*ಕೆಲಸಗಳೆಲ್ಲ ಯಶಸ್ಸಿಗೋಸ್ಕರವೋ ಆನಂದಕ್ಕೋಸ್ಕರವೋ.....*

*ಕೆಲಸಗಳೆಲ್ಲ ಯಶಸ್ಸಿಗೋಸ್ಕರವೋ ಆನಂದಕ್ಕೋಸ್ಕರವೋ.....*

ಯಶಸ್ವೀಯಾಗುವದನ್ನೂ ಸಂತೃಪ್ತಿ ಪಡುವದನ್ನೂ ಅರಿಯಬೇಕು. ಯೋಗ್ಯವಾದದ್ದನ್ನು ಘಳಿಸಿಕೊಳ್ಳುವದೇ ಯಶಸ್ಸು ಆದರೆ, ಘಳಿಸಿದ್ದನ್ನೇ ಇಷ್ಟಪಡುವದು ಸಂತೃಪ್ತಿ. ಈ ಎರಡರ ಸಮತೋಲನವೇ ವೈಭವದ ಜೀವನ.

ಈ ವೈಭವದ ಜೀವನವನ್ನು ನಮ್ಮ ಎಲ್ಲ ಹಿಂದಿನ ಮಹನೀಯರು ಅಳವಡಿಸಿಕೊಂಡೇ ಬಂದಿದ್ದರು. ಅಂತೆಯೇ ಅವರು ಯಶಸ್ವಿ ಪುರುಷರೆಂದಾದರು, ಜೀವನ ಸಂತೃಪ್ತಮಯವಾಗಿತ್ತು.

ನಮ್ಮ ಪ್ರತಿಯೊಂದು ಕೆಲಸದಲ್ಲಿಯೂ ನಾನು ಯಶಸ್ವಿ ಆಗಿರಬೇಕು, ನನಗೆ ಯಶಸ್ಸು ದೊರಕಿರಬೇಕು  ಹಾಗೆ ಕಾರ್ಯಗಳನ್ನು ಕೆಲಸಗಳನ್ನು ಆರಿಸಿಕೊಂಡು  ಮಾಡೋಣ. ಮಾಡುವ ಕೆಲಸದಲ್ಲಿ ಆನಂದದಿಂದ ಇರೋಣ.

ಇಂದು ಇದರ ವ್ಯತಿರಿಕ್ತವಾಗಿ ನಾವು ಬಯಸುತ್ತಿದೇವೆ. ಯಶಸ್ಸಿಗೋಸ್ಕರ ಯಾವಕಾರ್ಯವೂ ಇರದೆ, ಕೇವಲ ಸುಖಕ್ಕಾಗಿ ಎಲ್ಲ ಕೆಲಸಗಳೂ ಎಂದಾಗಿದೆ. ಸುಖ ಎಂದಿಗೂ ಸಂತೃಪ್ತಿಯನ್ನು ತಂದು ಕೊಡದು.

"ಆನಂದಕ್ಕಾಗಿ ಕೆಲಸ ಸರ್ವಥಾ ಬೇಡ. ಯಶಸ್ಸಿಗಾಗಿ ಕೆಲಸವಿರಲಿ." ಆನಂದಕ್ಕಾಗಿ ಮಾಡುವ ಯಾವುದೇ ಕಾರ್ಯ ಎಲ್ಲುಬೆಕಾದರೂ ಸಾಗಿಸಬಹುದು. ರೋಡಿನಮೇಲೆ ತಿನ್ಮುವದು,  ಹೊಟೆಲ್ ಅಲ್ಲಿ ತಿನ್ನುವದು, ಮೋಜು ಮಜಾ ಮಾಡುವದು, ಸಿಗರೆಟ್ ಸೇದುವದು,  ಕುಡಿಯುವದು,ಗುರು ಹಿರಿಯರಿಗೆ ಬಯ್ಯುವದು, ದೇವರನ್ನು ನಿಂದುಸುವದು, ಮನುಷ್ಯರನ್ನು ಅವಮಾನಿಸುವದು, ಪ್ರಾಣಿಗಳನ್ನು ಪೀಡಿಸುವದು,  ಇತ್ಯಾದಿ ಇತ್ಯಾದಿ ಎಲ್ಲ ಮಾಡುವದು ಸುಖಕ್ಕಾಗಿ.......
ಯಶಸ್ಸಿಗೋಸ್ಕರ ಮಾಡುವ ಕಾರ್ಯ ಹೀಗೆ ಎಂದಿಗೂ ಹಾದಿ ತಪ್ಪಿಸದು. ಓದುತ್ತಾನೆ, ಹಾರ್ಡ ವರ್ಕ ಮಾಡುತ್ತಾನೆ, ಕ್ಲಾಸ್ ಗೆ ಎಂದಿಗೂ ಚಕ್ಕರ್ ಹಾಕಲ್ಲ. ಜ್ಙಾನ ಸಂಪಾದಿಸಿಕೊಳ್ಳುತ್ತಾನೆ. ಪರೋಪಕಾರಿ ಆಗಿರುವ, ದಾನಿ, ಸಹನಶೀಲ, ನಿರಂತರ ಕ್ರಿಯಾಶೀಲ, ಸತ್ಯವಂತ,  ಬೈಯಿಸಿಕೊಳ್ಳುವ ಸಮಯ ಒದಗಿದರೂ ಸುಳ್ಳು ಹೇಳಲಾರ.  ಗುರು ದೇವತಾ ದೇವರ ಭಕ್ತಿ ಮಾಡುವ ಇತ್ಯಾದಿ ಇತ್ಯಾದಿ ಸತ್ಕಾರ್ಯಗಳಲ್ಲೇ ತೊಡಗುವ....

ಕೇವಲ ಸುಖ ಉನ್ಮತ್ತನನ್ನಾಗಿಸಿದರೆ, ಯಶಸ್ಸು ಕೃತಜ್ಙನನ್ನಾಗಿಸುತ್ತದೆ. ಕೃತಜ್ಙನಾದಂತೆ ಸಂತೃಪ್ತಿಯಭಾವ ಉನ್ನತಮಟ್ಟಕ್ಕೆ ಏರುತ್ತ ಸಾಗುತ್ತದೆ.  *ಯಶೋಭರಿತ, ಕೃತಜ್ಙತಾಪೂರ್ವಕ ಸಂತೃಪ್ತಿಯೇ ಅಹಂಕಾರಿಯಾಗದಂತೆ ತಡೆಯುತ್ತದೆ.* ಆದ್ದರಿಂದ ನಮ್ಮ ಗಮ್ಯ ಯಶಸ್ಸಿನೆಡೆಗೆ ಇರಲಿ, ಸಂತೃಪ್ತಿ ತಾನಾಗಿಯೇ ಓಡಿ ಬರುತ್ತದೆ.

ಅಹಂಕಾರ ಎಂದರೆ ಏನು... ಒಬ್ಬ ಕವಿ ಸುಂದರವಾಗಿ ವಿವರಿಸುತ್ತಾನೆ.. (ಅಹಂಕಾರ = EGO = Edging god Out) ಎಂದು. ಹೀಗಾಗಬಾರದು ಎಂದೇ ನಮ್ಮಲ್ಲಿ *ಮಮ‌ಸ್ವಾಮೀ ಹರಿರ್ನಿತ್ಯಂ, ಸರ್ವಸ್ಯಪತಿರೇವ ಚ* "ನಾನು ನಿನ್ನ ದಾಸ, ಜಗದೊಡೆಯನಾದ ನೀನು ಎನ್ನ ಸ್ವಾಮಿ" ಎಂಬುವ ಚಿಂತನೆಯನ್ನು ಸಾರುವದು.

ಯಶಸ್ಸು ಹಾಗೂ ಸಂತೃಪ್ತಿಗೆ "ಏನಿದೆಯೋ ಅದರೊಟ್ಟಿಗೆ ಸಂಘರ್ಷ ಸರ್ವಥಾ ಬೇಡ, ಇರುವದರೊಂದಿಗೆ ಸಹಮತವಿರಲಿ." "ಏನಿದೆಯೋ" ಅದರಲ್ಲಿ, " ಏನಿರಬೇಕೋ" ಅದರಲ್ಲಿ  ಅಲ್ಲ. ಅವನೇ ನಿಜವಾದ ಯಶಸ್ವೀ.. ಅವನೇ ನಿಜವಾಗಿಯೂ ಸಂತೃಪ್ತ.....

ಈ ವಿಚಾರ ಭಾಗವತದಲ್ಲಿ ಹತ್ತಾರು ಕಡೆ, ನೂರಾರುಸಲ ಉಚ್ಚರಿಸಿದ ಮೂಲ ಮಂತ್ರದಂತೆ *ಯದೃಚ್ಛಾಲಾಭ ಸಂತುಷ್ಟಃ* ವಿಚಾರಿಸಲ್ಪಟ್ಟದ್ದೆ. ಈ ಮಾತನ್ನೇ ದಾಸರಾಯರು ಹೇಳುತ್ತಾರೆ *ಬಂದದ್ದರಲ್ಲಿ ಬಾಳೀಕೊ, ಗೋವಿಂದ ನಿನ್ನವನೆಂದು ಹೇಳೀಕೋ* ಎಂದು.

ಪ್ರತಿ ಹೆಜ್ಜೆಯೂ ಯಶಸ್ಸಿನಡೆಗೆ ಸಾಗಲಿ,  ಯಶಸ್ಸು ಇರುವಲ್ಲಿ ಕೃತಜ್ಙತೆ ಹೆಚ್ಚಾಗತ್ತೆ. ಕೃತಜ್ಙನೆಡೆಗೆ ಸುಖ ಸಂತೃಪ್ತಿಯು ತಾವೇ ಓಡಿಬರುತ್ತವೆ........

*✍🏽✍🏽✍ನ್ಯಾಸ.....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*