ಇಂದು ಚಂದ್ರಗ್ರಹಣ - ಪರ್ವಕಾಲ*
ಪರ್ವಕಾಲಗಳು ನೂರಾರು. ಆ ಎಲ್ಲ ಪರ್ಚಕಾಲಗಳಲ್ಲಿ ಶ್ರೇಷ್ಠವಾದದ್ದು "ಚಂದ್ರಗ್ರಹಣ" ಎಂಬ ಉತ್ತಮ ಪರ್ವಕಾಲ.
ದೇವ-ಪಿತೃ-ಮಾನವ-ರಾಕ್ಷಸ ಇವರುಗಳನ್ನು ಸಂತೋಷ ಪಡಿಸುವ ಕಾಲ.
೧) ಸ್ನಾನ, ದೇವತಾರ್ಚನೆ, ಪೂಜೆ, ಹೋಮ, ಜಪ, ತರ್ಪಣಗಳಿಂದ ದೇವತೆಗಳನ್ನು ಸಂತೋಷ ಪಡಿಸುವದು ಈ ಕಾಲದಲ್ಕು.
೨) ತಿಲತರ್ಪಣ ಶ್ರಾದ್ಧಗಳಿಂದ ಪಿತೃಗಳನ್ನೂ ಸಂತೋಷಪಡಿಸುವ ಕಾಲ.
೩) ನಾನಾತರಹದ ದಾನಗಳಿಂದ ಮನುಷ್ಯರನ್ನು ತೃಪ್ತಿಪಡಿಸುವ ಕಾಲವೂ ಇದೆ.
೪) ನಮ್ಮ ಉತ್ಕರ್ಷಕ್ಕೆ ಅಡ್ಡಿಗಳಾದ ರಾಕ್ಷಸರನ್ನೂ ವಿಶೇಷವಾದ ದಾನಾದಿಗಳಿಂದ ಸಂತೊಷಪಡಿಸುವ ಮುಖಾಂತರ ರಾಕ್ಷಸ ಪೀಡಾ ಪರಿಹಾರ ಮಾಡಿಕೊಳ್ಳುವ ಕಾಲವೂ ಈ ಗ್ರಹಹಣ ಕಾಲ.
*ಸಕಲ ಸಿದ್ಧಿಗಳೂ ಇಲ್ಲಿಯೇ...*
ಉಪದಿಷ್ಟವಾದ ಗಾಯತ್ರೀ ನಾರಾಯಣ ಇತ್ಯಾದಿ ಮಂತ್ರಗಳ ಸಿದ್ಧಿಯಾಗುವದು ಈ ಕಾಲದಲ್ಲಿ. ಪಾರಾಯಣದಿಂದ ಸ್ತೋತ್ರಗಳ ಸಿದ್ಧಿ. ಯಂತ್ರಗಳ ಸಿದ್ಧಿಯೂ ಒದಗುತ್ತದೆ. ಮಂತ್ರ ಯಂತ್ರಗಳ ಪ್ರಭಾವವೂ ನೂರ್ಮಡಿ ಹೆಚ್ಚಾಗುತ್ತದೆ ಈ ಕಾಲದಲ್ಲಿ.
*ಉಪವಾಸ ವ್ರತದಿಂದ ಸತ್ಸಂತಾನ ಭಾಗ್ಯ*
ವೇಧಾರಂಭದಿಂದ ಆರಂಭಿಸಿ ಗ್ರಹಣ ಸಮಾಪ್ತಿಪರ್ಯಂತ ಉಪವಾಸ ವ್ರತ ಮಾಡುವದರಿಂದ ಬಹುಪುತ್ರರನ್ನು ಪಡೆಯುತ್ತಾನೆ. ಬಹು ಐಶ್ವರ್ಯ ಪಡೆಯುತ್ತಾನೆ. ಕೀರ್ತಿಮಾನ್ ಆಗುತ್ತಾನೆ. ಕೊನೆಗೆ ಬ್ರಹ್ಮ ಲೋಕವನ್ನೈ ಪಡೆಯುತ್ತಾನೆ.
*ವೇಧಾರಂಭದಿಂದ ಗ್ರಹಣ ಮಧ್ಯದಿ ಉಂಡರೆ...?*
ವೇಧಾರಂಭದಿಂದ ಗ್ರಹಣಾರಂಭದವರೆಗಿನ ಕಾಲದಲ್ಲಿ ಊಟ ಮಾಡಿದರೆ ಪ್ರಾಯಶ್ಚಿತ್ತರೂಪದಲ್ಲಿ ಮೂರು ದಿನ ಉಪವಾಸ ಮಾಡಬೇಕು.
ಗ್ರಹಣದ ಸಮಯದಲ್ಲೇ ಊಟ ಮಾಡಿದರೆ ಆಚಂದ್ರ ಆಸೂರ್ಯ ಆನಕ್ಷತ್ರ ಇರುವವರೆಗೂ ನರಕವಾಸ.
*ಸ್ನಾನದಿಂದ ಸರ್ವಾರಿಷ್ಟ ನಿವೃತ್ತಿ*
ಗ್ರಹಣ ನಿಮಿತ್ತ ಮಾಡುವ ಸ್ನಾನದಿಂದ ಸಕಲ ಪಾಪಗಳೂ ತೊಎದು ಹೊಗುತ್ತವೆ. ಎಲ್ಲ ತರಹದ ಸಿದ್ಧಿಗಳೂ ಒಲೆಯುತ್ತವೆ. ಅಂತೆಯೇ ರಜಸ್ವಲೆಯರೂ ಸಹ ಅವಶ್ಯವಾಗಿ, ಪಾತ್ರೆಯಲ್ಲು ಬಕೇಟ್ ಅಲ್ಲಿ ಪ್ರತ್ಯೇಕವಾಗಿ ತಮನದ ನೀರಿನಿಂದ ಸ್ನಾನ ಮಾಡಿ ಜಪ ಪಾರಾಯಣ ಮಾಡಲೇಬೇಕು. ಹಾಗೆಯೇ ಮರಾಣಾಶೌಚದಲ್ಲಿ ಇರುವವರೂ ಸಹ ಸ್ನಾನ ಜಪ ತರ್ಪಣ ಇತ್ಯಾದಿಗಳನ್ನು ಅನುಸರಿಸಲೇಬೇಕು.
*ಸಮಸ್ತರೋಗಪರಿಹಾರ ಕಾಲ*
ಈ ಗ್ರಹಣದ ಶುಭ ಅವಸರದಲ್ಲಿ *ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯನಮಃ ಅಚ್ಯುತಾನಂತಗೋವಿಂದೇಭ್ಯೋನಮೋನಮಃ* ಎಂದು ವಿಶೇಷವಾಗಿ ಆಗ್ರಹದಿಂದ ಜಪಿಸುವವರಿಗೆ ನಾನಾತರಹದ ರೋಗಗಳಿಗೆ ಕಾರಣವಾದ ಎಲ್ಲ ಪಾಪಗಳೂ ಪರಿಹಾರವಾಗುತ್ತವೆ. ಜಡಸಹಿತವಾಗಿ ರೋಗ ನಾಶ ಮಾಡಿಕೊಳ್ಳಬಹುದು.
*ಸಾಧಕರಿಗೆ ಸಿದ್ಧಿಸುವ ಕಾಲ*
ಸಾಧನೆಗಳನ್ನು ಮಾಡುವವರಿಗೆ ಅದ್ಭುತ ಸಿದ್ಧಿಗಳನ್ನೆಲ್ಲ ಒದಗಿಸುವ ಮಹತ್ತರವಾದ ಶುಭಕಾಲ ಗ್ರಹಣದ ಕಾಲ.
*ಯಥೇಷ್ಟವಾಗಿ ದಾನಕೊಡುವ ಮುಖಾಂತರ ಸರ್ವಪಾಪಗಳ ಪರಿಹರಿಸುವ ಕಾಲ*
ನಾನಾತರಹದ ಅನೇಕವಿಧದ ಪಾಗಳೆಲ್ಲ ನಮಗೆ ಪೀಡಿಸುವಂಥದ್ದೆ. ಆ ಪಾಪಗಳನ್ನೆಲ್ಲ ಪರಿಹಾರ ಮಾಡಿಕೊಳ್ಳುವದು ದೈನಂದಿನ ಕಾರ್ಯ. ಪರಿಹಾರೋಪಾಯಗಳನ್ನು ಅನುಸರಿಸಲು ಆಗದಷ್ಟು ಬ್ಯುಸಿ ನಾವು. ಹಾಗಾಗಿ ಈ ಒಂದಿನವಾದರೂ ಎಲ್ಲ ಪಾಪಗಳು ಪರಿಹಾರ ಮಾಡಿಕೊಳ್ಳುವಷ್ಟು ವಿಶೇಷವಾದ ದಾನಗಳನ್ನು ಮಾಡಬೇಕು. ಸುವರ್ಣ ರಜತ ಗೋ ಭೂ ತಿಲ ಬೆಲ್ಲ ಮೊದಲಾದ ಪದಾರ್ಥಗಳನ್ನು ತತ್ಪ್ರತ್ಯಾಮ್ನಾಯ ಯಥೇಷ್ಟವಾಗಿ ಧನದಾನವನ್ನೂ ಮಾಡಲೇಬೆಕು. ಪಾಪಗಳನ್ನು ನಿರ್ಮೂಲ ಮಾಡಿಕೊಳ್ಳಲೇಬೇಕು.
*ಭಗವದನುಗ್ರಹ*
ಗುರುಗಳ ಪಿತೃಗಳ ದೇವತೆಗಳ ದೇವರ ಆರಾಧನೆಯೇ ನಮ್ಮಿಂದ ತಪ್ಪುವಂಥವುಗಳು. ಹಾಗಾಗಿ ದೇವರ ಅನುಗ್ರಹದಿಂದ ವಂಚಿತರೂ ನಾವೇ ಆಗಿದ್ದೇವೆ. ಆ ಭಗವದನುಗ್ರಹ ಪೂರ್ಣವಾಗಿ ಸಂಪಾದಿಸಿಕೊಳ್ಳಲು *ಗುರುಗಳ-ಪಿತೃಗಳ-ದೇವತೆಗಳ-ದೇವರುಗಳ* ಆರಾಧನೆ ಜಪ ಪಾರಾಯಣ ಹೋಮ ತರ್ಪಣ ದಾನ ಮಾಡಿ ದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗೋಣ. ಈ ಕಾಲವನ್ನು ಸಾರ್ಥಕಮಾಡಿಕೊಳ್ಳೋಣ.
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments