*ಮಂದಭಾಗ್ಯರಿಗೆ ದೊರೆಯದಿವರ ಮಹಾ ಸೇವಾ.....*
*ಮಂದಭಾಗ್ಯರಿಗೆ ದೊರೆಯದಿವರ ಮಹಾ ಸೇವಾ.....*
ಮಹಾಜ್ಙಾನಿಗಳು, ದೇವಾಂಶಸಂಭೂತರು. ಕೋಟಿ ಕೋಟಿ ಗುಂಣವಂತರು. ನಿತ್ಯ ನಿರಂತರ ಭಗವಾರಾಧಕರು. ದುರ್ವಾದಿ ಖಂಡನಪ್ರವೀಣರು. ಸ್ವಮತ ಸ್ಥಾಪಕರು. ಶ್ರೀಮದಚಾರ್ಯರ ಹಾಗೂ ಶ್ರೀಮಟ್ಟೀಕಾಕೃತ್ಪಾದರ ನಿರಂತರ ಆರಾಧಕರು. ಭಕ್ತಾಭೀಷ್ಟಪ್ರರೂ ಆದ ಗುರುಸಾರ್ವಭೌಮರಾದ ಶ್ರೀಶ್ರೀ ೧೦೦೮ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ, ಇಂದಿನಿಂಸ ಮೂರುದಿನಗಳ ಕಾಲ ವೈಭವದಿಂದ ಸಾಗುತ್ತದೆ.
ಪುಣ್ಯವಂತರ ಸೇವೆ, ಪುಣ್ಯವಂತರಿಗೇ ಸಿಗುವದು. ಪುಣ್ಯವಂತರನ್ನು ಮೆಚ್ಚಿಸುವವರೂ, ಪುಣ್ಯವಂತರೆ. ರಾಯರಿಗೆ ಪ್ರಿಯವಾದದ್ದನ್ನು ಬೇಡುವವರೂ ಪುಣ್ಯವಂತರೇ. ಅಂತೆಯೇ ದಾಸರು ಕೊಂಡಾಡಿದರು *ಮಂದಭಾಗ್ಯರಿಗೆ ದೊರಕಿದವರ ಮಹಾ ಸೇವಾ* ಎಂದು. ಸ್ವಾರ್ಥವೇ ಉದ್ದೇಶ್ಯವಾಗಿ ಇರುವ ಸೇವೆಯೇ ದೊರೆಯದು ಎಂದಾರೆ, ಅವರ ಪ್ರೀತ್ಯರ್ಥಕ ಅವರ ಮಹಿಮೆ ತಿಳಿದುಕೊಳ್ಳುವದು ದೂರದ ಮಾತು. ಆದರೂ ಕೆಲ ಗುಣಗಳ ಮಹಿಮೆಯನ್ನು ತಿಳಿಯೋಣ.
*ಜ್ಙಾನ*
ಎಂದೂ ಬತ್ತದ ಜ್ಙಾನ ಗಂಗೆ ರಾಯರು. *ದೇವದೀನಾಮಗಮ್ಯಂ* ದೇವತೆಗಳಿಗೂ ತಿಳಿಯಲಸಾಧ್ಯವಾದ ಮಾತುಗಳು ಎಂದೇ ಪ್ರಸಿದ್ಧವಾದವುಗಳು *ಶ್ರೀಮನ್ಯಾಯಸುಧಾ, ತತ್ವಪ್ರಕಾಶಿಕಾ ಮೊದಲಾದ ಗ್ರಂಥಗಳು.* ಆ ಸಮಗ್ರ ಗ್ರಂಥಗಳ ಪಾಠ ಪ್ರವಚನ ಮಾಡಿಯೇ *ಜೀರ್ಣವಾಚಃ* ನಾಲಿಗೆ ಸವೆದುವಹೋಗಿತ್ತು ಅಂತೆ ಗಿರು ಸಾರ್ವಭೌಮರದ್ದು ಎಂದು ಅಪ್ಪಣ್ಣಾಚಾರ್ಯರಯ ಸಾರುತ್ತಾರೆ.
ಸುಧಾ ಗ್ರಂಥಕ್ಕೆ *ಪರಿಮಳ,* ತತ್ವಪ್ರಕಾಶಿಕೆಗೆ *ಭಾವದೀಪ,* ನ್ಯಾಯ ವಿವರಣ ಅಣುಭಾಷ್ಯಗಳಿಗೆ ವ್ಯಾಖ್ಯಾನ, ಚಂದ್ರಿಕೆಗೆ *ಚಂದ್ರಿಕಾ ಪ್ರಕಾಶ,* ಬ್ರಹ್ಮ ಸೂತ್ರಗಳಿಗೆ *ತಂತ್ರದೀಪಿಕೆ,* ಅಧಿಕರಣಗಳಿಗೆ *ನ್ಯಾಯಮುಕ್ತಾವಲಿ* ಹೀಗೆ ಒಂದು ಸೂತ್ರಪ್ರಸ್ಥಾನಕ್ಕೆ ಅನೇಕ ಗ್ರಂಥಗಳನ್ನು ರಚಿಸಿದ ಮಹಾಜ್ಙಾನಿ ನಮ್ಮ ರಾಯರು.
ಹತ್ತು ಉಪನಿಷತ್ತುಗಳಿಗೆ *ಉಪನಿಷತ್ ಖಂಡಾರ್ಥ,* ತಾತ್ಪರ್ಯ ನಿರ್ಣಯಕ್ಕೆ ವ್ಯಾಖ್ಯಾನ ಹಾಗೂ ಸಂಗ್ರಹ, ಸಂಕ್ಷೇಪ, ಮತ್ತು ಸ್ತೋತ್ರರೂಪವಾದ *ಭಾವಸಂಗ್ರಹ.* ಸಮಗ್ರ ಸರ್ವಮೂಲಗಳ ಅನೇಕ ಪ್ರಮೇಯಗಳನ್ಮೊಳಗೊಂಡ, ವಾಯುದೇವರ ಹಾಗೂ ದೇವರ ದಿವ್ಯ ಮಹಿಮಾ ಬೋಧಕವಾದ *ಪ್ರಾತಃಸಂಕಲ್ಪಗದ್ಯ.* ನಿಮ್ಮ ಮತದಲಿ ಮೀಮಾಂಸಾ ಗ್ರಂಥವೇ ಇಲ್ಲ ಎಂದು ಆಕ್ಷೇಪಿಸಿದರೆ, ಒಂದೇ ರಾತ್ರಿಯಲ್ಲಿಯೇ ಮೀಮಾಂಸಾ ಗ್ರಂತವನ್ನು ರಚನೆ ಮಾಡಿಕೊಟ್ಟ ಮಹಾನ್ ಮೇಧಾವಿ ನಮ್ಮ ರಾಯರು. ಕನ್ನಡದಲ್ಲಿಯೂ ಕೆಲ ಕೀರ್ತನೆಗಳನ್ನು ರಚಿಸಿದ ಕೀರ್ತಿ ನಮ್ಮ ರಾಯರದೇ. ಹೀಗೆ ಅನೇಕ ಅತ್ಯುಪಯುಕ್ತ ಗ್ರಂಥಗಳನ್ನು ರಚಿಸಿ, ತಮ್ಮ ಸಂಪೂರ್ಣ ಜೀವನ ಜ್ಙಾನಕ್ಕಾಗಿಯೇ ಮೀಸಲು ಇಟ್ಟು, ಜ್ಙಾನಶಿಖರರು ಆದವರು ನಮ್ಮ ರಾಯರು.
*ಪರಮೋಪಕಾರರು ರಾಯರು*
ಪಂಡಿತನಿಂದಾರಂಭಿಸಿ ಪಾಮರರ ವರೆಗೆ ಪ್ರತಿಯೊಬ್ಬರಿಗೂ ರಾಯರ ಉಪಕಾರದ ಹೊರೆ ದಿನ ದಿನ ಬೆಳಿಯುತ್ತಾ ಸಾಗುತ್ತದೆ.
ಗೋ ಆನೆ ಮೊದಲಾದ ಪಶು ಪಕ್ಷಿ ಪ್ರಾಣಿಗಳೂ ಆಯು ಆರೋಗ್ಯ ಮೊದಲಾವುಗಳನ್ನು ಪಡೆಯುವದಕ್ಕಾಗಿ ಕೇವಲ ವೃಂದಾವನಕ್ಕೆ ಪ್ರದಕ್ಷಿಣಿ ಹಾಕಿಸಿದ ಕಥೆಯನ್ನು ಕೇಳುತ್ತೇವೆ.
ಹಣ, ಧನ, ಕನಕ, ಪತಿ, ಪತ್ನಿ, ಸಂತಾನ, ಭೂಮಿ, ದೃಷ್ಟಿ, ಯಶಸ್ಸು, ಅಂತಸ್ತು, ಮೊದಲು ಮಾಡಿ ಎಲ್ಲತರಹದ ಅಪೇಕ್ಷೆಗಳನ್ನು ಹೊತ್ತವರು ಕೋಟಿ ಕೋಟಿ ಜನ. ಈಡೇರಿಸಿಕೊಂಡವರೂ ಲಕ್ಷ ಲಕ್ಷ ಜನ. ಈ ಎಲ್ಲರ ಮೇಲೆಯೂ ರಾಯರ ಉಪಕಾರದ ಹೊರೆ ಇದ್ದೇ ಇದೆ.
*ರಾಯರು ಪ್ರೀತಿಯಿಂದ ಕೋಡುವದೇನನ್ನು....*
"ಯಾವ ವ್ಯಕ್ತಿ ಯಾವುದಕ್ಕಾಗಿ ತಮ್ಮ ಸಮಗ್ರ ಜೀವನವನ್ನು ಮೀಸಲು ಇಟ್ಟಿದ್ದಾರೆ, ಅದನ್ನು ಪ್ರೀತಿಯಿಂದ ಕೊಡುತ್ತಾರೆ." ಇದು ಸಾಮಾನ್ಯ ನಿಯಮ.
ಹಾಗಾದರೆ ರಾಯರು ತಮ್ಮ ಜೀವನವನ್ನು ಮೀಸಲು ಯಾವದಕ್ಕಾಗಿ ಇಟ್ಟಿದ್ದಾರೆ.. ?? ಉತ್ತರ ಸಹಜ. *ಜ್ಙಾನಕ್ಕಾಗಿಯೇ* ತಮ್ಮ ಸಮಗ್ರ ಜೀವನದ ಮೀಸಲು. ಹಾಗಾದರೆ ಅವರು ಪ್ರೀತಿಯಿಂದ ಕೊಡುವದು ಜ್ಙಾನವನ್ನೇ. ಆದ್ದರಿಂದ ಜ್ಙಾನಿಗೆ ರಾಯರ ಉಪಕಾರ ಎಲ್ಲರಿಗಿಂತಲೂ ನೂರಾರು ಪಟ್ಟು ಮಿಗಿಲು ಇದೆ. ಹೀಗೆ ಎಲ್ಲ ತರಹದ ವ್ಯಕ್ತಿಗಳಿಗೂ ರಾಯರ ಉಪಕಾರ ಇದ್ದೇ ಇದೆ. ದಿನ ದಿನ ಹೆಚ್ಚು ಆಗ್ತಾ ಇದೆ.
*ರಾಯರ ಸಂತೃಪ್ತಿ*
ಸಂತೃಪ್ತಿ ಇದು ಸಮೃದ್ಧಿಯ ದ್ಯೋತಕ.ತೃಪ್ತನಾಗಿ ಇದ್ದಾನೆ ಎಂದರೆ ಸಮೃದ್ಧನಾಗಿ ಇದ್ದಾನೆ ಎಂದೇ ಅರ್ಥ.
ಪೂರ್ವಾಶ್ರಮದಲ್ಲಿಯೇ ದಾರಿದ್ರ್ಯ. ಪಾತ್ರೆ ಪಗಡೆಗಳು ಇಲ್ಲ. ಇರುವ ಪಾತ್ರೆಗಳು ಮಣ್ಣಿನವು. ಅವುಗಳೂ ಒಡೆದು ಹೋದಂಥವಗಳು. ಅವುಗಳನ್ನೂ ಕಳ್ಳರು ದೋಚಿ ಒಯ್ದರು. ತಲೆಗೆ ಎಣ್ಣೆ ಹಚ್ಚಿದ್ದಾರೆ ಎಂದರೆ ದೀಪಾವಳಿಯಂದು ಮಾತ್ರ. ಹೊಸ ಬಟ್ಟೆ ಕಂಡಿದಾರೆ ಎಂದರೆ ಯುಗಾದಿಯ ಹೊಸ ವರ್ಷದಂದು ಮಾತ್ರ. ತಿಂಗಳಿಗೆ ಕನಿಷ್ಠ ಏನಿಲ್ಲದಿದ್ದರೂ ಏಕಾದಶಿಯನ್ನು ಬಿಟ್ಟು ನಾಲ್ಕಾರು ಉಪವಾಸಗಳು. ಮನೆಯ ತುಂಬ ಪಾಠಾರ್ಥಿ ಶಿಷ್ಯರು. ಇದು ರಾಯರ ಪೂರ್ವಾಶ್ರಮ ಅವಸ್ಥೆ.
ಇಂದಿನ ನಮ್ಮ ಅವಸ್ಥೆ ನಮಗೆ ಗೊತ್ತೇ ಇದೆ ಹೆಚ್ಚು ವಿಚಾರ ಮಾಡಲಾರೆ. ಆದರೂ ಸ್ವಲ್ಪ ಯೋಚಿಸಿದರೆ, "ಇಂದು ರಾಯರಿಗೂ ನಮಗೂ ಸ್ವಲ್ಪ ತುಲನೆ ಮಾಡಿಕೊಂಡರೆ, ಜೀವಂತ ಇರುವ ಅಂದಿನ ರಾಯರಿಗಿಂತಲೂ, ಜೀವಂತ ಇರುವ ನಮಗೆ ಕೋಟಿಪಟ್ಟು ಹೆಚ್ಚಿನ ಶ್ರೀಮಂತಿಗೆ ಇದೆ." ಹೀಗಿದ್ದರೂ.........
*ರಾಯರು ಎಂದಿಗೂ ಕಣ್ಣೀರಿಟ್ಟಿಲ್ಲ, ನಾವು ಎಂದಿಗೂ ಕಣ್ಣೀರಡದೆ ಮಲಗಿಲ್ಲ* ಇದು ಏಕೆ... ????
ರಾಯರು ತಮ್ಮ ಜೀವನದಿಂದ ತಿಳಿಸಿದ್ದದ್ದು ಒಂದನ್ನು "ತೃಪ್ತಿ ಇರುವದು, ತೃಪ್ತಿ ಸಿಗುವದು, ತೃಪ್ತಿ ಬರುವದು ಕೇವಲ ಜ್ಙಾನದಿಂದಲೇ ಹೊರತು ಹಣದಿಂದ ಸರ್ವಥಾ ಅಲ್ಲ."
ಹಣದಿಂದಲೇ ತೃಪ್ತಿ ಎಂದು ಬಯಸಿದ ನಾವು ಹಣಕ್ಕಾಗಿ ಜೀವನ ತೆತ್ತರೆ, ಜ್ಙಾನದಿಂದಲೇ ತೃಪ್ತಿ ಎಂದು ಭಾವಿಸಿದ ರಾಯರು ಜ್ಙಾನಕ್ಕಾಗಿಯೇ ಜೀವನ ತೆತ್ತು ಸಂತೃಪ್ತಿಯ ಪರಾಕಾಷ್ಠೆಯನ್ನೇ ತೋರಿಸಿಕೊಟ್ಟರು. ಅಂತೆಯೇ ರಾಯರು ಸಮೃದ್ಧರು. ಅಂತೆಯೇ ಸಂತೃಪ್ತಿಯ ಮಹಾಗಣಿಯಂತೆ ಭ್ರಾಜಮಾನರೂ ಆದರು. ಇಂದಿಗೂ ತಮ್ಮನ್ನು ನಂಬಿದವರಿಗೂ ಸಮೃದ್ಧಿ ಹಾಗು ಸಂತೃಪ್ತಿಗಳ ಬಿಕ್ಷೆ ನೀಡುವ ಮಹಾ ದೊರೆಗಳಾದರು. ಅಂತಹ ಮಹಾಮಹಿಮೋತರಾದ ರಾಯರ ಅಡೆದಾವರೆಗಳಲ್ಲಿ ಅನಂತಾನಂತ ನಮಸ್ಕಾರಗಳನ್ನು ಸಲ್ಲಿಸಿ, ಜ್ಙಾನಭಿಕ್ಷೆಯನ್ನೇ ಬೇಡುತ್ತಾ ಅವರನ್ನು ಸಂತೋಷಗೊಳಿಸೋಣ. ಅದರಿಂದ ನಾವು ಭಾಗ್ಯವಂತರಾಗೋಣ. ಭಾಗ್ಯವಂತರಿಗೇ ಸೇವೆ ದೊರುಕುವದು. ರಾಯರನ್ನು ಸೇವಿಸಿಯೇ ಸಂತೃಪ್ತರಾಗಿ ಇರೋಣ.
*✍🏽✍🏽✍🏽ನ್ಯಾಸ......*

Comments