*ಬಂದೇ ಬಿಡ್ತಾ..... 🙄🙄 ಉಫ್ಫಪ್ಪ ಅಂತು ಮುಗಿತು 😊😊*


*ಬಂದೇ ಬಿಡ್ತಾ..... 🙄🙄 ಉಫ್ಫಪ್ಪ ಅಂತು ಮುಗಿತು 😊😊*

ಸಾಧನೆಗಳಲ್ಲಿ ತೊಡಗಿದಾಗ ಕೆಲೊಮ್ಮೆ ನಮಗೆ ಆಗದ ಸಾಧನೆಗಳು ಎದುರಾದಾಗ *ಬಂದೇ ಬಿಡ್ತಾ..... ಉಫ್ಫಪ್ಪ ಅಂತು ಮುಗಿತು* ಎಂಬೀ  ರಾಗಗಳು ಬರುವದು ಸಹಜ.

ಏಕಾದಶಿ ಬಿಡಲು ಮನಸ್ಸಿಲ್ಲ.  t cfi ಬಿಡಲು ಆಗಲ್ಲ. ಅಂತಹವರ ಸ್ಥಿತಿ "ಅಂತೂ ಏಕಾದಶಿ ಬಂದೇ ಬಿಡ್ತು..." ಎಂಬುವದೇ. ಇಂದಿನಿಂದ ಚಾತುರ್ಮಾಸ್ಯ ವ್ರತವಾರಂಭವಾಗುತ್ತದೆ. *ಅಂತೂ ವ್ರತ (ಕಟ್ಟು ಹಿಟ್ಟು) ಬಂದೇ ಬಿಡ್ತಾ..... 🙄🙄* ಕೊನೆಗೆ ಮುಗಿದಮೇಲೆ  *ಉಫ್ಫಪ್ಪ ಅಂತು ಮುಗಿತು 😊😊*  ಸಾಧನೆ ಅರಂಭಿಸುವದರ ಬೇಸರ, ಮುಗಿದಿದ್ದರ ಖುಶಿ ಇದ್ದರೆ ಆ ಸಾಧನೆ ಸರ್ವಥಾ ಪರಿಪೂರ್ಣ ಎಂದಾಗದು.

ಏಕಾದಶೀ ವ್ರತ ಹಾಗೂ ಚಾತುರ್ಮಾಸ್ಯ ವ್ರತ ಮಾಡ್ತೀರಾ... ?? ವ್ರತ ಮಾಡುವ ಆಸೆ ತುಂಬ ಇದೆ. ಆದರೆ ಚಹ ಕಾಫಿ ಬಿಡಲು ಆಗಲ್ಕ. ಚಹ ಕಾಫಿ ತೊಗೊಂಡು ಏಕಾದಶಿ ಹಾಗೂ ಚಾತುರ್ಮಾಸ್ಯ ವ್ರತಗಳನ್ನು ಕಟ್ಟು ನಿಟ್ಟಾಗಿ‌ಮಾಡುತ್ತೇವೆ... ನೋಡಿ ಆಚಾರ್ಯರೇ... *ನಮಗೆ ಹೆಗೆ ಸಾಧ್ಯವೋ ಹಾಗೆ ಮಾಡುತ್ತೆವೆ* ಅದಕ್ಕೆ ನೀವು ಮೆಚ್ಚಬೇಕು ಇಷ್ಟೆ. ಹೀಗೆ ಕೆಲವರು ಹೇಳುವದಿದೆ...

ಹೇಗೆ ಸಾಧ್ಯವೋ ಹಾಗೆ ಮಾಡುವದು ಅತ್ಯುತ್ತಮ ಅಲ್ಲದಿದ್ದರೂ ಉತ್ತಮವೇ. ಆದರೆ ಹೇಗೆ ಹೇಳಿದೆ ಶಾಸ್ತ್ರ ಹಾಗೆ ಮಾಡುವದೇನಿದೆ ಅತ್ಯುತ್ತಮ. ಶಾಸ್ತ್ರ  ಹೇಳಿದ ಹಾಗೆಯೇ ಮಾಡುವದು ಸೂಕ್ತ.

ಶಾಸ್ತ್ರ ಹೇಗೆ ಹೆಳಿದೆ... ???
ವ್ರತ ಎಂದರೆ "ವ್ರತ ತ್ಯಾಗೆ" ಬಿಡುವದು ಎಂದರ್ಥ.  ಏಕಾದಶಿಯ ದಿನ  ಆಹಾರವನ್ನು ಬಿಡುವದೇ ಶ್ರೇಷ್ಠ ವ್ರತ. ಎಲ್ಲವನ್ನೂ ತಿಂದು ವ್ರತ ಮಾಡುವದು ತರವಲ್ಲ. ಚಾತುರ್ಮಾಸ್ಯ ವ್ರತದಲ್ಲಿಯೂ ಅಷ್ಟೆ ದೈನಿಂದನ ಎಲ್ಲ ಭೋಗ್ಯ ವಸ್ತುವನ್ನೂ ತ್ಯಜಿಸಿ, ಕಾಲಕ್ಕನುಗುಣವಾಗಿ ಶಾಸ್ತ್ರ ಹೇಳಿದ ಆಹಾರವನ್ನು ಮಾತ್ರ ಸೇವಿಸಿ ಇರುವಂತಹದ್ದೇ ಚಾತುರ್ಮಾಸ್ಯವ್ರತ.

ಮನೆಗೆ ಆತ್ಮೀಯ ಹಿತೈಶಿ ಬಂಧುಗಳು ಬರುತ್ತೇನೆ ಎಂದು ಹೇಳಿದಾಗ, "ಬಂದೇ ಬಿಟ್ರಾ.... ಅಂತ ಬೆಸರ ಮಾಡಿಕೊಂಡು, ಸಿಡಿಮಿಡಿ ಮಾಡಿಕೊಳ್ಳುವದು, ಸರಿಯಾಗಿ ಆದರ ಸತ್ಕಾರ ಮಾಡದೇ ಇರುವದು" ಹೆಗೆ ಅವರಿಗೆ ಅವಮಾನ ಮಾಡಿಂದಂತಾಗುತ್ತದೆಯೋ... ಅದೆರೀತಿಯಾಗಿ ಹೊರಡುವಾಗ "ಅಂತೂ ಹೊರಟ್ರಾ ಹೋಗಿಬರ್ರಿ ಅಂತ ಖುಶಿಯಿಂದ, ಕುಣಿತಾ ಕಳಿಸಿದರೆ" ಆ ಹಿತೈಷಿಗೆ ಎಷ್ಟು ಅವಮಾನ ಮಾಡುದಂತಾಗುತ್ತದೆಯೋ... ಹಾಗೆಯೇ...

ಸಾಧಕನಿಗೆ ಈ ವ್ರತಗಳು ಎದುರು ಆದಾಗ "ಉಫ್ಫಪ್ಪ ಅಂತೂ ಬಂದೇ ಬಿಡ್ತು"  ಎಂದು ರಾಗ ಎಳೆದು  ವ್ರತವನ್ನೋ ವ್ರತಾಭಿಮಾನಿ‌ದೇವತೆಗಳನ್ನೋ ಸ್ವಾಗತಿಸುವದಾಗಲಿ, ಅಥವಾ *ಅಂತೂ ಮುಗಿತಪ್ಪ...* ಎಂಬ ಖುಶಿಯೊಂದಿಗೆ  ವ್ರತವನ್ನೋ ವ್ರತಾಭಿಮಾನಿ ದೇವತೆಗಳನ್ನೋ ಬೀಳ್ಕೊಡುವದೂ ಏನಿದೆ ಇದು ಅತ್ಯಂತ ಅನಾಗರಿಕ ಹಾಗೂ  ತಪ್ಪು ಆದ ನಡವಳಿಕೆಯೇ ಎಂದಾಗುತ್ತದೆ. 

ನಮ್ಮ ಮಹಾಮಹಾ ಪಾಪಗಳನ್ನು ಸುಟ್ಟು ಹಾಕಲೇ ಬಂದ, ಅಂತೆಯೇ ಪರಮ ಹಿತೈ಼ಷಿಯಾದ ಇಂದಿನ "ಏಕಾದಶಿಯನ್ನಾಗಲಿ ಅಥವಾ ಇಂದಿನಿಂದ ಆರಂಭವಾಗುವ ಚಾತುರ್ಮಾಸ್ಯ ವ್ರತವನ್ನಾಗಲಿ ಪ್ರೀತಿಯಿಂ ಸ್ವಾಗತಿಸೋಣ. ಬೀಳ್ಕೊಡುವಾಗ ಹಿತೈಷಿ ದೂರ ಹೊರಟಾಗ ಆಗುವ ದುಃಖದೊಂದಿಗೆ ಬೀಳ್ಕೊಟ್ಟು" ಪ್ರೀತಿ ಉಳಿಸುವಂತೆ ಮಾಡಿ‌ಕಳುಹಿಸೋಣ. ಹಾಗಾದಾಗ ಮಾತ್ರ ಅದೇ ಪ್ರೀತಿಯಿಂ ದೇವತೆಗಳು ಪುನಃ ನಮ್ಮ ಮನೆ ಬಾಗಿಲಿಗೆ ಬಂದು ವ್ರತಾನುಷ್ಠಾನಗಳನ್ನು ಮಾಡಿಸಿ ಅನುಗ್ರಹಿಸುತ್ತಾರೆ.

ಆದ್ದರಿಂದ *ಬಂದೇ ಬಿಡ್ತಾ..... 🙄🙄 ಉಫ್ಫಪ್ಪ ಅಂತು ಮುಗಿತು 😊😊* ಎಂಬೀ ಭಾವನೆ ತಾರದೆ, ಬಂತೂ ಎಂಬ ಖುಶಿಯೊಂದಿಗೆ ಸ್ವಾಗತಿಸಿ, ಪಾಪಗಳ ಪರಿಹಾರ ಮಾಡಿ, ಪುಣ್ಯಸಂಪಾದಿಸಿಕೊಳ್ಳುವ ದೊಡ್ಡ ಪ್ರಸಂಗ ಮುಗಿತಲಾ ಎಂಬ ಕೊರಗಿನ ಭಾವ ಇರಲಿ. ಹಾಗಾದಾಗ ಮಾಡುವ ಎಲ್ಲ ವ್ರತಗಳೂ ಪೂರ್ಣವಾಗುತ್ತವೆ. ವ್ರತಕ್ಕೆ, ವ್ರತಾಭಿಮಾನಿಗಳಿಗೆ, ನಿಯಾಮಕ ವಾಯು ಹಾಗೂ ವಾಯ್ವಂತರ್ಯಾಮಿ ಶ್ರೀಹರಿಗೆ ಪ್ರೀತಿಪಾತ್ರವೂ ಆಗುತ್ತದೆ..

ಹರೇ ವಿಠ್ಠಲ!!! ಹರೇ ವಿಠ್ಠಲ !!! ಹರೇ ವಿಠ್ಠಲ !!!
*ಇಂದು ಆಷಾಢೀ ಪ್ರಥಮ ಏಕಾದಶಿ.*

ಎಲ್ಲರೂ ಇಂದಿನ ದಿನದಿಂದ ಆರಂಭಿಸುವ ವರ್ಷದ ಎಲ್ಲ ವ್ರತಗಳಿಗೆ ದೇಹ ಮನಸ್ಸುಗಳು ಶುದ್ಧಿ ಆಗುವದಕ್ಕೆ, ಅಪಮೃತ್ಯು ಪರಿಹರಿಸಿಕೊಳ್ಳುವದಕ್ಕೆ *ಮುದ್ರಾಧಾರಣೆಯನ್ನು* ಮಾಡಿಸಿಕೊಳ್ಳುವ ಒಂದು ಶುದ್ಧ ಸಂಪ್ರದಾಯ ನಮ್ಮ ಮತದಲ್ಲಿ ಬಂದಿದೆ. ಅಂತೆಯೇ ದಾಸರು  *ಪದುಮನಾಭನ ಚಿಹ್ನೆಯನ್ನು ಧರಿಸಿಕೊಂಡು ಮೆರೆಯಿರೋ, ಭರದಿ ಯಮನ ಭಟರು ಅಂಜಿ ಅಡವಿ ಪೋಪುವರೋ* ಎಂದು ಪದುಮನಾಭನ ದಿನದಂದು, ಪದುಮನಾಭನ ಚಿಹ್ನೆಯಾದ ಚಕ್ರ, ಶಂಖ, ಗದೆ, ಪದ್ಮ ಮೊದಲಾದವುಗಳನ್ನು ಧರಿಸಿಕೊಳ್ಳಿ. ಮುದ್ರೆಗಳನ್ನು ಧಾರಣೆ ಮಾಡಿದ ಕ್ಷಣಕ್ಕೆ ಪಾಪ ಪರಿಹಾರ. ಪಾಪಗಳೇ ಇಲ್ಲ ಎಂದಾದಮೇಲೆ ಯಮದೂತರಿಗೆ ನಮ್ಮ ಸನಿಹ ಬರಲು ಆಸ್ಪದವೇ ಇಲ್ಲ. ಎಂದು ಸವಿಮಾತುಗಳನ್ನು ನುಡಿಯುತ್ತಾರೆ.

ಅಂತೆಯೆ ನಮ್ಮ‌ಮಾಧ್ವಪೀಠಾಧಿಪತಿಗಳಲ್ಲರೂ ಸೂಕ್ತ ಸ್ಥಳಗಳಲ್ಲಿ, ಎಷ್ಟೇ ಜನ ಭಕ್ತರು ಬಂದರೂ, ತಮಗೆ ಎಷ್ಟೇ ತೊಂದರೆ ಆದರೂ ಭಕ್ತರ ಉದ್ಧಾರಕ್ಕಾಗಿ  ಮುದ್ರಾಧಾರಣೆ ಮಾಡುಸುತ್ತಿರುತ್ತಾರೆ. ಯಾರೆಲ್ಲರಿಗೆ ಸಾಧ್ಯವೋ ಅವರೆಲ್ಲ ತಮ್ಮ ತಮ್ಮ ಗುರುಪೀಠದ ಯತಿಗಳ ಸನಿಹ ಹೋಗಿ ಅನುಗ್ರಹ ಪಡೆದು, ಪಾಪ ಕಳೆದುಕೊಂಡು, ದೇಹ ಮನಸದಸು ಶುದ್ಧಿಮಾಡಿಕೊಂಡು, ಸಾಧನೆಗೆ ಅಣಿಯಾಗೋಣ ಅಲ್ಲವೆ....

*✍🏽✍🏽✍🏽✍ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.

Comments

G J Shurpali said…
An opener for beginners indeed. Very very informative and interesting. G J Shurpali

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*