*ಶ್ರೀ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರು*


*ಶ್ರೀ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರು*

 ಮಹಾನುಭಾವರಾದ, ಮಹಾಜ್ಙಾನಿಗಳಾದ, ಶಾಪಾನುಗ್ರಹ ಸಮರ್ಥರಾದ,  ಗುರುಸಾರ್ವಭೌಮರಾದ ಗುರುರಾಯರ ತರುವಾಯ ಏಳನೇಯ ಯತಿಪುಂಗವರಾದ ಶ್ರೀ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ.

ಸೋಲು, ಬೇಡಿದ್ದು ಈಡೇರದಿರುವದು, ಪಾಶ್ಚಾತ್ಯರೇ ಮೊದಲಾದ ಹೊರಗಿನವರ ಹಾವಳಿ ಇವುಗಳು  ನಮಗೆ ಕಾಡುವ ಮೂರು ಪೆಡಂಭೂತಗಳು ಎಂದರೆ ತಪ್ಪಾಗಲಾರದು.

ಏಳುವದರಿಂದಾರಂಭಿಸಿ ಸೋಲುವದೇ ನಮ್ಮ ಹವ್ಯಾಸ. ಆರಕ್ಕೇ ಏಳುವ ಪ್ರತಿಜ್ಙೆ. ಆರಕ್ಕೆ ಆಲಾರ್ಮ ಆದಾಗ, ಇನ್ಹತ್ತು ನಿಮಿಷ ಬಿಟ್ಟು ಎದ್ದರಾಯ್ತಲಾ ಎಂದು ಅಲಾರ್ಮ ಆಫ್ ಮಾಡಿ ತಾಚಿ ಮಾಡ್ತೇವೆ. ಇದರರ್ಥ ಏಳುವಾಗ ಸೋತೆವು. ಅದೇರೀತಿ ರಾತ್ರಿ  ೧೦ ಕ್ಕೆ ಮಲಗುವದು ಎಂದು ಪ್ರತಿಜ್ಙೆ, ಮೋಬೈಲ್ ಹಿಡಿದುಕೊಂಡಾಗ ಮಲಗಿದ್ದು ೧೨ಕ್ಕೆ. ಹಾಗಾಗಿ ಮಲಗುವಾಗಲೂ ಸೋತೆವು. ಮಧ್ಯದಲ್ಲಿ ಸೋಲೇ ಸೋಲು.

ಅಪೇಕ್ಷೆಗಳು ನೂರಾರು. ಅದಕ್ಕೆ ತಕ್ಕ ಸಾಧನೆ ಶೂನ್ಯ. ಹಾಗಾಗಿ ಗುರುಗಳ, ದೇವತೆಗಳ, ದೇವರ ಮುಂದೆ ಬೇಡಿದ್ದೊಂದೇ ನಿಜ. ಪಡೆದದ್ದು ಎಂಬುವದು ಇಲ್ಲವೇ ಇಲ್ಲ.  ಅಪೇಕ್ಷಿತವಾದದ್ದೂ ಸಿಗದು.

ವಿಜಯಿಗಳಾಗಲು, ಇಷ್ಟಾರ್ಥಗಳನ್ನು ಪಡೆಯಲು ಧರ್ಮ ಅವಷ್ಯವಾಗಿಬೇಕು. ಧರ್ಮ ಮಾಡಲು ನಮ್ಮತನವನ್ನು ಉಳಿಸಿಕೊಂಡವನಿಗೆ ಮಾತ್ರ ಸಾಧ್ಯ. ಪರಕೀಯರ ಎಲ್ಲ ಸ್ವಭಾವಗಳೂ ನಮ್ಮಮೇಲೆ ನಿರಂತರ ಧಾಳಿ ಮಾಡುತ್ತಿವೆ.  ಅವುಗಳನ್ನು ನಮ್ಮತನವೆಂದೇ ಸ್ವೀಕರಿಸಿಕೊಂಡ ನಮಗೆ, ನಮ್ಮತನವೇ ಉಳಿದಿಲ್ಲ. ಹೀಗಾಗಿ ಧರ್ಮಮಾಡಲು ಸಾಧ್ಯವಾಗುತ್ತಿಲ್ಲ.

ಒಂದೆಡೆ ಸೋಲು, ಮತ್ತೊಂದೆಡೆ  ಇಷ್ಟಾರ್ಥಗಳು ಈಡೇರದಿರುವದು, ಮತ್ತೊಂದೆಡೆ ಪರಕೀಯರ ಧಾಳಿ ಇವಗಳಿಂದ ತತ್ತರಿಸಿ, ನರಳಿ ಹೋಗಿದ್ದು ಮಾತ್ರ ನಾನು.....

ಹೊರಬರುವದು ಹೇಗೆ... ?? ವರದೇಂದ್ರತೀರ್ಥ ಶ್ರೀಪಾದಂಗಳವರಿಗೆ ಶರಣುಹೋಗುವದೊಂದೇ ಉಪಾಯ‌..

ವಾದೇ ವಿಜಯಶೀಲಾಯ
ವರದಾಯ ವರಾರ್ಥಿನಾಮ್
ವದಾನ್ಯ ಜನಸಿಂಹಾಯ
ವರದೇಂದ್ರಾಯ ತೇ ನಮಃ

ಈ ಶ್ಲೋಕವೇ ಮೂರು ಸಮಸ್ಯೆಗಳಿಗೆ ಉಪಾಯವನ್ನು ತಿಳಿಸಿಕೊಡುತ್ತದೆ.

ವಿಜಯ ಗೆಲುವೇ ಸ್ವಭಾವವನ್ನಾಗಿ ಪಡೆದ ಮಹಾನುಭಾವರು ವರದೇಂದ್ರರು. ಅವರನ್ನು ಆಸ್ರಯಿಸಿ, ಅವರ ಅನುಗ್ರಹಕ್ಕೆ  ಪಾತ್ರರೂ ಎಂದಾರೆ ಸಣ್ಣಪುಟ್ಟ ಕಾರ್ಯಗಳಿಂದಾರಂಭಿಸಿ ಯಾವುದರಲ್ಲಿಯೂ ಸೋಲು ಬರದು.

 ಶ್ರೀಪ್ರಾಣೇಶದಾಸರು ಭಕ್ತಿಯಿಂದ ಬೇಡಿದ್ದಕ್ಕೆ, ವರರೂಪದಲ್ಲಿ ತಾವೇ ಬಂದು ಲಿಂಗಸಗೂರಿನಲ್ಕಿ ಬಂದು ನೆಲ್ಲುತ್ತಾರೆ. ಇದರಿಂದಲೇ ತಿಳಿದುಬಬರುತ್ತದೆ ಯಾರೆಲ್ಲ ವರಾರ್ಥಿಗಳಾಗಿದ್ದಾರೆ ಅವರ ಎಲ್ಲ ಯೋಗ್ಯವರಗಳನ್ನು ದಯಪಾಲಿಸುತ್ತಾರೆ ಮಹಾನುಭಾವರಾದ ವರದೇಂದ್ರರು ಎಂದು.

ರಾಮಾಶಾಸ್ತ್ರಿಯನ್ನು ಸೋಲಿಸಿ, ಅವರ ಆ ಮನೆಯನ್ನೇ ಜಯಪತ್ರರೂಪದಲ್ಕಿ ಸ್ವೀಕರಿಸಿದ ಶ್ರೀವರದೇಂದ್ರತೀರ್ಥರ ಮಹಿಮೆಯನ್ನು ಕೇಳಿದಾಗ ಅನಿಸುತ್ತದೆ ಮಾಯಾವಾದಿಗಳಿಂದಾರಂಭಿಸಿ, ಪಾಶ್ಚಾತ್ಯರೋ ಅಥವಾ ಇನ್ನಾರದೋ ಧಾಳಿಗಳು ನಿರಂತರ ಸಾಗಿದರೂ ಸಿಂಹದಂತೆ ಘರ್ಜಿಸಿ, ಅವರನ್ನು ಸೋಲಿಸಿ, ಅವರುಗಳು ವಾಸಮಾಡುವ ಪಟ್ಟಣ, ಮನೆಗಳಲ್ಲಿಯೇ ವಾಸ ಮಾಡಿ ತಮ್ಮತನವನ್ನು ಉಳಿಸಿಕೊಳ್ಳುವ ಶಕ್ತಿಯನ್ನೂ ದಯಪಾಲಿಸುತ್ತಾರೆ ಎಂದು.

ಈ ರೀತಿಯಾಗಿ ಮೂರೂ ಪೆಡಂಭೂತಗಳಿಂದ ಪಾರಾಗುವ ಸಾಮರ್ಥ್ಯ ಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರ ಚರಮಶ್ಲೋಕದಿಂದಲೇ ತಿಳಿಯಬಹುದಾಗಿದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಆ ಮಹಾನುಭಾವರನ್ನು ಸೇವಿಸಿ, ಸ್ತುತಿಸಿ, ಪ್ರಾರ್ಥಿಸಿ, ಅನುಗ್ರಹ ಸಂಪಾದಿಸಿ ನಮ್ಮ ತನವನ್ನು ಉಳಿಸಿಕೊಂಡು ವಿಜಯಿಗಳು ಆಗೋಣ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳೋಣ, ಯಾವುದೇ ಧಾಳಿಗಳು ಎದುರಾದರೂ ಸಿಂಹದಂತೆ ಎದುರಿಸುವ ಶಕ್ತಿಯನ್ನೂ ಪಡೆದುಕೊಳ್ಳೋಣ.......

*✍🏽✍🏽✍🏽ನ್ಯಾಸ.....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*