮಬಲಕ್ಕೆ ತಲೆಬಾಗದ ವಸ್ತುವೇ ಇಲ್ಲ. ಅಧ್ಯಾತ್ಮಬಲ ಎಂದರೆ ದೇವರು, ರಮೆ, ವಾಯುದೇವರು, ರುದ್ರೆಂದ್ರಾದಿ ಸಕಲ ದೇವತೆಗಳ ಬಲ ಎಂದರ್ಥ. ಇವರೆಲ್ಲರೂ ನಿನಪರವಾಗಿ, ನಿನ್ನ ಬಲ ಎಂದಾಗಿ ತಿಳಿ. ಜೊತೆಗೆ ನೀನ್ನ ತಪಸ್ಸು, ಪುಣ್ಯ ಇವುಗಳು ಮತ್ತೊಂದು ಬಲ. ಇವುಗಳೊಟ್ಟಿಗೆ ಇಂದಿನ ನಿನ್ನ ವಿನಯಾದಿ ಗುಣಗಳು. ಇವುಗಳ ಸಮಾಹಾರ ಒಂದುಗೂಡಿಸುವಿಕೆಯೆ ಅಧ್ಯಾತ್ಮಬಲ.

ಇಂತಹ ಅಧ್ಯಾತ್ಮ  ಬಲದಿಂದ ನಿನ್ನನ್ನು ಆಳುವ ಅಹಂಕಾರವನ್ನು ಎಂದು ನೀನು ಎಂದು ಓಡಿಸುತ್ತೀಯೋ ಅಂದೆ ನೀ ಸ್ವತಂತ್ರ.

ನೀನ್ನ ಎಷ್ಟೂ ಸಾಧನೆ ಉಳಿಯುತ್ತದೆ. ಪರರ ಪಾಲಾಗದು. ನಾಶವಾಗುವದಿಲ್ಲ. ಧರ್ಮಕ್ಕೆ ಅನುವಾಗುತ್ತದೆ. ಅಪಾರ ಪುಣ್ಯದ ರಾಶಿಬೆಳೆಯುತ್ತದೆ. ಪಾಕರ್ಮಗಳ ಘಟಿಸದು.  ಸುಖ ನೆಮ್ಮದಿ ನಿನ್ನ ವಶವಾಗುತ್ತವೆ. ಇಷ್ಟು ಆದಾಗ ನಿನ್ನ ಅಹಂಕಾರ ತನ್ನಷ್ಟಕ್ಕೆ ತಾನೇ ದೂರವಾಗಿರುತ್ತದೆ.  ಇದುವೇ ಸಣ್ಣ ನ್ಯಾಯಾಲಯದ ನಿರ್ಣಯ. ಇನ್ನೂ ಸ್ಪಷ್ಟ ನಿರ್ಣಯ ಬೇಕಾದರೆ ಸರ್ವೊಚ್ಚ ನ್ಯಾಯಾಲಯ ನಿನ್ನ ಗುರುಗಳ ಬಳಿ ತೆರಳು ಎಂದು ಹೇಳಿ ನ್ಯಾಯಾಧೀಶರು ವಿರಮಿಸುತ್ತಾರೆ.

ಅಹಂಕಾರದೊಟ್ಟಿಗೆ  ಹೋರಾಡಲು ಬೇಕಾದ  ಅಧ್ಯಾತ್ಮಬಲದ ಅಭಿವೃದ್ಧಿಗಾಗಿ ಶಾಸ್ತ್ರಾಧ್ಯಯನದಲ್ಲಿ ತೊಡಗಿಕೊಳ್ಳುವದು, ಧ್ಯಾನ- ಜಪ- ಚಿಂತನೆ- ಮೊದಲಾದವರುಗಳಲ್ಲಿ ತೊಡಗಿಸಿಕೊಳ್ಳುವದು, ಏಕಾದಶಿ - ವಿಷ್ಣುಪಂಚಕ- ಜನ್ಮಾಷ್ಟಮಿ ಮೊದಲಾದ ಉಪವಾಸ ಸತ್ಯಾಗ್ರಹ ಮಾಡುವದು, ನಿತ್ಯವೂ ಸಂಧ್ಯಾವಂದನೆ ಗಾಯತ್ರೀ ಮೊದಲಾದವುಗಳಲ್ಲಿ ತೊಡಗುವದು, ಗುರುಗಳಲ್ಲಿ ಹಾಗೂ ತಂದೆ ತಾಯಿ ಅತ್ತೆ ಮಾವ ಹಿರಿಯರು ಮುಂತಾದವರುಗಳಲ್ಲಿ ವಿಧೆಯದಿಂದಿರುವದು, ಇತ್ಯಾದಿಗಳನ್ನು ಅಳವಡಿಸಿಕೊಂಡಾಗ  ಮುಂದೊಂದು ದಿನ ಅಹಂಕಾರದಿಂದ ದೂರಾಗಿ ಸ್ವತಂತ್ರನಾಗಿ ನೆಮ್ಮದಿಯ ಜೀವನವನ್ನು ಸಾಗಿಸುವಂತ ಆಗಿಯೇ ತೀರುತ್ತಾನೆ..... 😊 😊 😊

ಇಂದು ನಾಗರ ಪಂಚಮಿ. ಶೇ಼ದೇವರ ಆರಾಧನೆ. ಪೌರೆಷೆಯವಾದ ಮಹಾಭಾರತ, ಭಾಗವತ, ಬ್ರಹ್ಮಸೂತ್ರ ಮೊದಲಾದ ಶಾಸ್ತ್ರಗಳನ್ನು ಓದುವ ಮನಸ್ಸು ಕೊಡುವವರೇ ಶೇಷದೇವರು. ಈ ಶೇಷ ದೇವರೇ ಹಿಂದನ ಜನ್ಮದಲ್ಲಿ ಅಹಂಕಾರಾಭಿಮಾನಿಗಳು. ಅವರ ಅನುಗ್ರಹ ದಯೆ ಇದ್ದರೆ ಅಹಂಕಾರ ಸುಳಿಯದು. ಶೇಷದೇವರ ವಿಶೇಷ ಪೂಜೆ ಆರಾಧನೆಯನ್ನು ಮಾಡಿ,  ಶಾಸ್ತ್ರಾಧ್ಯಯನದ ಸಂಕಲ್ಪವನ್ನೂ ಮಾಡಿ ಅಹಂಕಾರವನ್ನು ಓಡಿಸುವ ಸಂಕಲ್ಪವನ್ನಂತೂ ಮಾಡೋಣ.

✍🏽✍🏽✍🏽ನ್ಯಾಸ....💐💐
ಗೋಪಾಲದಾಸ.
ವಿಜಯಾಶ್ರಮ. ಸಿರವಾರ

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*