*ವೈದ್ಯರ ದಿನಾಚರಣೆಯಂದು ನಮ್ಮ ಎಲ್ಲ ವೈದ್ಯರುಗಳ ಪುಟ್ಟ ಸ್ಮರಣೆ.....*

*ಆವರೋಗವು ಏನಗೆ ದೇವ ಧನ್ವಂತ್ರಿ... ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ*
ನಮ್ಮ ನಿಜ ರೋಗ ಅನಾದಿಯಿಂದ ಇದೆ ಅದುವೇ ಭವರೊಗ. ಈ ಭವರೋಗಕ್ಕೆ ಔಷಧಿ ಕೊಡುವ ವೈದ್ಯನ ಬಳಿ ತೆರಳಬೇಕು ಆ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಲೇ ಬೇಕು.
ಶ್ರೀಮದಾಚಾರ್ಯರು ಒಂದು ಮಾತನ್ನು ಅರುಹಿಕೊಡುತ್ತಾರೆ.....
"ಅಚ್ಯುತಾನಂತ ಗೋವಿಂದ
ನಾಮೋಚ್ಚಾರಣ ಭೇಷಜ
ನಶ್ಯಂತಿ ಸಕಲಾ ರೋಗಾಃ
ಸತ್ಯಂ ಸತ್ಯಂ ವದಾಮ್ಯಹಮ್"
ಯಾರು *ಅಚ್ಯುತಾಯನಮಃ ಅನಂತಾಯ ನಮಃ ಗೋವಿಂದಾಯನಮಃ, ಅಚ್ಯುತಾನಾಂತ ಗೋವಿಂದೇಭ್ಯೋ ನಮಃ* ಎಂದು ನಿರಂತರ ಚಿಂತಿಸುತ್ತಾರೆಯೋ ಅವರ ಎಲ್ಲ ತರಹದ ದೈಹಿಕ, ಮಾನಸಿಕ, ಸಾಂಸಾರಿಕ ರೋಗಗಳೆಲ್ಲವೂ ಪರಿಹಾರವಾಗುತ್ತವೆ ಎಂದು. ಹಾಗಾಗಿ ಅಚ್ಯುತ ಅನಂತ ಗೋವಿಂದ ನಾಮಕ ಭಗವದ್ರೂಪವೇ ಮೊಟ್ಟಮೊದಲ ವೈದ್ಯ ಆ ವೈದ್ಯನಿಗೆ ಅನಂತ ನಮನಗಳನ್ನು ಸಲ್ಲಿಸೋಣ.
ಅಮೃತ ಪ್ರದ, ಆಯುರ್ವೇದ ಪ್ರದ *ಧನ್ವಂತರಿ,* ಯೋಗಪ್ರಣೇತಾ *ಕಪಿಲ,* ಅಜ್ಙಾನವೆಂಬರೋಗಕ್ಕೆ *ಜ್ಙಾನಪ್ರದ ವೇದವ್ಯಾಸ* ಹೀಗೆ ಭಗವಂತನ ನಾನಾರೂಪಗಳೂ ನಮ್ಮ ಪಾಲಿನ ವೈದ್ಯರುಗಳೇ. ಆದುದರಿಂದ ಆ ಎಲ್ಲ ವೈದ್ಯರಿಗೆ ಅನಂತ ವಂದನೆಗಳು.
ಸತ್ವ ರಜಸ್ ತಮಸ್ ಇವಗಳಿಂದ ಕೂಡಿದ ಪ್ರಕೃತಿಬಂಧವೇ ಮಹಾರೋಗ. ಈ ರೋಗ ಪರಿಹಾರಕರಾದ ಸತ್ವ ರಜ ತಮೋ ಗುಣಗಳಿಗೆ ಅಭಿಮಾನಿಗಳಾದ ಶ್ರೀ ಭೂ ದುರ್ಗೆಯರೂ ವೈದ್ಯರುಗಳೆ. ಆದ್ದರಿಂದ ಆ ಮಹಾತಾಯಿಯರಿಗೆ ಕೋಟಿ ಕೋಟಿ ವಂದನೆಗಳು.
*ಮುಖ್ಯಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ* ಎಂದು ದಾಸರು ಕೊಂಡಾಡಿದಂತೆ ಯಾವ ರೋಗಗಳೂ ನಮ್ಮ ಸನಿಹ ಬಾರದೇ ಇರುವಂತೆ ಕಾಯುವ ಹೆದ್ದೊರೆ ಜ್ಙಾನಪ್ರದರಾದ ಮುಖ್ಯಪ್ರಾಣದೇವರು. ಗಂಧಮಾದನ ಬೆಟ್ಟ ತಂದು ಲಕ್ಷ್ಮಣ ಹಾಗೂ ಸಕಲ ಕಪಿಗಳನ್ನು ಬದುಕಿಸಿದ ಮಹಾಸ್ವಾಮಿ ಹನುಮದವಾತಾರಿ ಮುಖ್ಯಪ್ರಾಣ. ಹೀಗೆ ಹನುಮ ಭೀಮ ಮದ್ವಾತ್ಮಕ ಮುಖ್ಯಪ್ರಾಣದೇವರೂ ನಮ್ಮ ಪಾಲಿನ ವೈದ್ಯರುಗಳೆ.... ಅವರಿಗೂ ಕೋಟಿ ಕೋಟಿ ಪ್ರಣಾಮಗಳು.
"ಅಹಂ ಮಮತೆ" ಇವುಗಳೆ ಸಂಸರಾರದ ಮಹಾರೋಗಗಳು. ಇವುಗಳನ್ಬು ಕೊಟ್ಟವರು ಅಹಂಕಾರ ತತ್ವಕ್ಕೆ ಅಭಿಮಾನಿಗಳಾದ ರುದ್ರದೇವರು. ಅವರ ಅನುಗ್ರಹವಾದರೆ ಮಾತ್ರ "ಅಹಂ ಮಮತಾ ಅಭಿಮಾನಗಳು ದೂರೋಡುತ್ತವೆ," ಹಾಗಾಗಿ ನಂತರದ ವೈದ್ಯರು ರುದ್ರದೇವರೇ.... ಅವರಿಗೂ ಕೋಟಿ ಕೋಟಿ ವಂದನೆಗಳು...
ಒಂದೊಂದು ರೋಗಕ್ಕೆ ನಿಯಾಮಕರು ತತ್ವಾಭಿಮಾನಿದೇವತೆಗಳೇ ಇದ್ದಾರೆ. ಆದ್ದರಿಂದ ಅವರುಗಳೂ ನಮ್ಮ ಪಾಲಿನ ವೈದ್ಯರೇ.....
ಕ್ಯಾನ್ಸರ್ ಮೊದಲಾದ ಎಲ್ಲ ರೋಗಗಳೂ ಶ್ರೀಮಟ್ಟೀಕಾಕೃತ್ಪಾದರ, ವ್ಯಾಸರಾಜರ, ರಘೂತ್ತಮರ, ರಾಯರ, ವಿಜಯಾದಾಸಾದಿ ಪ್ರಭುಗಳ, ಹಾಗೂ ನಮ್ಮ ನಮ್ಮ ಗುರುಗಳ ಅನುಗ್ರಹದಿಂದ ಪರಿಹಾರವಾಗಿದ್ದು ಕಾಣುತ್ತೇವೆ ಆದ್ದರಿಂದ ಆ ಎಲ್ಲ ಮಹತ್ ಗುರುಪರಂಪರೆಯೇ ಮಹಾ ವೈದ್ಯರುಗಳು......
ನಮ್ಮ ತಂದೆ ತಾಯಿಗಳೂ ಮೊದಲ ವೈದ್ಯರು... ಈ ಎಲ್ಲ ಮಹನೀಯರುಗಳು ಕೇವಲ ನಮ್ಮ ಮೇಲೆ ಅನುಗ್ರಹ, ಕರುಣೆ, ದಯೆ ಇವುಗಳಿಂದಲೇ ರೋಗಕ್ಕೆ ಇಲಾಜು ಮಾಡುವ ವೈದ್ಯರುಗಳು. ಅಂತಹ ಈ ವೈದ್ಯರುಗಳಲ್ಲಿ ಕೋಟಿ ಕೋಟಿ ಪ್ರಣಾಮ ಪೂರ್ವಕ ಪ್ರಾರ್ಥನೆ *ಅನಾದಿ ಕಾಲದ ಭವರೋಗ ಪರಿಹರಿಸಯ್ಯ, ನಾ ಎಂದಿಗೂ ಮರೆಯೆ ನೀವು ಮಾಡಿದುಪಕಾರ* ಎಂದು.....
ನಮ್ಮೆಲ್ಲರನ್ನೂ ಪ್ರೀತಿಯಿಂದ ನೋಡಿ, ಅಂತಃಕರಣದಿಂದ ಮಾತಾಡಿ, ಪ್ರಾಮಾಣಿಕ ರೋಗವನ್ನು ಸರಿಯಾಗಿ ಗುರುತಿಸಿ, ಹಗಲು ಇರಳು ಎನ್ನದೆ, ಲಾಭಹಾನಿಗಳನ್ನು ಯೋಚಿಸದೆ, ಭಗವತ್ಸೇವಾರೂಪವೆಂದು ಭಾವಿಸಿ, ಯೋಗ್ಯದರದಲ್ಲಿ ನಮ್ಮ ನಾನಾ ತರಹದ ದೈಹಿಕ ಮಾನಸಿಕ ರೋಗಗಳನ್ನು ಪರಿಹರಿಸುವ ನಾಡಿನ ಎಲ್ಲ ವೈದ್ಯರುಗಳಿಗೂ ಹೃತ್ಪೂರ್ವಕ ಶುಭಾಷಯಗಳನ್ನು ಕೋರುವೆ..........
*✍🏽✍🏽✍🏽ನ್ಯಾಸ.....*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.

Comments