Posts

Showing posts from July, 2018

*ಜಾಹ್ನವೀ ಲೋಕಪಾವನೀ.....*

*ಜಾಹ್ನವೀ ಲೋಕಪಾವನೀ.....* ಭಗವಂತನ ನಿವಾಸಭೂತವಾದ ಮೇರು, ಮಂದರ, ಗಂಧಮಾದನ, ಕೈಲಾಸ, ಮೊದಲಾದ ಬೆಟ್ಟಗಳಿಗೆ ದ್ವಾರಭೂತವಾಗಿದೆ ಹರಿದ್ವಾರ. ವಿಶಾಲಾ ಕ್ಷೇತ್ರದಲ್ಲಿ ವಿರಾಜಮಾನನಾದ ಶ್ರೀನರನಾರಯಣರ ವಾಸಸ್ಥಾನವಾದ ಬದರಿಗೆ ದ್ವಾರಭೂತವಾಗಿದೆ ಹರಿದ್ವಾರ. *ಮೋಕ್ಷಪ್ರದ ಕ್ಷೇತ್ರ* ಹರಿದ್ವಾರ ಇದು ಭಗವಂತನಿಂದ ತುಂಬಿದ ಕ್ಷೇತ್ರ. ದಕ್ಷಿಣದ ಊರಿನಲ್ಲಿರುವ ದೇವಸ್ಥಾನದಲ್ಲಿ ಪ್ರತಿಮೆಯಲ್ಲಿ ಮಾತ್ರ ಭಗವತ್ಸನ್ನಿಧಾನವಾದರೆ, ಉತ್ತರದಲ್ಲಿಯ ಪ್ರತಿ ಊರಿಗೆ ಊರೇ ದೇವರ ಪ್ರತಿಮೆ. ಅಲ್ಲೆಲ್ಲ ದೇವರ ಸನ್ನಿಧಾನ. ಸಂಸಾರದ ಮಾಯೆಯನ್ನು ನಾಶಮಾಡಿ ಮೋಕ್ಷಕೊಡುವಂತಹ ಕ್ಷೇತ್ರವಾಗಿರುವದರಿಂದ  ಈ ಕ್ಷೆತ್ರ ಮಾಯಾಪುರಿ ಎಂದೇ ಪ್ರಸಿದ್ಧಿ ಪಡೆದ ಕ್ಷೇತ್ರ. *ವಿಷ್ಣುಪದೀ* ಹರಿದ್ವಾರ ಇಂತಹ ದೊಡ್ಡಕ್ಷೇತ್ರವಾಗಲು  ಮೂಲ ಕಾರಣ *ಗಂಗೆ.* ಗಂಗೆ ಹರಿಯುವ ಕ್ಷೇತ್ರಗಳೆಲ್ಲವೂ ಭಗವತ್ ಕ್ಷೇತ್ರವೇ.  ಆ ಗಂಗೆ ಹುಟ್ಟಿ ಬಂದದ್ದೇ ಭಗವತ್ಪಾದದಿಂದ. ಭಗವತ್ಪಾದವನ್ನು ಆಶ್ರಯಿಸಿದವರೇ ದೊಡಗಡವರಾಗುತ್ತಿರುವಾಗ, ಭಗವತ್ಪಾದದಿಂದ ಹುಟ್ಡಿ ಅಲ್ಲಿಯೇ ಮುಕ್ತಿ ಪಡೆಯುವ ಗಂಗೆ ಜಗತ್ತಿನಲ್ಲಿಯೇ ಮಹಾನ್ ನದಿ ಆಗಿ ವಿರಾಜಮಾನಳಾದಳು. *ಗಂಗೆಯ ಜನನ* ಗಂಗೆಯ ಹುಟ್ಟು ಒಳಗಿನ ಹೊರಗಿನ ಅಂಧಕಾರವನ್ನು ನಾಶಮಾಡುವ ಭಗವತ್ಪಾದದಿಂದ. ಭಗವತ್ಪಾದದಿಂದ ಹುಟ್ಟಿದ ಕಾರಣವೇ ಗಂಗೆ ಪರಮ ಪವಿತ್ರ. ಗಂಗೆ ಬ್ರಹ್ಮಾಂಡದ ಹೊರೆಗೆ ಇದ್ದವಳು. ಒಳಗೆ ಧಾವಿಸಿಬಂದವಳು. ಎಲ್ಲೆಡ...

*ಸ್ಮರಿಸು ಗುರುಗಳ ಮನವೆ..*

Image
*ಸ್ಮರಿಸು ಗುರುಗಳ ಮನವೆ..* ಗುರುಪೌರ್ಣಿಮೆಯ ಶುಭ ಅವಸರದಲ್ಲಿ ಗುರುಗಳ ಸ್ಮರಣೆ ಜನ್ಮಸಾರ್ಥಕ. ನಂಬಿದವರ ಇಷ್ಟಾರ್ಥ ಈಡೇರಿಸಲು, ಉದ್ಧಾರ ಮಾಡಲು ತಮ್ಮ ಸ್ವಾರ್ಥವನ್ನು ಪರಿತ್ಯಾಗ ಮಾಡುವಂತಹ  ಮಹಾಕರುಣಾಳು,  ದಯಾಮೂರ್ತಿ, ಶಾಪಾನುಗ್ರಹ ಸಮರ್ಥ, ಎಂದೂ ಬತ್ತದ ಜ್ಙಾನಗಂಗೆ, ಖಾಲಿಯಾಗದ ಜ್ಙಾನಗಣಿ ನಮ್ಮ ಗುರುಗಳು. *ಜ್ಙಾನನಿಧಿಗಳನ್ನು ಸ್ಮರಿಸೋಣ* ಗಂಗೆ ಅಂದಿನಿಂದ ಇಂದಿನವರೆಗೂ, ಮುಂದೆಂದೆಯೂ ಬತ್ತದು. ಆದರೆ ನಾವು ಗಂಗೆಯನೀರನ್ನು ತರುವದು ಮಾತ್ರ ಒಂದು ಗಿಂಡಿಯಷ್ಟು. ಹಾಗೆಯೇ ಗುರುಗಳ ಜ್ಙಾನವೆಂಬ ಗಂಗೆ ಅಂದಿನಿಂದ ಇಂದಿನವರೆಗೂ, ಮುಂದೆಯೂ ಬತ್ತದೇ ನಿರಂತರ ಹರಿಯುವಂತಹದ್ದೇ. ಆ ಜ್ಙಾವನ್ನು ಸ್ವೀಕರಿಸುವ ನಮ್ಮ ಶಕ್ತಿ ಗಿಂಡಿಯಷ್ಟೆ. ಸ್ವಲ್ಪ ಅತ್ಯಲ್ಪ. "ಗಂಗೆ ಪಾಪಕಳೆಬಹುದಷ್ಟೇ, ಜ್ಙಾನಗಂಗೆ ದೆವರನ್ನೇ ಒದಗಿಸುವಂತಹದ್ದು."  ಅಂತಹ ಜ್ಙಾನನಿಧಿಗಳು ನಮ್ಮ ಗುರುಗಳು. *ಗುರು ಸ್ಮರಣೆ ಪರಮ ಮಂಗಳ* ಗಂಗೆ ಬ್ರಹ್ಮಾಂಡದ ಹೊರೆಗೆ ಹಿಂದೆಂದಿನಿಂದಲೂ  ಇದ್ದವಳೆ. ಆದರೆ ಗಂಗೆ ಗಂಗೆಯೆಂದಾಗಿರುವದು ಮಾತ್ರ ದೇವರಪಾದಕ್ಕೆ ತಾಕಿ ಬಂದಾದಮೆಲೇಯೇ. ಆ ನೀರನ್ನು ಹೊತ್ತದ್ದಕ್ಕೇ ರುದ್ರದೇವರು ಪರಮ ಮಂಗಳ ಸ್ವರೂಪರು ಆದರು. ಹಾಗೆಯೇ ನಮ್ಮ ಜ್ಙಾನ ಅನಾದಿಂಯಿಂದ ನಮ್ಮಲ್ಲಿಯೇ ಇದೆ. ಆ ಜ್ಙಾನ ಗುರುಮುಖಾಂತರ, ಗುರ್ವನುಗ್ರಹಪೂರ್ವಕ ಹೊತ್ತರೆ ಮಾತ್ರ ಜ್ಙಾನ ಜ್ಙಾನ ಎಂದೆನಿಸಿಕೊಳ್ಳುತ್ತದೆ. ಅಂತಹ ಜ್ಙಾನ ಹೊತ್ತಾಗ ಮಾತ್...

*ತಲೆ ಬಾಗಿಸುವದೇನಿದೆ ದಿವ್ಯಶಕ್ತಿಗೆ ಆಹ್ವಾನವಿಟ್ಟಂತೆಯೇ....*

*ತಲೆ ಬಾಗಿಸುವದೇನಿದೆ ದಿವ್ಯಶಕ್ತಿಗೆ ಆಹ್ವಾನವಿಟ್ಟಂತೆಯೇ....* ಆಧ್ಯಾತ್ಮದ ಭಾಷೆಯಲ್ಲಿ ತಲೆಬಾಗಿಸುವದು ಎಂದರೆ, ದಿವ್ಯಶಕ್ತಿಯನ್ನು ಆಂತ್ರಿಸಿದಂತೆ. ಯಾರು ಇಲ್ಲಿ ತಲೆ ಬಾಗಿಸುವರೋ ಅವರು ಎಲ್ಲಾ ಬಗೆಯಲ್ಲಿಯೂ ತುಂಬಿತುಳುಕುತ್ತಾರೆ.  ಒಂದರ್ಥದಲ್ಲಿ ಸಮಗ್ರ ಜಗತ್ತಿನ ಶಕ್ತಿಗಳೆಲ್ಲ ತಮ್ಮೆಡೆಗೆ ಓಡಿಬರಲಾರಂಭಿಸುತ್ತವೆ. ತಲೆಬಾಗಿಸಿದ ವ್ಯಕ್ತಿಯ ನಿಮಂತ್ರಣೆ ಎಲ್ಲೆಡೆಯೂ ಕೇಳಿಸಲಾರಂಭಿಸುತ್ತದೆ. ಇವನು ಪ್ರಪಾತದಂತೆ ಆಗಿಬಿಡುತ್ತಾನೆ. ತಲೆಬಾಗದ, ಸೊಕ್ಕಿನವ್ಯಕ್ತಿ ಶಿಖರದಂತೆ ಆಗಿಬಿಡುತ್ತಾನೆ. ಮಳೆ ಬರುತ್ತದೆ, ಶಿಖರದಮೇಲೂ ಮಳೆ ಬೀಳುತ್ತದೆ, ನೀರು ಸೇರುವದು ಪ್ರಪಾತಕ್ಕೇಯೇ. ಜ್ಙಾನ ಸುರಿಯುತ್ತದೆ. ಒಲಿಯುವದು ಮಾತ್ರ ಬಾಗಿದ, ಅಂತೆಯೇ ಪ್ರಪಾತದಂತೆ ಇರುವ ವ್ಯಕ್ತಿಯಡೆ ಧಾವಿಸುತ್ತದೆ. ಶಿಷ್ಯತ್ವದ ಕಲೆ ತಿಳಿದವನ ತಲೆ ಬಾಗುತ್ತದೆ, ತಲೆ ಬಾಗುವಿಕೆಯಲ್ಲಿಯೆ ವಿನಮ್ರತೆ ಅಡಗಿದೆ, ಅಂತೆಯೇ ಎಲ್ಲದಕ್ಕೂ ಆಹ್ವಾನ ಕೊಡುವವನಾಗುತ್ತೀ. ಆಗಲೇ ಎಲ್ಲವನ್ನೂ ತುಂಬಿಕೊಳ್ಳಲು ಸಮರ್ಥ. ಬಿರುಗಾಳಿ ಬೀಸುತ್ತಿದೆ. ಸೊಕ್ಕಿನಿಂದ ನಿಂತ ಗಿಡಗಳೂ ಇವೆ. ಪುಟ್ಟಪುಟ್ಟಗಿಡಗಳೂ ಇವೆ. ಸೊಕ್ಕಿದ ಅಂತೆಯೇ ಬಾಗದ ಗಿಡ ಕೊಚ್ಚಿಹೋದವು. ವಿನಮ್ರವಾಗಿ ಇದ್ದು ಆ ಬಿರುಗಾಳಿಯನ್ನೂ ಪ್ರೇಮದಿಂದ ಸ್ವೀಕರಿಸಿದ ಬಳ್ಳಿಗಳು ಘಟ್ಟಿಯಾಗಿ ಉಳಿದವು. ಇದುವೇ ಬಾಗುವದರ ಫಲ. ಬಿರುಘಾಳಿ ಹೋಯಿತು, ಸೊಕ್ಕಿದ ಗಿಡಗಳು ನೆಲಕಚ್ಚಿದವು. ಬಾಗಿದ ಬಳ್ಳಿಗಳು ದೃಢವಾಗಿ ನೇರ ನಿಂತವ...

*ಬಂದೇ ಬಿಡ್ತಾ..... 🙄🙄 ಉಫ್ಫಪ್ಪ ಅಂತು ಮುಗಿತು 😊😊*

Image
*ಬಂದೇ ಬಿಡ್ತಾ..... 🙄🙄 ಉಫ್ಫಪ್ಪ ಅಂತು ಮುಗಿತು 😊😊* ಸಾಧನೆಗಳಲ್ಲಿ ತೊಡಗಿದಾಗ ಕೆಲೊಮ್ಮೆ ನಮಗೆ ಆಗದ ಸಾಧನೆಗಳು ಎದುರಾದಾಗ *ಬಂದೇ ಬಿಡ್ತಾ..... ಉಫ್ಫಪ್ಪ ಅಂತು ಮುಗಿತು* ಎಂಬೀ  ರಾಗಗಳು ಬರುವದು ಸಹಜ. ಏಕಾದಶಿ ಬಿಡಲು ಮನಸ್ಸಿಲ್ಲ.  t cfi ಬಿಡಲು ಆಗಲ್ಲ. ಅಂತಹವರ ಸ್ಥಿತಿ "ಅಂತೂ ಏಕಾದಶಿ ಬಂದೇ ಬಿಡ್ತು..." ಎಂಬುವದೇ. ಇಂದಿನಿಂದ ಚಾತುರ್ಮಾಸ್ಯ ವ್ರತವಾರಂಭವಾಗುತ್ತದೆ. *ಅಂತೂ ವ್ರತ (ಕಟ್ಟು ಹಿಟ್ಟು) ಬಂದೇ ಬಿಡ್ತಾ..... 🙄🙄* ಕೊನೆಗೆ ಮುಗಿದಮೇಲೆ  *ಉಫ್ಫಪ್ಪ ಅಂತು ಮುಗಿತು 😊😊*  ಸಾಧನೆ ಅರಂಭಿಸುವದರ ಬೇಸರ, ಮುಗಿದಿದ್ದರ ಖುಶಿ ಇದ್ದರೆ ಆ ಸಾಧನೆ ಸರ್ವಥಾ ಪರಿಪೂರ್ಣ ಎಂದಾಗದು. ಏಕಾದಶೀ ವ್ರತ ಹಾಗೂ ಚಾತುರ್ಮಾಸ್ಯ ವ್ರತ ಮಾಡ್ತೀರಾ... ?? ವ್ರತ ಮಾಡುವ ಆಸೆ ತುಂಬ ಇದೆ. ಆದರೆ ಚಹ ಕಾಫಿ ಬಿಡಲು ಆಗಲ್ಕ. ಚಹ ಕಾಫಿ ತೊಗೊಂಡು ಏಕಾದಶಿ ಹಾಗೂ ಚಾತುರ್ಮಾಸ್ಯ ವ್ರತಗಳನ್ನು ಕಟ್ಟು ನಿಟ್ಟಾಗಿ‌ಮಾಡುತ್ತೇವೆ... ನೋಡಿ ಆಚಾರ್ಯರೇ... *ನಮಗೆ ಹೆಗೆ ಸಾಧ್ಯವೋ ಹಾಗೆ ಮಾಡುತ್ತೆವೆ* ಅದಕ್ಕೆ ನೀವು ಮೆಚ್ಚಬೇಕು ಇಷ್ಟೆ. ಹೀಗೆ ಕೆಲವರು ಹೇಳುವದಿದೆ... ಹೇಗೆ ಸಾಧ್ಯವೋ ಹಾಗೆ ಮಾಡುವದು ಅತ್ಯುತ್ತಮ ಅಲ್ಲದಿದ್ದರೂ ಉತ್ತಮವೇ. ಆದರೆ ಹೇಗೆ ಹೇಳಿದೆ ಶಾಸ್ತ್ರ ಹಾಗೆ ಮಾಡುವದೇನಿದೆ ಅತ್ಯುತ್ತಮ. ಶಾಸ್ತ್ರ  ಹೇಳಿದ ಹಾಗೆಯೇ ಮಾಡುವದು ಸೂಕ್ತ. ಶಾಸ್ತ್ರ ಹೇಗೆ ಹೆಳಿದೆ... ??? ವ್ರತ ಎಂದರೆ "ವ್ರತ ...

*ಓ ಶಿಷ್ಟೇಷ್ಟ !!! ನಿನಗೆ ಎನ್ನ ನಮನಗಳು*

*ಓ ಶಿಷ್ಟೇಷ್ಟ !!! ನಿನಗೆ ಎನ್ನ ನಮನಗಳು* ವಿಷ್ಣುಸಹಸ್ರನಾಮದಲ್ಲಿ ಒಂದು ನಾಮ *ಶಿಷ್ಟೇಷ್ಟ* ಎಂದು. ಶಿಷ್ಟರು ಯಾರೋ, ಶಿಷ್ಟಸಮ್ಮತರು ಯಾರೋ ಅವರೇ ಭಗವಂತನಿಗೆ ಇಷ್ಟರು. ಭಗವಂತನಿಗೆ ಇಷ್ಟರೋ ಅವರೇ ಜಗತ್ತಿನಲ್ಲಿ ಪ್ರೇಷ್ಠರು ಎಂದು ಕರಿಯಬಹುದು.  ಶಿಷ್ಟರನ್ನೇ ಇಷ್ಟನನ್ನಾಗಿ ಮಾಡಿಕೊಂಡ ಶ್ರೀಹರಿ ಇಷ್ಟೇಷ್ಟ.... ಶಿಷ್ಟರು ಯಾರು... ?? ಮಹಾಭಾರತ ಸುಂದರವಾಗಿ ಉತ್ತರಿಸುತ್ತದೆ.... "ದಾತಾರಃ ಸಂವಿಭಕ್ತಾರೋ ದೀನಾನುಗ್ರಹಕಾರಿಣಃ | ಸರ್ವಪೂಜ್ಯಾಃ ಶೃತಧನಾಃ ತಥೈವ ಚ ತಪಸ್ವಿನಃ ಸರ್ವಭೂತದಯಾವಂತಃ ತೇ ಶಿಷ್ಟಾಃ ಶಿಷ್ಟಸಂಮ್ಮತಾಃ||" ಎಂದು. *ದಾತಾರಃ*  ನಿತ್ಯ ದಾನಶೀಲರಾಗಿರಬೇಕು. ಹೇಳುವವರು, ಕೇಳುವವರು ಸಿಗಬಹುದು. ಕೊಡುವವರು ಸಿಗುವದು ಕಷ್ಟ. ಆದರೆ ಕೊಡಗೈಬಂಟ ಯಾರೋ ಅವನೇ....... ದಾನ ಮಾಡುವ ಭರದಲ್ಲಿ ಇದ್ದಬಿದ್ದ ಎಲ್ಲವನ್ನೂ ದಾನಮಾಡಿ ತಾನು ರೋಡಿಗೆ ಬರುವಂತಾಗಿರಬಾರದು. *ಸಂವಿಭಕ್ತಾರಃ* ಕುಟುಂಬ ಪೋಷಣೆಗೆ, ಯಜ್ಙ ಯಾಗಕ್ಕೆ, ಅತಿಥಿಸತ್ಕಾರಕ್ಕೆ, ಗುರುದಕ್ಷಿಣೆಗೆ ಮುಂತಾದ ಶಾಸ್ತ್ರೋಕ್ತವಾಗಿ ಘಳಿಸಿದ ಹಣವನ್ನು ವಿಭಾಗವನ್ನು ಮಾಡಿಕೊಂಡು ದಾನ ಮಾಡುವವರು... *ದೀನಾನಾಂ ಅನುಗ್ರಹಕಾಂಕ್ಷಿಣಃ* ಸಾಮಾನ್ಯವಾಗಿ ತನ್ನವರ ಮೇಲೆ ದಯೆ ಹೆಚ್ಚು. ತನ್ನವರಲ್ಲದ  ದೀನರಮೇಲೂ ದಯಾಪರರು ಯಾರು ಆಗಿದ್ದಾರೆಯೋ ಅವರೂ....... *ಶ್ರುತಧನಾಃ* ವಿದ್ಯೆಯೇ ಶ್ರೇಷ್ಠ ಧನ  ಎಂದು ಭಾವಿಸಿ, ಗುರುಶುಶ್ರೂಷೆಯನ್ನು ಮಾಡ...

*ಶ್ರೀ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರು*

Image
*ಶ್ರೀ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರು*  ಮಹಾನುಭಾವರಾದ, ಮಹಾಜ್ಙಾನಿಗಳಾದ, ಶಾಪಾನುಗ್ರಹ ಸಮರ್ಥರಾದ,  ಗುರುಸಾರ್ವಭೌಮರಾದ ಗುರುರಾಯರ ತರುವಾಯ ಏಳನೇಯ ಯತಿಪುಂಗವರಾದ ಶ್ರೀ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ. ಸೋಲು, ಬೇಡಿದ್ದು ಈಡೇರದಿರುವದು, ಪಾಶ್ಚಾತ್ಯರೇ ಮೊದಲಾದ ಹೊರಗಿನವರ ಹಾವಳಿ ಇವುಗಳು  ನಮಗೆ ಕಾಡುವ ಮೂರು ಪೆಡಂಭೂತಗಳು ಎಂದರೆ ತಪ್ಪಾಗಲಾರದು. ಏಳುವದರಿಂದಾರಂಭಿಸಿ ಸೋಲುವದೇ ನಮ್ಮ ಹವ್ಯಾಸ. ಆರಕ್ಕೇ ಏಳುವ ಪ್ರತಿಜ್ಙೆ. ಆರಕ್ಕೆ ಆಲಾರ್ಮ ಆದಾಗ, ಇನ್ಹತ್ತು ನಿಮಿಷ ಬಿಟ್ಟು ಎದ್ದರಾಯ್ತಲಾ ಎಂದು ಅಲಾರ್ಮ ಆಫ್ ಮಾಡಿ ತಾಚಿ ಮಾಡ್ತೇವೆ. ಇದರರ್ಥ ಏಳುವಾಗ ಸೋತೆವು. ಅದೇರೀತಿ ರಾತ್ರಿ  ೧೦ ಕ್ಕೆ ಮಲಗುವದು ಎಂದು ಪ್ರತಿಜ್ಙೆ, ಮೋಬೈಲ್ ಹಿಡಿದುಕೊಂಡಾಗ ಮಲಗಿದ್ದು ೧೨ಕ್ಕೆ. ಹಾಗಾಗಿ ಮಲಗುವಾಗಲೂ ಸೋತೆವು. ಮಧ್ಯದಲ್ಲಿ ಸೋಲೇ ಸೋಲು. ಅಪೇಕ್ಷೆಗಳು ನೂರಾರು. ಅದಕ್ಕೆ ತಕ್ಕ ಸಾಧನೆ ಶೂನ್ಯ. ಹಾಗಾಗಿ ಗುರುಗಳ, ದೇವತೆಗಳ, ದೇವರ ಮುಂದೆ ಬೇಡಿದ್ದೊಂದೇ ನಿಜ. ಪಡೆದದ್ದು ಎಂಬುವದು ಇಲ್ಲವೇ ಇಲ್ಲ.  ಅಪೇಕ್ಷಿತವಾದದ್ದೂ ಸಿಗದು. ವಿಜಯಿಗಳಾಗಲು, ಇಷ್ಟಾರ್ಥಗಳನ್ನು ಪಡೆಯಲು ಧರ್ಮ ಅವಷ್ಯವಾಗಿಬೇಕು. ಧರ್ಮ ಮಾಡಲು ನಮ್ಮತನವನ್ನು ಉಳಿಸಿಕೊಂಡವನಿಗೆ ಮಾತ್ರ ಸಾಧ್ಯ. ಪರಕೀಯರ ಎಲ್ಲ ಸ್ವಭಾವಗಳೂ ನಮ್ಮಮೇಲೆ ನಿರಂತರ ಧಾಳಿ ಮಾಡುತ್ತಿವೆ.  ಅವುಗಳನ್ನು ನಮ್ಮತನವೆಂದೇ ಸ್ವೀಕರಿ...

*ಮಾ ರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ....*

*ಮಾ ರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ....* ಶ್ರೀಮದ್ಭಾಗವತದಲ್ಲಿ ಬಂದ, ಸ್ವಯಂ ಬ್ರಹ್ಮದೇವರು ಮಾಡಿದ ಒಂದು ಅದ್ಭುತ ಪ್ರಾರ್ಥನೆ. ದುರ್ಗಾದೇವಿಯ ಪ್ರಾರ್ಥನೆಯಂತೆ ದೇವರು ಜಗತ್ತನ್ನು ಸೃಷ್ಟಿಸಲು ಮನಸ್ಸು ಮಾಡಿದ. ಅವನಿಚ್ಛೆಯಂತೆಯೇ ಸಂಪೂರ್ಣ ೨೪ ತತ್ವಾತ್ಮಕ ಜಗತ್ತು ಸೃಷ್ಟಿ ಆಯಿತು. ಆ ಬ್ರಹ್ಮಾಂಡದಲ್ಲಿ ಬ್ರಹ್ಮದೇವರನ್ನು ತನ್ನ ನಾಭಿಕಮಲದಿಂದ ಸೃಷ್ಟಿಸಿದ. ಆ ಬ್ರಹ್ಮದೇವರು ನಾಲಕು ಮುಖಗಳಿಂದ ನಿರಂತರ ಋಗ್ವೇದ ಯಜುರ್ವೇದ ಸಾಮವೇದ ಇವಗಳಿಂದ ಭಗವದಾರಾಧನೆ, ಜ್ಙಾನಾಭಿವೃದ್ಧಿ, ಭಕ್ತಿಯ ಸಮೃದ್ಧಿ, ಅತಿಶಯಿತ ವಿಷ್ಣುಪ್ರೀತಿ ಉವುಗಳನ್ನು ಸಂಪಾದಿಸುತ್ತಾ ತೊಡಗಿದರು. ಹೇ ಮಗನೇ !! ಬ್ರಹ್ಮಾ  !! ನೀನು ಸೃಷ್ಟಿಕರ್ತನ ಹಿರಿಯ ಮಗನು ಆಗಿರುವದರಿಂದ, ಸೃಷ್ಟಿಕರ್ತೃವಾದ ಬ್ರಹ್ಮರೂಪದ ಅಧಿಷ್ಠಾನನೂ ಆಗಿರುವದರಿಂದ ಈ ಸಮಗ್ರ ಜಗತ್ತನ್ನು ಸೃಷ್ಟಿಸು ಎಂದು ಆಜ್ಙಾಪಿಸಿದ ಶ್ರೀಮನ್ನಾರಾಯಣ. ಆಜ್ಙೆಯನ್ನು ಹೊತ್ತ ಬ್ರಹ್ಮದೇವರು *ಮಾ ರೀರಿಶಿಷ್ಟ ನಿಗಮಸ್ಯ ಗಿರಾಂ ವಿಸರ್ಗಃ....*  "ಜಗತ್ತಿನ ಸೃಷ್ಟಿಯ ದೊಡ್ಡ ಜವಬ್ದಾರಿ ನಿನ್ನ ಪ್ರೀಗೋಸ್ಕರ ಹೊರುವೆ. ಆದರೆ ಅತಿಶಯಿತಪ್ರೀತಿಯನ್ನೇ ದಯಪಾಲಿಸುವ,  ಮಹಾಫಲವನ್ನೇ ಕೊಡುವ ನಿನ್ನ ಮಹಿಮಾ ಜ್ಙಾನಕ್ಕೆ ಕಾರಣವಾದ ಚತುರ್ವೇದಗಳ ಪಠಣ, ಜಪ, ಧ್ಯಾನ, ಚಿಂತನ, ಇವುಗಳು ಸ್ವಲ್ಪವೂ ಕಡಿಮೆಯಾಗಬಾರದು. ಇನ್ನೂ ಅಭಿವೃದ್ಧಿಸುವಂತೆಯೇ ಆಗಬೇಕು. ಈ ಅನುಗ್ರಹವನ್ನು ಮಾಡು"  ಹೀಗೆ ಪ್ರಾರ್ಥಿಸ...

*ನೀನು ಕೊಟ್ಟ ಎಲ್ಲ ಸಾಮರ್ಥ್ಯವನ್ನೂ ಬಳಿಸಿಕೊಂಡಿದ್ದೇನೆ.........*

*ನೀನು ಕೊಟ್ಟ ಎಲ್ಲ ಸಾಮರ್ಥ್ಯವನ್ನೂ ಬಳಿಸಿಕೊಂಡಿದ್ದೇನೆ.........* ಜೀವನವೇ ಒಂದು ದೊಡ್ಡ ಕೌಶಲ. ವಿಶೇಷವಾಗಿ ನಮ್ಮ ಜೀವನ ಉತ್ತಮ ಕೌಶಲ. ನಮ್ಮ ಜೀವನಕ್ಕಾಗಿ ನಮ್ಮನ್ನು ನಾವು ಸಂಪೂರ್ಣವಾಗಿ ಸಮೃಪಿಸಿಕೊಳ್ಳಲು ಸಿದ್ಧರಾದೆವು ಎಂದಾದರೆ,  ಅಂದೆಯೇ ಸಿದ್ಧಿಯಕೌಶಲ ಕರಗತವಾಯಿತು ಎಂದೇ ಅರ್ಥ. ನಿತ್ಯ ಕೆಲವುದರ ಕಡೆ ಗಮನ... ಏನ್ನನ್ನು ಸಾಧಿಸಬೇಕೆಂದು ಬಯಸಿದ್ದೇವೆ.. ?? ಈ ವರೆಗೆ ಏನನ್ನು ಸಾಧಿಸಿದ್ದೇವೆ... ?? ಮುಂದಿನ ತಲೆಮಾರಿಗೆ ಬಿಟ್ಟುಹೋಗುವ ಸಂಪತ್ತು ಯಾವದು.. ?? ಈ ಅಂಶಗಳ ನಡುವೆ ಕೊಂಚ ಆಲೋಚನೆ ಅತ್ಯವಶ್ಯಕ. ಬೆರಳುಗಳ ನಡುವೆ ಸುರಿದು ಹೊಇದ ನೀರಿನಂತೆ ಕಾಲ ಸರಸರಜರಿದು ಹೋಗುತ್ತಿದೆ. ಪಾತ್ರೆ ಇಟ್ಟರೆ ಸೋರಿದ ನೀರು ಸಿಗಬಹುದು. ಆದರೆ ಕಾಲ ಹೋಗಿದ್ದು ಹೋಗಿಯೇ ತೀರಿತು. ಮರಳಿ ಎಂದಿಗೂ ಬಾರದು. ದೇವರು ನಮಗೆ ಕೊಟ್ಟ ಸಾಮರ್ಥ್ಯಗಳು ಅನೇಕ. ಅನೇಕ ಸಾಮರ್ಥ್ಯಗಳು ಇರುವದರಿಂದ ಸಾಧಿಸುವದೂ ಅನೇಕ ಇವೆ. ಸಾಧಿಸಿಕೊಳ್ಳುವ ಚಾಣಾಕ್ಷತೆಗೆ ಬೇಕು ಸಮರ್ಪಣಾಭಾವ ಮಾತ್ರ. (ಲೌಕಿಕ ...ವಿದ್ಯೆ, ಅಧ್ಯಯನ, ಹಣಸಂಪಾದನೆ, ಕಲೆ...ಸಂಗೀತ, ಸಾಹಿತ್ಯ, ಲೇಖನ, ನಾಟ್ಯ, ನರ್ತನ, ಸಂಬಂಧ...ಒಡನಾಟ, ಸಾತ್ವಿಕತೆ, ಸಜ್ಜನಿಕೆ, ಮೆಚ್ಚುವಿಕೆ,  ಪರೋಪಕಾರ, ಗುಣವಂತಿಕೆ. ಚಟುವಟಿಕೆಗಳು... ಲವಲವಿಕೆ, ಬುದ್ಧಿವಂತಿಕೆ, ನಿರ್ಣಯಗಳು, ವ್ಯಾಪಕ ಹಾಗೂ ಆಳವಾದ ವಿಚಾರವಂತಿಕೆ, ಅದಕ್ಕಾಗಿ ನಾನಾ ಗ್ರಂಥಗಳ ಅಧ್ಯಯನ. ಆದರ್ಶ ಜೀವನ... ಕಟ್ಟುನಿಟ...

*ನಾಲಕು ಅನಿಷ್ಟಗಳಿಂದ ದೂರ ಇರಬೇಕು......*

*ನಾಲಕು ಅನಿಷ್ಟಗಳಿಂದ ದೂರ ಇರಬೇಕು......* ೧) ಸೋಲು... ೨) ಭಯ... ೩) ಮರೆವು... ೪) ಅಶ್ರದ್ಧೆ.... ಸೋಲು.... ಯಾವ ವ್ಯಕ್ತಿಯೂ ಸೋಲನ್ನು ಬಯಸುವದಿಲ್ಲ. ಅಂತೆಯೇ ಅನೇಕ ಜನ ಪ್ರಯತ್ನವನ್ನೇ ಮಾಡುವದಿಲ್ಲ. ಇದು ವಿಷಾದಕರ.  ನನ್ನ ಅರೋಗ್ಯ ಸುಧಾರಿಸಿಕೊಳ್ಳುವದಕ್ಕಾಗಲಿ, ಕಂಡ ಕನಸು ನನಸಾಗಲು ಮೊದಲ ಹೆಜ್ಜೆಯನ್ನೇ ಇಡುವದಿಲ್ಲ. ಭೀಮಸೇನ ದೇವರ ದೃಷ್ಟಿಯಲ್ಲಿ ನಿಜವಾದ ಸೋಲು ಎಂದರೆ ಪ್ರಯತ್ನ ಮಾಡದಿರುವದೇ.... ಭೀಮನ ಮಾತು ಸೋಕಿನ ಭಯ ಎನಗಿಲ್ಲ. ಒಂದು ಬಾರಿ ತಪ್ಪುಸಿಕೊಂಡರೂ ಮತ್ತೊಮ್ಮೆ ನನ್ನ ಕೈಲಿ ಸಿಕ್ಕೇ ಸಿಗುತ್ತಾನೆ. ಸೋಲು ಗೆಲುವಿನ ಅವಿಭಾಜ್ಯ ಅಂಗ. "ಸೋಲೇ ಗೆಲುವಿನ ಮೂಲ." ಸೋಲಿಲ್ಲದೆ ಗೆಲವು ಅಸಾಧ್ಯ. ೨) ಭಯ.... ಪರಿಚಿತವಾತಾವರಣದಲ್ಲಿ ಸುರಕ್ಷಿತವಾಗಿ ಇರಲು ಬಯಸುವ ಜನ ತುಂಬ ಹೆಚ್ಚು. ಅಜ್ಙಾತವಲಯಕ್ಕೆ ಲಗ್ಗೆ ಹಾಕು ಬಯಸರು. ನಿಶ್ಚಿಂತತೆ ಮನುಷ್ಯನನ್ನು ಮಿತಿಗೊಳಿಸುತ್ತದೆ ಎಂದು ತಿಳಿದಿದ್ದರೂ ನಮ್ಮಂತಹವರು ಅದನ್ನೇ ಬಯಸುತ್ತಾರೆ. *ಬಹುತೇಕ ಜನ ಬದಲಾವಣೆಯನ್ನೇ ಬಯಸುವದಿಲ್ಲ. ಬದಲಾವಣೆ ಅನಾನುಕೂಲ ಎಂಬಂತೆ ಭಾಸವಾಗುತ್ತದೆ.*  ಯಾವುದರ ಬಗ್ಗೆ ನಮಗೆ ಭಯವಿದೆಯೋ, ಅದನ್ನೇ ಮಾಡುವದು ಭಯ ನಿರ್ವಹಿಸುವ ಕೀಲಿಕೈ ಇದ್ದ ಹಾಗೆಯೆ. ಆಗ ಮಾತ್ರ ಭಯದಿಂದ ಹೊರಬರಲು ಸಾಧ್ಯ. ಪ್ರತಿಯೊಂದು ಭಯದ ಗೋಡೆಯ  ಆಚೆ ಅಮೂಲ್ಯವಾದ ಖಜಾನೆ ಇದ್ದೇ ಇರುತ್ತದೆ. ೩) ಮರೆವು..... ಸ್ಫೂರ್ತಿದಾಯಕ ಉಪನ್ಯಾಸಗಳು, ಗೋಷ್ಠಿಗಳು ...

ಅರ್ಚತ ಪ್ರಾರ್ಚತ

Image
*ಪೂಜಾ ರಹಸ್ಯ* ನಮ್ಮ ಜೀವನದಲ್ಲಿ ಉಸಿರು ಎಷ್ಟು ಮುಖ್ಯಸ್ಥಾನವನ್ನು ಪಡೆದಿದೆಯೋ ಅದಕ್ಕೂ ಮುಖ್ಯ ಸ್ಥಾನ *ಭಗವತ್ಪೂಜೆ* ಗೆ ಇದೆ ಎಂಬುವದೇ ನಮ್ಮ ಸಿದ್ಧಾಂತ. ಹಿಂದೆ ಇಂದು ಪಡೆದದ್ದರ ಕೃತಜ್ಙತೆಗೆ ಬೇಕು ಹರಿ ಪೂಜೆ.. ಮುಂದೆವಪಡೆಯುವದರ ಪ್ರಾರ್ಥನೆಗೆ ಬೇಕು ಹರಿಪೂಜೆ... ಹಿಂದೆ ಘಟಿಸಿದ ಪಾಪಗಳ ಪರಿಹಾರಕ್ಕೆ ಬೆಕು ಹರಿಪೂಜೆ... ಮುಂದೆ ಮಾಡಬಹುದಾದ ಪಾಪಗಳ ಮಾಡದಿರುವಂತಾಗಲು ಬೇಕು ಹರಿಪೂಜೆ.... ಭಗವನ್ಮಹಿಮಾ ಜ್ಙಾನಪೂರ್ವಕ ಭಕ್ತಿಗೆ ಬೇಕು ಹರಿಪೂಜೆ... ದುಃಖಮಯ ಸಂಸಾರದಿಂದ ಮುಕ್ತಿಗೆ ಬೇಕು ಹರಿಪೂಜೆ... ನಿತ್ಯಸುಖಪೂರ್ಣ ಹರಿಯ ಪ್ರೀತಿಗೆ ಹರಿಪೂಜೆ ಅತ್ಯವಶ್ಯವಾಗಿ ಬೇಕು... ನಾವಾಚರಿಸುವ ಪೂಜೆ ಕೆಲೊಮ್ಮೆ ಶುದ್ಧವಾಗಿರದು.... ಪ್ರತಿಮೆಯೇ ದೇವರೆಂದು ಭಾವಿಸಿರುತ್ತೇವೆ... ದೇವರೂ ನಮ್ಮ ಹಾಗೇಯೇ ಒಬ್ಬ ಎಂಬ ಭಾವನೆ ಇರತ್ತೆ... ಗುಣಗಳ ಚಿಂತನೆ ಇರದು... ಕ್ರಮಬದ್ಧತೆಯಲ್ಲಿ ವ್ಯತ್ಯಾಸ ವಿರುತ್ತದೆ... ಯಾಂತ್ರಿಕವಾಗಿರುವ ಸಾದಧ್ಯತೆ ಹೆಚ್ಚು... ತೀರ್ಥಕ್ಕಾಗಿ ದೇವರ ಪೂಜೆ ಕೆಲವೆಡೆ ಕಾಣುತ್ತೇವೆ... ಹೀಗೇ ಏನೇನೋ ಪ್ರಸಂಗಗಳಿಂದ ದೇವರ ಪೂಜೆಯಲ್ಲಿ ಸ್ಖಾಲಿತ್ಯ ಕಂಡು ಬರುತ್ತದೆ.....  ಇದೆಲ್ಕದರ ಮೇಲೆ ನಾನು ಮಾಡಿದ ಪೂಜೆಯೇ ಸರಿಯಾದ ಪೂಜೆ ಎಂದೇ ಆಗಿರುತ್ತದೆ....  ಅದಕ್ಕಾಗಿ‌.. ಶ್ರೀಮದಾಚಾರ್ಯರು ತಮ್ಮ ಉದ್ಗ್ರಂಥವಾದ *ತಂತ್ರಸಾರ* ಎಂಬ ಪರಮ ಪವಿತ್ರ ಗ್ರಂಥದಲ್ಲಿ, ಅನಾದಿ ಅನೂಚಾನ ಸಂಪ್ರದಾಯದಿಂದ ಬಂದ, ಅನಂತ...

*ಶ್ರೀ ವಿಜಯೀಂದ್ರ ಪ್ರಭುಗಳು*

Image
*ಶ್ರೀ ವಿಜಯೀಂದ್ರ ಪ್ರಭುಗಳು* ಜ್ಙಾನಿಕುಲತಿಲಕಪ್ರಾಯರಾದ ಶ್ರೀ ವಿಜಯೀಂದ್ರಗುರು ಸಾರ್ವಭೌಮರ ಆರಾಧನಮಹೋತ್ಸವ. ದೇವಾಂಶಸಂಭೂತರಾದ ಶ್ರೀ ವಿಜಯೀಂದ್ರತೀರ್ಥರು ನೂರಕ್ಕೂ ಮಿಗಿಲಾದ ಗ್ರಂಥಗಳನ್ನು ರಚಿಸಿ, ಮಾಯಿಗಳನ್ನು ಮರ್ದಿಸಿ, ಸ್ವಮತವನ್ನು ಉಳಿಸಿದ ಮಹಾನ್ ಧೀರಪುರುಷರಿವರು. ವ್ಯಾಸರಾಜಗುರುಸಾರ್ವಭೌಮರಲ್ಲಿ ಒಂಭತ್ತುಬಾರಿ ಶ್ರೀಮನ್ಯಾಯಸುಧಾ ಓದಿದ, ಹನ್ನೊಂದು ಬಾರಿ ಸರ್ವಮೂಲಗ್ರಂಥಗಳನ್ನು ಆಮೂಲಾಗ್ರ ಅಧ್ಯಯನ ಮಾಡಿ ನಿಷ್ಣಾತ ಪಾಂಡಿತ್ಯವನ್ನು ಸಂಪಾದಿಸಿದ  ಮಹಾನ್ ಮೇಧಾವಿ ಶ್ರೀವಿಜಯೀಂದ್ರತೀರ್ಥರು. ಸರೇಂದ್ರತೀರ್ಥ ಶ್ರೀಪಾದಂಗಳವರು ಶ್ರೀವ್ಯಾಸರಾಜರಿಂದ ಭಿಕ್ಷೆಯರೂಪದಲ್ಲಿ ಪಡೆದ ಭಿಕ್ಷಾನ್ನದಂತೆ ಪರಿಶುದ್ಧ ಜ್ಙಾನಗಣಿಯಾದ ಶ್ರೀವಿಜಯೀಂದ್ರತೀರ್ಥರು, ನಮ್ಮ‌ ಮಠದ ದಿವ್ಯ ಭವ್ಯ ಮೂರ್ತಿಯಾಗಿ, ಶ್ರೀಮಠವನ್ನು ವಿಜಯೀಂದ್ರಮಠವೆಂದೇ ಪ್ರಸಿದ್ಧಿಗೆ ತಂದ ಮಹಾನುಭಾವರಿವರು. ಜ್ಙಾನಮೇರುವಿನಂತೆ ಮಳಖೇಡದಲ್ಲಿ ವಿರಾಜಮಾನರಾದ *ಶ್ರೀಮಟ್ಟೀಕಾಕೃತ್ಪಾದ ಗುರುಸಾರ್ವಭೌಮ ಚಕ್ರವರ್ತಿಗಳ* ನಿರಂತರ ಸೇವೆ ಅನುಗ್ರಹ ಸಂಪಾದಿಸಿಕೊಂಡ ಮಹಾ ಗುರುವರ್ಯರು. ಶ್ರೀಮನ್ಯಾಯಸುಧಾ, ತತ್ವಪ್ರಕಾಶಿಕಾ, ತತ್ವನಿರ್ಣಯ ಮೊದಲಾದ ಎಲ್ಲ ಟೀಕಾಗ್ರಂಥಗಳಿಗೆ ವ್ಯಾಖ್ಯಾನ, ಪಾಠ, ಉಪನ್ಯಾಸ, ಚಿಂತನೆ ಇತ್ಯಾದಿಗಳನ್ನು ಮಾಡುವ ಮುಖಾಂತರ ನಿರಂತರ ಶ್ರೀಮಟ್ಟೀಕಾಕೃತ್ಪಾದರ ಸೇವೆಯಲ್ಲಿಯೇ ಕಾಲಕಳೆದ ಮಹಾನುಭಾವರು. ಒಂದು ಶ್ಲೋಕ ರಚನೆ ಮಾಡುವದೇ ದುರ್ಧರ. ಆ ಶ್ಲೋಕ ಅವನ...

*ಕಾಲೇ ಇಲ್ಲದವನನ್ನು ನೋಡುವವರೆಗೆ ನಾನು ನನ್ನಲ್ಲಿ ಚಪ್ಪಲಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತಿದ್ದೆ.....*

*ಕಾಲೇ ಇಲ್ಲದವನನ್ನು ನೋಡುವವರೆಗೆ ನಾನು ನನ್ನಲ್ಲಿ ಚಪ್ಪಲಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತಿದ್ದೆ.....* *ಓ ವರಪ್ರದ !! ಕೋಟಿ ಕೋಟಿ ವಂದನೆಗಳು* "ವರದೇಶ ವರಪ್ರದಮ್" ದ್ವಾದಶಸ್ತೋತ್ರದ ಒಂದು ಸುಂದರ ಮಾತು. ವರಕೊಡುವ ದೇವತೆಗಳಿಗೇ ಸ್ವಾಮಿಯಾದವ, ವರಕೊಡುವವ, ಹೆದ್ದೊರೆಯಾದವನೇ ಎಮ್ಮೊಡೆಯ ವರಪ್ರದ. ಶ್ರೀಹರಿಯ ಕಾರುಣ್ಯ ಎಣಿಕೆಗೆ ಅಸಾಧ್ಯ. ಕರುಣೆಯಿಂದಲೇ ಕೊಟ್ಟವರಗಳು ಕೋಟಿ ಕೋಟಿ ಅನಂತಾನಂತ. ದಯಪಾಲಿಸಿದ ವರಗಳ ಸದುಪಯೋಗ ಆಗಬೇಕು ಅಷ್ಟೆ. ವರಪ್ರದ ದೇವರು ನಿಜ... ಆದರೆ ನನಗೇನು ಕೊಟ್ಟಿದ್ದಾನೆ.... ?? ತನಗೆ ಯಾರುಬೇಕೋ ಅವರಿಗೆ ಮಾತ್ರ ವರಕೊಟ್ಟಿದ್ದಾನೆ...???   ಈ ಪ್ರಶ್ನೆ ಸಹಜ. ಆದರೆ ನನಗೆನು ವರಕೊಟ್ಟಿದ್ದಾನೆ ಎನ್ನುವದನ್ನು,  ಇನ್ನೊಬ್ಬರಿಗೆ ಕೊಟ್ಟಿದ್ದು ನೋಡಿ ತಿಳಿಯಲು ಹೊಗಬೇಡ.  ಇನ್ನೊಬ್ಬರಿಗೆ ಏನು ಕೊಟ್ಟಿಲ್ಲ ಅದನ್ನು ನೋಡಿ ತಿಳಿದಿಕೊ. *ಕಾಲೇ ಇಲ್ಲದವನನ್ನು ನೋಡುವವರೆಗೆ ನಾನು ನನ್ನಲ್ಲಿ ಚಪ್ಪಲಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತಿದ್ದೆ* ಈ ಮಾತು ಕಾಲ ಕಾಲಕ್ಕೆ ನೆನಪಾಗ್ತಾ ಇದ್ದಾಗ ದೇವರುಕೊಟ್ಟ ವರಗಳ ಸುರಿಮಳೆಗೆ ಕೃತಜ್ಙನಾಗ್ತಾ ಹೋಗುತ್ತಾನೆ. ನಿನ್ನೆ ಬಸ್ಸಿನಲ್ಲಿ ರಾಯಚೂರು ಹೋಗುವಾಗ ಒಂದು news ಓದ್ತಿದ್ದೆ... "ಈಗತಾನೆ ಹುಟ್ಟಿದ ಕೂಸಿಗೆ ಮೂಗು ಇಲ್ಲ. ಕೇವಲ ಕಣ್ಣು ಬಾಯಿಗಳು ಮಾತ್ರ ಇವೆ." ಈ ವಾರ್ತೆಯನ್ನು ಓದುವಾಗ ನನಗೆ ದೇವರು ಎಷ್ಟು ವರಕೊಟ್ಟಿದ್ದಾನೆ ಎಂಬ ನೆನಪು ಆಗು...

*ಸಮಸ್ಯೆಗಳಿದ್ದರೇನೇ ಪ್ರತಿಭೆಯ ಅಭಿವ್ಯಕ್ತಿ*

*ಸಮಸ್ಯೆಗಳಿದ್ದರೇನೇ ಪ್ರತಿಭೆಯ ಅಭಿವ್ಯಕ್ತಿ* ಸಮಸ್ಯೆಗಳು ಎಂದಮೇಲೇ ಎಲ್ಲರಿಗೂ ಇರುವವುಗಳೆ. ಆ ಸಮಸ್ಯೆಗಳೇ ಬೇಡ ಎನ್ನಲು ಸಾಧ್ಯವಿಲ್ಲ. ಸಮಸ್ಯೆಗಳು ಎದುರೇ ಆಗದಿದ್ದರೆ ಇದ್ದಲ್ಲೇ ಇರುವಂತಾಗುತ್ತದೆಯೆ ಹೊರತು ಮುಂದೆ ಮುಂದೆ ಹೋಗಲು ಆಗುವದೇ ಇಲ್ಲ. ಸಮಸ್ಯೆಗಳು ಎಂದರೆ ನಮ್ಮ‌ ಸೇವಕರು ಇದ್ದ ಹಾಗೆಯೇ. ನಮ್ಮನ್ನು ಮುಂದೆ ಮುಂದೆ ತರುವವರೇ ಸೇವಕರು. ಸಮಸ್ಯಗಳು  ಸಾಧ್ಯತೆಗಳನ್ನು ಹುಟ್ಟಿಹಾಕುತ್ತವೆ. ಸಮಸ್ಯೆಗಳು ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ನಮ್ಮ ಬೆಳವಣಿಗೆಗಳಿಗೆ ಕಾರಣವೇ ಆಗಿವೆ. ಪ್ರತಿಯೊಂದು ಕಾರ್ಯದಲ್ಲಿಯೂ ಒಂದಲ್ಲ ನೂರು ಸಮಸ್ಯೆಗಳು. ಆ ಎಲ್ಲ ಸಮಸ್ಯೆಗಳಲ್ಲಿ ಸನ್ನಿವೇಶವನ್ನೇ ಸುಧಾರಿಸುವ ನೂರಾರು ಅಂಶಗಳು ಸೇರಿಕೊಂಡಿರುತ್ತವೆ. ಆ ಅಂಶಗಳೇ ದೊಡ್ಡ ಸವಾಲಿನದು. ಪ್ರತಿಯೊಂದು ಸಾವಾಲುಗಳೂ ಪ್ರಗತಿಗೆ ಮೆಟ್ಟಲುಗಳೇ ಆಗಿವೆ. ಸಮಸ್ಯೆಗಳೇ ಬರಬಾರದು ಎಂಬ ವ್ಯಕ್ತಿಗೆ ಪ್ರಗತಿಯ ಹಂಬಲವೇ ಇಲ್ಲ ಎಂದರ್ಥ. ಪ್ರಗತಿಯ ಹಂಬಲವಿಲ್ಲದ ಮನುಷ್ಯ ಮಹತ್ತಾದದ್ದನ್ನು ಏನನ್ನೂ ಸಾಧಿಸಲಾರ. ಸಮಸ್ಯೆಗಳನ್ನು ಸ್ವೀಕರಿಸುವದೇ, ಸವಾಲುಗಳನ್ನು ಎದರಿಸುವದೇ,  ಸಮಸ್ಯೆಗಳಿಂದಲೇ ಅತ್ಯುತ್ತಮ ಪ್ರಯೋಜನಗಳನ್ನೂ ಪಡೆಯುವದೇ. ಬಸ್ಸಿನಲ್ಲಿಯೋ, ಕಂಪನಿಯಲ್ಲಿಯೋ, ಗುರುಕುಲದಲ್ಲಿಯೋ, ಕಾಲೇಜಿನಲ್ಲಿಯೋ, ಮಠ ಮಂದಿರಗಳಲ್ಲಿಯೋ, ಸಿನೆಮಾ ಹಾಲ್ ಮಾಲ್ ಗಳಲ್ಲಿಯೋ ಒಬ್ಬ ಅತೃಪ್ತ ಮನುಷ್ಯ ಕೂಗಾಡುತ್ತಾನೆ ಎಂದರೆ ಅದೊಂದು ದೊಡ್ಡ ಸಮಸ್ಯೆಯಾಗಿ ತಲೆಕಾಡಬ...

*ಪ್ರೀತಿಸು ದೇವರನ್ನು...*

*ಪ್ರೀತಿಸು ದೇವರನ್ನು...* ಪ್ರೀತಿಸುವದೇ ಆದರೆ ದೇವರನ್ನೇ ಪ್ರೀತಿಸು. ಆ ಪ್ರೀತಿಗೆ ಬರವಿಲ್ಲ. ಎರಡೂಕಡೆ ಇಂದ ಸಾಗುವ ಪ್ರೀತಿಯೇ ನಿಜವಾದ ಪ್ರೀತಿ. ದೇವರ ಕಡೆಯಿಂದ ಪ್ರೀತಿ ಇದ್ದೇ ಇದೆ. ಅಂತೆಯೆ ನಿನ್ನನ್ನು ಸಾಕುವ, ಪೋಷಿಸುವ, ಆಪತ್ತಿನಿಂದ ರಕ್ಷಿಸುವ, ನಿರಂತರ ನಿನ್ನೊಡೆಗೆ ಇರುವ, ಕ್ಷಣಕಾಲ‌ ನಿನ್ನ  ಬಿಟ್ಟು ತೊಲಗ. ನಿನ್ನ ಕಡೆಯಿಂದ ಪ್ರೀತಿ ಅವನಿಗೆ ದೊರೆಯಬೇಕು ಅಷ್ಟೆ. *ದೇವರನ್ನು ನಾವು ಪ್ರೀತಿಸುತ್ತೇವೆಯಾ.....??? ದೇವರು ತುಂಬ ವಿಚಿತ್ರ..... ನಾವು ಪೂಜಿಸುತ್ತೇವೆ, ದೇವ ಸುಮ್ಮನಿರುತ್ತಾನೆ. ನೈವೇದ್ಯ ಇಡುತ್ತೇವೆ, ದೇವ ಸುಮ್ಮನೇ ಇರುತ್ತಾನೆ. ಆರತಿ ಮಾಡುತ್ತೇವೆ, ಅಲಗುವದಿಲ್ಲ. ಸ್ತುತಿ ಮಾಡುತ್ತೇವೆ, ತಲೆತೂಗುವದಿಲ್ಲ. ಮಾನಸಿಕ ಚಿಂತನೆ ಎಂದ್ಹೆಳುತ್ತೇವೆ, ಎಷ್ಟು ಒಪ್ಪಿಗೆ ಆಯಿತು ಗೊತ್ತಾಗಲ್ಲ. ಜಪ ಧ್ಯಾನ ಮಾಡ್ತೇವೆ, ಸ್ವೀಕರಿಸಿದನಾ ತಿಳಿಯಲ್ಲ. ಸಮರ್ಪಿಸುತ್ತೇವೆ, ಎಷ್ಟು ಸಂತುಷ್ಟನಾದನೋ ಅಸಲು ತಿಳಿಯುವದೇ ಇಲ್ಲ....... ಆದರೂ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪಣೆ, ಆರತಿ, ಮಾನಸಿಕ ಚಿಂತನೆ, ಜಪ, ಸಮರ್ಪಣೆ ಯಾವದನ್ನೂ ಬಿಡುವದಿಲ್ಲ ಅಲ್ವಾ....  ಇದುವೇ ದೇವರಲ್ಲಿಯ ಪ್ರೀತಿ... ಆದರೆ..... ನಮ್ಮ ಮನಸ್ಸು ಕಲ್ಪಿಸಿಕೊಳ್ಳುವದರಲ್ಲಿ ತುಂಬ ಜಾಣ. ಕಲ್ಪನಾ ಲೋಕದಲ್ಲಿಯೇ ತಾನು ಮಾಡಿದ ಸಾರ್ಥಕತೆಯನ್ನು ಅರಿತುಕೊಳ್ಳುತ್ತಾ, ತಾನು ಏನು ಮಾಡುತ್ತದ್ದಾನೆ ಅದೇ ಶ್ರೇಷ್ಠ ಎಂದೇ ಭಾವಿಸುತ್ತಾ ಕಲ್...

*ಕೆಲಸಗಳೆಲ್ಲ ಯಶಸ್ಸಿಗೋಸ್ಕರವೋ ಆನಂದಕ್ಕೋಸ್ಕರವೋ.....*

*ಕೆಲಸಗಳೆಲ್ಲ ಯಶಸ್ಸಿಗೋಸ್ಕರವೋ ಆನಂದಕ್ಕೋಸ್ಕರವೋ.....* ಯಶಸ್ವೀಯಾಗುವದನ್ನೂ ಸಂತೃಪ್ತಿ ಪಡುವದನ್ನೂ ಅರಿಯಬೇಕು. ಯೋಗ್ಯವಾದದ್ದನ್ನು ಘಳಿಸಿಕೊಳ್ಳುವದೇ ಯಶಸ್ಸು ಆದರೆ, ಘಳಿಸಿದ್ದನ್ನೇ ಇಷ್ಟಪಡುವದು ಸಂತೃಪ್ತಿ. ಈ ಎರಡರ ಸಮತೋಲನವೇ ವೈಭವದ ಜೀವನ. ಈ ವೈಭವದ ಜೀವನವನ್ನು ನಮ್ಮ ಎಲ್ಲ ಹಿಂದಿನ ಮಹನೀಯರು ಅಳವಡಿಸಿಕೊಂಡೇ ಬಂದಿದ್ದರು. ಅಂತೆಯೇ ಅವರು ಯಶಸ್ವಿ ಪುರುಷರೆಂದಾದರು, ಜೀವನ ಸಂತೃಪ್ತಮಯವಾಗಿತ್ತು. ನಮ್ಮ ಪ್ರತಿಯೊಂದು ಕೆಲಸದಲ್ಲಿಯೂ ನಾನು ಯಶಸ್ವಿ ಆಗಿರಬೇಕು, ನನಗೆ ಯಶಸ್ಸು ದೊರಕಿರಬೇಕು  ಹಾಗೆ ಕಾರ್ಯಗಳನ್ನು ಕೆಲಸಗಳನ್ನು ಆರಿಸಿಕೊಂಡು  ಮಾಡೋಣ. ಮಾಡುವ ಕೆಲಸದಲ್ಲಿ ಆನಂದದಿಂದ ಇರೋಣ. ಇಂದು ಇದರ ವ್ಯತಿರಿಕ್ತವಾಗಿ ನಾವು ಬಯಸುತ್ತಿದೇವೆ. ಯಶಸ್ಸಿಗೋಸ್ಕರ ಯಾವಕಾರ್ಯವೂ ಇರದೆ, ಕೇವಲ ಸುಖಕ್ಕಾಗಿ ಎಲ್ಲ ಕೆಲಸಗಳೂ ಎಂದಾಗಿದೆ. ಸುಖ ಎಂದಿಗೂ ಸಂತೃಪ್ತಿಯನ್ನು ತಂದು ಕೊಡದು. "ಆನಂದಕ್ಕಾಗಿ ಕೆಲಸ ಸರ್ವಥಾ ಬೇಡ. ಯಶಸ್ಸಿಗಾಗಿ ಕೆಲಸವಿರಲಿ." ಆನಂದಕ್ಕಾಗಿ ಮಾಡುವ ಯಾವುದೇ ಕಾರ್ಯ ಎಲ್ಲುಬೆಕಾದರೂ ಸಾಗಿಸಬಹುದು. ರೋಡಿನಮೇಲೆ ತಿನ್ಮುವದು,  ಹೊಟೆಲ್ ಅಲ್ಲಿ ತಿನ್ನುವದು, ಮೋಜು ಮಜಾ ಮಾಡುವದು, ಸಿಗರೆಟ್ ಸೇದುವದು,  ಕುಡಿಯುವದು,ಗುರು ಹಿರಿಯರಿಗೆ ಬಯ್ಯುವದು, ದೇವರನ್ನು ನಿಂದುಸುವದು, ಮನುಷ್ಯರನ್ನು ಅವಮಾನಿಸುವದು, ಪ್ರಾಣಿಗಳನ್ನು ಪೀಡಿಸುವದು,  ಇತ್ಯಾದಿ ಇತ್ಯಾದಿ ಎಲ್ಲ ಮಾಡುವದು ಸುಖಕ್ಕಾಗಿ..........

*ವೈದ್ಯರ ದಿನಾಚರಣೆಯಂದು ನಮ್ಮ ಎಲ್ಲ ವೈದ್ಯರುಗಳ ಪುಟ್ಟ ಸ್ಮರಣೆ.....*

*ವೈದ್ಯರ ದಿನಾಚರಣೆಯಂದು ನಮ್ಮ ಎಲ್ಲ ವೈದ್ಯರುಗಳ ಪುಟ್ಟ ಸ್ಮರಣೆ.....* *ಆವರೋಗವು ಏನಗೆ ದೇವ ಧನ್ವಂತ್ರಿ... ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ* ನಮ್ಮ ನಿಜ ರೋಗ ಅನಾದಿಯಿಂದ ಇದೆ ಅದುವೇ ಭವರೊಗ. ಈ ಭವರೋಗಕ್ಕೆ ಔಷಧಿ ಕೊಡುವ ವೈದ್ಯನ ಬಳಿ ತೆರಳಬೇಕು ಆ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಲೇ ಬೇಕು. ಶ್ರೀಮದಾಚಾರ್ಯರು ಒಂದು ಮಾತನ್ನು ಅರುಹಿಕೊಡುತ್ತಾರೆ..... "ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಭೇಷಜ ನಶ್ಯಂತಿ ಸಕಲಾ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್" ಯಾರು *ಅಚ್ಯುತಾಯನಮಃ ಅನಂತಾಯ ನಮಃ ಗೋವಿಂದಾಯನಮಃ, ಅಚ್ಯುತಾನಾಂತ ಗೋವಿಂದೇಭ್ಯೋ ನಮಃ* ಎಂದು ನಿರಂತರ ಚಿಂತಿಸುತ್ತಾರೆಯೋ ಅವರ ಎಲ್ಲ ತರಹದ ದೈಹಿಕ, ಮಾನಸಿಕ, ಸಾಂಸಾರಿಕ ರೋಗಗಳೆಲ್ಲವೂ ಪರಿಹಾರವಾಗುತ್ತವೆ ಎಂದು. ಹಾಗಾಗಿ ಅಚ್ಯುತ ಅನಂತ ಗೋವಿಂದ ನಾಮಕ ಭಗವದ್ರೂಪವೇ ಮೊಟ್ಟಮೊದಲ ವೈದ್ಯ ಆ ವೈದ್ಯನಿಗೆ ಅನಂತ ನಮನಗಳನ್ನು ಸಲ್ಲಿಸೋಣ. ಅಮೃತ ಪ್ರದ, ಆಯುರ್ವೇದ ಪ್ರದ *ಧನ್ವಂತರಿ,*  ಯೋಗಪ್ರಣೇತಾ *ಕಪಿಲ,* ಅಜ್ಙಾನವೆಂಬರೋಗಕ್ಕೆ *ಜ್ಙಾನಪ್ರದ ವೇದವ್ಯಾಸ* ಹೀಗೆ ಭಗವಂತನ ನಾನಾರೂಪಗಳೂ ನಮ್ಮ ಪಾಲಿನ ವೈದ್ಯರುಗಳೇ. ಆದುದರಿಂದ ಆ ಎಲ್ಲ ವೈದ್ಯರಿಗೆ ಅನಂತ ವಂದನೆಗಳು. ಸತ್ವ ರಜಸ್ ತಮಸ್ ಇವಗಳಿಂದ ಕೂಡಿದ ಪ್ರಕೃತಿಬಂಧವೇ ಮಹಾರೋಗ. ಈ ರೋಗ ಪರಿಹಾರಕರಾದ ಸತ್ವ ರಜ ತಮೋ ಗುಣಗಳಿಗೆ ಅಭಿಮಾನಿಗಳಾದ ಶ್ರೀ ಭೂ ದುರ್ಗೆಯರೂ ವೈದ್ಯರುಗಳೆ.  ಆದ್ದರಿಂದ ಆ ಮಹಾತಾಯಿಯ...