*ಕಾಲೇ ಇಲ್ಲದವನನ್ನು ನೋಡುವವರೆಗೆ ನಾನು ನನ್ನಲ್ಲಿ ಚಪ್ಪಲಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತಿದ್ದೆ.....*

*ಕಾಲೇ ಇಲ್ಲದವನನ್ನು ನೋಡುವವರೆಗೆ ನಾನು ನನ್ನಲ್ಲಿ ಚಪ್ಪಲಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತಿದ್ದೆ.....*

*ಓ ವರಪ್ರದ !! ಕೋಟಿ ಕೋಟಿ ವಂದನೆಗಳು*

"ವರದೇಶ ವರಪ್ರದಮ್" ದ್ವಾದಶಸ್ತೋತ್ರದ ಒಂದು ಸುಂದರ ಮಾತು. ವರಕೊಡುವ ದೇವತೆಗಳಿಗೇ ಸ್ವಾಮಿಯಾದವ, ವರಕೊಡುವವ, ಹೆದ್ದೊರೆಯಾದವನೇ ಎಮ್ಮೊಡೆಯ ವರಪ್ರದ.

ಶ್ರೀಹರಿಯ ಕಾರುಣ್ಯ ಎಣಿಕೆಗೆ ಅಸಾಧ್ಯ. ಕರುಣೆಯಿಂದಲೇ ಕೊಟ್ಟವರಗಳು ಕೋಟಿ ಕೋಟಿ ಅನಂತಾನಂತ. ದಯಪಾಲಿಸಿದ ವರಗಳ ಸದುಪಯೋಗ ಆಗಬೇಕು ಅಷ್ಟೆ.

ವರಪ್ರದ ದೇವರು ನಿಜ... ಆದರೆ ನನಗೇನು ಕೊಟ್ಟಿದ್ದಾನೆ.... ?? ತನಗೆ ಯಾರುಬೇಕೋ ಅವರಿಗೆ ಮಾತ್ರ ವರಕೊಟ್ಟಿದ್ದಾನೆ...???   ಈ ಪ್ರಶ್ನೆ ಸಹಜ. ಆದರೆ ನನಗೆನು ವರಕೊಟ್ಟಿದ್ದಾನೆ ಎನ್ನುವದನ್ನು,  ಇನ್ನೊಬ್ಬರಿಗೆ ಕೊಟ್ಟಿದ್ದು ನೋಡಿ ತಿಳಿಯಲು ಹೊಗಬೇಡ.  ಇನ್ನೊಬ್ಬರಿಗೆ ಏನು ಕೊಟ್ಟಿಲ್ಲ ಅದನ್ನು ನೋಡಿ ತಿಳಿದಿಕೊ.

*ಕಾಲೇ ಇಲ್ಲದವನನ್ನು ನೋಡುವವರೆಗೆ ನಾನು ನನ್ನಲ್ಲಿ ಚಪ್ಪಲಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತಿದ್ದೆ* ಈ ಮಾತು ಕಾಲ ಕಾಲಕ್ಕೆ ನೆನಪಾಗ್ತಾ ಇದ್ದಾಗ ದೇವರುಕೊಟ್ಟ ವರಗಳ ಸುರಿಮಳೆಗೆ ಕೃತಜ್ಙನಾಗ್ತಾ ಹೋಗುತ್ತಾನೆ.

ನಿನ್ನೆ ಬಸ್ಸಿನಲ್ಲಿ ರಾಯಚೂರು ಹೋಗುವಾಗ ಒಂದು news ಓದ್ತಿದ್ದೆ... "ಈಗತಾನೆ ಹುಟ್ಟಿದ ಕೂಸಿಗೆ ಮೂಗು ಇಲ್ಲ. ಕೇವಲ ಕಣ್ಣು ಬಾಯಿಗಳು ಮಾತ್ರ ಇವೆ." ಈ ವಾರ್ತೆಯನ್ನು ಓದುವಾಗ ನನಗೆ ದೇವರು ಎಷ್ಟು ವರಕೊಟ್ಟಿದ್ದಾನೆ ಎಂಬ ನೆನಪು ಆಗುವದಕ್ಕಿಂತಲೂ *ಈ ದರಿದ್ರ ಟ್ರಾಫಿಕ್ ಎಷ್ಟಿದೆ ನೋಡು* ಅಂತ ತಲಿಕೆಡಿಸಿಕೊಂಡಿದ್ದೇ ಹೆಚ್ಚಾಗಿತ್ತು....

ದೇವರು ನನಗೆ ಎಷ್ಟು ವರಗಳನ್ನು ಸುರಿಸಿದ್ದಾನೆ ಎನ್ನುವದನ್ನು ನಿಜವಾಗಿಯೂ ಅರಿತುಕೊಳ್ಳಬೇಕಾಗಿದ್ದರೆ ಹಾಸ್ಪೆಟಲ್ ಗಳಿಗೆ ಒಂದು ಬಾರಿ ಹೋಗಿಬಂದರೆ ಸ್ಪಷ್ಟವಾಗಿ ಮನವರಿಕೆ ಆಗುತ್ತದೆ.

ಕೊಡದಿರುವದರ ಬಗ್ಗೆ ತಲೆಕೆಡಿಸಿಕೊಳ್ಳವದನ್ನು ಬಿಟ್ಟು, ಕೊಟ್ಟದ್ದರ ಕಡೆ ಗಮನಹರಿಸುವದು ಅತ್ಯಂತ ಸಮಯೋಚಿತ ಹಾಗೂ ಸೂಕ್ತ ಎಂದೆನಿಸುತ್ತದೆ. ಬೇಡಿದ್ದನ್ನು ಕೊಡದಿರುವದು ಒಂದೆರಡು, ಬೇಡದೇ ಕೊಟ್ಟಿದ್ದು ನೂರಾರು. ಕೊಟ್ಟದ್ದಕ್ಕೆ ಋಣಿ ಆಗಿರುವದು ಎನ್ನ ಕರ್ತವ್ಯ.

*ನನಗೆ ಹಣ ಕೊಟ್ಟಿಲ್ಲ ನಿಜ. ಹಣಕೊಟ್ಟವರಿಗೆ ಕುಡಿತದ ಚಟ ಕೊಟ್ಟಾನಲ್ಲ*  ಹೀಗೆ ಮನಸ್ಸು ಬದಲಾಯಿಸಿಕೊಂಡಾಗ ದೇವರು ನನಗೆ ಮಾಡಿದ ಉಪಕಾರ ಎಷ್ಟು... ನನಲ್ಲಿ ಇರುವ ದಾರಿದ್ರ್ಯವೂ ದೇವರು ಕೊಟ್ಟ ವರ ಎಂದೇ ಯೋಚಿಸಲು ಆರಂಭಿಸುತ್ತೇವೆ.

ವರಗಳನ್ನು ಸುರಿಸುವ ಅಂತೆಯೇ *ವರಪ್ರದ* ಶ್ರೀಹರಿಯ ಚಿಂತನೆ ನಮಗೂ ನಮ್ಮ ಯೋಗ್ಯತಾನುಸಾರಿ ವರಕೊಡುವ ಶಕ್ತಿಯನ್ನು ಕೊಡುತ್ತಾನೆ. ಜೊತೆಗೆ ನಮಗೆ ವರಕೊಡುವವರನ್ನೂ ನಮ್ಮ ಸುತ್ತಲು ಇರಿಸುತ್ತಾನೆ.

ಆ ವರಪ್ರದನ ಪ್ರೇರಣೆ ಇಂದಲೇ ಇಂದು ಮೋದಿಜೀ  ಅವರ ಮುಖಾಂತರ ನಮ್ಮಂತಹ ಕೃಷಿಕರಿಗೆ ಭರ್ಜರಿ ವರವನ್ನೂ ಕೊಡಿಸಿದ್ದಾನೆ. ಇಂದು ಆ ಭಗವಂತನೇ ಸಾಲಮನ್ನಾ ಮಾಡಿಸುವ ಮುಖಾಂತರ ಮತ್ತೊಂದು ವರವನ್ನೂ ಕೊಡಿಸಬಹುದು.... 😃😃

ವರಗಳನ್ನೇ ಕೊಡುವ ಹವ್ಯಾಸವಿರುವ ದೇವ ವರಕೊಡದೇ ಕ್ಷಣಕಾಲ ಇರಲಾರ. ಅಂತೆಯೇ ಆ ವರಪ್ರದ ಹೆದ್ದೊರೆಗೆ ಅನಂತ ಅನಂತ ವಂದನೆಗಳನ್ನು ಅರ್ಪಿಸುತ್ತಾ, ಕೊಟ್ಟ ವರಗಳನ್ನು ನೆನಿಸಿ ಕೃತಜ್ಙರಾಗಿ ಇರೋಣ... 🙏🏽🙏🏽

*✍🏽✍🏽✍ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*