Posts

ಇಂದು ಚಂದ್ರಗ್ರಹಣ - ಪರ್ವಕಾಲ*

Image
 *ಇಂದು ಚಂದ್ರಗ್ರಹಣ - ಪರ್ವಕಾಲ* ಪರ್ವಕಾಲಗಳು ನೂರಾರು. ಆ ಎಲ್ಲ ಪರ್ಚಕಾಲಗಳಲ್ಲಿ ಶ್ರೇಷ್ಠವಾದದ್ದು "ಚಂದ್ರಗ್ರಹಣ" ಎಂಬ ಉತ್ತಮ ಪರ್ವಕಾಲ.  ದೇವ-ಪಿತೃ-ಮಾನವ-ರಾಕ್ಷಸ ಇವರುಗಳನ್ನು ಸಂತೋಷ ಪಡಿಸುವ ಕಾಲ.  ೧) ಸ್ನಾನ, ದೇವತಾರ್ಚನೆ, ಪೂಜೆ, ಹೋಮ,  ಜಪ, ತರ್ಪಣಗಳಿಂದ ದೇವತೆಗಳನ್ನು ಸಂತೋಷ ಪಡಿಸುವದು ಈ ಕಾಲದಲ್ಕು. ೨) ತಿಲತರ್ಪಣ ಶ್ರಾದ್ಧಗಳಿಂದ ಪಿತೃಗಳನ್ನೂ ಸಂತೋಷಪಡಿಸುವ ಕಾಲ. ೩) ನಾನಾತರಹದ ದಾನಗಳಿಂದ ಮನುಷ್ಯರನ್ನು ತೃಪ್ತಿಪಡಿಸುವ ಕಾಲವೂ ಇದೆ. ೪) ನಮ್ಮ ಉತ್ಕರ್ಷಕ್ಕೆ ಅಡ್ಡಿಗಳಾದ ರಾಕ್ಷಸರನ್ನೂ ವಿಶೇಷವಾದ ದಾನಾದಿಗಳಿಂದ ಸಂತೊಷಪಡಿಸುವ ಮುಖಾಂತರ ರಾಕ್ಷಸ ಪೀಡಾ ಪರಿಹಾರ ಮಾಡಿಕೊಳ್ಳುವ  ಕಾಲವೂ ಈ ಗ್ರಹಹಣ ಕಾಲ.  *ಸಕಲ ಸಿದ್ಧಿಗಳೂ ಇಲ್ಲಿಯೇ...*  ಉಪದಿಷ್ಟವಾದ ಗಾಯತ್ರೀ ನಾರಾಯಣ ಇತ್ಯಾದಿ ಮಂತ್ರಗಳ ಸಿದ್ಧಿಯಾಗುವದು ಈ ಕಾಲದಲ್ಲಿ.  ಪಾರಾಯಣದಿಂದ ಸ್ತೋತ್ರಗಳ ಸಿದ್ಧಿ. ಯಂತ್ರಗಳ ಸಿದ್ಧಿಯೂ ಒದಗುತ್ತದೆ. ಮಂತ್ರ ಯಂತ್ರಗಳ ಪ್ರಭಾವವೂ ನೂರ್ಮಡಿ ಹೆಚ್ಚಾಗುತ್ತದೆ ಈ ಕಾಲದಲ್ಲಿ.  *ಉಪವಾಸ ವ್ರತದಿಂದ ಸತ್ಸಂತಾನ ಭಾಗ್ಯ* ವೇಧಾರಂಭದಿಂದ ಆರಂಭಿಸಿ ಗ್ರಹಣ ಸಮಾಪ್ತಿಪರ್ಯಂತ ಉಪವಾಸ ವ್ರತ ಮಾಡುವದರಿಂದ ಬಹುಪುತ್ರರನ್ನು ಪಡೆಯುತ್ತಾನೆ. ಬಹು ಐಶ್ವರ್ಯ ಪಡೆಯುತ್ತಾನೆ. ಕೀರ್ತಿಮಾನ್ ಆಗುತ್ತಾನೆ. ಕೊನೆಗೆ ಬ್ರಹ್ಮ ಲೋಕವನ್ನೈ ಪಡೆಯುತ್ತಾನೆ.  *ವೇಧಾರಂಭದಿಂದ ಗ್ರಹಣ ಮಧ್ಯದಿ ಉಂಡರೆ....

*ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....*

Image
 *ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....* ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ್ಯಕ್ಕೆ ಪೀಡೆಕೊಡುವದು ಎಂದರೆ ಜಗತ್ತಿಗೆ ನಮ್ಮ ಸರ್ಕಾರಗಳಿಗೆ ನಮ್ಮ ರಾಜಕಾರಣಿಗಳಿಗೆ ತುಂಬ ಪ್ರೀತಿ. "ಬ್ರಾಹಣರನ್ನು ಉಳಿದು ಬೇರೆಯವರನ್ನು ಒಲಿಸಿಕೊಳ್ಳಲು ಎಷ್ಟು ಪ್ರೀತಿಯೋ ಅಭಿರುಚಿಯೋ ಅಷ್ಟೇ ಪ್ರೀತಿ ಅಭಿರುಚಿ ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ಪೀಡಿಸುವದು" ಎಂದರೆ. ಈ ಅವಸ್ಥೆ ಇಂದಿನದು ಅಲ್ಲ. ದ್ವಾಪರಯುಗದಿಂದಲೂ ಇದ್ದೇ ಇದೆ. ಮುಘಲರಾಗಲಿ ಬ್ರಿಟೀಶರಾಗಲಿ ಅಥವಾ ಇಂದಿನ ಕೆಲಸರ್ಕಾರಗಳಾಗಲಿ ಶತಮಾನ ಶಾನಗಳಿಂದ ಕುಗ್ಗಿಸಲು ನಿರಂತರ ಪರಿಶ್ರಮಪಟ್ಟರೂ ಸಫಲರಾಗಿದ್ದು ಕಡಿಮೆಯೇ. ವಿಫಲರಾಗಿರುವದೇ ಹೆಚ್ಚಿಗೆ ಇದೆ.  ತುಳಿತಗಳು, ಪೀಡೆಗಳು, ಸುನಾಮಿಯಂತೆ ಅಪ್ಪಳಿಸಿದರೂ ಬ್ರಾಹ್ಮಣ ಎಂದಿಗೂ ಕುಗ್ಗುವದಿಲ್ಲ, ಬಗ್ಗುವದಿಲ್ಲ, ಅಂಗಲಾಚುವದಂತೂ ಇಲ್ಲವೇ ಇಲ್ಲ. ತನ್ನ ನೈಜವಾದ ಅಮೋಘವಾದ ತಪಸ್ಸು, ಪ್ರಖರವಾದ ಬುದ್ಧಿವಂತಿಕೆ, ಅಪ್ರತಿಮ ವ್ಯಕ್ತಿತ್ವ ದೃಢವಾಗಿ ನಿಲ್ಲುವದಕ್ಕೆ ಇವುಗಳೇ ಆಧಾರಸ್ಥಂಭಗಳು.  *ಇಂದಿನ ಅಮೋಘವಾದ ದುರಂತಕ್ಕೆ ಮೂಕಸಾಕ್ಷಿಗಳು ಅ(ನಾ)ವರೆಲ್ಲರು....* ಹದಿನಾರು ಹದಿನೇಳು ವರ್ಷಗಳಿಂದ ಪರೀಕ್ಷೆಯಲ್ಲ ಉತ್ತೀರ್ಣನಾಗಿ ಬರುತ್ತಿರುವ ಅಪ್ಪಟ ಬ್ರಾಹ್ಮಣ ವಿದ್ಯಾರ್ಥಿ ಪರಿಕ್ಷೆಗಾಗಿ ಹೊರಟ. ಪರೀಕ್ಷಾಕೋಣೆಯ ಪ್ರವೇಶದ ಸಮಯಕ್ಕೆ ಶೀಕ್ಷಕವರ್ಗ ಹಾಗೂ ಅಧಿಕಾರಿವರ್ಗದ...

ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*

Image
 *"ಕಲಿಯುಗದ  ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)* ದ್ವಾಪರಯುಗದ ಕುಂತಿಗೆ ೫ ಮಕ್ಕಳು. ಆದರೆ ಈ ಕಲಿಯುಗದ ಕುಂತಿಗೆ ನಮ್ಮಂತಹ ನೂರಾರು ಮಕ್ಕಳು. ಕೌಂತೇಯರು ಎನ್ನುವದೇ ಪಾಂಡವರ ಹೆಮ್ಮೆ ಆಗಿತ್ತು. ಹಾಗೆಯೇ ಪೂ ಕಾಕು ಅವರ ಮಕ್ಕಳು ನಾವು ಎಂದಾಗುವದೇ ನಮ್ಮದೊಂದು ವೈಭವ.  ಶ್ರೇಷ್ಠವಾದ ಶ್ರೀಸತ್ಯಕಾಮತೀರ್ಥರಂತಹ ಮಹಾನುಭಾವರು ಅವತರಿಸಿದ ಕುಲ. ವಿಶಾಲವಾದ ಕುಟುಂಬ. ತುಂಬ ಕಷ್ಟ. ಕಡುದಾರಿದ್ರ್ಯ. ಆಗಿನ ಕಾಲವೂ ತುಂಬ ಘೋರ. ಅದರಲ್ಲಿ ಸಾಧನೆಯ ವಿದ್ವನ್ಮಾರ್ಗ ಮುಳ್ಳುಹಾಸಿದ ದಾರಿಯಾಗಿತ್ತು. ಈ ತರಹದ ವಿಪರೀತವಾದ ಪ್ರತಿಕೂಲ ವಾತಾವರಣದಲ್ಲಿಯೂ ಪರಮಪೂಜ್ಯ ಮಹಾಚಾರ್ಯರರನ್ನು ವರೆಸಿದಿರು. *"ವಿದ್ಯಾಪೀಠವಿಧಾತೃ"ಗಳು ಪರಮಪೂಜ್ಯ ಆಚಾರ್ಯರಾದರೆ, ವಿದ್ಯಾಪೀಠದ "ಮಹಾತಾಯಿ* ಪೂಜ್ಯ ಕಾಕೂ ಅವರು ಆದರು.  ನಿರಂತರ ಹರಿನಾಮಸ್ಮರಣ. ನಿರಂತರ ಹರಿನಾಮಸ್ಮರಣೆಯನ್ನು ಎಲ್ಲಿಯಾದರೂ ನೋಡಬೇಕು ಒಂದು ದೃಷ್ಟಾಂತ ಸಿಗಬೇಕು ಎಂದರೆ ಅದು ಪೂಜ್ಯರಲ್ಲಿ ಕಾಣುತ್ತಿತ್ತು.   ನಿತ್ಯವೂ ಶ್ರೀಮದ್ಭಾಗವತ ಪಾರಾಯಣ ಅನೇಕ ವಿದ್ಯಾರ್ಥಿಗಳಿಂದ ಮಾಡಿಸಿದ್ದರು. ಕನಿಷ್ಟ ನೂರುಬಾರಿಯಾದರೂ ಶ್ರೀಮದ್ಭಾಗವತ ಪಾರಾಯಣ ಕೇಳಿರಬಹುದು.  ಒಂದುಬಾರಿ ನನಗೂ ಎರಡು ಮೂರು ಸ್ಕಂಧಗಳ ಪಾರಾಯಣ ಮಾಡುವ ಸೌಭಾಗ್ಯ ಒದಗಿಸಿ ಅನುಗ್ರಹಿಸಿದ್ದರು. ಆ ಪಾರಾಯಣದ ಅನುಗ್ರಹದ ಕುರುಹು ಇಂದಿಗೂ ಮನೆಯಲ್ಲಿ ಇದೆ.  *ಮಹಾ ಅನ್ನದಾನಿ* ಮದುವೆಯಾದ ಆರಂಭದ ಹತ್ತಾರುವರ...

*ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ*

  * ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ * * ಮೋಕ್ಷದಾಯಕ - ಮಥುರಾ * ಮೋಕ್ಷಕ್ಕೆ ಆವಶ್ಯಕವಾದ ಸಾಧನೆಗಳನ್ನು ಹೆಚ್ಚೆಚ್ಚು ಮಾಡಿಸುವ ಏಳು ಕ್ಷೇತ್ರಗಳಲ್ಲಿ ಅತ್ಯುತ್ತಮ ಕ್ಷೇತ್ರ ಮಥುರಾ ಕ್ಷೇತ್ರ. ಮಥುರಾ ವೃಂದಾವನ ಗೋಕುಲ ಈ ಪ್ರಾಂತಗಳಲ್ಲಿ ಸಚ್ಚಿದಾನಂದ ಮೂರ್ತಿಯಾದ, ನಮ್ಮಲ್ಲೆರ ಇಷ್ಟ ದೈವನಾದ, ಅಖಿಲಪ್ರದನಾದ, ಸರ್ವಾನಿಷ್ಟನಿವಾರಕನಾದ, ಶ್ರೀಕೃಷ್ಣನ ಪಾದಧೂಳಿ ಕಣ ಕಣಕಣಗಳಲ್ಲಿ  ಪಡೆದ ಕ್ಷೇತ್ರ ಅದು ಮಥರಾಕ್ಷೇತ್ರ. ಶ್ರೀಕೃಷ್ಣನ ನಿತ್ಯ ಸನ್ನಿಧಾನವಿರುವ, ಕೃಷ್ಣನ ಅಧಿಷ್ಠಾನ ಪ್ರತಿಮೆಯಂತಿರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಮಥುರಾ. ಕೃಷ್ಣನ ಸನ್ನಿಧಾ ಇರುವದರಿಂದಲೇ ದೇವಾಧಿದೇವತೆಗಳು, ಋಷಿಮುನಿಗಳು, ಸಾಧಕರು, ವಿರಕ್ತರು ಬಂದು ಸಾಧನೆಮಾಡಿಕೊಂಡ ಕ್ಷೇತ್ರ ಮಥುರಾಕ್ಷೇತ್ರ. * ಭಕ್ತಿ ತುಂಬಿದ ನಾಡು * ಮಥುರಾ ಪಟ್ಟಣಕ್ಕೆ  ದೇಶ ವಿದೇಶಗಳಿಂದ ಭಕ್ತರು ಓಡೋಡಿ ಬರುತ್ತಾರೆ. ಮೈ ಮರೆಯುತ್ತಾರೆ. ನಿರಂತ ಕೃಷ್ಣನಾಮಸ್ಮರಿಸುತ್ತಾರೆ. ಮಥುರಾ ವೃಂದಾವನ ಹಾಗೂ ಗೋವರ್ಧನ ಈ ಕ್ಷೇತ್ರಗಳ ಪ್ರದಕ್ಷಿಣೆ ಹಾಕ್ತಾರೆ. ಪ್ರತಿಯೊಂದು ಕ್ಷೇತ್ರವೂ ಕನಿಷ್ಠ ಹದಿನೈದು km ಗೂ ಹೆಚ್ಚಾದ ಪರಿಸರ ಹೊಂದಿದೆ. ಸಂಪೂರ್ಣ ಊರು ಬೆಟ್ಟಗಳಿಗೆ ಹೆಜ್ಜೆ ನಮಸ್ಕಾರ ಹಾಕ್ತಾರೆ. ಹಾಡು ಭಜನೆ ನಾಮಸ್ಮರಣೆ ಇತ್ಯಾದಿಗಳಿಂದ ಭಕ್ತಿ ಭೂಮಿಯಾಗಿದೆ ಮಥುರಾ ವೃಂದಾವನಕ್ಷೇತ್ರಗಳು. * ಕೃಷ್ಣ ಜನ್ಮ ಭೂಮಿ * ಕೃಷ್ಣ ಅವತರಿಸಿ ಆ ಜನ್ಮಭೂಮಿ ಜೈಲು ಒಳಗೆ ...

*ಜನ್ಮನಾಶಕನ ಜನ್ಮಭೂಮಿಯಲ್ಲಿ ಪೂ ಗುರುಗಳ ಜನ್ಮದಿನ*

Image
 *ಜನ್ಮನಾಶಕನ ಜನ್ಮಭೂಮಿಯಲ್ಲಿ ಪೂ ಗುರುಗಳ ಜನ್ಮದಿನ* ಜನ್ಮದಿನ ಇದೊಂದು ಅಪರೂಪದ ಸುಸಂದರ್ಭ. ಅದರಲ್ಲೂ ಗುರುಗಳ ಜನ್ಮದಿನ ಶಿಷ್ಯರಪಾಲಿಗೆ ಸುದಿನವೇ ಸರಿ.  ಇಂದು ಜನ್ಮನಾಶಕನಾದ ಶ್ರೀಕೃಷ್ಣನ ಜನ್ಮಭೂಮಿಯಾದ ಮಥುರಾ ಪಟ್ಟಣದಲ್ಲಿ, ಸುದಿನವನ್ನು ಒದಗಿಸುವ ಶ್ರೀಮದ್ಭಾಗವತ ಜ್ಙಾನಸತ್ರದಲ್ಲಿ ನಮ್ಮ ಗುರುಗಳಾದ ಪೂ ಆಚಾರ್ಯರ ವೈಭವದ ಜನ್ಮದಿನಾಚರಣೆ ಪ್ರಯುಕ್ತ ಆ ಮಹಾಗುರುಗಳಿಗೆ ಅನಂತ ವಂದನೆಗಳು. ಅನಂತ ನಮಸ್ಕಾರಗಳು. *ಗುರುಗಳ ಅಮೃತವಾಣಿ* *ನಿಷ್ಕಾಮ ಧರ್ಮ ದೇವರವರೆಗೆ ಮುಟ್ಟಿಸುತ್ತದೆ.* ನಿಷ್ಕಾಮ ಕರ್ಮವನ್ನು ಮಾಡಬೇಕು. ಇದು ಎಲ್ಲರಿಗೂ ವಿದಿತ. ಈ ನಿಷ್ಕಾಮಕರ್ದಿಂದ ಏನು ಫಲ..? ಎಂದು ಫಲಕಾಮನೆಯನ್ನೇ ಯೋಚಿಸುವವರು ನಾವು. ಅದಕ್ಕೆ ಗುರುಗಳು ಶ್ರೀಮದ್ಭಾಗವತದ ಮುಖಾಂತರ "ಎಲ್ಲ ನಿಷ್ಕಾಮಕರ್ಮಗಳೂ ನೇರವಾಗಿ ದೇವರಿಗೇ ತಲುಪುತ್ತವೆ" ಎಂದು ಪ್ರತಿಪಾದಿಸುವ ಮುಖಾಂತರ ಸಮಾಧಾನವನ್ನು ಕೊಟ್ಟರು. *ಏನು ಧರ್ಮಗಳನ್ನು ಮಾಡುವದೂ ಕೇವಲ ಭಕ್ತಿಗೋಸ್ಕರ ಇರಬೇಕು.* ನೂರಾರು ಸಾವಿರಾರು  ಧರ್ಮಗಳನ್ನು  ಮಾಡುವವರು ನಾವೆಲ್ಲರು. ಆದರೆ ನಮ್ಮೆಲ್ಲ ಧರ್ಮಗಳು ನೇರವಾಗಿ ಒಂದು ಹಣಕ್ಕೋಸ್ಕರ ಅಥವಾ ಐಹಿಕ ಭೋಗಕ್ಕೋಸ್ಕರವೇ ಆಗಿರುತ್ತದೆ. ಇದು ಅತ್ಯಂತ ಸಹಜ. ಆದರೆ "ನಮ್ಮ ಅತಿ ಸಣ್ಣದಾದ ಧರ್ಮವೂ ವಿಷ್ಣುಭಕ್ತಿಗೋಸ್ಕರವಾಗಿಯೇ ಇರಬೇಕು" ಇದು ಪೂಜ್ಯ ಗುರುಗಳ ಪ್ರತಿಪಾದನೆ.  ಸಾಮಾ ನಮ್ಮ ಧರ್ಮದ ಉಪಯೋಗ ಕೇವಲ ಹಣಕ್ಕಾಗಿ ಅಥವಾ ಐಹಿಕ ಭೋಗಕ್ಕಾಗಿ...

ರಾಯರಚೂರಿನಲ್ಲಿ - ಜಯರಾಯರ ಆತ್ಮಾ*

 * ರಾಯರಚೂರಿನಲ್ಲಿ - ಜಯರಾಯರ ಆತ್ಮಾ* ಪ್ರಭುಗಳಾದ ರಾಯರ ಸ್ಥಾನವಾದ ಮಂತ್ರಾಲಯದ ಚೂರು ಎನಿಸಿರುವ ನಮ್ಮ ರಾಯಚೂರಿನಲ್ಲಿ, ಜಯರಾಯರ ಅಂತರಂಗ ಎಂದೇ ಪ್ರಸಿದ್ಧರಾದ ಶ್ರೀಸತ್ಯಾತ್ಮತೀರ್ಥರ ಭವ್ಯ ದಿವ್ಯ ದಿಗ್ವಿಜಯ.  ತುಂಬ ವರ್ಷಗಳ ತರುವಾಯ ಎಂಟುದಿನಗಳ ದಿಗ್ವಿಜಯದ ಹಾದಿಯನ್ನು ಕರುಣಿಸಿದವರು ಸ್ಚಯಂ ಶ್ರೀಗಳವರು. ಇದು ಅವರ ಮಹತ್ಕರುಣೆ.  ಪ್ರತಿನಿತ್ಯವೂ ಉಪಾಸ್ಯ ದೇವರುಗಳಾದ ಶ್ರೀರಾಮದೇವರ ದರ್ಶನ, ಭಕ್ತರಿಗೆ ಬೆಳಿಗ್ಗೆ ಪಾಠ, ಮಧ್ಯಾಹ್ನ ತೀರ್ಥಪ್ರಸಾದ, ಸಾಯಂ ಅಮೃತೋಪದೇಶ. ಈ ನಿಟ್ಟಿನಲ್ಲಿ ದಿವ್ಯವಾಗಿ ವೈಭವದಿಂದ ಜರುಗಿತು.  *ಪಾಠದ ಪರಿಣಾಮ...* ಬೆಳಿಗ್ಗೆ ಶ್ರೀಗಳವರ ಪಾಠ ಸತ್ಯನಾಥ ಕಾಲೋನಿಯ ಮಠದಲ್ಲಿ ಏರ್ಪಡಿಸಲಾಗಿತ್ತು.   ತೀವ್ರವಾದ ಛಳಿಯನ್ನೂ ಗಮನಿಸಿದೆ ಪಾಠದ ಪೂರ್ಣ ಸದ್ಚಿನಿಯೋಗವನ್ನು ಪಡೆದವರು ಭಕ್ತರು. ನಿತ್ಯವೂ ಪಾಠ ಬಿಡಲೇಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡರು. ಇದು ನಿಜವಾದ ಕ್ರಾಂತಿ.  ಪ್ರತಿನಿತ್ಯ ಒಂದೊಂದು ಬಡಾವಣೆಗಳಿಗೆ ಹೋಗಿ ಅಲ್ಲಿಯೇ ಪಾದಪೂಜೆ, ಮುದ್ರಾಧಾರಣೆ, ಅನುಗ್ರಹ ಸಂದೇಶ, ರಾಮದೇವರ ದರ್ಶನ ಇತ್ಯಾದಿ ನೆರೆವೇರಿಸಿ ಎಲ್ಲ ಬಡಾವಣೆಗಳಲ್ಲೂ ತಮ್ಮ ಪಾದಧೂಳಿಯನ್ನು ಪಸರಿಸಿದರು.  *ಸಮಗ್ರ ತತ್ವಪ್ರಕಾಶಿಕಾ ಪರೀಕ್ಷೆ* ಸರ್ವಮೂಲಗ್ರಂಥಗಳ್ಲಿ ಗ್ರಂಥರಾಜ ಎಂದರೆ *ಸೂತ್ರಭಾಷ್ಯವೇ* ಇದು ಜಗತ್ಪ್ರಸಿದ್ಧ. ಸೂತ್ರಭಾಷ್ಯಕ್ಕೆ ಮೇರು ಟೀಕೆ *ತತ್ವಪ್ರಕಾಶಿಕಾ* ಸಮಗ್ರವಾದ ತತ್ವಪ್...

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*

Image
 * ಚಾತುರ್ಮಾಸ್ಯ ಮಹೋತ್ಸವ -  ಮುಂಬಯಿ* ಶ್ರೀಸತ್ಯಾತ್ಮತೀರ್ಥರ ಇಪ್ಪತ್ತೊಂಭತ್ತನೇಯ ಹಾಗೂ ಶ್ರೀ ವೇದವರ್ಧನತೀರ್ಥರ ನಾಲ್ಕನೇಯ ಚಾತುರ್ಮಾಸ್ಯ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಾ ಸಾಗಿದೆ.  *ಜ್ಙಾನಪ್ರಧಾನ ಚಾತುರ್ಮಾಸ್ಯ* ಮುಂಬಯಿಯ ಈ ಚಾತುರ್ಮಾಸ್ಯದ ಅತ್ಯಂತ ವಿಶೇಷವೇನೆಂದರೆ *ಜ್ಙಾನಪ್ರಧಾನ* ವಾದ ಈ ಚಾತುರ್ಮಾಸ್ಯ. ಇದುವೇ ಅತ್ಯಂತ ವಿಶೇಷ.  "ಸತ್ವ ಸತ್ವ ಮಹಾಸತ್ವ" ಇರುವಲ್ಲಿ ತತ್ವಜ್ಙಾನ ಇರಲೇಬೇಕು. ತತ್ವಜ್ಙಾನವಿದೆ ಎಂದರೆ ಸತ್ವಗುಣದ ವ್ಯಾಪಾರ ಇರಲೇಬೇಕು.  ಬೆಳಿಗಿನ ಝಾವಾ ೫ ಗಂಟೆ ಇಂದ ಎಂಟು ಗಂ ವರೆಗೆ ಪರಮಪೂಜ್ಯ ಶ್ರೀಶ್ರೀಗಳವರಿಂದ ಶ್ರೀಮನ್ಯಾಯಸುಧಾ ಪಾಠ. ಇದೇ ಸಮಯದಲ್ಲಿ ಪೂ ಆಚಾರ್ಯರರಿಂದ ಸುಧಾಪಾಠ. ಎಂಟರಿಂದ ಒಂಭತ್ತರವರೆಗೆ ತತ್ವಪ್ರಕಾಶಿಕಾ ಪಾಠ. ಹತ್ತು ಗಂ ಇಂದ ಹನ್ನೆರಡು ಮೂವತ್ತರ ವರೆಗೆ ಪೂಜೆಯ ಪ್ರಸಂಗದಲ್ಲಿ  ಪಂಡಿತರುಗಳಿಂದ ವಿಶೇಷ ಉಪನ್ಯಾಸ. ನಂತರ ಪೂಜ್ಯ ಆಚಾರ್ಯರಿಂದ ವಿಶೇಷ ತತ್ವ ಉಪನ್ಯಾಸಗಳ ವೈಭವ.  *ಪೂ ಆಚಾರ್ಯರ ತತ್ವೋಪನ್ಯಾಸ* ಆರವತ್ತೈದು ವರ್ಷದ ಹಳೆಯದಾದ ವಿಶೇಷವಾದ ಒಂದು ವೃಕ್ಷ. ಆ ವೃಕ್ಷದಲ್ಲಿ ಒಂದೇ ತೆರನಾದ ಹಣ್ಣುಗಳು ಸಿಗುವಂತಹದ್ದಲ್ಲ ಕಿಂತು ನಾನಾವಿಧ ಪಕ್ವವಾದ ರುಚಿರುಚಿಯಾದ ಮೋಕ್ಷಜ್ಙಾನಕ್ಕೆ ಕಾರಣಾವದ ದಿವ್ಯ  ಹಣ್ಣುಗಳನ್ನು ಕೊಡುವ ಉಣಿಸುವ ವೃಕ್ಷ. ಆ ವೃಕ್ಷ ಮತ್ಯಾವದೂ ಅಲ್ಲ *ಪೂಜ್ಯ ಆಚಾರ್ಯರೆಂಬ ಮಹಾ ವೃಕ್ಷ.* ದತ್ತಸ್ಚಾತಂತ್ರ್ಯ, ...

*ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು*

Image
  *ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು* "ಧನ್ವಂತರಿರ್ಭಗವಾನ್ ಪಾತ್ವಪಥ್ಯಾತ್" ಅಪಥ್ಯವಾದ ಏನೆಲ್ಲ ಗೀಳುಗಳಿವೆಯೋ ಅವೆಲ್ಲವನ್ನು, ಅಪಥ್ಯ  ಸಂಸಾರವೆಂಬ ಮಹರೋಗವನ್ನು, ಅಷ್ಟೇ ಅಲ್ಲದೇ ಅಪಥ್ಯ  ಸಂಸಾರದಲ್ಲಿಯ ದೈಹಿಕ ಮಾನಸಿಕ ಎಲ್ಲ ರೋಗಗಳನ್ನೂ ಅಪಹಿರಿಸಿ ಸಮೂಲವಾಗಿ ಸಂಹರಿಸಿ, ಮೋಕ್ಷಾನಂದವೆಂಬ ಅಮೃತ ಆರೋಗ್ಯವೆಂಬ ಅಮೃತವನ್ನು ಉಣಿಸುವ ಕರುಣಿಸುವ ಮುಖಾಂತರ ನಮ್ಮನ್ನು ರಕ್ಷಿಸುವ ಕೃಪಾಳು  ಹೆದ್ದೊರೆ ನಮ್ಮ ಧನ್ವಂತ್ರಿ ಭಗವಾನ್.  *ತುಂಬ ವಿಚಿತ್ರ ಆಶ್ಚರ್ಯ* ಎಲ್ಲ ಕಡೆಗೂ ಅಂತರ್ನಿಯಾಮಕನಾದ ಭಗವಾನ್ ಕ್ರಮವಾಗಿ ೧)ರೋಗದಲ್ಲಿ. ೨)ರೋಗಿಯಲ್ಲಿ. ೩)ಔಷಧಿಯಲ್ಲಿ. ೪)ವೈದ್ಯನಲ್ಲಿ ಹೀಗೆ ಕ್ರಮವಾಗಿ ಅಂತರ್ಯಾಮಿಯಾಗಿ ಇದ್ದಾನೆ.  *ನಮ್ಮ ದೇವ ಅಪರಾಜಿತ* ನಮ್ಮ ನಾರಾಯಣ ಹರಿ ಭಗವಾನ್ ಸರ್ವಸ್ವಾಮಿ ದೇವ ಎಂದಿಗೂ ಯಾರಿಂದಲೂ ಸೋಲಿಲ್ಲದ ಸರದಾರ ಎಂಬುವದು ಜಗತ್ಪ್ರಸಿದ್ಧ, ಶಾಸ್ತ್ರಸಿದ್ಧ.  ರೋಗದ ನಿಯಾಮಕನಾಗಿ ಇರುವ ಭಗವಂತ ಸೋಲದೇ ಘಟ್ಟಿಯಾಗಿ ನಿಂತರೆ ರೋಗವೂ ದೃಢವಾಯಿತು.‌ಆರೋಗ್ಯಬರುವದೆಂದು ?  ಔಷಧದ ಅಂತರ್ಯಾಮಿಯೂ ಸರ್ವಶಕ್ತ. ವೈದ್ಯನ ಅಂತರ್ಯಾಮಿ "ವೈದ್ಯೋನಾರಾಯಣೋ ಹರಿಃ" ವೈದ್ಯರೇ ದೇವ ಎಂದಿರುವಾಗ ವೈದ್ಯರ ಅಂತರ್ಯಾಮಿ ಮಹಾದೇವನೇ. ಹೀಗೆ ಮೂರೂ ಭಗವದ್ರುಪಗಳು ಸೋಲಿಲ್ಲದೇ ಇದ್ದರೆ, ವೈದ್ಯರ ಔಷಧಿಗಳ ಅಂತರ್ಯಾಮಿ ಸೋತರೆ  ಜಗತ್ತು ಎಷ್ಟು  ಅಸ್ತವ್ಯಸ್ತ ಎಂದು ಊಹಿಸಲು ಯಾರಿಂ...

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

Image
 *ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol* ಸತ್ಯಧ್ಯಾನವಿದ್ಯಾಪೀಠ ನಾನಾತರಹದ ಪ್ರೋತ್ಸಾಹನೆಗಳ, ವಿವಿಧ ವಿಚಾರಗಳ, ಹೊ ಆವಿಷಗಕಾರಗಳ, ಬಹುಮುಖ  ಕೃತಿಗಳ (ಕಾರ್ಯಗಳ)  ಕೈಗನ್ನಡಿ.  *Madhwa idol* ನೂರಾರು ಹೊಸ ಹೆಜ್ಜೆಗಳಲ್ಲಿ Madhwa idol ಇದೂ ವಿನೂತನ ಹೆಜ್ಜೆ. ಮುಂಬಯಿ ಪ್ರಾಂತದ ನೂರಾರು ಆಸಕ್ತ ಕಲಾಕಾರರುಗಳನ್ನು ಆಕರ್ಷಿಸಿ ಕಲಾಕೃತಿಗಳನ್ನು ನಿರ್ಮಿಸುವದು *Madhwa idol* ಉದ್ಯೇಶ್ಯ.  ವಿಷ್ಣು ಭಕ್ತಿಯನ್ನು ಸಾರುವ, ವಿಷ್ಣುವಿನಲ್ಲಿ ನಿಷ್ಠೆಯನ್ನು ಬೆಳೆಸುವ, ಮನಸ್ಸಿಗೆ ನೆಮ್ಮೆದಿಯನ್ನೂ ಕೊಡುವ, entertainment ಕೊಡುವ, ಸರಿ ದಾರಿಯನ್ನು ಬೋಧಿಸುವ, ಅಹಂಕಾರಗಳಿಗೆ ಕಡಿವಾಣ ಹಾಕುವ, ಹತಾಶಯನ್ನು ಕತ್ತರಿಸುವ, ಜೀವನೋತ್ಸಾಹವನ್ನು ಕೊಡುವ ನೂರಾರು ಹಾಡುಗಳು ಇವೆ. ಆ ಎಲ್ಲ ಹಾಡುಗಳೂ ವೈಷ್ಣವರ ನಾಲಿಗೆಯ ತುದಿಗೆ ಇರಬೇಕು ಇದು ಪರಮಪೂಜ್ಯ  ಪರಮಾಚಾರ್ಯರ ಸಂಕಲ್ಪ. ಸಾಕಾರಮಾಡಿದವರು ಪೂಜ್ಯ ಆಚಾರ್ಯರು. ಯುವಕರ ಕಣ್ಮಣಿಯಾದ  ಪಂ ವಿಶ್ವಪ್ರಜ್ಙಾಚಾರ್ಯರು ಮನೆಮನೆಗೆ, ಮಕ್ಕಳುಮರಿಗಳವರೆಗೂ ತಲುಪುವಂತೆ ಮಾಡುತ್ತಿದ್ದಾರೆ.  *ಪಂ ವಿಶ್ವಪ್ರಜ್ಙಾಚಾರ್ಯರ ಕನಸಿನ ಕೂಸು* ಪಂ ವಿಶ್ವಪ್ರಜ್ಙಾಚಾರ್ಯರು ನಿರಂತರ ಶ್ರಮವಹಿಸಿ, ಆಸಕ್ತಿಯನ್ನು ತೋರಿ, ಪ್ರೋತ್ಸಾಹಿಸಿ, ಶ್ರೀಗಳವರ ಪರಮಾನುಗ್ರಹದ ಬೆಳಕಿನದಾರಿಯನ್ನು ತೋರಿ ನೂರಾರು ಯುವಕ - ಯುವತಿ- ಹಿರಿಯ- ಕಿರಿಯ ಎಲ್ಲರನ್ನೂ ಒಗ್ಗೂಡಿಸಿ...

ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*

 *ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*  ಉತ್ತರಾದಿ ಮಠಾಧೀಶರಾದ ಶ್ರೀಶ್ರೀಗಳವರು ತಮ್ಮ ೨೯ ನೇಯ ಚಾತುರ್ಮಾಸ್ಯ ಸಂಕಲ್ಪಕ್ಕಾಗಿ ಮುಂಬಯಿ ಆಗಮಿಸಿದ್ದಾರೆ.   "ಮೋಹನಗರಿ ಮಾಯಾನಗರೀ ಎಂದೇ ಪ್ರಸಿದ್ದವಾದ  ಮುಂಬಯಿ ಮಹನಾಗರವನ್ನು, ಮಹಾವಿರಾಗಿಗಳಾದ, ತತ್ವಜ್ಙಾನದ ಗಣಿಗಳಾದ,  ಭಗವಂತನ ಅನೇಕಗುಣಗಳಿಗೆ  ಪ್ರತಿಬಿಂಬಗುಣಗಳನ್ನು ರೂಢಿಸಿಕೊಂಡಿರುವ, ಶ್ರೀಮದಾಚಾರ್ಯರಿಂದಾರಂಭಿಸಿ ಹಿರಿಯಶ್ರೀಗಳವರೆಗೆ ಎಲ್ಲ ಗುರುಗಳ ಮೂರ್ತಿಗಳಾದ ಶ್ರೀಶ್ರೀಗಳವರು ಇಂದಿನ ಶುಭ ಅವಸರದಲ್ಲಿ ಮುಂಬಯಿಯನ್ನು ಪ್ರವೇಶಿಸಿದರು.  *ಸತ್ಯಧ್ಯಾನ ವಿದ್ಯಾಪೀಠ*  ದ್ವೈತವಾಙ್ಮಯ ಪ್ರಪಂಚದಲ್ಲಿ ತುಂಬ ಪ್ರಾಚೀನ ವಿದ್ಯಾಸಂಸ್ಥೆ ಪರಮಪೂಜ್ಯ ಮಾಹುಲೀ ಹಿರಿಯಾಚಾರ್ಯರು ಸಂಸ್ಥಾಪಿಸಿದ,  ಇಂದು ಪೂಜ್ಯ ಮಾಹುಲೀ ಆಚಾರ್ಯರು ಕುಲಪತಿಗಳಾಗಿ ನಡೆಸುತ್ತಿರುವ ಸಂಸ್ಥೆ ಅದು *ಸತ್ಯಧ್ಯಾನ ವಿದ್ಯಾಪೀಠ - ವಾಣೀವಿಹಾರ ವಿದ್ಯಾಲಯ* ಇದು ಜಗತ್ಪ್ರಸಿದ್ಧ. ಈ ಸತ್ಯಧ್ಯಾನ ವಿದ್ಯಾಪೀಠದಲ್ಲಿ ೧೯೭೩ ರಲ್ಲೇ ಶ್ರೀಶ್ರೀಸತ್ಯಪ್ರಮೋದತೀರ್ಥರು ಚಾತುರ್ಮಾಸ್ಯಗೈದಿದ್ದರು. ಆ ವರುಷವೇ ಸರ್ವಜ್ಙಾಚಾರ್ಯರು (ಶ್ರೀಸತ್ಯಾತ್ಮರು) ಅವತಾರಗೈದ ವರುಷವೂ ಆಗಿತ್ತು.  ಶ್ರೀಸರ್ವಜ್ಙಾಚಾರ್ಯರ ಸಂಪೂರ್ಣ ಬಾಲ್ಯ ಅವಸ್ಥೆ ವಿದ್ಯಾಪೀಠದಲ್ಲಿಯೆ. ಸಮಗ್ರ ಶಾಸ್ತ್ರಾಧ್ಯಯನ ಪೂ ಮಾಹುಲೀ ಆಚಾರ್ಯರಲ್ಲಿಯೇ. ನಿರಂತರ ಅಧ್ಯಯನಶೀಲರು. ನಿರಂತರ ಉತ್ಸಾಹ. ವಿದ್ಯಾ...

ನಮ್ಮ ನಾಡು..*

 *ನಮ್ಮ ನಾಡು ..* ಅಂತರ್ನಿಹಿತ ಪಶುಭಾವದ ತೃಪ್ತಿಗಾಗಿ ಸದಾ ತೊಯ್ದಾಡುವ ಮಾನವನಿಗೆ ಮನಶ್ಶಾಂತಿ ನೀಡುವ ನೀಡುವ ತತ್ವಜ್ಙಾನ, ನೀತಿ ಅಧ್ಯಾತ್ಮಗಳ ತವರು ನಮ್ಮ ಸಿದ್ಧಾಂತ .. ಮಾನವ ತಾ ತನ್ನ ಪಾಶವೀಯ ಮೇಲ್ಮಸುಗನ್ನು ಕಿತ್ತೆಸೆದು, ತನ್ನ ಜನ್ಮ ಮೃತ್ಯುರಹಿತ ಆನಂದಮಯ ಆತ್ಮ ರೂಪದಲ್ಲಿ ನಿರಂತರ ತನ್ನನ್ನು ತಾ ಕಂಡುಕೊಳ್ಳುವಂಥ ಸರ್ವವಿದ್ಯೆಗಳ ಸಾಧನಾ ಸ್ಥಳ ನಮ್ಮ ಭಾರತ. ಸುಖಭೋಗಗಳನ್ನುಂಡು, ಅದಕ್ಕಿಂತೂ ಹೆಚ್ಚಾಗಿ ದುಃಖದ ನಂಜು ನುಂಗಿ, ಕಡೆಗೆ ಅವೆಲ್ಲ ಅಸಾರ ಅನುಪಯುಕ್ತ ಎಂಬ ಭಾವನೆ ಅನುಭವಿಸಕ್ಕಿಂತಲೂ ಮೊದಲಿಗೇ ತಿಳಿಸಿದ ಭೂಮಿ ನಮ್ಮ ಭಾರತ.. ನವ ಯವ್ವನದ ಮದ, ಮದುಯುಕ್ತ ವಿಲಾಸಿ ಜೀವನ, ಆ ಭವ್ಯ ಜೀವನದ ಅಮಲಿನಲ್ಲಿ ಮುಳುಗುವದಕ್ಕೂ ಪೂರ್ವದಲ್ಲೆ ಇದು ಅನುಪಯುಕ್ತ, ಅತ್ಯಂತ ಹೇಯ ಅಂತ ಸಾರಿದ ಭೂಮಿ ನಮ್ಮ ಭಾರತ. ಭವಸಾಗರ. ಇದರಲ್ಲಿ ನೋವು ನಲಿವು, ಸಬಲತೆ ದುರ್ಬಲತೆ, ಸುಖ ದುಃಖ, ಸಮೃದ್ಧಿ ದಾರಿದ್ರಯ, ಸಾವು ಬದುಕು, ಪ್ರೇಮ ದ್ವೇಶ, ಪ್ರೀತಿ ಮಾತ್ಸರ್ಯ, ಇವೆ ಮೊದಲಾದ ಪ್ರಬಲ ಪ್ರವಾಹಗಳ ಮಧ್ಯದಲ್ಲಿಯೇ ನಿಸ್ಸೀಮ ಶಾಂತಿಯನ್ನು ಅರಹುವ ಏಕೈಕ ದೇಶ ಅದು ನಮ್ಮ ದೇಶ. ಜ್ಙಾನದ ಮೇರುಗಳನ್ನು, ವಾಙ್ಮಯ ಗಂಗೆಗಳನ್ನು ಹರಿಸುವ ಮುಖಾಂತರ ಧರ್ಮದ ಭಯ ಹುಟ್ಟಿಸಿ, ಸನ್ಮಾರ್ಗದಲ್ಲಿ ಇರಿಸುವ ದೇಶ ನಮ್ಮ ದೇಶ. ಎಂತಹ ದುಃಖಗಳು ಅಪ್ಪಳಿಸಿದರೂ , ಆ ದುಃಖದ ಮಧ್ಯದಲ್ಲಿಯೇ *ಸಣ್ಣದರಲ್ಲಿಯೇ ಆಯಿತು* ಎಂಬ ಸಮಾಧಾನದ ಸೂತ್ರವನ್ನು ತಿಳಿಸಿದ ದೇಶ.  ಎನೆಲ್ಲವನ್...

ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*

Image
 * ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*  ಮನಸ್ಸು ಇದೊಂದು ಅಮೂಲ್ಯವಾದ ಪದಾರ್ಥ. ಒಂದು ಬಾರಿ ಮನಸ್ಸಿನಲ್ಲಿ ಏನೋ ಒಂದು ವಿಷಯ, ಯಾವುದೋ ರೀತಿಯಲ್ಲಿ ಒಳ ಸೇರಿತೋ ಅದು ಮನಸ್ಸಿನಲ್ಲಿ  ಸಂಸ್ಕಾರ ರೂಪದಿಂದ ಶಾಶ್ವತವಾಗಿ ಉಳಿದು ಬಿಡುತ್ತದೆ.  ಮನಸ್ಸಿನಲ್ಲಿ ಒಮ್ಮೆ ಒಂದು ವಿಷಯ ಸೇರಿತು ಎಂದಾದರೆ ಆ ವಿಷಯವೆಂಬ ಹುಳ ಒಳಗೆ ಕೊರೆಯಲು ಆರಂಭಿಸುತ್ತದೆ.  ಆ ವಿಷಯವನ್ನು ಒಳಗೇ ಇಟ್ಟು ಕೊಳ್ಳುತ್ತೇನೇ ಎಂಬುವದೂ ಅಸಾಧ್ಯದ ಮಾತೆ. ಒಂದಿಲ್ಲ ಒಂದು ರೂಪದಿಂದ ಅಭಿವ್ಯಕ್ತವಾಗಲೇ ಬೇಕು. ಆಗಿಯೇ ಆಗುತ್ತದೆ. ಸಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಸೇರಿದ್ದರೆ, ಸಾಕಾರಾತ್ಮಕ ವಿಚಾರಗಳೇ ಹೊರಬರುತ್ತವೆ. ನಕಾರಾತ್ಮಕ ವಿಷಯಗಳು ಸೇರಿದ್ದರೆ ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗುವದು.  ಗುರು ದೇವತಾ ದೇವರುಗಳ, ಧರ್ಮ ಶಾಸ್ತ್ರ, ತಂದೆ ತಾಯಿ ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ, ಆತ್ಮೀಯರು ಹಿತೈಷಿಗಳು ಇತ್ಯಾದಿ ಅಂತರಂಗದ ಅಥವಾ ಬಹಿರಂಗದ ವ್ಯಕ್ತಿಗಳ ವಿಷಯಕ ಸಕಾರಾತ್ಮಕ positive ವಿಷಯಗಳು ಸೇರಿದ್ದರೆ ಸಕಾರಾತ್ಮಕವಾಗಿಯೇ ಮಾತಾಡುವ. ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ. ನಕಾರಾತ್ಮಕ negative ಆಗಿದ್ದರೆ ನಕಾರಾತ್ಮಕವಾಗಿಯೇ. ಒಂದಂತೂ ನಿಶ್ಚಿತ ಅಭಿವ್ಯಕ್ತಗೊಳಿಸದೇ ಇರಲಾರ.  ಒಂದು ಸುಂದರ ಉದಾಹರಣೆ. ಒಂದು ಹಣ್ಣು ಚಿಕ್ಕು ತೆಗೆದುಕೊಂಡು ಅದನ್ನು ಹಿಂಡೋಣ , ಹಿಂಡಿದಾಗ ಬರುವ ರಸವೇನು ?? ಸಿಹಿಯಾದ ...

ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*

Image
 *ಆಯುಧಗಳಿವೆ -  ಉಪಯೋಗಿಸುತ್ತಿಲ್ಲವೇಕೆ... ??* ಓ ಆಯುಧ !! ಪ್ರತಿಯೊಂದು ಆಪತ್ತಿಗೂ ನೀನೇ ಒಂದು ದೊಡ್ಡ ಆಯುಧ, ನೀನು ಎನ್ನ ಬಳಿ ಇರಲಾಗಿ ನಿನ್ನನ್ನೂ ಬಳಿಸದೆ ಬಿಟ್ಟರೆ ನನಗೆ ಸೋಲಲ್ಲದೇ ಮತ್ತಿನ್ನೇನೂ.....  ಒಂದೇ ಏಟಿಗೆ ಇಷ್ಟೊಂದು ಪರೀಕ್ಷೆಗಳು ಎದುರಾದರೆ ನಾನೇನು ಮಾಡಲು ಸಾಧ್ಯ... ??? ಈ ಪ್ರಶ್ನೆ ಆಪತ್ತಿನಲ್ಲಿ ಸಿಲುಕಿದ ಎಲ್ಲರದೂ ಆಗಿರುವದೇ. ನನಗೂ ಅನೇಕಬಾರಿ ಬಂದದ್ದೂ ಇದೆ...  ಗುಬ್ಬಚ್ಚಿಯ ಹಾಗೆ ಕಾಸು ಕಾಸು ಗೂಡಿಸಿದೆ, ಸಾಲ ತಗೆಸಿದೆ ಕೊನೆಗೆ  ಮನೆ ಕಟ್ಟಿದೆ.  ಭರ್ಜರಿ ವಾಸ್ತು ಮಾಡಿದೆ. ಮನೆ ಆಯಿತು ಕೆರಿಯರ್ ಸೆಟ್ ಮಾಡ್ಕೋಬೇಕು ಅಂದೆ..  ಅಷ್ಟರಲ್ಲೆ ಮಕ್ಕಳು ಆದರು. ಕೈಲಿ ಹಣವಿಲ್ಲ. ಬಂದ ಎಲ್ಲ ದುಡ್ಡು ಸಾಲದ ಕಂತಿಗೇ ಹೋಗುತ್ತದೆ. ಈ ಪ್ರಸಂಗದಲ್ಕೇ ಟ್ರಾನ್ಸ್ಫರ್ ಆಯ್ತು.. ಎಕ್ಸ್ಟ್ರಾ ದುಡಿಯೋಣ ಅಂದರೆ ಮನೆಯಲ್ಲಿ ಕಿರಿಕಿರಿ.  ನನ್ನಿಂದ ಉಪಯೋಗವಿಲ್ಲ ಎಂದಾಕ್ಷಣಕ್ಕೆ ನನ್ನ ಆತ್ಮೀಯರೆಲ್ಲರೂ ಪಲಾಯನ ಮಾಡಿದರು.   ಹೀಗೆ ಮನೆಯಲ್ಕಿ ಒಂದರಮೇಲೆ ಒಂದು ಸಮಸ್ಯೆ.. ಈ ಸಮಸ್ಯೆಗಳು ನನ್ನ ಮೆಲೆಯೇ ಯಾಕೆ ಬರುತ್ತವೆ... ?? ಒಮ್ಮೆಲೆ ಈ ಸಮಸ್ಯೆಗಳು ಎಗರಿಬಂದರೆ ನಾನಾದರೂ ಏನು ಮಾಡಲಿ... ??? ಆ ದೇವರಿಗೆ ಸ್ವಲ್ಪಾನೂ ಕರುಣೆ ಇಲ್ಲವೆ.. ?? ಛೇ ನನ್ನ ಜನ್ಮಕ್ಕಿಷ್ಟು...  ಮಜಾ ಏನೆಂದರೆ ಇಷ್ಟೆಲ್ಲ ಒದ್ದಾಡು ಮನುಷ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಕ್ಷಣವೂ ಯೋಚಿ...

ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*

Image
 *ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*  ಚೈತ್ರಮಾಸದ ಕೊನೆಯ ದಿನವಾದ ಅಮಾವಾಸಯೆಯ ಶುಭ ಅವಸರದಿ ಇಹ ಲೋಕದ ಭವ್ಯ ದಿವ್ಯ ಯಾತ್ರೆಯನ್ನು ಮುಗಿಸಿ ಪರಲೋಕದ ಯಾತ್ರೆಯನ್ನು ಆರಂಭಿಸಿದ ಮಹಾ ಚೇತನ ಸಿರಿವಾರದ ಜಯಣ್ಣ ಅವರು. ಪರಲೋಕದ ಯಾತ್ರೆ ಆರಂಭಿಸಿ ಇಂದಿಗೆ ಮೂರು ವರ್ಷಗಳಾಯ್ತು. ಪರಲೋಕದ ಯಾತ್ರೆ ಹೇಗೆ ನಡೆದಿದೆ ನಮಗೆ ತಿಳಿಯದು, ಈ ಲೋಕದಯಾತ್ರೆಯಲ್ಲಿ ಕೆಲ ವಿಷಯಗಳನ್ನು ತಿಳಿಯುವದು ನನ್ನ ಆದ್ಯ ಕರ್ತವ್ಯಗಳಲ್ಲಿ ಇದೂ ಒಂದಾಗಿದೆ.   ಸಮಕಾಲಿನ ಹಿರಿಯರು ತಿಳಿಸಿದ ಒಂದೆರಡು ಹೊಸ ವಿಷಯಗಳನ್ನು ತಿಳಿಯುವ ಪ್ರಯತ್ನ.  *ನಗು ಮೊಗದ ಸರದಾರ....* "ಸಮೃದ್ಧಿ ಇರುವಾಗಿನ ನಗು, ದಾರಿದ್ರ್ಯದಲ್ಲಿ ಮಾಸಿರುತ್ತದೆ" ಇದು ಇಂದಿನ ಸತ್ಯ. ಆದರೆ ಸಮೃದ್ಧಿಯ ಉತ್ತುಂಗದಲ್ಲಿ ಇರುವಾಗಲೂ, ದಾರಿದ್ರ್ಯದ ಪರಾಕಾಷ್ಠೆಯಲ್ಲಿ ಇರುವಾಗಲೂ ಏಕ ಪ್ರಕಾರದ ನಗುಮೊಗವೇನಿದೆ ಅದು *ವಿಷ್ಣುಪ್ರಿಯ* ನ ಸ್ವತ್ತು. ಅದುವೇ ಭಗವದಾರಾಧಕನ ವೈಭವ. ಈಭವದ ಸರದಾರ ಸಿರಿವಾರ ಜಯಣ್ಣ ಅವರು  ಎಂದರೆ ತಪ್ಪಾಗದು.  ದರಿದ್ರ ಸಿರಿವಂತನಾಗುವದು ಕಂಡಿದೆ, ಆದರೆ ಸಿರಿವಂತ ದರಿದ್ರನಾಗುವದು ತುಂಬ ವಿರಳ. ಆಗರ್ಭ ಶ್ರೀಮಂತಿಕಯಲ್ಲಿಯೇ ಹುಟ್ಟಿ ಬಂದ, ಕಡು ದಾರಿದ್ರ್ಯದಲ್ಲಿ ಕಾಲವಾದ ತುಂಬ ಅಪರೂಪದ ವ್ಯಕ್ತಿತ್ವದ ಸಾಧಕರು ಇವರು.  "ಅವರ ಆ ತೃಪ್ತಭಾದಿಂದ ಕೂಡಿದ, ಕೃತಜ್ಙತಾಭಾವವನ್ನೊಳಗೊಂಡ, ಉಪಕಾರ ಹಾಗೂ ದಯೆ ಇವುಗಳನ್ನು ಅನುಭವಿಸುವ ಮುಖಾಂತರ...

*ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ*

Image
 *ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ* ಐತಿಹಾಸಿಕ ಶ್ರೀಮನ್ಯಾಯಸುಧಾ ಮಂಗಳ  ೧) ತಮ್ಮ ಕೇವಲ ನಾಲವತ್ತನೇಯ ವಯಸ್ಸಿಗೆ ಏರಡನೇಯ ಮಂಗಳ‌ಮಹೋತ್ಸವ. ೨) ಏರಡನೇಯ ಸುಧಾಮಂಗಳದಲ್ಲಿಯೇ ಏಳು ಜನರಿಂದ ಸಮಗ್ರ ಶ್ರೀಮನ್ಯಾಯಸುಧಾ ಪರೀಕ್ಷೆ. ೩) ಎರಡೂ ಸುಧಾಮಂಗಳ ಸೇರಿಸಿ ಆರವತ್ತು ವಿದ್ಯಾರ್ಥಿಗಳಿಗೆ ಸುಧಾ ಪಾಠ ಹೀಗೆ ಹಲವಾರುಕಾರಣಗಳಿಂದ ತಮ್ಮ ಈ ಸುಧಾಮಂಗಳವನ್ನು ಐತಿಹಾಸಿಕವಾಗಿರಿಸಿದ್ದಾರೆ ಪಂ ವಿಶ್ವಪ್ರಜ್ಙಾಚಾರ್ಯರು.  ಆಗಮಿಸಿದ ಯತಿವರೇಣ್ಯರುಗಳು, ಆಹ್ವಾನಿತ ವಿದುಷರು, ಭಾಗವಹಿಸಿದ ಈ ಜನಸ್ತೋಮ ಇವುಗಳನ್ನು ಗಮನಿಸಿದರೆ ಈ ಮುಂಬಯಿಯಲ್ಲೂ ಇಷ್ಟು ಧಾರ್ಮಿಕ, ವಿಷ್ಣುಭಕ್ತ ಇದ್ದಾರೆ ಅವರಲ್ಲಿ ಯಾವ ಮಟ್ಟಿಗೆ ಧರ್ಮ ಜಾಗೃತಿ ಆಗಿರಬಹುದು ಎಂದು ಯೋಚಿಸಲೂ ಅಸಾಧ್ಯದ ಮಾತೇ.  ನೂರಾರು ಜನ ಪರೀಕ್ಷಕರು, ಅವರು ಕೇಳುವ ಪ್ರಶ್ನೆಗಳು, ವಿದ್ಯಾರ್ಥಿಗಳು ಕೊಡುವ ಥಟ್ಟನೆ ಉತ್ತರಗಳು ಇವುಗಳನ್ನು ಗಮನಿಸಿದರೆ ನಮ್ಮ ಗುರುಪುತ್ರರಾದ, ವೈಯಕ್ತಿಕವಾಗಿ ನನ್ನ ಅತ್ಯಂತ ಆತ್ಮೀಯ ಮಿತ್ರರೂ ಆದ ವಿಶ್ವಪ್ರಜ್ಙಾಚಾರ್ಯರ ಪರಿಶ್ರಮ, ತಪಸ್ಸು, ವಿದ್ಯಾರ್ಥಿವಾತ್ಸಲ್ಯ ವಿದ್ಯಾರ್ಥಿಗಳ ಮಹಿಮಾ ಹಾಗೂ ವಿದ್ಯಾರ್ಥಿಗಳ ಗುರುಭಕ್ತಿ ಇತ್ಯಾದಿಗಳಲ್ಲವೂ ಎದ್ದು ಬರುತ್ತಿತ್ತು.  ಮಂಗಳಾನುವಾದ  ಪಂ ವಿಶ್ವಪ್ರಜ್ಙಾಚಾರ್ಯರು ಮಂಗಳಾನುವಾದವನ್ನು ಶ್ರೀಮನ್ಯಾಯಸುಧಾ  ಹಾಗೂ ಟಿಪ್ಪಣಿಗಳಲ್ಲಿಯ ಎ...

*ಸುಧಾಯಾತ್ರೆ - ಸುಧಾ ಸತ್ರ*

Image
 *ಸುಧಾಯಾತ್ರೆ - ಸುಧಾ ಸತ್ರ*  ಯಾತ್ರೆಗಳು ಅನೇಕ, ಸತ್ರಗಳೂ ನೂರಾರು, ಆದರೆ ಅತ್ಯುತ್ತಮ ಯಾತ್ರೆ *ಶ್ರೀಮನ್ಯಾಯಸುಧಾ ಮಂಗಳ* ದ ಯಾತ್ರೆ. ಸತ್ರಗಳು ಸಾವಿರಾರು ಇದ್ದರೂ *ಶ್ರೀಮನ್ಯಾಯಸುಧಾ ಪರೀಕ್ಷೆಯ ಸತ್ರ* ವೇ ಸರ್ವೋತ್ತಮ ಸತ್ರ.  *ಸುಧಾ ಯಾತ್ರೆ ಉತ್ತಮವೇಕೆ...?* ಯಾತ್ರೆ ಎಂದರೆ ತೀರ್ಥ ಕ್ಷೇತ್ರಗಳ ಯಾತ್ರೆ. ಭಗವತ್ಸನ್ನಿಧಾನ ವಿಶೇಷ ಒಂದು ಕಾರಣವಾದರೆ, ಪುಣ್ಯ ಸಂಪಾದನೆಗೆ ಬಹಳ ಶ್ರೇಷ್ಠ ಮಾರ್ಗ ಎರಡನೇಯ ಕಾರಣ. ಈ ಎರಡೂ "ಸುಧಾಯಾತ್ರೆಯಲ್ಲಿ ಎಷ್ಟಿರಬಹುದು" ಎಂದು ಯೋಚಿಸಲು ತೊಡಗಿದರೆ ಹಯಬ್ವೇರಿಸಬೇಕೇ ಹೊರತು ಆದಿ ಅಂತ ಕಾಣುವದಿಲ್ಲ.  *ಸುಧಾಯಾತ್ರೆಗೆ ಫಲಗಳೇನು .. ?? ಫಲವೆಷ್ಟು...??* ಕೆಲ ತೀರ್ಥಯಾತ್ರೆ ಪುಣ್ಯ ಸಂಪಾದನೆ ಮಾಡಿಸಬಹುದು. ಇನ್ನನೇಕ ಯಾತ್ರೆಗಳು ಅರ್ಥಾದಿಗಳನ್ನು ಒದಗಿಸಬಹುದು. ಆದರೆ ಈ "ಸುಧಾಯಾತ್ರೆ"ಧರ್ಮಾದಿ ಮೋಕ್ಷಾಂತ ಎಲ್ಲ ಪುರುಷಾರ್ಥಗಳಿಗೆ ಕಾರಣವಾಗಿದೆ.  ಅಡವೀ ಆಚಾರ್ಯರು ತಮ್ಮ ಸ್ತೋತ್ರದಲ್ಲಿ ತಪಸ್ವಿಗಳ ಫಲ ಒಂದು ವಾಕ್ಯದ ಅಧ್ಯಯನದಿಂದ ಒದಗುತ್ತದೆ. ಗುರು ಸೇವೆ ಮಾಡಿದ ಫಲ, ತೀರ್ಥಯಾತ್ರೆ ಮಾಡಿದ ಫಲ, ವನವಾಸದ ಫಲವೇನಿದೆ ಆಫಲ, ವಿಹಿತ ಸಕಲ ಕರ್ಮಗಳ ಫಲ, ವೇದೋಕ್ತ ಭಗವದಜ್ಝಾನವೇ ಮೊದಲಾದ ಫಲ,  ಹೀಗೆ ಹತ್ತಾರು ಫಲಗಳನ್ನು ತಿಳಿಸುತ್ತಾರೆ. ಆದ್ದರಿಂದಲೂ ಯಾತ್ರೆಗಳಲ್ಲಿ ಸರ್ವೋತ್ತಮ ಯಾತ್ರೆ *ಸುಧಾಯಾತ್ರೆ....*  *ಸುಧಾ ಸತ್ರ....*  ಅನ್ನ ಸತ್ರ, ಜಲಸತ್ರ, ಜ್...

ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...*

Image
 * ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...* ಆದರ್ಶ ಪುರುಷ ಶ್ರೀರಾಮ ಚಂದ್ರ. ಗುಣಗಳ ಗಣಿ ಶ್ರೀರಾಮ ಚಂದ್ರ. ರಾಮಾಯಣ ಆರಂಭವಾಗಿರುವದೇ "ಗುಣವಂತರಾರು ??? ಎಂಬ  ಪ್ರಶ್ನೆಗೆ ಉತ್ತರ ರೂಪವಾಗಿ". ರಾಮಾಯಣ ಶ್ರೀರಾಮನ ಗುಣಗಳನ್ನು ಕೊಂಡಾಡುವಾಗ, ಶ್ರೀರಾಮನಲ್ಲಿ ಅತಿಮಾನುಷ ಗುಣಗಳು ಸಾವಿರಾರು ಅಲ್ಲ ಅನಂತ ಅನಂತ ಇವೆ ಎಂಬುವದನ್ನು ಮನಗಂಡು,  ಆ ಎಲ್ಲ ಗುಣಗಳ ಕಡೆ ಬೆಳಕು ಹಾಯಿಸುತ್ತಾ,  ಸಾಮಾನ್ಯ ಮಾನವನಿಗೆ ಯಾವೆಲ್ಲ ಗುಣಗಳು ಮಾರ್ಗದರ್ಶನ ವಾಗಬಹುದೋ, ಉಪಕಾರಿಯಾಗಬಹುದೋ, ಈ ಗುಣಗಳನ್ನು ನಾನೂ ರೂಢಿಸಿಕೊಳ್ಳಬಹುದು ಎಂದೆನಿಸುವದೋ ಆ ತರಹದ ಗುಣಗಳನ್ನೇ ನೂರಾರು ಸಾವಿರಾರು ಗುಣಗಳನ್ನು ಬಿಚ್ಚಿಡುತ್ತದೆ. ಕೆಲಗುಣಗಳ ಕಡೆ ಗಮನ ಹರಿಸೋಣ. *ಮೃದು \ ಸ್ಮಿತ ಪೂರ್ವಾಭಿಭಾಷೀ* ಎಂದಿಗೂ ರಾಮ ಆಡುವ ಮಾತು ಮೊದಲನೆಯ ಮಾತಾಗುತ್ತಿತ್ತು. ಅವರು ಮಾತಾಡಲಿ ಎಂಬ ಭಾವ ಇರುತ್ತಿರಲಿಲ್ಲ. ಆ ಮಾತು ಮೃದುವೇ ಆಗಿರುತ್ತಿತ್ತು. ಮಾತಾಡುವಾಗ ಮಂದಹಾಸ ತುಂಬಿ ತುಳುಕಿರುತ್ತಿತ್ತು.  ಎಂದಿಗೂ ಕಠೋರ ಮಾತು ಅಥವಾ ಕೊಂಕು ಮಾತು ಆಗಿರುತ್ತಿರಲಿಲ್ಲ. *ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ* ಎಷ್ಟೇ ಪರುಷವಾಗಿ ಕ್ರೂರವಾಗಿ ಅಂದರೂ ಆಡಿದರೂ ತಿರುಗಿ ಉತ್ತರವನ್ನು ಎಂದಿಗೂ ಕೊಡುತ್ತಿರಲಿಲ್ಲ ಶ್ರೀರಾಮ. ಈ ಗುಣ ಮನವನ ವೈಭವದ ಜೀವನಕ್ಕೆ ಅತ್ಯುಪಯುಕ್ತ, ರೂಢಿಸಿಕೊಳ್ಳಲೂ ಬಹುದು. ಆ ಗುಣವನ್ನೇ ಬಿಚ್ಚಿಡುತ್ತದೆ.   ...

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*

Image
 *ಪಾಪ ಪರಿಹರಿಸಿಕೊಳ್ಳಲು ಪುಣ್ಯಘಳಿಸಲು  ಒಂದು ಸದವಕಾಶ* ಜೀವನ ಸರ್ವಸ್ವಕ್ಕೆ ಕಾರಣ ಪುಣ್ಯಪಾಪಗಳು. ನಿತ್ಯ ಪುಣ್ಯ ಸಂಪಾದಿಸಬೇಕು. ಪಾಪಗಳನ್ನು ಪರಿಹರಿಸಿಕೊಳ್ಳಬೇಕು. ಆದರೆ..... ಒತ್ತಡವೋ, ಆಲಸ್ಯವೋ, ತಾತ್ಸಾರವೋ, ಅನಾಸಕ್ತಿಯೋ, ಅವಿಶ್ವಾಸನೋ ತಿಳಿಯದು ಅಂತೂ ನಿತ್ಯ ಪುಣ್ಯ ಸಂಪಾದನೆಯಾಗುವದಿಲ್ಲ ಇದು ಅತ್ಯಂತ ನಿಶ್ಚಿತ.  ಪಾಪದಲ್ಲಿ ಅಭಿರುಚಿಯೋ, ತೃಪ್ತಿಸಿಗತ್ತೆ ಎಂಬ ಸಂತೋಷವೋ, ಪಾಪ ಮಾಡಿದರೆ ಏನಾಗತ್ತೆ ಎಂಬ ಭಂಡ ಧೈರ್ಯವೋ ಅತ್ಯಂತ ಅನಾಯಾಸವಾಗಿ ನಿತ್ಯವೂ ಪಾಪಗಳು ಘಟಿಸುತ್ತಾ ಹೋಗುತ್ತವೆ ಇದುವೂ ಅಷ್ಟೇ ನಿಶ್ಚಿತ.  ನಿತ್ಯವೂ ಪಾಪಗಳನ್ನು ಪರಿಹರಿಸಿಕೊಳ್ಳುತ್ತಾ ಪುಣ್ಯ ಸಂಪಾದನೆಯ ಮಾರ್ಗವನ್ಬು ಅವಲಂಬಿಸಿದಿದ್ದರೂ ಕನಿಷ್ಠ ಕೆಲವೊಂದು ದಿನವಾದರೂ ಅನುಸರಿಸಲಿ, ಅಂದು ದುಪ್ಪಣ್ಯಕೊಡುವೆ ಎಂಬುವದು ದೇವರ ಸಂಕಲ್ಪವೋ ಏನೋ ಕೆಲವೊಂದು ದಿನಗಳನ್ನು ಮೀಸಲು ಇಟ್ಟಿದ್ದಾನೆ.  ಆ ದಿನಗಳು ಎಂದರೆ *ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶೀ ಉಪವಾಸಗಳು, ಪ್ರತಿ ತಿಂಗಳಿನ ಸಂಕ್ರಮಣಗಳು, ಆರು ತಿಂಗಳಿಗೊಮ್ಮೆ ಬರುವ ೨ ಮುಖ್ಯ ಸಂಕ್ರಮಣಗಳು, ಆಗಾಗ ಬರುವ ಪರ್ವಕಾಲಗಳು, ಗ್ರಹಣ, ಮಗು ಜನಿಸುವಕ್ಷಣದ ಕಾಲ, ಗುರುಗಳ ಆರಾಧನೆಯ ಪ್ರಸಂಗ, ಹಬ್ಬ ಹರಿದಿನಗಳು* ಇತ್ಯಾದಿಯಾಗಿ ಮೀಸಲು ಇಟ್ಟಿದ್ದಾನೆ. ಆ ಆ ದಿನಗಳಂದು ಮಾಡುವ ಸಾಧನೆ ನೂರಾರುಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮಹಾಮಹಾ ಪಾಪಗಳ ನಾಶವೂ ಆಗುತ್ತದೆ.  ಈಗ ಪ್ರ...

ದಧಿ ವಾಮನ ಸ್ತೋತ್ರ :

Image
 ದಧಿ ವಾಮನ ಸ್ತೋತ್ರ : ಹೇಮಾದ್ರಿ-ಶಿಖರಾಕಾರಂ ಶುದ್ಧ-ಸ್ಫಟಿಕ-ಸನ್ನಿಭಮ್ | ಪೂರ್ಣಚಂದ್ರ-ನಿಭಂ ದೇವಂ ದ್ವಿಭಜಂ ವಾಮನಂ ಸ್ಮರೇತ್ || ೧ || ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ-ಮಧ್ಯಗಮ್ | ಜ್ವಲತ್ಕಾಲಾನಲ-ಪ್ರಖ್ಯಂ ತಟಿತ್ಕೋಟಿ-ಸಮಪ್ರಭಮ್ || ೨ || ಸೂರ್ಯಕೋಟಿ-ಪ್ರತೀಕಾಶಂ ಚಂದ್ರಕೋಟಿ-ಸುಶೀತಲಮ್ | ಚಂದ್ರಮಂಡಲ-ಮಧ್ಯಸ್ಥಂ ವಿಷ್ಣುಮಚ್ಯುತಮವ್ಯಯಮ್ || ೩ || ಶ್ರೀವತ್ಸ-ಕೌಸ್ತುಭೋರಸ್ಕಂ ದಿವ್ಯರತ್ನ-ವಿಭೂಷಿತಮ್ | ಪೀತಾಂಬರಧರಂ ದೇವಂ ವನಮಾಲಾ-ವಿಭೂಷಿತಮ್ || ೪ || ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಮ್ | ಷೋಡಶಸ್ತ್ರೀಪರಿವೃತಮ್-ಅಪ್ಸರೋಗಣ-ಸೇವಿತಮ್ || ೫ || ಸನಕಾದಿಭಿರನ್ಯೈಶ್ಚ ಸ್ತೂಯಮಾನಂ ಸಮಂತತಃ | ಋಗ್ಯಜುಸ್ಸಾಮಾಥರ್ವಭಿರ್-ಗೀಯಮಾನಂ ಜನಾರ್ದನಮ್ || ೬ || ಚತುರ್ಮುಖಾದ್ಯೈರ್ದೇವೇಶೈಃ ಸ್ತೋತ್ರಾರಾಧನ-ತತ್ಪರೈಃ | ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ || ೭ || ದಧಿಮಿಶ್ರಾನ್ನಕವಲಂ ರುಗ್ಮಪಾತ್ರಂ ಚ ದಕ್ಷಿಣೇ | ಕರೇಽಪಿ ಚಿಂತಯೇದ್ವಾಮೇ ಪೀಯೂಷಮಮಲಂ ಸುಧೀಃ || ೮ || ಸಾಧಕಾನಾಂ ಪ್ರಯಚ್ಛಂತಮನ್ನಪಾನಮುತ್ತಮಮ್ | ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಧ್ಯಾಯೇದ್ದೇವಮಧೋಕ್ಷಜಮ್ | ಆಯುರಾರೋಗ್ಯಮೈಶ್ವರ್ಯಂ ಲಭತೇ ಚಾನ್ನಸಂಪದಮ್ || ೯ || ಅತಿಸುವಿಮಲಗಾತ್ರಂ ರುಗ್ಮಪಾತ್ರಸ್ಥಮನ್ನಂ ಸುಲಲಿತದಧಿಖಂಢಂ ಪಾಣಿನಾ ದಕ್ಷಿಣೇನ | ಕಲಶಮಮೃತಪೂರ್ಣಂ ವಾಮಹಸ್ತೇ ದಧಾನಂ ತರತಿ ಸಕಲದುಃಖಾದ್ವಾಮನಂ ಭಾವಯೇದ್ಯಃ || ೧೦ || ಇದಂ ಸ್ತೋತ್...

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

Image
 *ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ  ಅರ್ಘ್ಯ  ಸಮರ್ಪಣ - ಮಂತ್ರಗಳು*  ಸಂಕಲ್ಪ ಮಂತ್ರ -  ಅದ್ಯ ಸ್ಥಿತ್ವಾ ನಿರಾಹಾರಃ ಶ್ವೋಭೂತೇ ಪರಮೇಶ್ವರ |  ಭೋಕ್ಷ್ಯಾಮಿ ಪುಂಡರೀಕಾಕ್ಷ ಅಸ್ಮಿನ್ ಕೃಷ್ಣಾಷ್ಟಮೀ ದಿನೆ ||  ಸ್ನಾನ ಮಂತ್ರ -  ಯೋಗಾಯ ಯೋಗಪತಯೇ ಯೋಗೇಶ್ವರಾಯ ಯೋಗಸಂಭವಾಯ ಶ್ರೀಗೋವಿಂದಾಯ ನಮೋನಮಃ ||  ಕೃಷ್ಣಪೂಜಾ ಮಂತ್ರ -  ಯಜ್ಙಾಯ ಯಜ್ಙಪತಯೇ ಯಜ್ಙೇಶ್ವರಾಯ ಯಜ್ಙಸಂಭವಾಯ ಶ್ರೀಗೋವಿಂದಾಯ ನಮೋನಮಃ ||  ಕೃಷ್ಣಾರ್ಘ್ಯ ಮಂತ್ರ -  ಜಾತಃಕಂಸ ವಧಾರ್ಥಾಯ ಭೂಭಾರೋತ್ತಾರಣಾಯ ಚ |  ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ||  ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |  ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ ||  ಚಂದ್ರಾರ್ಘ್ಯಮಂತ್ರ  ಕ್ಷೀರೋದಾರ್ಣವ ಸಂಭೂತ ಅತ್ರಿಗೋತ್ರಸಮುದ್ಭವ |  ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃಶಶಿನ್ ||  ರಾತ್ರಿ ಮಲಗುವಾಗ -  ವಿಶ್ವಾಯ ವಿಶ್ವಪತಯೇ ವಿಶ್ವೇಶ್ವರಾಯ ವಿಶ್ವಸಂಭವಾಯ ಶ್ರೀಗೋವಿಂದಾಯ ನಮೋನಮಃ  ಪಾರಣ ಮಂತ್ರ -  ಸರ್ವಾಯ ಸರ್ವಪತಯೇ ಸರ್ವೇಶ್ವರಾಯ ಸರ್ವಸಂಭವಾಯ ಶ್ರೀಗೋವಿಂದಾಯ ನಮೋನಮಃ ||  ವ್ರತಸಮರ್ಪಣಾ ಮಂತ್ರ -  ಧರ್ಮಾಯ ಧರ್ಮಪತಯೇ ಧರ್ಮೇಶ್ವರಾಯ ಧರ್ಮಸಂಭವಾಯ ಶ್ರೀಗೋವಿಂದಾಯ ನಮೋನಮಃ