ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*




 *"ಕಲಿಯುಗದ  ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*


ದ್ವಾಪರಯುಗದ ಕುಂತಿಗೆ ೫ ಮಕ್ಕಳು. ಆದರೆ ಈ ಕಲಿಯುಗದ ಕುಂತಿಗೆ ನಮ್ಮಂತಹ ನೂರಾರು ಮಕ್ಕಳು. ಕೌಂತೇಯರು ಎನ್ನುವದೇ ಪಾಂಡವರ ಹೆಮ್ಮೆ ಆಗಿತ್ತು. ಹಾಗೆಯೇ ಪೂ ಕಾಕು ಅವರ ಮಕ್ಕಳು ನಾವು ಎಂದಾಗುವದೇ ನಮ್ಮದೊಂದು ವೈಭವ. 


ಶ್ರೇಷ್ಠವಾದ ಶ್ರೀಸತ್ಯಕಾಮತೀರ್ಥರಂತಹ ಮಹಾನುಭಾವರು ಅವತರಿಸಿದ ಕುಲ. ವಿಶಾಲವಾದ ಕುಟುಂಬ. ತುಂಬ ಕಷ್ಟ. ಕಡುದಾರಿದ್ರ್ಯ. ಆಗಿನ ಕಾಲವೂ ತುಂಬ ಘೋರ. ಅದರಲ್ಲಿ ಸಾಧನೆಯ ವಿದ್ವನ್ಮಾರ್ಗ ಮುಳ್ಳುಹಾಸಿದ ದಾರಿಯಾಗಿತ್ತು. ಈ ತರಹದ ವಿಪರೀತವಾದ ಪ್ರತಿಕೂಲ ವಾತಾವರಣದಲ್ಲಿಯೂ ಪರಮಪೂಜ್ಯ ಮಹಾಚಾರ್ಯರರನ್ನು ವರೆಸಿದಿರು. *"ವಿದ್ಯಾಪೀಠವಿಧಾತೃ"ಗಳು ಪರಮಪೂಜ್ಯ ಆಚಾರ್ಯರಾದರೆ, ವಿದ್ಯಾಪೀಠದ "ಮಹಾತಾಯಿ* ಪೂಜ್ಯ ಕಾಕೂ ಅವರು ಆದರು. 


ನಿರಂತರ ಹರಿನಾಮಸ್ಮರಣ.


ನಿರಂತರ ಹರಿನಾಮಸ್ಮರಣೆಯನ್ನು ಎಲ್ಲಿಯಾದರೂ ನೋಡಬೇಕು ಒಂದು ದೃಷ್ಟಾಂತ ಸಿಗಬೇಕು ಎಂದರೆ ಅದು ಪೂಜ್ಯರಲ್ಲಿ ಕಾಣುತ್ತಿತ್ತು. 

 ನಿತ್ಯವೂ ಶ್ರೀಮದ್ಭಾಗವತ ಪಾರಾಯಣ ಅನೇಕ ವಿದ್ಯಾರ್ಥಿಗಳಿಂದ ಮಾಡಿಸಿದ್ದರು. ಕನಿಷ್ಟ ನೂರುಬಾರಿಯಾದರೂ ಶ್ರೀಮದ್ಭಾಗವತ ಪಾರಾಯಣ ಕೇಳಿರಬಹುದು.  ಒಂದುಬಾರಿ ನನಗೂ ಎರಡು ಮೂರು ಸ್ಕಂಧಗಳ ಪಾರಾಯಣ ಮಾಡುವ ಸೌಭಾಗ್ಯ ಒದಗಿಸಿ ಅನುಗ್ರಹಿಸಿದ್ದರು. ಆ ಪಾರಾಯಣದ ಅನುಗ್ರಹದ ಕುರುಹು ಇಂದಿಗೂ ಮನೆಯಲ್ಲಿ ಇದೆ. 


*ಮಹಾ ಅನ್ನದಾನಿ*


ಮದುವೆಯಾದ ಆರಂಭದ ಹತ್ತಾರುವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸ್ವಯಂ ರುಚಿರುಚಿಯಾದ ಅಡಿಗೆ ಮಾಡಿ ಪ್ರೀತಿಯಿಂದ ಬಡಿಸಿದ ಪುಣ್ಯಾತ್ಮರು. 


ಮಾಟುಂಗಾ ಗುರುಕುಲದಲ್ಲಿ ಇರುವಾಗ ೧) ಕೆಲವರು ಬೆಳಿಗ್ಗೆ ಆಫೀಸಿಗೆ ಹೋಗುವವರು, ೨) ಮಧ್ಯಾಹ್ನ ವಿದ್ಯಾರ್ಥಿಗಳಿಗೆ, ೩) ಬೇರೆ ಊರಿನಿಂದ ಬರುವ ಕಾಲಕಾಲಕ್ಕೆ ಅತಿಥಿಗಳಿಗೆ, ೪) ಸಾಯಂಕಾಲದ ಹೊತ್ತಿಗೆ ಪರಮಪೂಜ್ಯ ಆಚಾರ್ಯರಿಗೆ,  ೫) ಪುನಃ ರಾತ್ರಿ ವಿದ್ಯಾರ್ಥಗಳಿಗೆ ಹೀಗೆ ಅಖಂಡವಾಗಿ ಅಡುಗೆ ಮಾಡಿ ಎಲ್ಲರನ್ನೂ ಅಂತರ್ಯಾಮಿ ಭಗವದ್ರೂಪಗಳನ್ನೂ ಸಂತೃಪ್ತರನ್ನಾಗಿಸಿದ "ಅಕ್ಷಯಪಾತ್ರೆ" ನಮ್ಮ ಕಾಕು ಅವರು.


ಮುಲುಂಡಿನ ವಿದ್ಯಾಪೀಠಕ್ಕೆ ಬಂದಾದಮೇಲೂ ನಿತ್ಯವೂ ಸಾಯಂಕಾಲ ನಮಗೆಲ್ಲ ಹಣ್ಣುಗಳನ್ನು ಕೊಡುವದೇ. ಹಾಲು ಕಾಯಿಸಿ ಎಲ್ಲರಿಗೂ ಬಿಸಿಬಿಸಿ ಹಾಲು ಕೊಡುವದೇ. ಆ ಕೊಡುವಾಗಿನ ಅವರ ಮುಖದ ಮೇಲಿನ ಆ ಸಂತೃಪ್ತಿಯಭಾವ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. 


*ಕರುಣೆಯ ಕಡಲು* 


ವಿದ್ಯಾರ್ಥಿಗಳು ಎಂದಾದಮೇಲೆ ಅವರು ಒಂದರ್ಥದಲ್ಲಿ ಕಪಿಗಳೇ. ಅನೇಕಬಾರಿ  ಮಾತು ಮೀರುವವರೇ ಹೇಳಿದ್ದು ಕೇಳದವರೇ. ಹೀಗಿದ್ದಾಗಲೂ ಯಾವ ವಿದ್ಯಾರ್ಥಿಯ ಮೇಲೂ ಸಿಟ್ಟು ಮಾಡಿಕೊಂಡದ್ದೇ ಇಲ್ಲ, ತಂದೆತಾಯಿಗಳನ್ನು ಬಿಟ್ಟು ಬಂದ ಈ ಮಕ್ಕಳುಗಳಿಗೆ ನಾನಲ್ಲದೇ ಇನ್ಯಾರು ತಾಯಿ ಎಂದು ತಿಳಿದು, ಮನೆಯ ಯಾವ ಕೊರೆತಯೂ ಬಾರದಂತೆ ನೋಡಿಕೊಂಡವರು ಪೂ ಕಾಕು ಅವರು. 


*ನಮ್ಮ ಗುರುಗಳು ಪೂ ಕಾಕೂ ಅವರು*


ನಮ್ಮ ವರ್ಗವೇ ಕೊನೆಯ ವರ್ಗ. ಹಾಗಾಗಿ ನಮ್ಮಲ್ಲರನ್ನೂ ಕೂಡಿಸಿಕೊಂಡು ದ್ವಾದಶಸ್ತೋತ್ರ, ದಾಮೋದರಸ್ತೋತ್ರ, ವೆಂಕಟೇಶಸ್ತೋತ್ರ, ಮೊದಲಾದ ಅನೇಕ ಸ್ತೋತ್ರಗಳನ್ನು ತಾವೇ ಹೇಳಿದ್ದಾರೆ ಕೆಲವು ಸ್ತೋತ್ರಗಳನ್ನು ತಾವೇ ಎದರು ಕುಳಿತುಕೊಂಡು ಪೂಜ್ಯ ವೇದಾಮಾಮಿಯವರಿಂದಲೂ ಹೇಳಿಸಿದ್ದಾರೆ.


*ದೇವರಪೂಜೆಯಲ್ಲಿಯ ನಿಷ್ಠೆ* 


ಪೂ ಆಚಾರ್ಯರ ಪೂಜೆಗೆ ಪಾರಾಯಣ ಮಾಡಲು ಎಲ್ಲರೂ ಬರಲೇಬೇಕು. ಬಂದೇ ಬರುತ್ತಿದ್ದರು. ಅದರೆ ಅನೇಕ ದಿನಗಳಲ್ಲಿ ಬರುವದು ತಪ್ಪಿಸುವದು ಇದ್ದೇ ಇರುತ್ತಿತ್ತು. ಆದರೆ ಪೂ ಕಾಕೂ ಅವರು ಒಂದೇ ದಿನಕ್ಕೂ ಪೂಜೆಗೆ ಬಂದಿಲ್ಲ ಎಂಬ ಮಾತೇ ಇರುತ್ತಿದ್ದಿಲ್ಲ. ಮಳೆಗಾಲದಲ್ಲಿ ಮಳೆ ಇರುತ್ತಿತ್ತು ಜೊತೆಗೆ ಜಾರಿಕೆ ಬೇರೆ. ಬೇಸಿಗೆಯಲ್ಲಿ ಕಾಲುಸುಡುವ ಬಿಸಿಲು, ಛಳಿಗಾಲ, ಏಕಾದಶಿ ಉಪವಾಸ, ದ್ವಾದಶಿಬೆಳಿಗಿನ ಝಾವಾ, ಹಬ್ಬಹುಣ್ಣಿವಿ, ಬಂಧುಬಳಗ ಜನ, ಅನಾರೋಗ್ಯ,  ಯಾವದನ್ನೂ ಲೆಕ್ಕಿಸದೇ ಪೂಜೆಗೆ ಬರುತ್ತಿದ್ದರು‌. ನಮ್ಮ ವರ್ಗದವರಿಗೆ ತುಂಬಸಲ *ಪೂಜೆ ತಪ್ಪಿಸುವ ಹಾಗಿಲ್ಲ* ಎಂಬ  ಆದೇಶವನ್ನೂ ಮಾಡಿದ್ದಾರೆ. 


ನಾನು ವಿದ್ಯಾಪೀಠ ಸೇರಿದಾಗ ನನಗೆ ಪೂ ಕಾಕು ಅವರು ವಿಠ್ಠಲ ಎಂದು ಹೆಸರಿಟ್ಟರು. ಕಾಕು ಅವರಿಂದ ನಾಮಕರಣ ಮಾಡಿಸಿಕೊಂಡವನು ನಾನು. ಕೊನೆಯವರೆಗೂ ವಿಠ್ಠಲ ಎಂದೇ ಕರೆದರೇ ಹೊರತು ಎಂದಿಗೂ ಗೋಪಾಲ ಎಂದು ಕರೆಯಲಿಲ್ಲ. ನನ್ನ ಮಂಗಳದ  ತತ್ವಪ್ರಕಾಶಿಕಾ ಸಂಧ್ಯಾದಿಕರಣ ಅನುವಾದ ಮುಗಿಸಿಕೊಂಡು ಅವರ ರೂಮಿಗೆ ಹೋಗಿ ನಮಸ್ಕಾರ ಮಾಡಿದಾಗ ಅನುವಾದ ಬಹಳ ಚೊಲೊ ಅಯ್ತು ಎಂದು ಹರಿಸಿದರು. ನಾನು ಸುಮ್ ಬಹಳ ಮುಖದ ಮೇಲೆ ಏನು ಅಭಿವ್ಯಕ್ತಿಗೊಳಿಸದೆ ಸುಮ್ ನಿಂತಿದ್ದಾಗ "ಸ್ವಪ್ನದ ವಿಷಯ" ಹೇಳಿಯೋ ಇಲ್ಲೋ ಎಂದು ಹೇಳಿ ನಾ ಇಲ್ಲಿ ಕುಳಿತಿದ್ದರೂ ಸಂಪೂರ್ಣ ಕೇಳಿದೀನಿ ಎಂದು ಹೇಳಿ ಅನುಗ್ರಹಿಸಿದರು. 


ಜಗತ್ತಿನ ತಾಯಿಯಾದ ಸತ್ಯಭಾಮೆಯನ್ನು ಕುರಿತು ಇಂದ್ರ *ವತ್ಸೋ ಯಥಾ ತನುಭೃತಸ್ಸಕೃದೇತ್ಯ ಮಾತರ್ಯೂಢಸ್ಯಪಾನ ಸಮಯೇ ಕುರುತೇ ವಿರೋಧಮ್ | ತದ್ವದ್ವಯಂ ಚ ನಿಜಶೈಶವಮಪ್ರಮೇಯೇ ನಾಥೆ ವಿರುಧ್ಯ ಪಿನಾಶಿನಿದರ್ಶಯಾಮಃ ||"* ಎಂದು  ಸುಂದರವಾದ ಪ್ರಾರ್ಥನೆ ಮಾಡುತ್ತಾನೆ.


ಆ ನಿಟ್ಟಿನಲ್ಲಿ *ವಿದ್ಯಾಪೀಠದ ಮಹಾತಾಯಿಯಾದ ಪೂಜ್ಯ ಕಾಕೂ ಅವರನ್ನು ಅನಂತನಮಸ್ಕಾರಗಳೊಂದಿಗೆ ನನ್ನೆ ಅನಂತ ಅಪರಾಧಗಳನ್ನು ಮನ್ನಿಸಿ ಮಹದನುಗ್ರಹ ನಿರಂತರ ಇರಲಿ ಎಂಬುವದಾಗಿ ಪ್ರಾರ್ಥಿಸುತ್ತೇನೆ.


ನಮಗಾಗಿ ಪುಣ್ಯದ ಸಮುದ್ರವನ್ನೇ ಹರಿಸಿದ ಆ ಮಹಾತಾಯಿಗೆ ಅನಂತ ಅನಂತ ವಂದನೆಗಳು 🙏🏽🙏🏽🙏🏽🙏🏽

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*