ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*
*ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*
ಓ ಆಯುಧ !! ಪ್ರತಿಯೊಂದು ಆಪತ್ತಿಗೂ ನೀನೇ ಒಂದು ದೊಡ್ಡ ಆಯುಧ, ನೀನು ಎನ್ನ ಬಳಿ ಇರಲಾಗಿ ನಿನ್ನನ್ನೂ ಬಳಿಸದೆ ಬಿಟ್ಟರೆ ನನಗೆ ಸೋಲಲ್ಲದೇ ಮತ್ತಿನ್ನೇನೂ.....
ಒಂದೇ ಏಟಿಗೆ ಇಷ್ಟೊಂದು ಪರೀಕ್ಷೆಗಳು ಎದುರಾದರೆ ನಾನೇನು ಮಾಡಲು ಸಾಧ್ಯ... ??? ಈ ಪ್ರಶ್ನೆ ಆಪತ್ತಿನಲ್ಲಿ ಸಿಲುಕಿದ ಎಲ್ಲರದೂ ಆಗಿರುವದೇ. ನನಗೂ ಅನೇಕಬಾರಿ ಬಂದದ್ದೂ ಇದೆ...
ಗುಬ್ಬಚ್ಚಿಯ ಹಾಗೆ ಕಾಸು ಕಾಸು ಗೂಡಿಸಿದೆ, ಸಾಲ ತಗೆಸಿದೆ ಕೊನೆಗೆ ಮನೆ ಕಟ್ಟಿದೆ.
ಭರ್ಜರಿ ವಾಸ್ತು ಮಾಡಿದೆ. ಮನೆ ಆಯಿತು ಕೆರಿಯರ್ ಸೆಟ್ ಮಾಡ್ಕೋಬೇಕು ಅಂದೆ.. ಅಷ್ಟರಲ್ಲೆ ಮಕ್ಕಳು ಆದರು. ಕೈಲಿ ಹಣವಿಲ್ಲ. ಬಂದ ಎಲ್ಲ ದುಡ್ಡು ಸಾಲದ ಕಂತಿಗೇ ಹೋಗುತ್ತದೆ. ಈ ಪ್ರಸಂಗದಲ್ಕೇ ಟ್ರಾನ್ಸ್ಫರ್ ಆಯ್ತು.. ಎಕ್ಸ್ಟ್ರಾ ದುಡಿಯೋಣ ಅಂದರೆ ಮನೆಯಲ್ಲಿ ಕಿರಿಕಿರಿ. ನನ್ನಿಂದ ಉಪಯೋಗವಿಲ್ಲ ಎಂದಾಕ್ಷಣಕ್ಕೆ ನನ್ನ ಆತ್ಮೀಯರೆಲ್ಲರೂ ಪಲಾಯನ ಮಾಡಿದರು. ಹೀಗೆ ಮನೆಯಲ್ಕಿ ಒಂದರಮೇಲೆ ಒಂದು ಸಮಸ್ಯೆ.. ಈ ಸಮಸ್ಯೆಗಳು ನನ್ನ ಮೆಲೆಯೇ ಯಾಕೆ ಬರುತ್ತವೆ... ?? ಒಮ್ಮೆಲೆ ಈ ಸಮಸ್ಯೆಗಳು ಎಗರಿಬಂದರೆ ನಾನಾದರೂ ಏನು ಮಾಡಲಿ... ???
ಆ ದೇವರಿಗೆ ಸ್ವಲ್ಪಾನೂ ಕರುಣೆ ಇಲ್ಲವೆ.. ?? ಛೇ ನನ್ನ ಜನ್ಮಕ್ಕಿಷ್ಟು... ಮಜಾ ಏನೆಂದರೆ ಇಷ್ಟೆಲ್ಲ ಒದ್ದಾಡು ಮನುಷ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಕ್ಷಣವೂ ಯೋಚಿಸಲು ತೊಡಗುವದಿಲ್ಲ..
ಒಂದು ದಿನ ತುಂಬ ವಯಸ್ಸಾದ ವೃದ್ಧ , ತಾನು ಕಟ್ಟಿಗೆಯನ್ನು ತರಬೇಕು ತಂದು ಅದನ್ನು ಮಾರಿ ಬಂದ ಹಣದಲ್ಲಿ ಜೀವಿಸಬೇಕು. ಇದು ನಿತ್ಯದ ಕಾಯಕ. ವಯಸ್ಸು ಮೀರಿತ್ತು. ವಯಸ್ಸು ಮೀರಿದ ಹಾಗೆ ಮನೆಯಲ್ಲಿ ಖರ್ಚು ಹೆಚ್ಚಾಗಿತ್ತು. ತರುವ ಕಟ್ಟಿಗೆಯಲ್ಲಿ ಕಡಿಮೆ ಮಾಡುವ ಹಾಗಿಲ್ಲ, ಹೆಚ್ಚಿಗೆ ತರಲು ದೇಹ ಕೇಳುತ್ತಿಲ್ಲ. ಹೊರೆ ಭಾರದ ಕಟ್ಟಿಗೆಯ ಹೊರೆಯನ್ನು ಹೊತ್ತು ಒದ್ದಾಡ್ತಾ ತೇಕ್ತಾ ತರುತ್ತಿರುವಾಗ, ಅವನ ಆ ಕಷ್ಟವನ್ನು ಕಂಡ ದೇವೇಂದ್ರ ತಾನೇ ತನ್ನ ರಥವನ್ನು ತಂದು ಓ ವೃದ್ಧ !! ಎಷ್ಟೋ ಒದ್ದಾಡ್ತೀಯಾ, ಬಾ ರಥವೇರು ಮನೆ ಬಿಡುತ್ತೇನೆ ಎಂದು ಹೇಳಿದ.
ವೃದ್ಧನಾದರೂ ತುಂಬ ಸ್ವಾಭಿಮಾನ ಇಗೋ...ಬೇಡ ಬೇಡ ನಾ ಹೋಗ್ತೀನಿ. ನಿತ್ಯದ್ದು ಇದು.. ಇವತ್ತು ನೀ ಬಂದಿ, ನಾಳೆ ಯಾರು ಬಂದಾರು.. ಹೋಗಪ್ಪಾ ಹೋಗು... ಎಂದುಸುರಿಸಿದ. ಬಹಳ ಬಲವಂತ ಮಾಡಿದಮೇಲೆ ಮುಜುಗರದಿಂದ ವೃದ್ಧ ರಥ ಏರಿದ. ಮನೆ ಬಂತು. ಇಳಿಯುವ ಪ್ರಸಂಗ. ಇಂದ್ರ ಕೇಳಿದ ಇಷ್ಟು ದೊಡ್ಡ ರಥ. ಈ ಕಟ್ಟಿಗೆಯ ಹೊರೆ ತಲೆಯ ಮೇಲೆಯೇ ಇಟ್ಟುಕೊಂಡಿದ್ದೀಯಲ್ಲೋ, ರಥದಲ್ಲಿ ಇಡಬಾರದೇನೂ... ?? ದೇವೇಂದ್ರ.. ನೀ ಏನೋ ರಥದಲ್ಲಿ ಕೂಡಿಸಿಕೊಂಡಿ... ನನ್ನ ಕಟ್ಟಿಗೆಯ ಭಾರವನ್ನೂ ನಿನಗೇಕೆ.. ?? ಅದಕ್ಕೇ ನಾನೇ ಹೊತ್ತು ಕುಳಿತೆ... ಎಂದು ಉಸುರಿಸಿದ ವೃದ್ಧ..... ದುರಭಿಮಾನ ಬಿಡಲಿಲ್ಲ... ಇಂದ್ರ ಹೇಳಿದ ಕಷ್ಟ ಪರಿಹರಿಸಲೇ ನಾ ಬಂದರೆ ನಿನ್ನ ಹಣೆ ಬರಹ ಇಷ್ಟೇ ಇದ್ದಾಗ ನಾ ಏನು ಮಾಡಲಿ ಎಂದು ಹೊರಟೇ ಬಿಟ್ಟ.... ಇದುವೇ ನಮ್ಮ ಇಂದಿನ ಅವಸ್ಥೆ ಆಗಿದೆ ಸರಿತಾನೆ....
ಇದಕ್ಕೆ ವಿಪರೀತ ಮತ್ತೊಂದು ಕಥೆ ಕೇಳಿದ ನೆನಪು...
ಮನೆಯಲ್ಲಿ ಇರುತ್ತೇವೆ. ರಾತ್ರಿ ಕಳ್ಳ ಮನೆಗೆ ನುಗ್ಗುತ್ತಾನೆ. ಎಚ್ಚರವಾಯಿತು. ನೋಡಿದರೆ ಎದುರಿಗೇ ಕಳ್ಳ.. ಏನು ಮಾಡಬೇಕು ಗೊತ್ತಾಗಲಿಲ್ಲ. ಅಲ್ಲಿಯೇ ಶಾವಿಗೆಯ ಕೋಲು ಸಿಕ್ಕಿತು. ತೊಗೊಂಡು ಹೊಡೆಯಲು ಮುಂದಾದೆ. ಕಳ್ಳ ಹೊಡಿಸಿಕೊಳ್ಳುತ್ತಾ ಒಡವೆ ಆಭರಣ್ಗಳನ್ಮು ಬಾಚಿಕೊಂಡ. ಕಳ್ಳ ಕಳ್ಳ ಎಂದು ಜೋರಾಗಿ ಚೀರಿದೆ.. ಜನ ಬಂದು ಸೇರುವಷ್ಟರಲ್ಲೇ ಕಳ್ಳ ಪರಾರಿಯಾದ.
ಏನೋ ಮರಾಯ!! ಇದ್ದ ಬಿದ್ದ ಸ್ವಲ್ಪ ಆಭರಣ ತೊಗೊಂಡೂ ಓ ಡಿಹೋದ, ಕಳ್ಳತನಾಯ್ತು ನೋಡು ಎಂದು ಜನ ಪೇಚಾಡ್ತಾ ಇರುತ್ತಾರೆ....... ಅಷ್ಟರಲ್ಲಿಯೇ ತನ್ನ ಟೊಂಕದಿಂದ ಪಿಸ್ತೂಲ್ ತಗಿತಾನೆ.. ಆಗ ಪಿಸ್ತೂಲ್ ತಗದೇನು ಪ್ರಯೋಜನ... !!!
ಹೀಗೆ ನಮಲ್ಲಿ ತಾಳ್ಮೆ ಸಹನೆ ವಿಚಾರಶಕ್ತಿ ದೈವೀಬಲ ಮಿತ್ರಬಲ ಬುದ್ಧಿಬಲ ಮೊದಲಾದ ಎಲ್ಲ ಆಯುಧಗಳೂ ಸಮೃದ್ಧವಾಗಿ ಇವೆ. ಬಳಿಸಿಕೊಳ್ಳಲು ಆಗುವದಿಲ್ಲ. ಇದಕ್ಕೆ ಕಾರಣ ಒಂದು ದುರಭಿಮಾನ ego ಅಥವಾ ಗಡಿಬಿಡಿ...
Ego ದುರಭಿಮಾಮ ಇರುವ ಕಾರಣ ಕಷ್ಟ ಪಟ್ಟು ಒದ್ದಾಡುತ್ತೇನೆ... ಅಥವಾ ಕ್ಷಣ ವಿಚಾರಿಸಿ ನಿರ್ಣಯಿಸಿಕೊಂಡು ಮುಂದೋಡುವ ತಾಳ್ಮೆ, ಅಥವಾ ಸಹನೆ ಇಲ್ಲದಿರುವದರಿಂದ ಸೋಲುತ್ತೇವೆ. ಕಷ್ಟಪಡುತ್ತೇವೆ..
ಕಷ್ಟ ಪರಿಹರಿಸಿಕೊಳ್ಳಲು ಇರುವ ಆಯುಧಗಳನ್ನೂ ಬಳಿಸಿಕೊಳ್ಳದೇ ಒದ್ದಾಡುವ ಏಕೈಕ ಪ್ರಾಣಿಗಳು ಅಂದರೆ ನಾನೇ ಇರಬಹುದು ಏನೋ.....
*ಆಯುಧಾನಾಂ ಯಥಾ ವಜ್ರಂ* ಎಂದೇ ಹೇಳಿದಂತೆ, ವಜ್ರಾಯುಧಕ್ಕೇನೇ ನಿಯಾಮಕನಾದ ಇಂದ್ರ, ಇಂದ್ರದೇವರನ್ಬೇ ನಿಯಮಿಸುವ ವಾಯುದೇವರು, ಆ ವಾಯುದೇವರನ್ನೂ ನಿಯಮಿಸುವ ದೇವರು ಈ ಎಲ್ಲರೂ ಆಯುಧ ರೂಪದಿಂದ ಇದ್ದು ನಾ ಹೇಳಿದ್ದು ಕೇಳಲು ಸದಾ ಸಿದ್ಧರಾಗಿ ಇದ್ದಾರೆ, ನನ್ನೆಲ್ಲ ಭಾರ ಹೊತ್ತಲೂ ಸಿದ್ಧಾರಾಗಿದ್ದಾರೆ, ತತ್ವಾಭಿಮಾನಿಗಳಾಗಿ ಎಲ್ಲ ಭಾರವನ್ನೂ ಹೊತ್ತಿದ್ದಾರೆ. ಹಾಗಿದ್ದರೂ ಒದ್ದಾಡುತ್ತೇನೆ ಸೋಲುತ್ತೇನೆ ಎಂದರೆ ಏನು ಹೇಳಬೇಕು.... ????????
*ನಾನು ನನ್ನ ದುರಭಿಮಾನ ಕಳೆದುಕೊಂಡು, ಸಹನೆ ತಾಳ್ಮೆಗಳಿಂದ ಈ ಎಲ್ಲರನ್ನು ಒಲಿಸಿಕೊಂಡರೆ ಆಯ್ತು.... ಗೆಲುವ ಸದಾ ನನ್ನ ಕೈ ತುದಿಗೆ.. ವಿಜಯ ಮಾಲೆ ಎನ್ನ ಕೊರಳಲ್ಲೇ...*
ಓ ಆಯುಧ ನಿನ್ನ ಸೇವೆ ಮಾಡಿಸಿಕೊ, ಆಪತ್ತಿಗೆ ಒದಗಿ ಬಂದು ಎನಗೆ ರಕ್ಷಕನಾಗಿ ಬಂದು ನಿಲ್ಲು, ರಕ್ಷಿಸು, ಸಂರಕ್ಷಿಸು. ನಿನಗೆ ಎನ್ನ ವಂದನೆ.... 🙏🏽🙏🏽🙏🏽
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments