*ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....*


 *ಜನಿವಾರ ತಗಿಸುವದು ಎಂದರೆ ಬ್ರಾಹ್ಮಣ್ಯವನ್ನು ಬೆತ್ತಲೆಗೊಳಿಸಿದ ಹಾಗೇಯೇ...ಆ ಕಾರ್ಯದಲ್ಲಿ ಸಫಲತೆ ತುಂಬ ದೂರವೇ....*


ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ್ಯಕ್ಕೆ ಪೀಡೆಕೊಡುವದು ಎಂದರೆ ಜಗತ್ತಿಗೆ ನಮ್ಮ ಸರ್ಕಾರಗಳಿಗೆ ನಮ್ಮ ರಾಜಕಾರಣಿಗಳಿಗೆ ತುಂಬ ಪ್ರೀತಿ. "ಬ್ರಾಹಣರನ್ನು ಉಳಿದು ಬೇರೆಯವರನ್ನು ಒಲಿಸಿಕೊಳ್ಳಲು ಎಷ್ಟು ಪ್ರೀತಿಯೋ ಅಭಿರುಚಿಯೋ ಅಷ್ಟೇ ಪ್ರೀತಿ ಅಭಿರುಚಿ ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ಪೀಡಿಸುವದು" ಎಂದರೆ.


ಈ ಅವಸ್ಥೆ ಇಂದಿನದು ಅಲ್ಲ. ದ್ವಾಪರಯುಗದಿಂದಲೂ ಇದ್ದೇ ಇದೆ. ಮುಘಲರಾಗಲಿ ಬ್ರಿಟೀಶರಾಗಲಿ ಅಥವಾ ಇಂದಿನ ಕೆಲಸರ್ಕಾರಗಳಾಗಲಿ ಶತಮಾನ ಶಾನಗಳಿಂದ ಕುಗ್ಗಿಸಲು ನಿರಂತರ ಪರಿಶ್ರಮಪಟ್ಟರೂ ಸಫಲರಾಗಿದ್ದು ಕಡಿಮೆಯೇ. ವಿಫಲರಾಗಿರುವದೇ ಹೆಚ್ಚಿಗೆ ಇದೆ. 


ತುಳಿತಗಳು, ಪೀಡೆಗಳು, ಸುನಾಮಿಯಂತೆ ಅಪ್ಪಳಿಸಿದರೂ ಬ್ರಾಹ್ಮಣ ಎಂದಿಗೂ ಕುಗ್ಗುವದಿಲ್ಲ, ಬಗ್ಗುವದಿಲ್ಲ, ಅಂಗಲಾಚುವದಂತೂ ಇಲ್ಲವೇ ಇಲ್ಲ. ತನ್ನ ನೈಜವಾದ ಅಮೋಘವಾದ ತಪಸ್ಸು, ಪ್ರಖರವಾದ ಬುದ್ಧಿವಂತಿಕೆ, ಅಪ್ರತಿಮ ವ್ಯಕ್ತಿತ್ವ ದೃಢವಾಗಿ ನಿಲ್ಲುವದಕ್ಕೆ ಇವುಗಳೇ ಆಧಾರಸ್ಥಂಭಗಳು. 


*ಇಂದಿನ ಅಮೋಘವಾದ ದುರಂತಕ್ಕೆ ಮೂಕಸಾಕ್ಷಿಗಳು ಅ(ನಾ)ವರೆಲ್ಲರು....*


ಹದಿನಾರು ಹದಿನೇಳು ವರ್ಷಗಳಿಂದ ಪರೀಕ್ಷೆಯಲ್ಲ ಉತ್ತೀರ್ಣನಾಗಿ ಬರುತ್ತಿರುವ ಅಪ್ಪಟ ಬ್ರಾಹ್ಮಣ ವಿದ್ಯಾರ್ಥಿ ಪರಿಕ್ಷೆಗಾಗಿ ಹೊರಟ. ಪರೀಕ್ಷಾಕೋಣೆಯ ಪ್ರವೇಶದ ಸಮಯಕ್ಕೆ ಶೀಕ್ಷಕವರ್ಗ ಹಾಗೂ ಅಧಿಕಾರಿವರ್ಗದವರು ಸೇರಿ ಜನಿವಾರವನ್ನು ತೆಗೆಯಲು ಆದೇಶಿಸಿದರು. 


*ಈ ಮೂರೆಳೆ ಜನಿವಾರದಿಂದ ಏನಾಗುವದಿದೆ....??*


ಅಧಕಾರಿಗಳ ಶೀಕ್ಷಕರ ಸರಳವಾದ ಉತ್ತರ *ಈ ಜನಿವಾರವನ್ನು ಕುತ್ತಿಗೆಗೆ ಬಿಗಿದು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡುವದು....??* ಎಂಬುವದಾಗಿ.


ಎಂದೂ ಕುಗ್ಗದ ಬಗ್ಗದ ಬ್ರಾಹ್ಮಣ ವಿದ್ಯರ್ಥಿಯ ಉತ್ತರ ಸ್ಪಷ್ಟ ಹಾಗೂ ಸರಳವಾಗಿತ್ತು *"ಪರೀಕ್ಷೆ ಬಿಟ್ಟರೆ ಬಿಟ್ಟೇನು... ಆದರೆ ಜನಿವಾರ ತಗೆಯುವದಿಲ್ಲ" ದೃಢವಾದ ದೀಕ್ಷೆಯ ನಿಲುವು ತಾಳಿದ ಉತ್ತರವಾಗಿತ್ತು.*


ಅಧಿಕಾರಿ ವರ್ಗ : ಕವಡೆಕಾಸಿನ ಕಿಮ್ಮತ್ತಿಲ್ಲದ ಮೂರೆಳೆ ಜನಿವಾರಕ್ಕೋಸ್ಕರ ನಿನ್ನ ಭವಿಷ್ಯ ಹಾಳು ಯಾಕೆ ಮಾಡಿಕೊಳ್ಳುವಿ...?? 


ವಿ: *ನನ್ನ ಭವಿಷ್ಯ ನಿಮ್ಮ ಪರೀಕ್ಷೆಯಲ್ಲಿ ಇಲ್ಲ, ನನ್ನ ಪ್ರಚಂಡವಾದ ಬುದ್ಧಿಶಕ್ತಿ ಹಾಗೂ ನನ್ನ ಬ್ರಾಹ್ಮಣ್ಯದ ದೀಕ್ಷೆಯಲ್ಲಿ ಇದೆ* ಸ್ಪಷ್ಟವಾಗಿ ತಿಳಿಸಿ ಅಲ್ಲಿಂದ ಹೊರನಡೆದ ಎಂಬುವದಾಗಿ ಪೇಪರ್ ಹಾಗೂ ವಾರ್ತೆಗಳಲ್ಲಿ ಕೇಳಿಬಂದೆವು. ನೋಡಿ ಬಂದೆವು. ಮೂಕ ಕುರುಡ ದುರ್ಬಲ ಸಾಕ್ಷಿಗಳಾಗಿ ನಿಂತೆವು. 


*ಜನಿವಾರ ಬ್ರಾಹ್ಮಣನ ಮಾನ* 

ಜನಿವಾರ ಯಜ್ಙೋಪವೀತವೇನಿದೆ ಇದು ಬ್ರಾಹ್ಮಣ್ಯದ ಸಂಕೇತ. ಆ ಯಜ್ಙೋಪವೀತವೇ ಬ್ರಾಹ್ಮಣನ ಮಾನ. *ಜನಿವಾರವನ್ನು ತಗೆಸುವದು ಎಂದರೆ ಬ್ರಾಹ್ಮಣನ ಮಾನಹರಣವೇ ಚೀರಹರಣವೇ.* ಆದರೆ ವಿದ್ಯಾರ್ಥಿಯ ಬ್ರಾಹ್ಮಣ್ಯದ ದೀಕ್ಷೆ ಇದೆ ಅಲ್ಲವೆ ಆ ದೀಕ್ಷೆಯನ್ನು ಕಂಡ ಶ್ರೀಕೃಷ್ಣನೇ, ಅಧಿಕಾರಿವರ್ಗದವರು  ಚೀರಹರಣ ಮಾಡಿಕೊಳ್ಳಲು ಬೇಕಾದ ನೂರಾರು ಆಮಿಷಗಳನ್ನು ಒದಗಿಸಿದರೂ, ಯಾವ ಆಮಿಷಗಳಿಗೂ ಬಗ್ಗದೇ ಜಗ್ಗದೇ ಚೀಹರಣರೂಪ ಬಲಿಗೆ ಪಶುವಾಗದ ಹಾಗೆ ದೃಢವಾದ ಮನಸ್ಸು ಮಾಡಿದನಲ್ಲವೇ... ಭೇಷ್ 

ಆ ದೀಕ್ಷೆ ಮನಸ್ಸು ಆಗ್ರಹ  ಕೊಟ್ಟನಲ್ಲ ಇದುವೇ ನಮ್ಮ ಕೃಷ್ಣನ ದಯೆ ಅನುಗ್ರಹ. 


ಜನಿವಾರ ಕತ್ತಿರಿಸುತ್ತಾರೆ....

ಜನಿವಾರ ಕತ್ತರಿಸುವಂಥ ಈ  ಕ್ರೌರ್ಯ ಧೈರ್ಯ ಹೇಗೆ ಬಂತು ಈ ಅಧಿಕಾರಿಗಳಿಗೆ ? ಸರ್ಕಾರದ ಹಾಗೂ ಹಿರಿ ಅಧಿಕಾರಿಗಳ ಬೆಂಬಲ ನಮಗೆ ಸಿಕ್ಕೇ ಸಿಗತ್ತೆ ಎಂಬ ಭರವಸೆ. ಯಾವ ಅಧಿಕಾರಿಯಾಗಲಿ ಈ ಸರ್ಕಾರವಾಗಲಿ ಬ್ರಾಹ್ಮಣನ ಪರವಿಲ್ಲ ವಿರೋಧಿಗಳೇ ಇದ್ದಾರೆ ಎಂಬುವದು ಸಿದ್ಧ. 

ಹೇಸಿಗೆ ಬರುವಂಥ ಕ್ರೌರ್ಯ. ಅವಶ್ಯವಾಗಿ ನಾವೆಲ್ಲರೂ ಸೇರಿ ಪ್ರತಿಭಟಿಸಲೇಬೇಕು. ಪ್ರತಿಭಟಿಸಲು ಯಾರೂ ಮುಂದೆ ಬರುವದಿಲ್ಲ. ಪ್ರತಿಭಟನೆ ನಡೆದರೂ ಸರ್ಕಾರದವರೆಗೆ ಮುಟ್ಟುವದೇ ಇಲ್ಲ. ಮುಟ್ಟಿದರೂ.... 


*ಕಣ್ಣಿದ್ದು ಕುರುಡರಾದರು....*


ನಮ್ಮ ಕರ್ನಾಟಕದ ಜನಪ್ರಿಯ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರವಾಗಲಿ, ದಕ್ಷ ಅಧಿಕಾರಿಗಳು ಎಂದು ಹೇಳಿಕೊಳ್ಳುವ ಅಧಿಕಾರವರ್ಗದವರಾಗಲಿ ಈ ದುರ್ಘಟನೆಯನ್ನು ಕಣ್ಣಾರೆ ಕಂಡೂ ಕಾಣದ ಹಾಗೆ ಕುಳಿತಿರುವದು ನೋಡಿದರೆ *ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ್ಯಕ್ಕೆ ತೊಂದರೆ ಕೊಡುವದರಲ್ಲಿ ಎಷ್ಟು ಪ್ರೀತಿ ಇದೆ* ಎನ್ನುವದು ಈ ನಡೆಯಿಂದಲೇ ಸ್ಪಷ್ಟವಾಗುತ್ತದೆ. ಕೆಲವರ್ಷಗಳ ಹಿಂದೆ ಇದೇ ಪರೀಕ್ಷಾ ಸಮಯದಲ್ಲಿ ಬುರ್ಖಾವಿಚಾರ ಬಂತು ಆಗ‌ ಬುರ್ಖಾಪರವಾಗಿ ನಿಂತ ಯಾವ ಅಧಿಕಾರಿಗಳೂ ಇಂದು ಜನಿವಾರದ ಪರನಿಂತಿಲ್ಲ ಎಂದರೆ ಇದರಿಂದಲೂ  *ಬುರ್ಖಾ ಮೇಲಿರುವ ಪ್ರೀತಿಗಿಂತಲೂ ಹೆಚ್ಚಿನ ಪ್ರೀತಿ ಜನಿವಾರ ತಗೆಸುವದರಲ್ಲಿ* ಇದೆ  ಎಂಬುವದು ಸುಸ್ಪಷ್ಟವಾಗುತ್ತದೆ. 


ಈ ತರಹದ ಸರ್ಕಾರಗಳು ಅಧಿಕಾರಿವರ್ಗದವರು ಇರುವಾಗ "ಎಂದಿಗೂ ಯಾವ ಕಾಲಕ್ಕೂ ಯಾವುದೇ  ಬ್ರಾಹ್ಮಣನ ಮನೆಗೂ ಯಾವಗಲೂ ಈ ತರಹದ ಆಪತ್ತು ಬರಬಹುದು" 


*ಗಾಯತ್ರೀ ಬಲ ಕೊಡೋಣ*


ಮಕ್ಕಳಿಗೆ ತಿಳಿಸೋಣ ಗಾಯತ್ರೀ ಜಪದ ಬಲವೇ ಬಲ. ನಮಗೆ ಇನ್ಯಾವ ಬಲವೂ ಇಲ್ಲ. ನಮ್ಮ ತುಳಿಯಲು ನಮಗೆ ಪೀಡಿಸಲು ಎಲ್ಲರೂ ಎಂಟು ಹೆಜ್ಜೆ ಮುಂದೆ, ಆದರೆ ಅವರಲ್ಲರಿಗಿಂತಲೂ ನಾನು ನೂರು ಹೆಜ್ಜೆ ಅಲ್ಲ, ನೂರು ಕಿಲೋಮೀಟರ್ ಮುಂದೆ ನಾವಿರಬೇಕು, ಅದೂ ಅಂದೂ ಇಂದೂ ಮುಂದೂ ಪೀಡೆಕೊಡುವ ತಿಳುವ ಎಲ್ಲ ಜಗತ್ತಿಗೂ ಹಿತವಾಗಲಿ ಮಂಗಲವಾಗಲಿ ಎಂದು ಬಯಸುವ ನಾವು ಇದ್ದೀವಿ. 


ಈತರಹದ ದಿವ್ಯ ಭವ್ಯ ಅಮೋಘವಾದ ಶಕ್ತಿ  ಸಾಮರ್ಥ್ಯ *ಜನಿವಾರ ಧರಿಸಿ, ಜಪಿಸುವ ಗಾಯತ್ರೀ ಮಂತ್ರಕ್ಕೆ ಇದೆ.... ಜಪಿಸಿಸಿದ್ಧಮಾಡಿಕೊಂಡವನಿಗೂ ಇದೆ....* 


*ಈ ತರಹದ ದುರ್ಘಟನೆಗಳನ್ನು ಪ್ರತಿಭಟಿಸುವದೂ ನಮ್ಮ ಕರ್ತವ್ಯ, ಜೊತೆಗೆ ನಮ್ಮ ಮಕ್ಕಳಿಗೆ ಈ ಜನಿವಾರ ಗಾಯತ್ರೀ ಸಂಧ್ಯಾವಂದನ ಇತ್ಯಾದಿಗಳ ಬಲ ಸಾಮರ್ಥ್ಯ ಶಕ್ತಿಗಳನ್ನು ಮನವರೆಕೆ ಮಾಡುವ ಮುಖಾಂತರ ಅವರೆಲ್ಲರನ್ನೂ ಜಾಗೃತಗೊಳಿಸುವದೂ ಅಷ್ಟೇ ದೃಢವಾದ ಕರ್ತವ್ಯವಾಗಿದೆ* 


*ಉತ್ತಿಷ್ಠತ - ಜಾಗ್ರತ* 


ಏಳಿ ಎದ್ದೇಳಿ ಎಚ್ಚತ್ತುಕೊಳ್ಳುಲಿ - ಜಾಗ್ರತರಾಗಿರಿ....


*ನ್ಯಾಸ....

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*