*ಸ್ಮರಿಸು ಗುರುಗಳ ಮನವೆ..*
*ಸ್ಮರಿಸು ಗುರುಗಳ ಮನವೆ..*
ಗುರುಪೌರ್ಣಿಮೆಯ ಶುಭ ಅವಸರದಲ್ಲಿ ಗುರುಗಳ ಸ್ಮರಣೆ ಜನ್ಮಸಾರ್ಥಕ.
ನಂಬಿದವರ ಇಷ್ಟಾರ್ಥ ಈಡೇರಿಸಲು, ಉದ್ಧಾರ ಮಾಡಲು ತಮ್ಮ ಸ್ವಾರ್ಥವನ್ನು ಪರಿತ್ಯಾಗ ಮಾಡುವಂತಹ ಮಹಾಕರುಣಾಳು, ದಯಾಮೂರ್ತಿ, ಶಾಪಾನುಗ್ರಹ ಸಮರ್ಥ, ಎಂದೂ ಬತ್ತದ ಜ್ಙಾನಗಂಗೆ, ಖಾಲಿಯಾಗದ ಜ್ಙಾನಗಣಿ ನಮ್ಮ ಗುರುಗಳು.
*ಜ್ಙಾನನಿಧಿಗಳನ್ನು ಸ್ಮರಿಸೋಣ*
ಗಂಗೆ ಅಂದಿನಿಂದ ಇಂದಿನವರೆಗೂ, ಮುಂದೆಂದೆಯೂ ಬತ್ತದು. ಆದರೆ ನಾವು ಗಂಗೆಯನೀರನ್ನು ತರುವದು ಮಾತ್ರ ಒಂದು ಗಿಂಡಿಯಷ್ಟು. ಹಾಗೆಯೇ ಗುರುಗಳ ಜ್ಙಾನವೆಂಬ ಗಂಗೆ ಅಂದಿನಿಂದ ಇಂದಿನವರೆಗೂ, ಮುಂದೆಯೂ ಬತ್ತದೇ ನಿರಂತರ ಹರಿಯುವಂತಹದ್ದೇ. ಆ ಜ್ಙಾವನ್ನು ಸ್ವೀಕರಿಸುವ ನಮ್ಮ ಶಕ್ತಿ ಗಿಂಡಿಯಷ್ಟೆ. ಸ್ವಲ್ಪ ಅತ್ಯಲ್ಪ. "ಗಂಗೆ ಪಾಪಕಳೆಬಹುದಷ್ಟೇ, ಜ್ಙಾನಗಂಗೆ ದೆವರನ್ನೇ ಒದಗಿಸುವಂತಹದ್ದು." ಅಂತಹ ಜ್ಙಾನನಿಧಿಗಳು ನಮ್ಮ ಗುರುಗಳು.
*ಗುರು ಸ್ಮರಣೆ ಪರಮ ಮಂಗಳ*
ಗಂಗೆ ಬ್ರಹ್ಮಾಂಡದ ಹೊರೆಗೆ ಹಿಂದೆಂದಿನಿಂದಲೂ ಇದ್ದವಳೆ. ಆದರೆ ಗಂಗೆ ಗಂಗೆಯೆಂದಾಗಿರುವದು ಮಾತ್ರ ದೇವರಪಾದಕ್ಕೆ ತಾಕಿ ಬಂದಾದಮೆಲೇಯೇ. ಆ ನೀರನ್ನು ಹೊತ್ತದ್ದಕ್ಕೇ ರುದ್ರದೇವರು ಪರಮ ಮಂಗಳ ಸ್ವರೂಪರು ಆದರು. ಹಾಗೆಯೇ
ನಮ್ಮ ಜ್ಙಾನ ಅನಾದಿಂಯಿಂದ ನಮ್ಮಲ್ಲಿಯೇ ಇದೆ. ಆ ಜ್ಙಾನ ಗುರುಮುಖಾಂತರ, ಗುರ್ವನುಗ್ರಹಪೂರ್ವಕ ಹೊತ್ತರೆ ಮಾತ್ರ ಜ್ಙಾನ ಜ್ಙಾನ ಎಂದೆನಿಸಿಕೊಳ್ಳುತ್ತದೆ. ಅಂತಹ ಜ್ಙಾನ ಹೊತ್ತಾಗ ಮಾತ್ರ. ನಮ್ಮನ್ನೂ ಪರಮಮಂಗಳಸ್ವರೂಪರನ್ನಾಗಿ ಮಾಡುತ್ತದೆ. ಅಂತಹ ಗುರುಗಳನ್ನು ನೆನೆಸೋಣ.
*ದುರಿತ ಪರ್ವತಕ್ಕೆ ಪವಿ ನಮ್ಮ ಗುರುಗಳು*
ಪಾಪಗಳಿಗೆ ಮೂಲ ಅಜ್ಙಾನ. ಅಜ್ಙಾನ ಬೆಳೆದ ಹಾಗೆ ಬೆಳೆದ ಹಾಗೆ ಪಾಪಗಳ ಅಭಿವೃದ್ಧಿ. ಆ ಎಲ್ಲ ಪಾಪಗಳಿಗೂ ಪವಿ ಕೊಡಲಿಯಂತಿದೆ ಗುರ್ವನುಗ್ರಹ. ಗುರ್ವನುಗ್ರಹವಾದರೆ ಜ್ಙಾನ. ಜ್ಙಾನ ಬೆಳೆದ ಹಾಗೆ ಹಳೆಯ ಪಾಪಗಳ ನಾಶ. ಹೊಸಪಾಪಗಳ ಪರಿಹಾರ. ಅಂತಹ ಗುರುಗಳನ್ನು ಸ್ಮರಿಸೋಣ.
*ಗುರುಗಳೇ ಪರಮ ಹಿತಕರು ನೋಡು*
ಎಲ್ಲರೂ ಹಿತೈಶಿಗಳೆ ಸಂಶಯವೇ ಇಲ್ಲ. ಈ ಸಂಸಾರಕ್ಕೆ ಬೆಕಾದ ಎಲ್ಲವುಗಳನ್ನೂ ಎಲ್ಲರೂ ಒದಗಿಸಿಕೊಡುವವರೆ. ಆದರೆ ಗುರುಗಳು ಮಾತ್ರ ಸಂಸಾರವನ್ನೇ ಬೇರು ಸಹಿತವಾಗಿ ಕಿತ್ತಿಯೊಗಿಯುವಂತಹ ಜ್ಙಾನ ಕೊಡುವವರು ಆದ್ದರಿಂದ ಪರಮ ಹಿತೈಷಿಗಳು ಗುರುಗಳೇ...
*ಗುರುಗಳಂತರ್ಯಾಮಿ ಕರ ಮುಗಿದು ಬಿನ್ನೈಪೆ*
ದೇವರಿಗೆ ಎಲ್ಲ ಕೊಡುವ ಸ್ವಾತಂತ್ರ್ಯವಿದೆ, ಸಮರ್ಥನೂ ಆಗಿದ್ದಾನೆ. ಆದರೆ ಕೊಡುವದು, ತೆಗೆದು ಕೊಳ್ಳುವದು ಗುರುಗಳ ಮುಖಾತರವೇ. ಬೇಡುವದೋ ಅಥವಾ ಸಮರ್ಪಿಸುವದೋ ಕೇವಲ ಗುರುಗಳಂತರ್ಯಾಮಿಯಾದ ಹರಿಯನ್ನೇ. ಹಾಗಾಗಿ ಎಲ್ಲದಕ್ಕೂ ಗುರುಗಳಂತರ್ಯಾಮಿಯಾಗಿಯೇ ಕರ ಮುಗಿದು ನಿರಂತರ ಬಿನ್ನೈಸುವೆ.
*ಆಂತರಿಕ ಇಂದ್ರಯಗಳ ಉಪಯೋಗಕ್ಕೆ ಬೇಕಾದ ಶಕ್ತಿ ಗುರ್ವನುಗ್ರಹದಿಂದ*
*ಬಾಹ್ಯ ಇಂದ್ರಿಯಗಳ ವಾಸನೆಗಳನ್ನು ಗೆಲ್ಲುವ ಶಕ್ತಿ ಗುರ್ವನುಗ್ರಹದಿಂದ*
*ಜೀವಾತ್ಮ ತನ್ನ ನೈಜ ಇಚ್ಛೆಗಳನ್ನು ಸಾಧಿಸಿಕೊಳ್ಳುವ ಬಗೆ ಗುರ್ವನುಗ್ರಹದಿಂದಲೇ*
*ಸತ್ಸಂಪ್ರದಾಯ ಪರಂಪರಾಪ್ರಾಪ್ತ ರಹಸ್ಯಾತಿರಹಸ್ಯ ವಿದ್ಯೆಗಳು ದೊರೆಯುವದು ಗುರ್ವನಗ್ರಹದಿಂದ*
*ನಮ್ಮ ಗುರುಗಳ ಕವನ ಮಿಥ್ಯಾಮತವೆಂದವನು ಬೊಮ್ಮರಕ್ಕಸ ಕಾಣೋ....*
*ಆರಂಭಿಸಿದ ಕಾರ್ಯ ನೂರರಷ್ಟು ಸಫಲವಾಗಬೇಕೆಂದಿದ್ದರೆ, ಆ ಕಾರ್ಯ ಗುರುಸ್ಮರಣೆಯಿಂದಾರಂಭಿಸಿ, ಗುರು ಸಮರ್ಪಣಾಂತವಾಗಿರಬೇಕು.*
ವಿದ್ಯೆಕೊಟ್ಟು, ಸದಾಚಾರ ಉಳಿಸಿ, ನಿಷ್ಠೆ ಕೊಟ್ಟು, ಧಾರ್ಮಿಕನೆದು ಮಾಡಿ, ಭಕ್ತಿಬೆಳಿಸಿ, ವಿನಯಾದಿ ಗುಣಗಳನ್ನು ಉಣಬಡಿಸಿ, ಸರ್ವವಿಧದಿಂದಲೂ ಬೆನ್ನಲಬು ಆಗಿ ನಿಂತ ಕರುಣಾಮಿಯಿ ಗುರುಗಳನ್ನು ನೆನೆಯೋಣ, ಗುರುಗಳಿಗೆ ನಿರಂತರ ಶರಣು ಹೋಗೋಣ, ಅನಂತಾನಂತ ವಂದನೆಗಳನ್ನೂ ಸಲ್ಲಿಸೋಣ...
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ

Comments