*ಸಮಸ್ಯೆಗಳಿದ್ದರೇನೇ ಪ್ರತಿಭೆಯ ಅಭಿವ್ಯಕ್ತಿ*

*ಸಮಸ್ಯೆಗಳಿದ್ದರೇನೇ ಪ್ರತಿಭೆಯ ಅಭಿವ್ಯಕ್ತಿ*

ಸಮಸ್ಯೆಗಳು ಎಂದಮೇಲೇ ಎಲ್ಲರಿಗೂ ಇರುವವುಗಳೆ. ಆ ಸಮಸ್ಯೆಗಳೇ ಬೇಡ ಎನ್ನಲು ಸಾಧ್ಯವಿಲ್ಲ. ಸಮಸ್ಯೆಗಳು ಎದುರೇ ಆಗದಿದ್ದರೆ ಇದ್ದಲ್ಲೇ ಇರುವಂತಾಗುತ್ತದೆಯೆ ಹೊರತು ಮುಂದೆ ಮುಂದೆ ಹೋಗಲು ಆಗುವದೇ ಇಲ್ಲ.

ಸಮಸ್ಯೆಗಳು ಎಂದರೆ ನಮ್ಮ‌ ಸೇವಕರು ಇದ್ದ ಹಾಗೆಯೇ. ನಮ್ಮನ್ನು ಮುಂದೆ ಮುಂದೆ ತರುವವರೇ ಸೇವಕರು. ಸಮಸ್ಯಗಳು  ಸಾಧ್ಯತೆಗಳನ್ನು ಹುಟ್ಟಿಹಾಕುತ್ತವೆ. ಸಮಸ್ಯೆಗಳು ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ನಮ್ಮ ಬೆಳವಣಿಗೆಗಳಿಗೆ ಕಾರಣವೇ ಆಗಿವೆ.

ಪ್ರತಿಯೊಂದು ಕಾರ್ಯದಲ್ಲಿಯೂ ಒಂದಲ್ಲ ನೂರು ಸಮಸ್ಯೆಗಳು. ಆ ಎಲ್ಲ ಸಮಸ್ಯೆಗಳಲ್ಲಿ ಸನ್ನಿವೇಶವನ್ನೇ ಸುಧಾರಿಸುವ ನೂರಾರು ಅಂಶಗಳು ಸೇರಿಕೊಂಡಿರುತ್ತವೆ. ಆ ಅಂಶಗಳೇ ದೊಡ್ಡ ಸವಾಲಿನದು. ಪ್ರತಿಯೊಂದು ಸಾವಾಲುಗಳೂ ಪ್ರಗತಿಗೆ ಮೆಟ್ಟಲುಗಳೇ ಆಗಿವೆ.

ಸಮಸ್ಯೆಗಳೇ ಬರಬಾರದು ಎಂಬ ವ್ಯಕ್ತಿಗೆ ಪ್ರಗತಿಯ ಹಂಬಲವೇ ಇಲ್ಲ ಎಂದರ್ಥ. ಪ್ರಗತಿಯ ಹಂಬಲವಿಲ್ಲದ ಮನುಷ್ಯ ಮಹತ್ತಾದದ್ದನ್ನು ಏನನ್ನೂ ಸಾಧಿಸಲಾರ.
ಸಮಸ್ಯೆಗಳನ್ನು ಸ್ವೀಕರಿಸುವದೇ, ಸವಾಲುಗಳನ್ನು ಎದರಿಸುವದೇ,  ಸಮಸ್ಯೆಗಳಿಂದಲೇ ಅತ್ಯುತ್ತಮ ಪ್ರಯೋಜನಗಳನ್ನೂ ಪಡೆಯುವದೇ.

ಬಸ್ಸಿನಲ್ಲಿಯೋ, ಕಂಪನಿಯಲ್ಲಿಯೋ, ಗುರುಕುಲದಲ್ಲಿಯೋ, ಕಾಲೇಜಿನಲ್ಲಿಯೋ, ಮಠ ಮಂದಿರಗಳಲ್ಲಿಯೋ, ಸಿನೆಮಾ ಹಾಲ್ ಮಾಲ್ ಗಳಲ್ಲಿಯೋ ಒಬ್ಬ ಅತೃಪ್ತ ಮನುಷ್ಯ ಕೂಗಾಡುತ್ತಾನೆ ಎಂದರೆ ಅದೊಂದು ದೊಡ್ಡ ಸಮಸ್ಯೆಯಾಗಿ ತಲೆಕಾಡಬಹುದು.  ಆದರೆ ವಿವೇಕವಂತ ಆ ಸಮಸ್ಯಯ ಮೂಲವನ್ನೇ ತಡಕಾಡಿ, ನ್ಯೂನತೆಯನ್ನೇ ಸರಿಪಡಿಸಿ, ಅತ್ಯುತ್ತಮ ಗುಣಮಟ್ಟವನ್ನೇ ಬೆಳಿಸಿಬಿಡುತ್ತಾನೆ. ತನ್ನ ಆ ಸಂಸ್ಥೆಗೆ ಮಾರುಕಟ್ಟೆಯಲ್ಲಿ ಒಂದು ಒಳ್ಳೆ ಹೆಸರುಬರುವಂತೆ ಮಾಡುತ್ತಾನೆ. ಇದೊಂದು ನಿದರ್ಶನ ಮಾತ್ರ, ಇಂಥಹ ನೂರಾರು ದೃಷ್ಟಾಂತಗಳನ್ನು ನೋಡಬಹುದು.

ನಮ್ಮದೊಂದು ಪುಟ್ಟ ಓಣಿ. ಅಲ್ಲಿ ನಿರಂತರ ಇಬ್ಬರ ಝಗಳ. ಆ ಝಗಳ ಇಡೀ ಓಣಿಗೇ ಸಮಸ್ಯೆಯಾಗಿದೆ. ಆದರೆ  ಬುದ್ಧಿವಂತನೊಬ್ಬ ತನ್ನ ಬುದ್ಧಿವಂತಿಕೆಯಿಂದ, ಮಾತುಗಾರಿಕೆಯಿಂದ, ಇಬ್ಬರಿಗೂ ಒಮ್ಮತವಾಗುವಂತೆ ಆ ಸಮಸ್ಯೆಯನ್ನು ಬಗೆಹರಿಸಿದ ಎಂದಾದರೆ ಆ ಓಣಿಯಲ್ಲಿಯೇ ಆ ವ್ಯಕ್ತಿ ಮುಂದೇಂದಿಗೂ ಸಮರ್ಥನಾಯಕ ಎಂದೇ ಆಗಿಬಿಡುತ್ತಾನೆ.

ಅಧ್ಯಯನಮಾಡದಿರುವದು, ಕಾಹಿಲೆ, ವಿವಾಹ, ಪ್ರಿಯವ್ಯಕ್ತಿಗಳ ವಿಯೋಗ, ದುಷ್ಟರ ಸಹವಾಸ, ಇಂತಹ ನೂರಾರು ಪ್ರಸಂಗಗಳು ಸಮಸ್ಯೆಗಳಾಗಿ ಕಾಣುತ್ತವೆ. ಅವುಗಳೆಲ್ಲವೂ ನಿಸ್ಸಂದೇಹವಾಗಿಯೂ ನೋವಿನ ಅನುಭವಗಳೆ. (ನಾನೂ ಕೆಲವನ್ನು ತಿಳಿದಿರುವೆ, ಕೆಲವನ್ನು ಅನುಭವಿಸಿರುವೆ.)

ಆದರೆ........

ಸಮಸ್ಯೆಗಳಿಂದುಂಟಾದ ಪ್ರತಿಯೊಂದು ದುಃಖದ ಅನುಭವಗಳೂ ನಮ್ಮ ವ್ಯಕ್ತಿತ್ವನ್ನು ರೂಪಿಸಲು ಕಾರಣವಾಗಿವೆ. ನಮ್ಮಲ್ಲಿ ಕರುಣೆಯನ್ನು ಬೆಳಿಸಿವೆ. ವಿವೇಕವನ್ನು ಅಭಿವೃದ್ಧಿಸಿವೆ. *ಆ ಸಮಸ್ಯೆಗಳೆ ನಾವು ಇಂದು ಈಗಿರುವಂತಾಗಲು ಕಾರಣವಾಗಿವೆ* ಆದ್ದರಿಂದ ಅವುಗಳೂ ನಮ್ಮ ಪಾಲಿಗೆ ಅಮೂಲ್ಯ. ಅಂತೆಯೇ ಸಮಸ್ಯೆಗಳು ನನ್ನ ಸೇವಕರುಗಳು ಇದ್ದ ಹಾಗೆಯೇ......

ಅಂಗವಿಕಲತೆ ದೊಡ್ಡ ಸಮಸ್ಯೆ, ವಿಕಲಾಂಗರಿಗುವಷ್ಟು  ಚತುರತೆ ಪೂರ್ಣಾಂಗರಿಗೆ ಇರುವದಿಲ್ಲ. ಸಮಸ್ಯೆಗಳಿಂದಲೇ ನಮ್ಮೊಳಗಿರುವ ಪ್ರತಿಭೆಯ ಅಭಿವ್ಯಕ್ತಿ. ಸಂಸ್ಥೆಗಳು ಸಮಸ್ಯೆಗಳನ್ಮು ಅವಕಾಶಗಳನ್ಮಾಗಿ ಪರಿಗಣಿಸುವ ಸಂಸ್ಕೃತಿಯನ್ನು ಬೆಳಿಸಿಕೊಂಡಿವೆ. ಆದ್ದರಿಂದ ಸಮಸ್ಯೆಗಳಿಂದ ಕಲಿಯಬೇಕೇ ಹೊರತು ದೂಷಿಸುವದು ಸುತರಾಂ ತರವಲ್ಲ.

ದೊಡ್ಡ ವ್ಯಕ್ತಿಗಳು ಸಮಸ್ಯೆಗಳನ್ನೇ ಕಾಣುವದಿಲ್ಲ. ಅವುಗಳಲ್ಲಿ ಸಾಧ್ಯತೆಗಳನ್ನೇ ಹುಡುಕುತ್ತಾರೆ. ಸಮಸ್ಯೆಗಳನ್ನು ಕಂಡವ ನೀಂತನೀರು, ಸಾಧ್ಯತೆಗಳನ್ನು ಕಂಡವ ಮಹಾನ್ ವ್ಯಕ್ತಿ. ಸಮಸ್ಯೆಗಳೆ ಇಲ್ಲದ ವ್ಯಕ್ತಿ ಎಂದರೆ ಅದು ಸತ್ತ ಹೆಣ ಮಾತ್ರ.....

ಸಮಸ್ಯೆಗಳು ಎದುರಾದಾಗ ಬುದ್ಧಿ ವಿವೇಕಗಳಿಗೆ ಕೆಲಸವನ್ನು ಕೊಡೋಣ. ಮಹಾನ್ ಆಗಿ ಜಗತ್ತಿರಿ ತೋರಿಸಿಕೊಡೋಣ.....

*✍🏽✍🏽✍ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
9449644808

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*