*ತಲೆ ಬಾಗಿಸುವದೇನಿದೆ ದಿವ್ಯಶಕ್ತಿಗೆ ಆಹ್ವಾನವಿಟ್ಟಂತೆಯೇ....*

*ತಲೆ ಬಾಗಿಸುವದೇನಿದೆ ದಿವ್ಯಶಕ್ತಿಗೆ ಆಹ್ವಾನವಿಟ್ಟಂತೆಯೇ....*

ಆಧ್ಯಾತ್ಮದ ಭಾಷೆಯಲ್ಲಿ ತಲೆಬಾಗಿಸುವದು ಎಂದರೆ, ದಿವ್ಯಶಕ್ತಿಯನ್ನು ಆಂತ್ರಿಸಿದಂತೆ. ಯಾರು ಇಲ್ಲಿ ತಲೆ ಬಾಗಿಸುವರೋ ಅವರು ಎಲ್ಲಾ ಬಗೆಯಲ್ಲಿಯೂ ತುಂಬಿತುಳುಕುತ್ತಾರೆ.  ಒಂದರ್ಥದಲ್ಲಿ ಸಮಗ್ರ ಜಗತ್ತಿನ ಶಕ್ತಿಗಳೆಲ್ಲ ತಮ್ಮೆಡೆಗೆ ಓಡಿಬರಲಾರಂಭಿಸುತ್ತವೆ. ತಲೆಬಾಗಿಸಿದ ವ್ಯಕ್ತಿಯ ನಿಮಂತ್ರಣೆ ಎಲ್ಲೆಡೆಯೂ ಕೇಳಿಸಲಾರಂಭಿಸುತ್ತದೆ. ಇವನು ಪ್ರಪಾತದಂತೆ ಆಗಿಬಿಡುತ್ತಾನೆ.

ತಲೆಬಾಗದ, ಸೊಕ್ಕಿನವ್ಯಕ್ತಿ ಶಿಖರದಂತೆ ಆಗಿಬಿಡುತ್ತಾನೆ. ಮಳೆ ಬರುತ್ತದೆ, ಶಿಖರದಮೇಲೂ ಮಳೆ ಬೀಳುತ್ತದೆ, ನೀರು ಸೇರುವದು ಪ್ರಪಾತಕ್ಕೇಯೇ. ಜ್ಙಾನ ಸುರಿಯುತ್ತದೆ. ಒಲಿಯುವದು ಮಾತ್ರ ಬಾಗಿದ, ಅಂತೆಯೇ ಪ್ರಪಾತದಂತೆ ಇರುವ ವ್ಯಕ್ತಿಯಡೆ ಧಾವಿಸುತ್ತದೆ.

ಶಿಷ್ಯತ್ವದ ಕಲೆ ತಿಳಿದವನ ತಲೆ ಬಾಗುತ್ತದೆ, ತಲೆ ಬಾಗುವಿಕೆಯಲ್ಲಿಯೆ ವಿನಮ್ರತೆ ಅಡಗಿದೆ, ಅಂತೆಯೇ ಎಲ್ಲದಕ್ಕೂ ಆಹ್ವಾನ ಕೊಡುವವನಾಗುತ್ತೀ. ಆಗಲೇ ಎಲ್ಲವನ್ನೂ ತುಂಬಿಕೊಳ್ಳಲು ಸಮರ್ಥ.

ಬಿರುಗಾಳಿ ಬೀಸುತ್ತಿದೆ. ಸೊಕ್ಕಿನಿಂದ ನಿಂತ ಗಿಡಗಳೂ ಇವೆ. ಪುಟ್ಟಪುಟ್ಟಗಿಡಗಳೂ ಇವೆ. ಸೊಕ್ಕಿದ ಅಂತೆಯೇ ಬಾಗದ ಗಿಡ ಕೊಚ್ಚಿಹೋದವು. ವಿನಮ್ರವಾಗಿ ಇದ್ದು ಆ ಬಿರುಗಾಳಿಯನ್ನೂ ಪ್ರೇಮದಿಂದ ಸ್ವೀಕರಿಸಿದ ಬಳ್ಳಿಗಳು ಘಟ್ಟಿಯಾಗಿ ಉಳಿದವು. ಇದುವೇ ಬಾಗುವದರ ಫಲ.

ಬಿರುಘಾಳಿ ಹೋಯಿತು, ಸೊಕ್ಕಿದ ಗಿಡಗಳು ನೆಲಕಚ್ಚಿದವು. ಬಾಗಿದ ಬಳ್ಳಿಗಳು ದೃಢವಾಗಿ ನೇರ ನಿಂತವು. ಬಾಗುವದರಿಂದ ಬಳ್ಳಿಗಳಲ್ಲಿಯ ಒಣ ಎಲೆಯಗಳು ಉದರಿದವು. ಉತ್ಸಾಹದಿಂದ ಬೆಳೆಯಲಾರಂಭಿಸಿದವು.

ಹಾಗೆಯೇ ಇಂದು ದೈವವಶಾತ್ ಒದಗಿಬಂದಿದೆ ದೈವವೆಂಬ ದೊಡ್ಡಬಿರುಗಾಳಿ, ಆ ಬಿರುಗಾಳಿಯನ್ನು ಪ್ರೀತಿಯಿಂದ ಸ್ವೀಕರಿಸಿ, ತಲೆಬಾಗಿ  ಆಟವಾಡಿದರೆ, ಆ ಆ ದೈವ ಆಳವಾದ ವ್ಯಕ್ತಿತ್ವವನ್ನೇ ರೂಪಿಸಿ, ನೂರಾರು ಜನರಿಗೆ ಅನುಕೂಲವಾಗುವಂತೆ ಮಾಡುತ್ತದೆ. ದೈವದ ವಿರುದ್ಧ ಎದೆಸೆಟಿಸಿನಿಂತರೆ ಹೇಳಹೆಸರಿಲ್ಲದಂತೆ ಕೊಚ್ಚಿಕೊಂಡು ಹೋಗುತ್ತದೆ.

ಧರ್ಮರಾಜ ಸ್ವಯಂ ಜ್ಙಾನದ ಖಣಿ. ಹಾಗಿದ್ದರೂ ಬಂದ ಜ್ಙಾನಿಗಳ ಮುಂದೆ ತಲೆ ಬಾಗಿಸಿದ, ಜಗತ್ತಿನ ಎಲ್ಲರನ್ನೂ ತನ್ನ ಪ್ರೀತಿಯ ಪ್ರೇಮದ ಕಡಲಿಗೆ ಆಹ್ವಾನಿಸಿದ. ಜಗತ್ತನ್ನು ಹಾಗೂ ಜಗತ್ತಿನ ಮನ ಮನಸದಸನ್ನೂ ಗೆದ್ದ. ಅದೇ ದುರ್ಯೋಧನ ಸೊಕ್ಕಿನಿಂದ ಸೆಟದು ನಿಂತ ದೈವದ ಮುಂದೆ ಜ್ಙಾನಿಗಳಮುಂದೆ ಕೊಚ್ಚಿಹೋದ....

ದೈವಕ್ಕೆ ತಲೆಬಾಗೋಣ, ಜಗತ್ತಿನ ಎಲ್ಲ ದಿವ್ಯಶಕ್ತಿಗಳನ್ನೂ ಪಡೆಯೋಣ. ಕೊನೆಗೆ ಗೆಲ್ಲುವ ಬಲ  ದೈವಬಲವೇ.....  ತಲೆಬಾಗಿ ಪ್ರೀತಿಸಿದರೆ ನಾನೂ ಗೆದ್ದೆ, ಸೊಕ್ಕಿನಿಂದ ದ್ವೇಶಿಸಿದರೆ ಕೊಚ್ಚಿಹೋಗುವೆ. ದೈವವನ್ನು ತಲೆಬಾಗಿ ಪ್ರೀತಿಸುವದೋ, ಸೊಕ್ಕುನಿಂದ ದ್ವೇಶಿಸುವದೋ ನಮ್ಮ ಯೋಚನೆಗೆ ಬಿಟ್ಟಿದ್ದು.....

ತಲೆಬಾಗಿಸೋಣ ದಿವ್ಯಶಕ್ತಿಗಳನ್ನೆಲ್ಲ ಆಹ್ವಾನಿಸೋಣ.  ದಿವ್ಯವಾದ ಎಲ್ಲ ವ್ಯಕ್ತಿತರವನ್ನು ಪಡೆಯಲು ಸಹಜ ಉಪಾಯ ತಲೆಬಾಗುವಿಕೆ. ಅದೇ ಆಚಾರ್ಯರು ತಮ್ಮದೆ ಭಾಷೆಯಲ್ಲಿ "ಶರಣಾಗತಿ" ಎಂದಾಗಿ ತಿಳಿಸಿದರು. ಕಾಯಾ, ವಾಚಾ, ಮನಸಾ ಎಲ್ಲದರಿಂದಲೂ ದೇವರೆದುರಿಗೆ, ಗುರುಗಳ ಸನ್ನಿಧಿಯಲ್ಲಿ ಬಾಗುವದೇ....  ಆಗ ಸೊಕ್ಕಿನವರಮೇಲೆ ಸುರಿದ ಜ್ಙಾನ, ಪುಣ್ಯ, ಕೀರ್ತಿ, ಬಲ, ಯಶಸ್ಸು ಎಲ್ಲವೂ ನಮ್ಮೆಡೆಗೆ ಧಾವಿಸಿ ಬರುತ್ತವೆ......

*✍🏽✍🏽✍ನ್ಯಾಸ.....*
ಪಂ. ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*