*ಪ್ರೀತಿಸು ದೇವರನ್ನು...*
*ಪ್ರೀತಿಸು ದೇವರನ್ನು...*
ಪ್ರೀತಿಸುವದೇ ಆದರೆ ದೇವರನ್ನೇ ಪ್ರೀತಿಸು. ಆ ಪ್ರೀತಿಗೆ ಬರವಿಲ್ಲ. ಎರಡೂಕಡೆ ಇಂದ ಸಾಗುವ ಪ್ರೀತಿಯೇ ನಿಜವಾದ ಪ್ರೀತಿ. ದೇವರ ಕಡೆಯಿಂದ ಪ್ರೀತಿ ಇದ್ದೇ ಇದೆ. ಅಂತೆಯೆ ನಿನ್ನನ್ನು ಸಾಕುವ, ಪೋಷಿಸುವ, ಆಪತ್ತಿನಿಂದ ರಕ್ಷಿಸುವ, ನಿರಂತರ ನಿನ್ನೊಡೆಗೆ ಇರುವ, ಕ್ಷಣಕಾಲ ನಿನ್ನ ಬಿಟ್ಟು ತೊಲಗ. ನಿನ್ನ ಕಡೆಯಿಂದ ಪ್ರೀತಿ ಅವನಿಗೆ ದೊರೆಯಬೇಕು ಅಷ್ಟೆ.
*ದೇವರನ್ನು ನಾವು ಪ್ರೀತಿಸುತ್ತೇವೆಯಾ.....???
ದೇವರು ತುಂಬ ವಿಚಿತ್ರ.....
ನಾವು ಪೂಜಿಸುತ್ತೇವೆ, ದೇವ ಸುಮ್ಮನಿರುತ್ತಾನೆ.
ನೈವೇದ್ಯ ಇಡುತ್ತೇವೆ, ದೇವ ಸುಮ್ಮನೇ ಇರುತ್ತಾನೆ.
ಆರತಿ ಮಾಡುತ್ತೇವೆ, ಅಲಗುವದಿಲ್ಲ.
ಸ್ತುತಿ ಮಾಡುತ್ತೇವೆ, ತಲೆತೂಗುವದಿಲ್ಲ.
ಮಾನಸಿಕ ಚಿಂತನೆ ಎಂದ್ಹೆಳುತ್ತೇವೆ, ಎಷ್ಟು ಒಪ್ಪಿಗೆ ಆಯಿತು ಗೊತ್ತಾಗಲ್ಲ.
ಜಪ ಧ್ಯಾನ ಮಾಡ್ತೇವೆ, ಸ್ವೀಕರಿಸಿದನಾ ತಿಳಿಯಲ್ಲ.
ಸಮರ್ಪಿಸುತ್ತೇವೆ, ಎಷ್ಟು ಸಂತುಷ್ಟನಾದನೋ ಅಸಲು ತಿಳಿಯುವದೇ ಇಲ್ಲ.......
ಆದರೂ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪಣೆ, ಆರತಿ, ಮಾನಸಿಕ ಚಿಂತನೆ, ಜಪ, ಸಮರ್ಪಣೆ ಯಾವದನ್ನೂ ಬಿಡುವದಿಲ್ಲ ಅಲ್ವಾ.... ಇದುವೇ ದೇವರಲ್ಲಿಯ ಪ್ರೀತಿ...
ಆದರೆ.....
ನಮ್ಮ ಮನಸ್ಸು ಕಲ್ಪಿಸಿಕೊಳ್ಳುವದರಲ್ಲಿ ತುಂಬ ಜಾಣ. ಕಲ್ಪನಾ ಲೋಕದಲ್ಲಿಯೇ ತಾನು ಮಾಡಿದ ಸಾರ್ಥಕತೆಯನ್ನು ಅರಿತುಕೊಳ್ಳುತ್ತಾ, ತಾನು ಏನು ಮಾಡುತ್ತದ್ದಾನೆ ಅದೇ ಶ್ರೇಷ್ಠ ಎಂದೇ ಭಾವಿಸುತ್ತಾ ಕಲ್ಪನೆಯಯಲ್ಲಿ ಸಾಗುತ್ತಾನೆ.....
ದೇವರಿಗೆ ಇದು ಇಷ್ಟವಾಯಿತು. ದೇವರಿಗೆ ಈ ಹೂ ತುಂಬ ಪ್ರೀತಿ.
ಹಳದಿಯ ರೇಷ್ಮೆ ಬಟ್ಟೆ ಬಹಳ ಇಷ್ಟ.
ತುಪ್ಪದ ದೀಪ ಬೆಳಕು ಅಂದರೆ ಪಂಚಪ್ರಾಣ.
ಸ್ತುತಿಗೆ ಒಲಿದು ಬರುವ.
ಆಚಾರ ವಿಚಾರ (ಮಡಿ ಮೈಲಿಗೆ) ಉತ್ತಮ, ಆದರೆ ಮನಸ್ಸು ಶುದ್ಧಿ ಬಹಳೇ ಉತ್ತಮ.
ಬಾಹ್ಯ ಡಾಂಭಿಕ ಆಚಾರ ಬೇಡ, ಭಕ್ತಿ ಭಾವ ಮುಖ್ಯ... ಹೀಗೆ ತನ್ನ ಮೂಗಿನ ನೇರವೇ ಕಲ್ಪನೆಗಳ ಸುರಿಮಳೆ ಸುರಿಸುತ್ತಾ ಸಾಗುವ. *ಈ ಕಲ್ಪನಾಲೋಕವೇನಿದೆ, ಇದು ಕಾಲ್ಪನಿಕವೇ ಹೊರತು ಪ್ರಾಮಾಣಿಕ ಎಂದಾಗಲಾರದು.* ಕಾಲ್ಪನಿಕತೆಯಲ್ಲಿ ನೈಜ ಪ್ರೀತಿ ದೊರಕದು.
ದಾಸರಾಯರು ಹೇಳುತ್ತಾರೆ....
"ಹೇಗೆ ಅರ್ಚಿಸಲಿ ನಿನ್ನ... ಹೇಗೆ ಮೆಚ್ಚಿಸಲಿ ನಿನ್ನ...!!" ಎಂಬ ಹಾಡಿನಲ್ಲಿ.
ದೀಪ ಹಚ್ಚಿ ಸಂತೋಷಿಸುವೆ ಎಂದರೆ ನಿನ್ನದೇ ಆದ ಅನಂತ ಸೂರ್ಯರ ಪ್ರಕಾಶ ನಿನಗಿದೆ.
ಮಂತ್ರ ಹೇಳಿ ಸ್ತುಸುವೆ ಅಂದರೆ, ಸ್ವಯಂ ನೀನು ವಾಯುದೇವರಿಂದಲೇ ಅನಂತ ವೇದಗಳಿಂದ ನಿರಂತರ ಸ್ತೋತ್ರ ಮಾಡಿಸಿಕೊಳ್ಳುತ್ತಿ.
ಭಂಗಾರ ಒಡೆವೆಗಳನ್ನು ಅರ್ಪಿಸಿ ಮೆಚ್ಚಿಸೋಣ ಎಂದರೆ, ಸ್ವಯಂ ನೀನು ಲಕ್ಷ್ಮೀಪತಿಯಾಗಿರುವಿ. "ಹೇಗೋ ನಿನ್ನನ್ನು ಅರ್ಚಿಸಲಿ.... ??? ಹೇಗೆ ಮೆಚ್ಚಿಸಲಿ....??" ನಿನ್ನನ್ನು ಮೆಚ್ಚಿಸಲು ಅರ್ಚಿಸಲು ಪ್ರೀತಿಸಲು ಎನ್ನಿಂದ ಸುತರಾಂ ಸಾಧ್ಯವಿಲ್ಲ ಎಂದು ದೀನನಾಗಿ, ಶಾಸ್ತ್ರ ಏನೆಲ್ಲ ಹೇಳಿದೆ ಅಷ್ಟನ್ನು ಅಚ್ಚುಕಟ್ಟಾಗಿ ಮಾಡುವದೇ ಎನ್ನ ಕರ್ತವ್ಯ ಎಂದು ಭಾವಿಸಿ, *ನಿಷ್ಕಾಮಂ ಜ್ಙಾನಪೂರ್ವಂ ತು ನಿವೃತ್ತಮಿತಿ ಚೋಚ್ಯತೆ* ಎಂದು ಶಾಸ್ತ್ರ ಹೇಳಿದಂತೆ (ತಂತ್ರಸಾರಾದಿ ಶಾಸ್ತ್ರ ಹೇಳಿದ ಜ್ಙಾಪೂರ್ವಕವಾಗಿ, ಮತ್ತು ಭಗವಂತನ ಸರ್ವೋತ್ತಮತ್ವಾದಿ ಜ್ಙಾನಪೂರ್ವಕವಾಗಿ. ಜ್ಙಾನ, ಭಕ್ತಿ, ವಿಷ್ಣುಪ್ರೀತಿಗಳನ್ನುಳಿದು ಯಾವ ಕಾಮನೆಗಳಿಲ್ಲದೇ ಮಾಡಿದ ಪೂಜೆ ನಿವೃತ್ತ ಪೂಜೆ. ಈ ಪೂಜೆಯನ್ನು ಮಾಡಿದವನಿಗೆ ದೇವರೇ ಫಲ.) ಪೂಜಿಸಿದರೆ ದೇವರಲ್ಲಿಯ ಪ್ರೀತಿ ಇಮ್ಮಡಿ ಮುಮ್ಮಡಿಯಾಗಿ ಅಭಿವೃದ್ಧಿಸುತ್ತದೆ. ಇದುವೇ ನಿಜವಾದ ಪ್ರೀತಿ.
ದೇವರನ್ನು ಪ್ರೀತಿಸುವ ಭರದಲ್ಲಿ ನಿನ್ನನ್ನು ನೀನು ನಾಶಮಾಡಿಕೊಳ್ಳಬೇಡ. ಅದುವೇ ಮೂಢನಂಬಿಕೆ ಎಂದಾಗತ್ತೆ. ವೇದ ಮಹಾಭಾರತ ಮೊದಲಾದ ಶಾಸ್ತ್ರಗಳು ಪ್ರಾಣ ಕಳೆದುಕೊ ಆತ್ಮಹತ್ಯೆ ಮಾಡಿಕೊ ಎಂದು ಎಲ್ಲಿಯೂ ಹೇಳಿಲ್ಲ. ಆತ್ಮಹತ್ಯೆ ಮಹಾಪಾಪ ಎಂದೇ ಸಾರಿದೆ. "ಸಾಧನ ಶರೀರವಿದು" ಹಾಗಾಗಿ ನಿನ್ನನ್ನು ನೀನು ಮೊದಲು ಪ್ರೀತಿಸು.
"ದೇವರೊಬ್ನನನ್ನೇ ಪ್ರೀತಿಸಿದರೆ ಸಾಕು, ಎಲ್ಲವೂ ಪ್ರಿಯವಾಗಿಯೇ ಬಂದೊದಗುತ್ತವೆ, ನಿನಗೆ ನೀನು ಪ್ರಿಯನಾಗುವದೂ, ನನ್ನ ಹೆಂಡತಿ ಮಕ್ಕಳು ಧನ ಕನಕ ಮನೆ ಮಠ ಗೆಳಯ ಸ್ನೇಹಿತ ಮೊದಲಾದವರು ಪ್ರಿಯರಾಗುವದೂ ದೇವರೊಬ್ಬ ಪ್ರಿಯನಾಗುವದರಿಂದ." ಎಂಬ ಉಪನಿಷದ್ವಾಣಿಯೂ ಇರುವದರಿಂದ ಪ್ರೀತಿಸುವದು ಎಂದಾದರೆ ಅತೀಹೆಚ್ಚಿನಮಟ್ಟದಲ್ಲಿ ದೇವರನ್ನೇ ಪ್ರೀತಿಸೋಣ......
*✍🏽✍🏽✍ನ್ಯಾಸ...*
ಪಂ. ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments