ನಾಗ ಚೌತಿಗೆ ನಾಗಪ್ಪನಿಗೆ ಹಾಲು ಹಾಕುವದು waste ಅಲ್ಲವೇ.....??*


*ನಾಗ ಚೌತಿಗೆ ನಾಗಪ್ಪನಿಗೆ ಹಾಲು ಹಾಕುವದು waste ಅಲ್ಲವೇ.....??*
ಇಂದಿನಿಂದ ಶ್ರಾವಣ ಮಾಸ ಆರಂಭ. ತುಳಸೀವಿವಾಹದ ವರೆಗೆ ಹಬ್ಬಗಳ ಸುಗ್ಗಿ. ಹಬ್ಬ ಎಂದಮೇಲೆ ದೇವರಿಗೆ, ದೇವತೆಗಳಿಗೆ, ರಾಯರು ಮೊದಲಾದ ಗುರುಗಳಿಗೆ ಕರೆಯುವದು, ಆವಾಹಿಸುವದು, ಆರಾಧಿಸುವದು, ಉಪಚರಿಸುವದು ಸಹಜ. ಅದೇರೀತಿಯಾಗಿ ಬಂಧುಗಳನ್ನು ಬಾಂಧವರುಗಳನ್ನು, ಗೆಳೆಯ ಮಿತ್ರರನ್ನೂ ಕರೆಯುವದು ಉಪಚರಿಸುವದು ಇದ್ದದ್ದೇ ಇದೆ.
*ನಾಗನ ಹುತ್ತಕ್ಕೋ, ಕಲ್ಲಿನ ನಾಗನ ಮೂರ್ತಿಗೋ ಹಾಲು ಸುರಿವ ಬದಲು, ಹಾಲು ಕಾಣದ ಬಡಮಕ್ಕಳಿಗೆ ಕೊಡುವದು ಉತ್ತಮವಲ್ಲವೇ.... ????*
*ಮೂಢನಂಬಿಕೆಯ ಕೆಟ್ಟ ಆಚರಣೆಗಳನ್ನು ಬಿಡುವವರಿಗೂ ಹಿತವಿಲ್ಲ.... ???* ಹೀಗೆ ಅನೇಕ  ಪ್ರಶ್ನೆಗಳು ತೂರಿಬರುತ್ತವೆ. ಈ ತರಹದ ಪ್ರಶ್ನೆಗಳನ್ನು ಎತ್ತುವದು ಈಗಿನ ಕಾಲದ ಹವ್ಯಾಸವಾಗಿದೆ. ಮೇಲ ನೋಟಕ್ಕೆ ಇದು ಸೂಕ್ತ ಎಂದೆನುಸುತ್ತದೆ.
ನಮ್ಮ ಸಮಾಜ ಮೂಢವಲ್ಲ. ನಮ್ಮ ಸಮಾಜದ ಆಚರಣೆಗಳು ಅತ್ಯಂತ ಪ್ರಾಮಾಣಿಕ, ಹಾಗೂ ಅತ್ಯಂತಸೂಕ್ತ.
*ಬಂದದ್ದನ್ನು ಹಂಚಿಕೊಂಡು ತಿನ್ನು* ಎಂದೇ ಸಾರುವದು ನಮ್ಮ ಸಮಾಜ. ನಿನಗೆ ನೀನು ಸರ್ವಥಾ ಸ್ವತಂತ್ರನಲ್ಲ. ನೀನು ಸ್ವತಂತ್ರನೇ ಆಗಿದ್ದರೆ ನೀನು ಬಯಸಿದ್ದನ್ನು ಪಡೆದು ತೀರುತ್ತಿದ್ದಿ. ಬಯಸಿದ ಯಾವದನ್ನೂ ಪಡೆಯಲು ಸಾಧ್ಯವಾಗಲ್ಲ. ಇದರರ್ಥ ನಿನ್ನ ಯಾವ ಅಪೇಕ್ಷೆಗಳನ್ನೂ ಈಡೇರಿಸಿಕೊಳ್ಳಲು ನೀನು ಅಸಮರ್ಥ. ಹಾಗಾದರೆ ಸಮರ್ಥರ ಬೆಂಬಲ ಬೇಕು. ಏನು ಪಡೆದಿದ್ದೀಯಾ ಸಮರ್ಥರ ಬೆಂಬಲದಿಂದಲೇ.
*ಸಮರ್ಥರು ಯಾರು... ???*
ಅಂತರ್ಯಾಮಿಯಾಗಿದ್ದು ಪ್ರೇರಿಸಿ, ಪ್ರಚೋದಿಸಿ, ಶಕ್ತಿ ಕೊಟ್ಟು, ಆ ಆ ಪದಾರ್ಥಗಳ್ಲಿ ಪ್ರೀತಿ, ದ್ಚೇಶ ಬೆಳಿಸಿ, ಇದು ಹಿತ, ಇದು ಅಹಿತ, ಇದು ಇಷ್ಟ, ಇದು ಅನಿಷ್ಟ, ಇದು ಹೇಯ, ಇದು ಉಪಾದೇಯ ಇತ್ಯಾದಿ ಬುದ್ಧಿಕೊಟ್ಟವರು ದೇವತೆಗಳು ಹಾಗೂ ದೇವರು. ಅವರುಗಳೆ ನಿನಗೆ ಯೋಗ್ಯವಾದದ್ದನ್ನು ದೊರಕಿಸಿಕೊಡಲು ಸಮರ್ಥರು.
*ಕೃತಜ್ಙತಾ ಸಮರ್ಪಣೆ*
ಆ ಕಾರಣದಿಂದಲೇ *ದೇವರಿಗೆ ಹಾಗೂ ದೇವತೆಗಳಿಗೆ, ಮತ್ತು ವಿದ್ಯೆಕೊಟ್ಟ  ಗುರುಗಳಿಗೆ, ನನ್ನ ಸಂಪಾದನೆಯಲ್ಲಿ ನಿಮ್ಮ ಪಾಲೂ ಇದೆ. ಅಂತೆಯೇ ನಾನು ಸಂಪಾದಿಸಿದ ದ್ರವ್ಯವನ್ನು ನಿಮಗೂ ಅರ್ಪಿಸುವೆ, ನಿಮ್ಮ ಜೊತೆಗೆ ಹಂಚಿಕೊಂಡು ಭೋಗಿಸುವೆ. ಈ ತರಹದ ಪರಿಶುದ್ಧ ಕ್ರಮ ನಮ್ಮದು. ಈ ತರಹದ ಕಾರ್ಯಕ್ಕೆ ಪೂಜೆ, ಸಮರ್ಪಣೆ, ಆರಾಧನೆ ಎಂದು ಶಾಸ್ತ್ರ ಕರಿಯುತ್ತದೆ.
*ಆಸ್ತಿಕರು ಬಡವರ ವಿರೋಧಿಗಳ.... ???*
ಸರ್ವಥಾ ಅಲ್ಲ. ದೇವರ ದೇವತೆಗಳ ಪೂಜೆಯ ನಂತರ, ಅವರುಗಳಿಗೆ ಸಮರ್ಪುಸಿದ ನಂತರ ಅಗ್ನಿ(ವೈಶ್ವದೇವ), ಪ್ರಾಣಿ (ಗೋಗ್ರಾಸ), ವೃಕ್ಷ (ತುಳಸೀ ಪೂಜೆ), ಜಲ (ಗಂಗಾ ಪೂಜೆ) ಸಂನ್ಯಾಸಿ(ಹಸ್ತೋದಕ), ಭಿಕ್ಷುಕ(ಭಿಕ್ಷೆ), ಹೀಗೆ ಸಮರ್ಪಿಸುವದು,  ಹಂಚುವದು ಇದ್ದೇ ಇದೆ. ನಂತರ ಬ್ರಾಹ್ಮಣ ಸುವಾಸಿನೀಯರುಗಳಿಗೆ (ಸಾಕ್ಷಿಭೋಜನ) ಈ ಎಲ್ಲರಿಗೂ ಸಮರ್ಪಿಸುವ ಪರಿಪಾಠ ಇಂದಿಗೂ ನಮ್ಮಲ್ಕಿ ಇದೆ.  ಬಂಧುಬಾಂಧವರನ್ನೂ, ಸ್ನೇಹಿತರನ್ನೂ ಕರೆದು ಊಟಕ್ಕೆ ಹಾಕಿ ನಾವು ಊಟಮಾಡುವದು ಕ್ರಮ.
*ಲಾಭವೇನು... ??*
ಈ ರೀತಿಯಾಗಿ "ಹಂಚಿ ಉಣ್ಣುವದರಿಂದ" ನಾವೂ ಹಾಗೂ ನಮ್ಮ ಸಮಾಜ ಧಾರ್ಮಿಕ, ಸಾತ್ವಿಕ ವಾತಾವರಣದಲ್ಕಿ ಬೆಳೆಯುತ್ತದೆ. ನಮ್ಮಲ್ಲಿ ನಮ್ಮ ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ  ಈ ಎಲ್ಲದರಲ್ಲಿಯೂ ಘನತರ ದೃಢ ಸಮೃದ್ದ ಬಾಂಧವ್ಯ ಅಭಿವೃದ್ಧಿಸುತ್ತದೆ. ಇತ್ಯಾದಿ ನೂರಾರು ಕಾರಣಗಳೂ ಇವೆ.  ನೂರಾರು ಲಾಭಗಳು ಇವೆ. ಆ ನಿಮಿತ್ತಕವಾಗಿಯೇ ಹಬ್ಬದ ಆಚರಣೆಗಳು ಬಂದದ್ದು ಇದೆ. ಆದ್ದರಿಂದ ನಾಗಪ್ಪನಿಗೆ ಗಣಪ್ಪನಿಗೆ ಕೃಷ್ಣನಿಗೆ ಸಮರ್ಪಿಸುವ ಯಾವ ಪದಾರ್ಥವೂ ಸರ್ವಥಾ waest ಅಲ್ಲ. ಅವಶ್ಯವಾಗಿ ಸಾರ್ಥಕವೇ ಆಗಿದೆ.
*ನಮಗೆ ಪ್ರಶ್ನಿಸುವರಲ್ಲಿಯೂ ಈ ತರಹ ಇದೆ*
ದೇವತೆಗಳಿಗೆ ಸಮರ್ಪಿಸುವ 10 ml ltr ಹಾಲು, ೧೦ ಗ್ರಾಮ ಅನ್ನ weast , ಎಂದು ಬೀಗುವ ಬುದ್ಧಿಜೀವಿಗಳಲ್ಲಿಯೂ ಇದು ಇಂದಿಗೂ ಇದೆ. ನಮ್ಮ ಕಾರ್ಯದಲ್ಕಿ ಸಹಾಯ ಮಾಡಿದ, ಗೆಳೆಯ, ಗೆಳತಿ, ಬಂಧು, ಬಾಂಧವರೊಟ್ಟಿಗೆ ಹಂಚಿಕೊಂಡು ತಿನ್ನುವ, ಕುಡಿಯುವ,  ಪರಿಪಾಠ ಜಗತ್ತಿನಲ್ಲಿ ಇದೆ‌. ಇದಕ್ಕೆ ಇಟ್ಟ ಹೆಸರು pub party ಎಂದು. ಕಾರ್ಯ ಸಾಧಿಸಿಕೊಳ್ಳುವದಕ್ಕಾಗಿ ಕೊಡುವದೂ ಇದೆ ಅದಕ್ಕೆ ಇಟ್ಟುಕೊಂಡ ಹೆಸರೇ ಲಂಚ...
*ಮರು ಪ್ರಶ್ನೆಗಳು....*
ನಾವು ಮಾಡುವದು  ಮಾಡುವದು waste ಅಲ್ಕವೆ... ?? ಮನರರಂಜನೆಗೋಸ್ಕರ film, mall, IPL,  ಇವುಗಳಲ್ಲಿ ಅಲೆದಾಡುವದು waste ಅಲ್ಲವೇ... ?? ವಿನಾಕಾರಣ waste ಎಂದು ಹೇಳುವದಾದರೆ party pub ಗಳಲ್ಲಿ ಖರ್ಚು ಮಾಡುವದು waste ಅಲ್ಕವೆ... ?? ಮನರರಂಜನೆಗೋಸ್ಕರ film, mall, IPL,  ಇವುಗಳಲ್ಲಿ ಅಲೆದಾಡುವದು waste ಅಲ್ಲವೇ... ?? ವಿನಾಕಾರಣ WhatsApp Facebook twitter ಮುಂತಾದವುಗಳಲ್ಲಿ ಹಣ ಹಾಗೂ ಸಮಯ ಹಾಕುವದು waste ಅನ್ನಿಸಲಿಲ್ಲವೆ.... ???  ಒಬ್ಬ ಫಿಲ್ಮ ನಟ ಒಂದು ಸಿಮಾ ಮಾಡಿ, globle weast ಎಂದು ಬೀಗಿದ ಮಾತ್ರಕ್ಕೆ ಅವನಿಗೇನೆ ಕೋಟಿ ಕೋಟಿ ಹಣ ಸುರಿದಿದ್ದು waste ಅನ್ನಿಸಲಿಲ್ಲವೆ...?? ಒಂದೇ film ಗೆ ನೂರಾರು ಕೋಟಿ ಎಂದರೆ ಹತ್ತಾರು film ಗಳಿಗೆ ??? ಅಂತಹ ನೂರಾರು ನಾಯಕರುಗಳಿಗೆ ಕೋಟಿ ಕೋಟಿ ಸುರಿಯುವದು waste ಅನ್ನಿಸಲಿಲ್ಲವೇ ??  *ಈ ಎಲ್ಲ ಹಣವನ್ನು poor ಮಂದಿಗೆ ಸಲ್ಲಿಸಬಹುದಿತ್ತಲ್ಲವೆ...??* ಈ ತರಹದ ನೂರಾರು ಸಾವಿರಾರು ಪ್ರಶ್ನೆಗಳು ಇವೆ. ಅದಕ್ಕೇನು ಉತ್ತರ... ??
*ಹಾಗಾದರೆ ನಮಗೂ ನಿಮಗೂ ಏನು ವ್ಯತ್ಯಾಸ...??*
ನಾವು ಕೊಡುವದರಿಂದ ದೇವ, ದೇವತೆ, ಗುರು, ಬ್ರಾಹ್ಮಣ ಶ್ರೀಮಂತರಾಗಿಲ್ಲ. ನಾವು ಕೊಟ್ಟಿದ್ದಕ್ಕೆ ಅವರು ಹೊಟ್ಟಿಗೆ ಕಂಡಿದಾರೆ ಎಂದಿಲ್ಲ. ಹಾಗಾದರೆ ಕೊಡುವದು ಏನಕೆ.. ?? *ಕೇವಲ‌ ಕೃತಜ್ಙತಾ ಸಮರ್ಪಣೆಗೆ ಮಾತ್ರ* ನಾವು ಕೊಟ್ಡ ಅನ್ನವನ್ನೊ ಹಾಲನ್ನೋ ಯಾವ ದೇವತೆಯೂ ಸ್ವೀಕರಿಸಿಲ್ಲ. ನಮಗೋಸ್ಕರವೇ ಬಿಟ್ಟು ಹೋಗಿದಾನೆ. ಅನ್ನವನ್ನು ಬಿಡುವದರ ಜೊತೆಗೆ ಮಹಾ ಫಲವನ್ನೂ ಕೊಟ್ಟು ಹೋಗಿದಾರೆ. *"ಸಕೃತ್ಸಮರ್ಪಣಾದೇವ ಹ್ಯನಂತ ಫಲದೋ ಹರಿಃ"* *"ಕೊಟ್ಟದನು ಅನಂತಮಡಿ ಕೊಡುವ"* ಇದು ನಿಯಮ ದೇವತೆಗಳಿಗೆ ಗುರುಗಳಿಗೆ ಆದರೆ, ಎದರು ಕೂತ ಬ್ರಾಹ್ಮಣ, ಸುವಾಸಿನಿ, ಸನ್ಯಾಸಿ, ಭಿಕ್ಷುಕ, ಗೋ, ತುಳಸಿ, ಗಂಗೆ ಮೊದಲಾದವರಲ್ಲಿ ಅನೇಕ ಭಗವದ್ರೂಪಗಳ ಸನ್ನಿಧಾನದ ಚಿಂತನೆ ಇದೆ. ಅಂತೆಯೇ ಆ ಎಲ್ಲರಲ್ಲೂ ತುಂಬ ಆದರ, ಅಪಾರ ಗೌರವವೂ ಸೆರಿಕೊಂಡಿರತ್ತೆ. ಇದು ನಮ್ಮದು ಆದರೆ....
ನಿಮ್ಮಲ್ಲಿ ಹಾಗಿಲ್ಲ ನೀವು ಸುರಿವ ಹಣದಿಂದಲೇ ಅವರು ಶ್ರೀಮಂತರು. ಅವರಿಂದ ನಿಮಗೆ ಸಿಗುವದು‌ ನಿಮ್ಮ ಹಾನಿಯೇ ಹೊರತು. ಹಿತವೆಂಬುವದು ಕನಸಿನಲ್ಲಿಯೂ ಇರದು. ತಾವು ತಮ್ಮ ಬೇಳೆ ಬೇಯಿಸಿಕೊಳ್ಳಲು ಈವತೆರನಾದ ಹೊಸ ಹವ್ಯಾಸ ಬೆಳಿಸಿಕೊಂಡಿದ್ದೇ ಹೊರತು, ತಮ್ಮ ಆಚರಣೆಯಲ್ಲಿ ಸುತರಾಂ ಇರುವದಿಲ್ಲ.
"ಮೊಂಡು ವಾದ ಹಾಕುವದರಿಂದ, ವೇದ, ಶಾಸ್ತ್ರ, ಸತ್ಸಂಪ್ರದಾಯ ನಿಂದಿಸುವದರಿಂದ ಕೀರ್ತಿ ಬರಬಹುದು ಎಂಬ ಕೀರ್ತಿ ಲಾಲಸೆಯಿಂದ ಮಾತ್ರ" ಈ ತರಹದ ವಾದಗಳು.
ಈ ತರಹದ ವಾದಗಳಿಗೆ ತಲಿಕೊಡದೆ, ಶಾಸ್ತ್ರ ಹೇಳಿದ ಹಾಗೂ ಹೇಳಿದಂತೆ  ನಾಗಚೌತಿ, ಗಣಪತಿಪೂಜೆ, ಕೃಷ್ಣಾಷ್ಟಮಿ, ರಾಯರ ಆರಾಧನೆ, ಪಿತೃಗಳ ಆರಾಧನೆ, ಶ್ರೀನಿವಾಸನ ಆರಾಧನೆ, ತುಳಸೀವಿವಾಹ ಮೊದಲಾದ ಎಲ್ಲ ಆಚರಣೆಗಳನ್ನು ಆಚರಿಸುತ್ತಾ, ದೇವ, ದೇವತೆ, ಗುರು, ಗೋ, ಗಂಗೆ, ತುಳಸಿ, ಸನ್ಯಾಸಿ, ಬ್ರಾಹ್ಮಣ, ಬಂಧು, ಬಾಂಧವರೊಂದಿಗೆ ಹಂಚಿಕೊಂಡು ಸುಖ, ಸಮೃದ್ಧಿ, ನೆಮ್ಮದಿಯ ಸಾರ್ಥಕ ಜೀವನದ ಕ್ರಮವನ್ನು ಅನುಸರಿಸೋಣ.
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*