*ಸುಧಾಯಾತ್ರೆ - ಸುಧಾ ಸತ್ರ*
ಯಾತ್ರೆಗಳು ಅನೇಕ, ಸತ್ರಗಳೂ ನೂರಾರು, ಆದರೆ ಅತ್ಯುತ್ತಮ ಯಾತ್ರೆ *ಶ್ರೀಮನ್ಯಾಯಸುಧಾ ಮಂಗಳ* ದ ಯಾತ್ರೆ. ಸತ್ರಗಳು ಸಾವಿರಾರು ಇದ್ದರೂ *ಶ್ರೀಮನ್ಯಾಯಸುಧಾ ಪರೀಕ್ಷೆಯ ಸತ್ರ* ವೇ ಸರ್ವೋತ್ತಮ ಸತ್ರ.
*ಸುಧಾ ಯಾತ್ರೆ ಉತ್ತಮವೇಕೆ...?*
ಯಾತ್ರೆ ಎಂದರೆ ತೀರ್ಥ ಕ್ಷೇತ್ರಗಳ ಯಾತ್ರೆ. ಭಗವತ್ಸನ್ನಿಧಾನ ವಿಶೇಷ ಒಂದು ಕಾರಣವಾದರೆ, ಪುಣ್ಯ ಸಂಪಾದನೆಗೆ ಬಹಳ ಶ್ರೇಷ್ಠ ಮಾರ್ಗ ಎರಡನೇಯ ಕಾರಣ. ಈ ಎರಡೂ "ಸುಧಾಯಾತ್ರೆಯಲ್ಲಿ ಎಷ್ಟಿರಬಹುದು" ಎಂದು ಯೋಚಿಸಲು ತೊಡಗಿದರೆ ಹಯಬ್ವೇರಿಸಬೇಕೇ ಹೊರತು ಆದಿ ಅಂತ ಕಾಣುವದಿಲ್ಲ.
*ಸುಧಾಯಾತ್ರೆಗೆ ಫಲಗಳೇನು .. ?? ಫಲವೆಷ್ಟು...??*
ಕೆಲ ತೀರ್ಥಯಾತ್ರೆ ಪುಣ್ಯ ಸಂಪಾದನೆ ಮಾಡಿಸಬಹುದು. ಇನ್ನನೇಕ ಯಾತ್ರೆಗಳು ಅರ್ಥಾದಿಗಳನ್ನು ಒದಗಿಸಬಹುದು. ಆದರೆ ಈ "ಸುಧಾಯಾತ್ರೆ"ಧರ್ಮಾದಿ ಮೋಕ್ಷಾಂತ ಎಲ್ಲ ಪುರುಷಾರ್ಥಗಳಿಗೆ ಕಾರಣವಾಗಿದೆ.
ಅಡವೀ ಆಚಾರ್ಯರು ತಮ್ಮ ಸ್ತೋತ್ರದಲ್ಲಿ ತಪಸ್ವಿಗಳ ಫಲ ಒಂದು ವಾಕ್ಯದ ಅಧ್ಯಯನದಿಂದ ಒದಗುತ್ತದೆ. ಗುರು ಸೇವೆ ಮಾಡಿದ ಫಲ, ತೀರ್ಥಯಾತ್ರೆ ಮಾಡಿದ ಫಲ, ವನವಾಸದ ಫಲವೇನಿದೆ ಆಫಲ, ವಿಹಿತ ಸಕಲ ಕರ್ಮಗಳ ಫಲ, ವೇದೋಕ್ತ ಭಗವದಜ್ಝಾನವೇ ಮೊದಲಾದ ಫಲ, ಹೀಗೆ ಹತ್ತಾರು ಫಲಗಳನ್ನು ತಿಳಿಸುತ್ತಾರೆ. ಆದ್ದರಿಂದಲೂ ಯಾತ್ರೆಗಳಲ್ಲಿ ಸರ್ವೋತ್ತಮ ಯಾತ್ರೆ *ಸುಧಾಯಾತ್ರೆ....*
*ಸುಧಾ ಸತ್ರ....*
ಅನ್ನ ಸತ್ರ, ಜಲಸತ್ರ, ಜ್ಙಾನ ಸತ್ರ ಹೀಗೆ ನೂರಾರು ಸತ್ರಗಳಲ್ಲಿ ಪುಣ್ಯ ಹಾಗೂ ಜ್ಙಾನ ಸಂಪಾದನೆಗಾಗಿ ಭಾಗವಹಿಸುತ್ತೇವೆ. ಆದರೆ ಆ ಎಲ್ಲವೂ *ಶ್ರೀಮನ್ಯಾಯಸುಧಾ ಪರೀಕ್ಷೆಯ ಸತ್ರದಲ್ಲಿ ಭಾಗವಹಿಸದರೆ ಸಾಕು* ಎಲ್ಲವೂ ಸುಲಭ, ಎಲ್ಲವೂ ಸುಸಾಧ್ಯ.
*ಸುಧಾಸತ್ರದಲ್ಲಿ ಅಂತಹದ್ದೇನಿದೆ...*
ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಸತ್ಸಿದ್ಧಾಂತ ಇದೆ. ಸಿದ್ಧಾಂತ ಸ್ಥಾಪನೆ ಇದೆ, ದುರ್ವಾದ ನಿರಾಕರಣೆ ಇದೆ, ಸ್ವಮತ ಸ್ಥಾಪನೆ ಇದೆ, ಸಾಧನೆ ಇದೆ, ತತ್ವಜ್ಙಾನವಿದೆ, ಭಕ್ತಿ ಇದೆ, ಪಕ್ವ ಭಕ್ತಿ ಇದೆ, ಅಪರೋಕ್ಷ ಜ್ಙಾನವಿದೆ, ಪ್ರತೀ ಅಕ್ಷರದಲ್ಲೂ ಅನಿರುದ್ಧಾದಿ ರೂಪಗಳಿವೆ. ದೇವ ದೇವತಾ ಗುರ್ವನುಗ್ರಹ ಇದೆ.
ಇಷ್ಟಾರ್ಥಗಳು ಈಡೇರುತ್ತವೆ, ಅನಿಷ್ಟಗಳು ದೂರಾಗುತ್ತವೆ, ಐಶ್ವರ್ಯದ ಸಮೃದ್ಧಿ ಇದೆ. ಇನ್ನೇನು ಬೇಕೋ ಎಲ್ಲವೂ ಇದೆ. ಅನಂತ ಅಪಾರ ಪುಣ್ಯದರಾಶಿಯೇ ಇದೆ. ಅದ್ದರಿಂದಲೇ *ಸುಧಾ ಸತ್ರ ಅಷ್ಟು ಉತ್ತಮವಾಗಿದೆ.*
*ನವ್ಯಾಕೆ ಸುಧಾ ಯಾತ್ರೆ ಹಾಗೂ ಸುಧಾ ಸತ್ರದಲ್ಲಿ ಭಾಗವಹಿಸಬಾರದು....?*
ಪುಣ್ಯದ ಜ್ಙಾನದ ತತ್ವಜ್ಙಾನದ ಹಪಹಪಿಯ ಪಿಪಾಸುಗಳಾದ ನಾವೆಲ್ಲರೂ ಮುಂಬಯಿಯಲ್ಲಿ, ನಮ್ಮ ಗುರುಗಳಾದ ಮಾಹುಲೀ ಆಚಾರ್ಯರ ದಿವ್ಯ ಭವ್ಯ ಯಾಜಮಾನ್ಯದಲ್ಲಿ, ನಾಲ್ವತ್ತೈದು ಜನರ ಅನುವಾದ - ಪರೀಕ್ಷೆ , ಅದರಲ್ಲೂ ಒಂಭತ್ತು ಜನರ ಸಮಗ್ರ ಪರೀಕ್ಷೆಯ ಈ ವೈಭವದ *ಸುಧಾ ಯಾತ್ರೆ - ಸತ್ರ* ಗಳಲ್ಲಿ ಭಾಗವಹಿಸೋಣಲ್ಲವೇ...
*ಪರಮಪೂಜ್ಯ ಮಾಹುಲೀ ಆಚಾರ್ಯರು ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಆಹ್ವಾನಿಸಿದ್ದಾರೆ.*
ನಾನಂತೂ ಹೋಗ್ತಾ ಇದ್ದೆನೆ... ನೀವು.. ? ಪ್ರತ್ಯಕ್ಷವಾಗಿ ಭಾಗವಹಿಸಲಾಗದಿದ್ದರೆ ಕನಿಷ್ಠಪಕ್ಷ "ಅಪ್ರತ್ಯಕ್ಷವಾಗಿ online ಮುಖಾತರವಾದರೂ ಭಾಗವಹಿಸ ಬಹುದಲ್ಲವೇ.....
*✍🏽ನ್ಯಾಸ.....*
ಗೋಪಾಲ ದಾಸ
ವಿಜಯಾಶ್ರಮ, ಸಿರಿವಾರ.
Comments