*ಜನ್ಮನಾಶಕನ ಜನ್ಮಭೂಮಿಯಲ್ಲಿ ಪೂ ಗುರುಗಳ ಜನ್ಮದಿನ*
ಜನ್ಮದಿನ ಇದೊಂದು ಅಪರೂಪದ ಸುಸಂದರ್ಭ. ಅದರಲ್ಲೂ ಗುರುಗಳ ಜನ್ಮದಿನ ಶಿಷ್ಯರಪಾಲಿಗೆ ಸುದಿನವೇ ಸರಿ.
ಇಂದು ಜನ್ಮನಾಶಕನಾದ ಶ್ರೀಕೃಷ್ಣನ ಜನ್ಮಭೂಮಿಯಾದ ಮಥುರಾ ಪಟ್ಟಣದಲ್ಲಿ, ಸುದಿನವನ್ನು ಒದಗಿಸುವ ಶ್ರೀಮದ್ಭಾಗವತ ಜ್ಙಾನಸತ್ರದಲ್ಲಿ ನಮ್ಮ ಗುರುಗಳಾದ ಪೂ ಆಚಾರ್ಯರ ವೈಭವದ ಜನ್ಮದಿನಾಚರಣೆ ಪ್ರಯುಕ್ತ ಆ ಮಹಾಗುರುಗಳಿಗೆ ಅನಂತ ವಂದನೆಗಳು. ಅನಂತ ನಮಸ್ಕಾರಗಳು.
*ಗುರುಗಳ ಅಮೃತವಾಣಿ*
*ನಿಷ್ಕಾಮ ಧರ್ಮ ದೇವರವರೆಗೆ ಮುಟ್ಟಿಸುತ್ತದೆ.*
ನಿಷ್ಕಾಮ ಕರ್ಮವನ್ನು ಮಾಡಬೇಕು. ಇದು ಎಲ್ಲರಿಗೂ ವಿದಿತ. ಈ ನಿಷ್ಕಾಮಕರ್ದಿಂದ ಏನು ಫಲ..? ಎಂದು ಫಲಕಾಮನೆಯನ್ನೇ ಯೋಚಿಸುವವರು ನಾವು. ಅದಕ್ಕೆ ಗುರುಗಳು ಶ್ರೀಮದ್ಭಾಗವತದ ಮುಖಾಂತರ "ಎಲ್ಲ ನಿಷ್ಕಾಮಕರ್ಮಗಳೂ ನೇರವಾಗಿ ದೇವರಿಗೇ ತಲುಪುತ್ತವೆ" ಎಂದು ಪ್ರತಿಪಾದಿಸುವ ಮುಖಾಂತರ ಸಮಾಧಾನವನ್ನು ಕೊಟ್ಟರು.
*ಏನು ಧರ್ಮಗಳನ್ನು ಮಾಡುವದೂ ಕೇವಲ ಭಕ್ತಿಗೋಸ್ಕರ ಇರಬೇಕು.*
ನೂರಾರು ಸಾವಿರಾರು ಧರ್ಮಗಳನ್ನು ಮಾಡುವವರು ನಾವೆಲ್ಲರು. ಆದರೆ ನಮ್ಮೆಲ್ಲ ಧರ್ಮಗಳು ನೇರವಾಗಿ ಒಂದು ಹಣಕ್ಕೋಸ್ಕರ ಅಥವಾ ಐಹಿಕ ಭೋಗಕ್ಕೋಸ್ಕರವೇ ಆಗಿರುತ್ತದೆ. ಇದು ಅತ್ಯಂತ ಸಹಜ. ಆದರೆ "ನಮ್ಮ ಅತಿ ಸಣ್ಣದಾದ ಧರ್ಮವೂ ವಿಷ್ಣುಭಕ್ತಿಗೋಸ್ಕರವಾಗಿಯೇ ಇರಬೇಕು" ಇದು ಪೂಜ್ಯ ಗುರುಗಳ ಪ್ರತಿಪಾದನೆ.
ಸಾಮಾ ನಮ್ಮ ಧರ್ಮದ ಉಪಯೋಗ ಕೇವಲ ಹಣಕ್ಕಾಗಿ ಅಥವಾ ಐಹಿಕ ಭೋಗಕ್ಕಾಗಿ ವಿನಿಯೋಗವಾಗದೇ. ಭಕ್ತಿಗೋಸ್ಕರವೇ ವಿನಿಯೋಗವಾಗಬೇಕು. ಇದು ಇಂದಿನ ಪೂ ಆಚಾರ್ಯರ ಅಮೃತೋಪದೇಶವಾಗಿತ್ತು.
*ನಮ್ಮ ಭಕ್ತಿ ಹೇಗಿರಬೇಕು...?*
ಸಾಮಾನ್ಯವಾಗು ನಮ್ಮ ಭಕ್ತಿ ಹಳ್ಳವಿದ್ದಹಾಗೆ. ಮಳೆ ಬಂದಾಗ ಹಳ್ಳ ತುಂಬಿರತ್ತೆ.ಮಳೆ ಇಲ್ಲವಾಯಿತೋ ಹಳ್ಳ ಬತ್ತಿಹೋಗತ್ತೆ. ಹಾಗೆಯೇ ಭಾಗವತ ಕೇಳುತ್ತಿರುವಾಗ ಭಕ್ತಿ ಬೆಳೆಯುತ್ತದೆ. ಕೇಳುವದು ಇಲ್ಲವಾಯಿತೋ ಭಕ್ತಿ ಬತ್ತೇ ಹೋಗಿರತ್ತೆ. ಹಾಗಾಗಲೇ ಬಾರದು. ಗಂಗೆಯ ಪ್ರವಾಹದಂತೆ ಮಳೆ ಇರಲಿ ಬಿಡಲಿ ಎಂದೂ ಬತ್ತದ ಭಕ್ತಿಯಾಗಿರಬೇಕು. ಹಾಗಾದಾಗ ನೈಜ ಭಕ್ತ ಎಂದೆನಿಸಿಕೊಳ್ಳುವವ. ಇದು ಪೂ ಆಚಾರ್ಯರ ಅನುಗ್ರಹೋನ್ಮುಖ ನುಡಿ.
*ಭಾಗವತ ಕೇಳುತ್ತಲೇ ಇರಬೇಕು ಯಾಕೆ...?*
ಶಾಸ್ತ್ರದ ಪರಿಕಲ್ಪನೆ ಇಲ್ಲದಿರುವಾಗ, ಭಾಗವತದ ಸಂಪರ್ಕದಿಂದ ದೂರ ಇರುವಾಗ, ನಾವು ಮಾಡುವ ಪೂಜೆ ಮೊದಲಾದ ಉಪಚಾರಗಳನ್ನು ಮಾಡುತ್ತಿರುವಾಗ "ದೇವರಿಗೆ ನಾವೇನೋ ಮಾಡುತ್ತಿದ್ದೇವೆ" ಎಂಬ ಭಾವ ಅಚ್ಚಾಗಿ ಊರಿರುತ್ತದೆ.
ಶಾಸ್ತ್ರದ ಹಾಗೂ ಶ್ರೀಮದ್ಭಾಗವತದ ಸಂಪರ್ಕದಲ್ಲಿ ಬಂದಾಗ "ನಮಗೆ ದೇವರುಪಕಾರ ಎಷ್ಟಿದೆ" ದೇವರು ಎಂಥ ಮಹಿಮೋಪೇತ" ಎನ್ನುವದು ತಿಳಿಯತ್ತದೆ. ಆದ್ಧರಿಂದ ನಿತ್ಯ ಭಾಗವತದ ಸಂಪರ್ಕದಲ್ಲಿರಲೇಬೇಕು ಇದು ಪೂ ಆಚಾರ್ಯರ ಕರುಣಾಪೂರ್ಣ ನುಡಿ.
ಸಾಧನೆಯ ಮಾರ್ಗದಲ್ಲಿ ಈ ತರಹದ ನೂರಾರು ನಾಣ್ಣುಡಿಗಳು ನಾನಾರೂಪಗಳಲ್ಲಿ ಸಿಕ್ಕವು. ಈ ತರಹದ ಭಾಗ್ಯ ಒದಗಿರುವದು ಗುರುಗಳ ಜನದಿನದ ಶುಭಸಂದರ್ಭದಲ್ಲಿ ಭಾಗವಹಿಸಿದ ಕಾರಣ.
ಈ ತಹದ ಜನ್ಮದಿನದ ವೈಭವವೇ ನಮ್ಮ ಜನ್ಮಜನ್ಮಕೂ ಸಿಗಲಿ ಎಂದು ಜನ್ಮನಾಶಕ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾ ಪೂಜ್ಯ ಗುರುಗಳ ಅನುಗ್ರಹ ನಮ್ಮ ಮೇಲೆ ಸದಾ ಇರಲಿ.
*ಹರಯೇ ನಮಃ ಶ್ರೀಗುರುಭ್ಯೋನಮಃ*
*✍🏽ನ್ಯಾಸ*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments