*ಸಾ ಲಕ್ಷ್ಮೀರ್ಮೇ ಪ್ರಸೀದತು*
*ಸಾ ಲಕ್ಷ್ಮೀರ್ಮೇ ಪ್ರಸೀದತು*
ಇಂದು ವರಕೊಡುವ ಮಹಾಮಹಾ ದೇವತೆಗಳಿಗೆ ತಾಯಿಯಾದ ವರಮಹಾಲಕ್ಷ್ಮೀ ವ್ರತ. ಸಾಮಾನ್ಯವಾಗಿ ಲಕ್ಷ್ಮೀದೇವಿಯ ಪೂಜೆ ಹಣ, ಕನಕ, ಸುಖ, ಸಮೃದ್ಧಿ ಇವುಗಳಿಗೇ ಮಾಡುವದು. ನಾಶವಾಗದ ಧನ ಕನಕಾದಿಗಳನ್ನು ಪಡೆಯುವ ಮಾರ್ಗದಲ್ಲಿ ವಿಚಾರ ಇರಬೇಕು ಇದುವೂ ಅಷ್ಟೇ ನಿಶ್ಚಿತ.
ಹಾಗಾದರೆ ನಾಶವಾಗದ ವಸ್ತುಗಳನ್ನು ಪಡೆಯಲು ಏನು ಮಾಡಬೇಕು.... ??? ನಾವು ಪಡೆದ ವಸ್ತುಗಳು ನಾಶವೇಕೆ ಆಗುತ್ತೆ... ????
ಪಡೆದ ವಸ್ತು ನಾಶವಾಗಲು ಮೂಲ ಕಾರಣ, ಆ ವಸ್ತು ಸ್ವಾಮಿಯ ಇಚ್ಛೆಗೆ ವಿರುದ್ಧವೇ ಆಗಿರುತ್ತದೆ. ಅಥವಾ ನಮ್ಮ ಯೋಗ್ಯತೆಗೆ ಅನುಗುಣವಾಗಿ ಪಡೆದಿರುವದಿಲ್ಲ. "ಪಡೆಯುವ ವಸ್ತುವಿನ ಮಟ್ಟದ ಯೋಗ್ಯತೆಯಾದರೂ ಹೊಂದಿರಬೇಕು, ಯೋಗ್ಯತೆಗೆ ಅನುಗುಣವಾದದ್ದೇ ಪಡೆದಿರಬೇಕು" ಇದೆರಡೂ ನಮ್ಮಿಂದ ಆಗಿರುವದಿಲ್ಲ. ಹಾಗಾಗಿ ಶಾಶ್ವತವಾದದ್ದನ್ನು ಪಡೆಯಲಾಗಿರುವದಿಲ್ಲ.
ನಾಶವಾಗದ ವಸ್ತುವನ್ನೇ ಪಡೆಯಬೇಕಾದರೇನು ಮಾಡುವದು....????
ಲಕ್ಷ್ಮೀದೇವಿಯನ್ನು ಚೆನ್ನಾಗಿ ಉಪಾಸನೆ ಮಾಡಿ, ಬೇಡುವ ಕ್ರಮದಲ್ಲಿ, ಬೇಡುವದನ್ನೇ ಬೇಡಿದಾಗ, ಸಿಗುವದು ನಾಶವಾಗದ ಶಾಶ್ವತ ವಸ್ತುವನ್ನೇ....
ಆ ಕ್ರಮ ಹೇಗೆ.... ???
ಶ್ರೀಶಾಂಘ್ರಿಭಕ್ತಿಂ ಹರಿದಾಸದಾಸ್ಯಂ
ಪ್ರಪನ್ನಮಂತ್ರಾರ್ಥ ದೃಢೈಕನಿಷ್ಠಾಂ |
ಗುರೋಃಸ್ಮೃತಿಂ ನಿರ್ಮಲಬೋಧಬುದ್ಧಿಂ
ಪ್ರದೇಹಿ ಮಾತಃ ಪರಮಂ ಪದಂ ಶ್ರೀಃ ||
೧) *ಶ್ರೀಶಾಂಘ್ರಿ ಭಕ್ತಿಮ್...* ನೇಯ ಪ್ರಾರ್ಥನೆ.
ಹೇ ತಾಯಿ !!! ನೀನು ಸರ್ವಜ್ಙಳು. ನನ್ನ ನಿಯಾಮಕಳು. ನನ್ನ ಪ್ರೇರಕಳು. ಭಕ್ತಿ ಜ್ಙಾನಗಳಿಗೆ ಅಭಿಮಾನಿ. ಶಾಶ್ವತವಾದದ್ದು ಪಡೆಯುವದು ಶಾಶ್ವತ ಭಗವಂತನಿಂದ ಮಾತ್ರ. ಆದ್ದರಿಂದ *ಭಕ್ತೈಕ ಲಭ್ಯಃ... !! ನಿನ್ನ ಪತಿಯ ಪಾದಾರವಿಂದಗಳಲ್ಲಿ ನಿತರಾಂ ಭಕ್ತಿಯನ್ನು ದಯಪಾಲಿಸು.* ಆ ಭಕ್ತಿಯಿಂದಲೇ ಶಾಶ್ವತ ಹರಿ ನಿನ್ನಿಂದ ಸಹಿತನಾಗಿ ದೊರೆತು ಬರುತ್ತಾನೆ.
೨) *ಹರಿದಾಸದಾಸ್ಯಮ್...* ಎರಡನೇಯ ಪ್ರಾರ್ಥನೆ.
ಅನಂತ ಜೀವರಾಶಿಗಳ ಅಂತರ್ಯಾಮಿ ಬಿಂಬನ ಹೆಸರು ಹರಿ ಎಂದು. ಪ್ರತಿಬಿಂಬರಾದ ಜೀವರಿಗೆ ನೇರವಾಗಿ ದೆವರು ದರ್ಶನ ಕೊಡ. ಹಾಗಾಗಿ ಭಗವದ್ದಾಸರು ಮುಖ್ಯಪ್ರಾಣದೇವರು ಮೊದಲ ಪ್ರತಿಬಿಂಬರು, ನಂತರ ಗರುಡಾದಿಗಳು, ನಂತರ ಉಳಿದ ದೇವತೆಗಳು ಪ್ರತಿಬಿಂಬರು. ಸ್ವೋತ್ತಮ ಬಿಂಬರ ಮುಖಾಂತರ ಬಿಂಬನ ದರ್ಶನವಾಗಬೇಕು. ಆ ಕಾರಣಕ್ಕೆ ಶ್ರೀಹರಿಯ ದಾಸರೆಲ್ಲರ ದಾಸ್ಯ ಒದಗಬೇಕು. ಅವರೆಲ್ಲರ ಮುಖಾಂತರ ದೆವರ ದರ್ಶನ. ದೇವರ ದರ್ಶನದಿಂದ ಶಾಶ್ವತವೇ ಸಿಗುವದು.
೩) *ಪ್ರಪನ್ನ ಮಂತ್ರಾರ್ಥ ದೃಢೈಕನಿಷ್ಠಾಮ್...* ಎಂದು ಮೂರನೇಯ ಪ್ರಾರ್ಥನೆ.
ಪಡೆಯುವದು ಎಂಬುವದೇನಿದೆ ಅದು ಜಪ ತಪಸ್ಸಿನಿಂದಲೇ ಎಂದಾಗಿರಬೇಕು. ಭಗವದ್ದರ್ಶನದಿಂದಾರಂಭಿಸಿ ಏನು ಪಡೆದರೂ ಜಪ ಹಾಗೂ ತಪಸ್ಸಿನಿಂದಲೇ ಎಂದಾಗಿರಬೇಕು. ಜಪವಿಲ್ಲದೆ ತಪಸ್ಸಿಲ್ಲದೆ ಏನು ಪಡೆದ್ದರೂ ಅದು ಕ್ಷಣಿಕವೇ. ಪಡೆದಿದ್ದರ ಫಲವೂ ಇರದು. ಆದ್ದರಿಂದ ಗಾಯತ್ರೀ ಹಾಗೂ ತಂತ್ರಾಸಾರೊಕ್ತ ಮಂತ್ರ ಜಪಗಳಲ್ಲಿ ನಿತರಾಂ ಆಸಕ್ತಿ ಅವಶ್ಯವಾಗಿ ಬೇಕು. ಹೇ ತಾಯಿ ಜಪ ತಪಗಳಲ್ಲಿ ನಿಷ್ಠೆಯನ್ನು ಬೆಳಿಸು.
೪) *ಗುರೋಃ ಸ್ಮೃತಿಂ......*
ಪ್ರತೀ ಕಾರ್ಯವೂ ನೂರಕ್ಕೆ ನೂರರಷ್ಟು ಯಶಸ್ವೀ ಹಾಗೂ ಪೂರ್ಣಫಲಕಾರಿ ಜೊತೆಗೆ ಶಾಶ್ವತ ಪುಣ್ಯಪ್ರದ ಎಂದಾಗಿರಬೇಕಾಗಿದ್ದರೆ ಆ ಕಾರ್ಯ *ಗುರುಸ್ಮರಣೆ ಇಂದಾರಂಭಿಸಿ, ಗುರುಸಮರ್ಪಣಾಂತವಾಗಿರಬೇಕು* ಹಾಗಾದಾಗ ಮಾತ್ರ ಯಶಸ್ವೀ ಆಗುತ್ತದೆ. ಶಾಶ್ವತಕ್ಕೆ ಕಾರಣ ಎಂದಾಗುತ್ತದೆ. ನಿರಂತರ ಗುರುಸ್ಮೃತಿ ಖಂಡಿತವಾಗಿಯೂ ಬೇಕು. ಮಹಾ ಲಕುಮಿ ದಯೆಮಾಡಿ ದಯಪಾಲಿಸು.
೫) *ನಿರ್ಮಲ ಬೋಧಬುದ್ಧಿಂ...* ಕೊನೆಯ ಪ್ರಾರ್ಥನೆ.
*ಜ್ಙಾನೇನೈವ ಪರಂ ಪದಮ್* ಪರ ಪದವಿ ಮೋಕ್ಷ ಸಿಗುವದು ಜ್ಙಾನದಿಂದಲೇ. ಅಂತೆಯೇ *ಏನಾದರೇನೂ ಮೋಕ್ಷವಿಲ್ಲ. ಜ್ಙಾನವಿಲ್ಲದೇ ಮೋಕ್ಷವಿಲ್ಲ* ಎಂದರು ದಾಸರು. ಅಮ್ಮ !! ನಿನ್ನ ಜ್ಙಾನ ಕೊಡು. ನಿನ್ನ ಪತಿಯ ಜ್ಙಾನ ಕೊಡು, ನಿನ್ನ ದಾಸರಾದ ದೇವತೆಗಳ ಹಾಗೂ ಗುರುಗಳ ಯಥಾರ್ಥ ಜ್ಙಾನ ಕೊಡು. ನನ್ನ ಸ್ವರೂಪ ಜ್ಙಾನವನ್ನೂ ದಯಪಾಲಿಸು. ಮೇಲಿನ ಜ್ಙಾನಕ್ಕಾಗಿ ಸಕಲ ಶಾಸ್ತ್ರಾರ್ಥ ತತ್ವಜ್ಙಾನ ದಯಪಾಲಿಸು. ದಯಮಾಡಿ ಕೊಡುತ್ತೀಯ ಅಲ್ವೇ.. ಖಂಡಿತವಾಗಿಯೂ ದಯಪಾಲಿಸುತ್ತೀ ಎಂಬ ಪೂರ್ಣ ವಿಶ್ವಾಸವಿದೆ.
ಮೇಲೆ ಹೇಳಿದ ಈ ಐದೂ ಪ್ರಾರ್ಥನೆಗಳನ್ನು ಈಡೇರಿಸಿಕೊಂಡರೆ, ಅವುಗಳಿಂದ ಪಡೆಯುವ ಜ್ಙಾನ ಭಕ್ತಿ ಧನ ಕನಕ ಸುಖ ಸಮೃದ್ಧಿ ಇವುಗಳೆಲ್ಲವೂ ಶಾಶ್ವತವಾದದ್ಧೇ ಇರುತ್ತದೆ.
ಈ ಪ್ರಾರ್ಥನೆಯನ್ನು ಇಂದು ಈ ಲೇಖನ ತಲುಪಿದ ಓದಿದ ನಾವೆಲ್ಲರೂ ಸೇರಿ ಒಂದು ಲಕ್ಷ ಸಲವಾದರೂ ಪಾರಾಯಣ ಮಾಡಿ ಆ ತಾಯಿಯಲ್ಲಿ ಪ್ರಾರ್ಥಿಸೋಣ. ನಾವೆಲ್ಲರೂ ಶಾಶ್ವತವಾದದ್ದನ್ನು ಪಡೆಯುವದರತ್ತ ಚಿತ್ತ ಹರಿಸೋಣ.
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments