*ನೀನು ಕೊಟ್ಟ ಎಲ್ಲ ಸಾಮರ್ಥ್ಯವನ್ನೂ ಬಳಿಸಿಕೊಂಡಿದ್ದೇನೆ.........*

*ನೀನು ಕೊಟ್ಟ ಎಲ್ಲ ಸಾಮರ್ಥ್ಯವನ್ನೂ ಬಳಿಸಿಕೊಂಡಿದ್ದೇನೆ.........*

ಜೀವನವೇ ಒಂದು ದೊಡ್ಡ ಕೌಶಲ. ವಿಶೇಷವಾಗಿ ನಮ್ಮ ಜೀವನ ಉತ್ತಮ ಕೌಶಲ. ನಮ್ಮ ಜೀವನಕ್ಕಾಗಿ ನಮ್ಮನ್ನು ನಾವು ಸಂಪೂರ್ಣವಾಗಿ ಸಮೃಪಿಸಿಕೊಳ್ಳಲು ಸಿದ್ಧರಾದೆವು ಎಂದಾದರೆ,  ಅಂದೆಯೇ ಸಿದ್ಧಿಯಕೌಶಲ ಕರಗತವಾಯಿತು ಎಂದೇ ಅರ್ಥ.

ನಿತ್ಯ ಕೆಲವುದರ ಕಡೆ ಗಮನ...
ಏನ್ನನ್ನು ಸಾಧಿಸಬೇಕೆಂದು ಬಯಸಿದ್ದೇವೆ.. ?? ಈ ವರೆಗೆ ಏನನ್ನು ಸಾಧಿಸಿದ್ದೇವೆ... ?? ಮುಂದಿನ ತಲೆಮಾರಿಗೆ ಬಿಟ್ಟುಹೋಗುವ ಸಂಪತ್ತು ಯಾವದು.. ?? ಈ ಅಂಶಗಳ ನಡುವೆ ಕೊಂಚ ಆಲೋಚನೆ ಅತ್ಯವಶ್ಯಕ.

ಬೆರಳುಗಳ ನಡುವೆ ಸುರಿದು ಹೊಇದ ನೀರಿನಂತೆ ಕಾಲ ಸರಸರಜರಿದು ಹೋಗುತ್ತಿದೆ. ಪಾತ್ರೆ ಇಟ್ಟರೆ ಸೋರಿದ ನೀರು ಸಿಗಬಹುದು. ಆದರೆ ಕಾಲ ಹೋಗಿದ್ದು ಹೋಗಿಯೇ ತೀರಿತು. ಮರಳಿ ಎಂದಿಗೂ ಬಾರದು.

ದೇವರು ನಮಗೆ ಕೊಟ್ಟ ಸಾಮರ್ಥ್ಯಗಳು ಅನೇಕ. ಅನೇಕ ಸಾಮರ್ಥ್ಯಗಳು ಇರುವದರಿಂದ ಸಾಧಿಸುವದೂ ಅನೇಕ ಇವೆ. ಸಾಧಿಸಿಕೊಳ್ಳುವ ಚಾಣಾಕ್ಷತೆಗೆ ಬೇಕು ಸಮರ್ಪಣಾಭಾವ ಮಾತ್ರ.

(ಲೌಕಿಕ ...ವಿದ್ಯೆ, ಅಧ್ಯಯನ, ಹಣಸಂಪಾದನೆ,
ಕಲೆ...ಸಂಗೀತ, ಸಾಹಿತ್ಯ, ಲೇಖನ, ನಾಟ್ಯ, ನರ್ತನ,
ಸಂಬಂಧ...ಒಡನಾಟ, ಸಾತ್ವಿಕತೆ, ಸಜ್ಜನಿಕೆ, ಮೆಚ್ಚುವಿಕೆ,  ಪರೋಪಕಾರ, ಗುಣವಂತಿಕೆ.
ಚಟುವಟಿಕೆಗಳು... ಲವಲವಿಕೆ, ಬುದ್ಧಿವಂತಿಕೆ, ನಿರ್ಣಯಗಳು, ವ್ಯಾಪಕ ಹಾಗೂ ಆಳವಾದ ವಿಚಾರವಂತಿಕೆ, ಅದಕ್ಕಾಗಿ ನಾನಾ ಗ್ರಂಥಗಳ ಅಧ್ಯಯನ.
ಆದರ್ಶ ಜೀವನ... ಕಟ್ಟುನಿಟ್ಟಿನ ಪಾಲನೆ,  ಸಹನೆ, ಸಂಯಮ, ಕಟುಂಬ ಹಾಗೂ  ಸಮಾಜದ ಸಮತೋಲನ.
ಸಾಧನೆ.... ಜ್ಙಾನ, ಕರ್ಮಾಚರಣೆ, ವೇದಾಧ್ಯಯನ, ಶಾಸ್ತ್ರಾಧ್ಯಯನ, ಧ್ಯಾನ, ಭಗವಂತನಲ್ಲಿ ಸ್ನೇಹ, ಭಕ್ತಿ,
ಆಯುಷ್ಯ... ಯೋಗ, ಆಟ, ಓಟ, ಊಟ, ವಿಹಾರ,  ಆರೋಗ್ಯಸಂರಕ್ಷಣೆ, )
ನಾನಾ ತರಹದ ಸಾಧನೆಗೆ ಯೋಗ್ಯವಾದದ್ದು ನೂರಾರು ಉಪಾಯಗಳು ಇವೆ. ಯಾವುದರಲ್ಲಿಯೂ ಗಮನ ಕೊಡದೆ ಇರುವದರಿಂದಲೇ  ಯಶಸ್ವಿಯಾಗಿಲ್ಲ. ಸಿದ್ಧಿ ದೊರಕಿಲ್ಲ.  "ನಾಳೆ ಕೊನೆಯದಿನ ಎದುರಾದಾಗ, ದೇವರ ಮುಂದೆ ನಿಂತಾಗ *ಹೇ ಭಗವನ್‌ !! ನೀನು ಕೊಟ್ಟ ಎಲ್ಲ ಸಾಮರ್ಥ್ಯಗಳನ್ನೂ ಬಳಿಸಿದ್ದೇನೆ* ಎಂದು ಹೇಳುವಂತಾಗಬೇಕು." ಅದಕ್ಕೆ ಇಂದಿನಿಂದಲೇ ನಾವೆಲ್ಲ ಯುವಕರು ಸಿದ್ಧರಾಗಬೇಕು.

ವಸಿಷ್ಠ ವಾಮದೇವ ಮೊದಲಾದ ಋಷಿಗಳು, ಶ್ರೀಮಜ್ಜಯತೀರ್ಥರು, ಶ್ರೀರಘೂತ್ತಮತೀರ್ಥರು, ಶ್ರೀ ರಾಘವೇಂದ್ರಪ್ರಭುಗಳು, ಯಾದವಾರ್ಯರು, ವಿಜಯದಾಸಾದಿ ಮಹಾ ಮಹಾ ದಾಸರುಗಳು ಮೊದಲುಮಾಡಿ ನಮ್ಮ ಪರಮಗುರುಗಳು ಹಾಗೂ ನಮ್ಮ ಗುರುಗಳ ಪರ್ಯಂತ, ಮತ್ತು ಇಂದಿರುವ ಅನೇಕ ಜ್ಙಾನಿಗಳು ಮೊದಲಮಾಡಿ ಯಾರೇ ಸಿದ್ಧಪುರುಷರು ಎಂದಾಗಿದ್ದಾರೆ ಎಂದರೆ ಅದಕ್ಕೆ ಮೂಲ ೧) ಅವರ ಗುರಿ ನಿರ್ಧಾರಿತವಾಗಿರುತ್ತಿತ್ತು. ೨) ಗುರಿಸಾಧಿಸಲು ಬೇಕಾಗಿರುವದನ್ನು ನಿತ್ಯ ಯೋಚಿಸಿ, ಮಾಡಬೇಕಾದ ಕಾರ್ಯಗಳನ್ನು ನಿಶ್ಚಯಮಾಡಿಕೊಂಡಿದ್ದರು. ೩) ಮುಂದಿನ ಪೀಳಿಗೆಯಾದ ನಮಗೆ ಏನೆಲ್ಲ ಕೊಡಬೇಕು, ಉಳಿಸಿ ಹೋಗಬೇಕು ಎಂಬುವದೂ ನಿಶ್ಚಯಿಸಿಕೊಂಡಿದ್ದರು. ೪) ಅದಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಣಾಭಾವದಿಂದ ಒಪ್ಪಸಿಕೊಂಡಿದ್ದರು. ಅಂತೆಯೇ ಅವರೆಲ್ಲರೂ ಸಿದ್ಧಪುರುಷರು ಎಂದಾದರು. ಈ ನಾಲಕ್ಕೂ ಇಲ್ಲದಿರುವದರಿಂದ ಬಿದ್ದಪುರುಷರು ಎಂದಾಗದೆ, ನಾಲಕನ್ನೂ ರೂಢಿಸಿಕೊಂಡು ಸಿದ್ಧಪುರುಷರೂ ಎಂದಾಗೋಣ.

ವಿಜಯದಾಸರು ತಳಿಸಿದಂತೆ ಸಿದ್ಧಪುರುಷರು ಎಂದಾಗಲು  ಸಿದ್ಧಿದಾಯಕ *ಕಪಿಲ* ರೂಪಿ ಭಗವಂತನನ್ನು ನಿತ್ಯ ಎದ್ದಾಕ್ಷಣ ಕನಿಷ್ಠ ಏಳುಬಾರಿಯಾದರೂ ನೆನಿಸೋಣ. ಅವನ ಅನುಗ್ರಹ ನಮ್ಮಲ್ಲರಮೇಲೆ ಸದಾ ಇರಲಿ, ಇಂದಿನ ಯುವಕರಿಗೆ ವಿಶೇಷವಾಗಿ ಆಗಲಿ ಎಂದೂ ಪ್ರಾರ್ಥಿಸೋಣ.
*ನೀನು ಕೊಟ್ಟ ಎಲ್ಲ ಸಾಮರ್ಥ್ಯವನ್ನೂ ಬಳಿಸಿಕೊಂಡಿದ್ದೇನೆ.........* ಎಂದುಬೊಪ್ಪಿಸಿಯೇ ತೀರೋಣ. 

*✍🏽✍🏽✍ನ್ಯಾಸ.....*
ಗೋಪಾಲದಾಸ.
(ವಿಜಯಾಶ್ರಮ, ಸಿರವಾರ.)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*