*ನಾಲಕು ಅನಿಷ್ಟಗಳಿಂದ ದೂರ ಇರಬೇಕು......*

*ನಾಲಕು ಅನಿಷ್ಟಗಳಿಂದ ದೂರ ಇರಬೇಕು......*

೧) ಸೋಲು... ೨) ಭಯ... ೩) ಮರೆವು... ೪) ಅಶ್ರದ್ಧೆ....

ಸೋಲು....
ಯಾವ ವ್ಯಕ್ತಿಯೂ ಸೋಲನ್ನು ಬಯಸುವದಿಲ್ಲ. ಅಂತೆಯೇ ಅನೇಕ ಜನ ಪ್ರಯತ್ನವನ್ನೇ ಮಾಡುವದಿಲ್ಲ. ಇದು ವಿಷಾದಕರ.  ನನ್ನ ಅರೋಗ್ಯ ಸುಧಾರಿಸಿಕೊಳ್ಳುವದಕ್ಕಾಗಲಿ, ಕಂಡ ಕನಸು ನನಸಾಗಲು ಮೊದಲ ಹೆಜ್ಜೆಯನ್ನೇ ಇಡುವದಿಲ್ಲ.

ಭೀಮಸೇನ ದೇವರ ದೃಷ್ಟಿಯಲ್ಲಿ ನಿಜವಾದ ಸೋಲು ಎಂದರೆ ಪ್ರಯತ್ನ ಮಾಡದಿರುವದೇ....

ಭೀಮನ ಮಾತು ಸೋಕಿನ ಭಯ ಎನಗಿಲ್ಲ. ಒಂದು ಬಾರಿ ತಪ್ಪುಸಿಕೊಂಡರೂ ಮತ್ತೊಮ್ಮೆ ನನ್ನ ಕೈಲಿ ಸಿಕ್ಕೇ ಸಿಗುತ್ತಾನೆ. ಸೋಲು ಗೆಲುವಿನ ಅವಿಭಾಜ್ಯ ಅಂಗ. "ಸೋಲೇ ಗೆಲುವಿನ ಮೂಲ." ಸೋಲಿಲ್ಲದೆ ಗೆಲವು ಅಸಾಧ್ಯ.

೨) ಭಯ....
ಪರಿಚಿತವಾತಾವರಣದಲ್ಲಿ ಸುರಕ್ಷಿತವಾಗಿ ಇರಲು ಬಯಸುವ ಜನ ತುಂಬ ಹೆಚ್ಚು. ಅಜ್ಙಾತವಲಯಕ್ಕೆ ಲಗ್ಗೆ ಹಾಕು ಬಯಸರು.
ನಿಶ್ಚಿಂತತೆ ಮನುಷ್ಯನನ್ನು ಮಿತಿಗೊಳಿಸುತ್ತದೆ ಎಂದು ತಿಳಿದಿದ್ದರೂ ನಮ್ಮಂತಹವರು ಅದನ್ನೇ ಬಯಸುತ್ತಾರೆ. *ಬಹುತೇಕ ಜನ ಬದಲಾವಣೆಯನ್ನೇ ಬಯಸುವದಿಲ್ಲ. ಬದಲಾವಣೆ ಅನಾನುಕೂಲ ಎಂಬಂತೆ ಭಾಸವಾಗುತ್ತದೆ.*  ಯಾವುದರ ಬಗ್ಗೆ ನಮಗೆ ಭಯವಿದೆಯೋ, ಅದನ್ನೇ ಮಾಡುವದು ಭಯ ನಿರ್ವಹಿಸುವ ಕೀಲಿಕೈ ಇದ್ದ ಹಾಗೆಯೆ. ಆಗ ಮಾತ್ರ ಭಯದಿಂದ ಹೊರಬರಲು ಸಾಧ್ಯ. ಪ್ರತಿಯೊಂದು ಭಯದ ಗೋಡೆಯ  ಆಚೆ ಅಮೂಲ್ಯವಾದ ಖಜಾನೆ ಇದ್ದೇ ಇರುತ್ತದೆ.

೩) ಮರೆವು.....
ಸ್ಫೂರ್ತಿದಾಯಕ ಉಪನ್ಯಾಸಗಳು, ಗೋಷ್ಠಿಗಳು ನಡೆಯುತ್ತವೆ. ಭಾಗವಹಿಸಿದ ನಾವೂ ತುಂಬ ಸ್ಪೂರ್ತಿವಂತರಾಗಿಯೇ ಮನೆಗೆ ಬಂದಿರುತ್ತೇವೆ. ಪ್ರಪಂಚವನ್ನೇ ಬದಲಿಸುವ ಉತ್ಸಾಹವಂತರೂ ಆಗಿರುತ್ತೇವೆ. ಆದರೆ ರಾತ್ರಿ ಕಳೆದು ಬೆಳಕು ಹರಿತೂ ಎಂದಾದರೆ ನಿತ್ಯದ ಅನೇಕ ಸಮಸ್ಯೆಗಳು ಎದುರು ಆದಾಗ, ಹಿಂದಿನ ದಿನದ ನಿರ್ಧಾರಗಳನ್ನು ಮರೆಯುತ್ತಾ ಸಾಗುತ್ತೇವೆ. ಜಗತ್ತನ್ನು ಬದಲಿಸುವದು ಅಲ್ಲ ನಾವೂ ಒಂದು ದಿನದಮಟ್ಟಿಗೂ ಬದಲಾಗಲಿಲ್ಲ.

ಸತ್ ನಿರ್ಧಾರಗಳ ಮರೆವೇ ನಮ್ಮ ಮಾರಕ, ನಮ್ಮ ಪಾಲಿನ ಒಂದು ಅನಿಷ್ಟ ಇದ್ದಂತೆಯೇ....

೪) ಅಶ್ರದ್ಧೆ....
ಮಾಡುವ ಯಾವ ಕಾರ್ಯದಲ್ಲಿಯೂ ಶ್ರದ್ಧೆ ಇರದು. *ಶ್ರದ್ಧಾವಾನ್ ಲಭತೇ (ಸರ್ವಂ)ಜ್ಙಾನಮ್* ಶ್ರದ್ಧೆ ಇಂದ ಮಾಡಿದರೆ ಎಲ್ಲವನ್ನೂ ಪಡೆಯುವ. ಊಟ ಮಾಡಲು ಶ್ರದ್ಧೆ ಇಲ್ಲ. ಮಾತಾಡಲು ಶ್ರದ್ಧೆ ಇಲ್ಲ. ಓದಲು ಸುತರಾಂ ಶ್ರದ್ಧೆ ಇಲ್ಲ. ಯಾವುದರಲ್ಲಿಯೂ ಶ್ರದ್ಧೆ ಇಲ್ಲ. ಎಲ್ಲದರಲ್ಲಿಯೂ ಕೇವಲ ಉಡಾಫೆ ಮಾತುಗಳೇ. "ಅಶ್ರದ್ಧೆಯಿಂದ ಮಾಡಿದ ಎಲ್ಲವೂ ನಿಷ್ಫಲ ಅಷ್ಟೇ ಅಲ್ಲ ವಿಫಲವೂ ಆಗುವದು" ಎನ್ನುತ್ತವೆ ಉಪನಿಷತ್ತುಗಳು.

(ದುಶ್ಚಟಗಳಲ್ಲೂ ಶ್ರದ್ಧೆಯಿಲ್ಲ. ಕಂಡದ್ದನ್ನು ಕಂಡಲ್ಲು ಕಳುವು ಮಾಡುತ್ತಾನೆ, ಕಂಡದ್ದು ಕಂಡಲ್ಲಿ ಸೇವಿಸುತ್ತಾನೆ. ಶ್ರದ್ಧೆಯಿಂದ ಮಾಡಿರುವದಿಲ್ಲ. ಸಿಕ್ಕಿಬೀಳುತ್ತಾನೆ. ಇಡೀ ಸಮಾಜಕ್ಕೇ ಮಾರಕನಾಗುತ್ತಾನೆ.)

ಹೀಗೆ ಸೋಲು, ಭಯ, ಮರೆವು, ಅಶ್ರದ್ಧೆ ನಮ್ಮ ಪ್ರಗತಿಗೆ ಇರುವ ಅನಿಷ್ಟಗಳೆ. ಈ ಅನಿಷ್ಟಗಳನ್ನು ದೂರ ಮಾಡೋಣ. ಪ್ರಗತಿಶೀಲರು ಎಂದಾಗಿ ವಿರಾಜಮಾನರಾಗೋಣ.......

*✍🏽✍🏽✍🏽✍ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*