*ಶ್ರೀ ವಿಜಯೀಂದ್ರ ಪ್ರಭುಗಳು*
*ಶ್ರೀ ವಿಜಯೀಂದ್ರ ಪ್ರಭುಗಳು*
ಜ್ಙಾನಿಕುಲತಿಲಕಪ್ರಾಯರಾದ ಶ್ರೀ ವಿಜಯೀಂದ್ರಗುರು ಸಾರ್ವಭೌಮರ ಆರಾಧನಮಹೋತ್ಸವ.
ದೇವಾಂಶಸಂಭೂತರಾದ ಶ್ರೀ ವಿಜಯೀಂದ್ರತೀರ್ಥರು ನೂರಕ್ಕೂ ಮಿಗಿಲಾದ ಗ್ರಂಥಗಳನ್ನು ರಚಿಸಿ, ಮಾಯಿಗಳನ್ನು ಮರ್ದಿಸಿ, ಸ್ವಮತವನ್ನು ಉಳಿಸಿದ ಮಹಾನ್ ಧೀರಪುರುಷರಿವರು.
ವ್ಯಾಸರಾಜಗುರುಸಾರ್ವಭೌಮರಲ್ಲಿ ಒಂಭತ್ತುಬಾರಿ ಶ್ರೀಮನ್ಯಾಯಸುಧಾ ಓದಿದ, ಹನ್ನೊಂದು ಬಾರಿ ಸರ್ವಮೂಲಗ್ರಂಥಗಳನ್ನು ಆಮೂಲಾಗ್ರ ಅಧ್ಯಯನ ಮಾಡಿ ನಿಷ್ಣಾತ ಪಾಂಡಿತ್ಯವನ್ನು ಸಂಪಾದಿಸಿದ ಮಹಾನ್ ಮೇಧಾವಿ ಶ್ರೀವಿಜಯೀಂದ್ರತೀರ್ಥರು.
ಸರೇಂದ್ರತೀರ್ಥ ಶ್ರೀಪಾದಂಗಳವರು ಶ್ರೀವ್ಯಾಸರಾಜರಿಂದ ಭಿಕ್ಷೆಯರೂಪದಲ್ಲಿ ಪಡೆದ ಭಿಕ್ಷಾನ್ನದಂತೆ ಪರಿಶುದ್ಧ ಜ್ಙಾನಗಣಿಯಾದ ಶ್ರೀವಿಜಯೀಂದ್ರತೀರ್ಥರು, ನಮ್ಮ ಮಠದ ದಿವ್ಯ ಭವ್ಯ ಮೂರ್ತಿಯಾಗಿ, ಶ್ರೀಮಠವನ್ನು ವಿಜಯೀಂದ್ರಮಠವೆಂದೇ ಪ್ರಸಿದ್ಧಿಗೆ ತಂದ ಮಹಾನುಭಾವರಿವರು.
ಜ್ಙಾನಮೇರುವಿನಂತೆ ಮಳಖೇಡದಲ್ಲಿ ವಿರಾಜಮಾನರಾದ *ಶ್ರೀಮಟ್ಟೀಕಾಕೃತ್ಪಾದ ಗುರುಸಾರ್ವಭೌಮ ಚಕ್ರವರ್ತಿಗಳ* ನಿರಂತರ ಸೇವೆ ಅನುಗ್ರಹ ಸಂಪಾದಿಸಿಕೊಂಡ ಮಹಾ ಗುರುವರ್ಯರು. ಶ್ರೀಮನ್ಯಾಯಸುಧಾ, ತತ್ವಪ್ರಕಾಶಿಕಾ, ತತ್ವನಿರ್ಣಯ ಮೊದಲಾದ ಎಲ್ಲ ಟೀಕಾಗ್ರಂಥಗಳಿಗೆ ವ್ಯಾಖ್ಯಾನ, ಪಾಠ, ಉಪನ್ಯಾಸ, ಚಿಂತನೆ ಇತ್ಯಾದಿಗಳನ್ನು ಮಾಡುವ ಮುಖಾಂತರ ನಿರಂತರ ಶ್ರೀಮಟ್ಟೀಕಾಕೃತ್ಪಾದರ ಸೇವೆಯಲ್ಲಿಯೇ ಕಾಲಕಳೆದ ಮಹಾನುಭಾವರು.

ಒಂದು ಶ್ಲೋಕ ರಚನೆ ಮಾಡುವದೇ ದುರ್ಧರ. ಆ ಶ್ಲೋಕ ಅವನಿಗೇ ನೆನಪುಳಿಯುವದೂ ಕಷ್ಟ. ಅಂತಹದ್ದು ನೂರಾರುಜನ ಆ ಶ್ಲೋಕವನ್ಮು ಹೇಳಿಕೊಳ್ಳುವದಂತೂ ಅತ್ಯಂತ ಕಷ್ಟ. ಈ ತರಹದ ದುರ್ಧರವಾದ ಪ್ರಸಂಗದಲ್ಲಿ ನೂರಾಐದು ಗ್ರಂಥಗಳನ್ನು ರಚಿಸುವದು ಸಾಮಾನ್ಯಕೆಲಸವೇ ಅಲ್ಲ. ಆ ಎಲ್ಲ ಗ್ರಂಥಗಳೂ ಮಠಾತಿರಿಕ್ತ ಮತಾತಿರಿಕ್ತ ಅಧ್ಯಯನದಲ್ಲಿ ಬಂದದ್ದಂತೂ ಆಶ್ಚರ್ಯವೇ. ನಿರಂತರ ವಾದಿನಿಗ್ರಹ ಮಾಡುತ್ತಾ ಸತ್ಸಿದ್ಧಾಂತ ಸ್ಥಾಪನೆಯ ಕೌಶಲ ಊಹಾತೀತ. ಆ ಕೌಶಲ ಓದುವ ವಿದ್ಯಾರ್ಥಿಗೂ ಬರಲಿ, ನಮ್ಮ ಈ ಕೌಶಲ ಸ್ಥಿರವಾಗಿ ಉಳಿಯಲಿ ಎಂಬ ಉದ್ಯೇಶ್ಯದೊಂದಿಗೆ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ಸೇವಾರೂಪವಾಗಿ ನೂರಾಐದು ಗ್ರಂಥಗಳ ರಚನೆಯ ಮುಖಾಂತರ ಶ್ರೀಮದಾಚಾರ್ಯರಿಂದ ಸ್ಥಾಪಿತವಾದ ನಮ್ಮ ಸಿದ್ಧಂತವನ್ನು ಪ್ರಚುರಪಡಿಸಿದರು.
ಶ್ರೀವಿಜಯೀಂದ್ರತೀರ್ಥರ ಬ್ರಹ್ಮಚರ್ಯವನ್ನು ಪರೀಕ್ಷಿಸಲು ಅನೇಕ ಚಲುವೆಯರನ್ನು ಅವರಬಳಿ ಏಕಾಂತದಲ್ಲಿ ಕಳುಹಿಸಿದರು. ಹೇಗಾದರೂ ಮಾಡಿ ಅವರ ಬ್ರಹ್ಮಚರ್ಯವನ್ನು ಹರಾಜಿಗೆ ಹಾಕಿದರಾಯ್ತು ಎಂದು. ಆದರೆ ವಿರಕ್ತಶಿಖಾಮಣಿಗಳಾದ ಆ ಮಹಾತ್ಮರು ಹುಡಿಕಿದ ಉಪಾಯಮಾತ್ರ ಅದ್ಭುತ. ಶ್ರೀಮಟ್ಟೀಕಾಕೃತ್ಪಾದರನ್ನು ನೆನೆಯುವದೇನಿದೆ ಇದು ಮಹಾ ಬ್ರಹ್ಮಚರ್ಯದ ಶಕ್ತಿಗೆ ಕಾರಣವಾಗಿದೆ ಎಂದೇ ನಿರ್ಣಯಿಸಿ ಅವರಿಗೆ ಮೊರೆಹೋಗಿ ಗೆದ್ದುಬಂದ ಮಹಾತ್ಮರಿವರು. ಆ ಪ್ರಸಂಗದಲ್ಲಿಯೇ
*ಯಸ್ಯವಾಕ್ ಕಾಮಧೇನುರ್ನಃ....* ಎಂಬ ಶ್ಲೋಕವನ್ನು ರಚಿಸಿ, ಶ್ರೀಮಟ್ಟೀಕಾಕೃತ್ಪಾದರ ಅಭೂತಪೂರ್ವ ಮಹಿಮೆಯನ್ನೇ ಕೊಂಡಾಡುವ ಮುಖಾಂತರ ಶ್ರೀಮಟ್ಟೀಕಾಕೃತ್ಪದರ ಅನುಗ್ರಹ ಜಗತ್ತಿಗೆ ಆಗುವಂತೆ ಮಾಡಿದ ಗುರುಭಕ್ತರು ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರು.
ಎಲ್ಲ ವಿದ್ಯೆಗಳಲ್ಲಿ ನಿಷ್ಣಾತರಿವರು. ಅಂತೆಯೇ ಚತುಃಷಷ್ಟಿ ಕಲಾ ವಿಭೂಷಿತರು. ಇಂದು ಕುಂಭಕೋಣದ ಶಾರ್ಙ್ಗಪಾಣಿ ಶ್ರೀಕೃಷ್ಣನ ದಿವ್ಯಸನ್ನಿಧಿಯಲ್ಲಿ ವಿರಾಜಮಾನರಾಗಿ ಇದ್ದು, ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ಕಾಮಧೇನು ಕಲ್ಪತರುವಿನಂತೆ ಇರುವ ಶ್ರೀ ವಿಜಯೀಂದ್ರತೀರ್ಥರನ್ನು ಸ್ತುತಿಸೋಣ, ಸೇವಿಸೋಣ, ನಿರಂತರ ಅನುಗ್ರಹಕ್ಜೆ ಪಾತ್ರರಾಗೋಣ, ಜನುಮ ಜನಮದಲ್ಲೂ ಅವರಶಿಷ್ಯರಾಗಿಯೇ ಬಾಳೋಣ....
ಜ್ಙಾನಕೊಟ್ಟು, ಭಕ್ತಿ ಬೆಳಿಸಿ, ಶ್ರೀಹರಿಯ ಅಡದವರೆಗಳಲ್ಲಿ ನನ್ನನ್ನೂ ಒಂದು ಪುಷ್ಪವನ್ನಾಗಿ ಮಾಡಿ ಸಮರ್ಪಿಸಿ ಎಂದು ಬೇಡಿಕೊಳ್ಳೋಣ.
ಭಕ್ತಾನಾಂ ಮಾನಸಾಂಭೋಜ
ಭಾನವೇ ಕಾಮಧೇನವೇ.
ಬಜತಾಂ ಕಲ್ಪತರವೇ
ಜಯೀಂದ್ರ ಗುರುವೇ ನಮಃ||
ಈ ಮಂತ್ರವನ್ನು ಕನಿಷ್ಠ ನೂರೆಂಟು ಸಲವಾದರೂ ಪಠಿಸೋಣ.
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments