ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ
*ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ ಜಯವಾಗಲಿ*
ಉತ್ತರಾದಿಮಠದ ಶ್ರೀಪಾದಂಗಳವರಾದ ಶ್ರೀಶ್ರೀಸತ್ಯಾತ್ಮತೀರ್ಥರಿಗೆ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಸುಭುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಜಯವಾಗಲಿ ಜಯವಾಗಲಿ.
*ಜಯ ಇರುವದು ಅಧರ್ಮದ ವಿರುದ್ಧವೇ. ಅಪಜಯ ಇರುವದು ಧರ್ಮದ ಎದುರೇ.* ಸೂರ್ಯಚಂದ್ರರಷ್ಟೇ ಸತ್ಯ. ಎಲ್ಲದರಮೇಲಾಗಿ *ಪ್ರಜೆಗಳ ಜಗತ್ತಿನ ಸಮಾಜದ ಸಂತೋಷವೇ ಮಹಾನ್ ಜಯ* ಈ ವಿಶೇಷವಾದ ದಿಗ್ವಿಜಯಕ್ಕೆ ನಾಂದಿ ಹಾಡಿದವರು ನಮ್ಮ ಈರ್ವರು ಶ್ರೀಪಾದಂಗಳವರು.
"ಈ ಮಹಾಗುರುಗಳುಗಳು ಒಂದಾದ ಕ್ಷಣದಲ್ಲಿಯೇ ನೂರಾರು ಅಧಾರ್ಮಿಕ ವಿಚಾರ ಹಾಗೂ ಧರ್ಮವಿರೋಧಿ ಚಟುವಟಿಗಳಿಗೆ ಇತಿಶ್ರೀಹಾಡಿದಂತಾಯಿತು" ಇದುವೇ ಪೂರ್ಣಿಮಾ ದಿನದ ಪೂರ್ಣ ವಿಜಯ.
ಇಂದಿನಿಂದ ಈರ್ವರು ಒಂದಾದ ಈ ಕ್ಷಣದಲ್ಲಿ ಪ್ರಾದುರ್ಭವಿಸಿದ ಮಹಾನ್ ಚಿನ್ಮೂರ್ತಿಗಳು ನಮ್ಮ *ಶ್ರೀಶ್ರೀಆತ್ಮೇಂದ್ರತೀರ್ಥರು.* ಎಂದು ಹೆಮ್ಮೆಯಿಂದ ಎದೆತಟ್ಟಿ ಹೆಳಿಕೊಳ್ಳಬಹುದು.
ಯಾರಿವರು *ಶ್ರೀಆತ್ಮೇಂದ್ರತೀರ್ಥರು ??*
ಸುಲಭವಾಗಿ ತಿಳಿಯುವದು ಶ್ರೀಸತ್ಯಾತ್ಮರು ಹಾಗೂ ಶ್ರೀಸುಭುದೇಂದ್ರರು ಎಂದು. ಆದರೆ ಇವರು ಇಬ್ಬರಲ್ಲ ಒಬ್ಬರೇ. ಈ ಕ್ಷಣದಿಂದ ಮುಂದಿನ ಲಕ್ಷಲಕ್ಷವರ್ಷಗಳವರೆಗೂ ಒಬ್ಬರೇ.
ಇವರೀರ್ವರ ಅಭೂತಪೂರ್ವ ಅತ್ಯಮೂಲ್ಯ ಐತಿಹಾಸಿಕ ನಿರ್ಧಾರ ಇನ್ನು ಮುಂದೆ ಬರುವ ಲಕ್ಷಲಕ್ಷವರ್ಷಗಳು ಕಳೆದರೂ ಒಂದೇ ಆಗಿರುತ್ತದೆ ಎಂಬ ದೃಢಮೂಡಿಸಿದ ಮಹಾನ್ ವ್ಯಕ್ತಿತ್ವದ ಮೇರು ಶಿಖರರು ನಮ್ಮ ಈ ಈರ್ವರು. ಮುಂದಿನ ಶಾಶ್ವತವಾಗಿ ಒಮ್ಮತದ ಒಡಂಬಡಿಕೆಗೆ ಕಾರ್ಯಕರ್ತರಾದಂತಹ *ಶ್ರೀಆತ್ಮೇಂದ್ರತೀರ್ಥರು* ಆದ್ದರಿಂದ ಇವರೀರ್ವರಲ್ಲ ಒಬ್ಬರೇ...
ಯಾವ ಕಾರಣಕ್ಕೆ ?
ಆತ್ಮಾ ಎಂದರೆ ಒಡೆಯ ಸ್ವಾಮಿ ಎಂದರ್ಥ. ಇಂದ್ರ ಎಂದರೂ ಒಡೆಯ ಸ್ವಾಮಿ ಎಂದೇ ಅರ್ಥ. ಆತ್ಮಾ ಹಾಗೂ ಇಂದ್ರ ಇವರಡೂ ಶಬ್ದಗಳು ಪರ್ಯಾಯ ಶಬ್ದಗಳು. ಆದ್ಧರಿಂದಲೇ ಎರಡೂ ಶಬ್ದಗಳಿಂದ ವಾಚ್ಯನಾದವನು ಒಬ್ಬನೇ ಶ್ರೀಮನ್ನಾರಾಯಣ. ಆ ಶ್ರೀಮನ್ನಾರಾಯಣನ ಅವತಾರಿಯಾದ ಶ್ರೀರಾಮನ ನಿರಂತರ ಭಜಕರು ಆರಾಧಕರೂ ಆದದ ಈ ಸ್ವಾಮಿಗಳೀರ್ವರೂ ಒಬ್ಬರೇ ಇವರೀರ್ವರ ಮನಸ್ಸೂ ಒಂದೇ. ಆ ಕಾರಣದಿಂದಲೇ *ಆತ್ಮೇಂದ್ರತೀರ್ಥರು* ಆದ್ದರಿಂದ ಇವರೀರ್ವರಲ್ಲ ಇವರೊಬ್ಬರೇ.
ನಮ್ಮ ಸಮಾಜದ ಹಾಗೂ ವಯಕ್ತಿಕವಾಗಿ ನಮ್ಮ ಹಿತ ಚಿಂತಕರಾದ ಈ ಈರ್ವರೂ ಶ್ರೀಗಳವರೂ ಸೇರಿ ಒಂದಾಗಿ *ಶ್ರೀಶ್ರೀಆತ್ಮೇಂದ್ರತೀರ್ಥರು* ಎಂದಾಗಿರುವದು ಜಗತ್ತಿಗೇ ಪರಮ ಮಂಗಳ ಅಷ್ಟೇ ಅಲ್ಲದೆ ಸಮಾಜಕ್ಕೆ ಒಳ್ಳೆಯಕಾಲ ಒದಗಿ ಬಂದಿದೇ ಎಂದರ್ಥ.
ಶ್ರೀಸುಭುಧೇಂದ್ರರು ಹಾಗೂ ಶ್ರೀಸತ್ಯಾತ್ಮರು ಒಂದಾಗಿ *ಶ್ರೀಆತ್ಮೇಂದ್ರತೀರ್ಥರು* ಆಗಿದ್ದರ ಸೂಚಕವೇನೆಂದರೆ ಇಂದಿನಿಂದ ನಮ್ಮ ಸಮಜವೂ ಒಂದಾಗಿದೆ ಎಂದೇ ಅರ್ಥ. ಒಂದಾಗಲೇಬೇಕು ಸಮಾಜ. ಇದು ಸಮಾಜದ ಹೊಣೆಗಾರಿಕೆಯೂ ಹೌದು.
*ಸಮಾಜ ಒಂದಾಗಿದೆ ಎಂದರೆ ಏನು... ??*
ಒಂದಾಗುವದು ಎಂದರೆ ಐಕ್ಯ ಹೊಂದುವದು ಎಂದರ್ಥ. ಐಕ್ಯ ಹೊಂದುವದು ಎಂದರೆ ಎಲ್ಲರ ಮನಸ್ಸು ಒಂದಾಗುವದು ಎಂದೇ ಅರ್ಥ. ಎಲ್ಲತರಹದ ಅನೇಕ ವೈಮನಸ್ಯಗಳು ದೂರಾಗಿ ಒಮ್ಮತದ ಅನಂತ ಮನಸ್ಸುಗಳು ಒಂದಾಗುವದೇ ನಿಜವಾಗಿ ಒಂದಾದರು ಎನ್ನುದಕ್ಕೆ ಅರ್ಥತಂದುಕೊಡುವದು. ವೈಮನಸ್ಯಗಳು ಉಳಿದರ ಅವರೀರ್ವರ ಒಂದಾಗುವಿಕೆಯೂ ಬೆಲೆಕಳೆದುಕೊಂಡಂತಾಗುವದು.
*ಎಲ್ಲರ ಮನಸ್ಸು ಒಂದಾಗುವದರ ಫಲವೇನು ?*
ಸಕಲ ಸಾತ್ವಿಕರ ಸಾಧನೆಗಳು ಒಂದಾಗಿ ಸಾಗಿ, ಕೊನೆಗೆ ಆತ್ಮಾ ಇಂದ್ರ ನಾಮಕ ಸ್ವಾಮಿಯ ದರ್ಶನವಾಗಿ, *ತತ್ರ ಏಕೀಭವಂತಿ* ಎಂಬಂತೆ ಮೋಕ್ಷದಲ್ಲಿ ಒಂದಾಗಿ ಅನಂತವಾದ ಆನಂದವನ್ನು ಅನುಭವಿಸುವದೇ *ಒಂದಾಗುವದು ಎಂಬುವದಕ್ಕೆ ಅರ್ಥ.....* ಆದ್ದರಿಂದ ಈ ಒಂದಾಗುವ ಒಡಂಬಡಿಕೆ ಸಮಾಜದ ಮೋಕ್ಷಮಾರ್ಗದ ಹೆದ್ದಾರಿಯನ್ನೇ ಆರಂಭಿಸಿದಂತಾಗಿದೆ. ಸಾಗುವದು ಸಮಾಜದ ಕರ್ತವ್ಯವೂ ಆಗಿದೆ.
ಇಂದಿನಿಂದ *ಸಮಾಜಕ್ಕೆ ಅತೀದೊಡ್ಡ ಜವಾಬ್ದಾರಿ ಆರಂಭವಾಗಿದೆ.*
ಈ ಸುಮಹತ್ತಾದ ಜವಾಬ್ದಾರಿಯನ್ನೂ ಸಹ ಹುಟ್ಟುಹಾಕಿ ಸಮಾಜದ ಹೆಗಲೇರಿಸಿದವರು *ಶ್ರೀಶ್ರೀಆತ್ಮೇಂದ್ರತೀರ್ಥರು*
ಒಂದು ಇಂದೇ ಆಗಿರುವದು ಅಲ್ಲ. ಎಂದಿನಿಂದಲೂ ಒಂದೇ ಆಗಿರುವದು. ಆದರೆ ಒಂದಿಲ್ಲ ಎಂಬ ಸಣ್ಣ ಕಿಡಿಗೆ ತುಪ್ಪ ಹಾಕಿ ಪ್ರಳಯಾಗ್ನಿಯಂತೆ ಮಾಡಿರುವದು ಸಮಾಜವೇ ಆಗಿದೆ.
ಈ ಕ್ಷಣದಿಂದ ಸಮಾಜ ಪ್ರಳಯಾಗ್ನಿಯನ್ನೇ ಅಮೃತಸಾಗರವನ್ನಾಗಿ ಮಾಡಬೇಕಾಗಿದೆ. ಈ ಸುಮಹತ್ತರ ಜವಾಬ್ದಾರಿ ಸಮಾಜದ ಹೆಗಲಿಗೆ ಹೊರಿಸಿದ್ದಾರೆ *ಒಂದಾದ ನಮ್ಮ ಶ್ರೀಗಳವರು* ಅತ್ಯಂತ ಸಮರ್ಥವಾಗಿ ನಿರ್ವಹಿಸುವದು ಸಮಾದ ಬೃಹತ್ ಆದ ಕಾರ್ಯವಾಗಿದೆ. ಸಮಾಜ ಯಶಸ್ವಿ ಆಗಲೇಬೇಕು. ಸಮಾಜ ಈ ಕಾರ್ಯದಲ್ಲಿ ಯಶಸ್ವಿಯಾಗೇ ಆಗುತ್ತದೆ.
*ಶ್ರೀಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ....✌🏼✌🏼✌🏼🙏🏼🙏🏼*
✍🏽ನ್ಯಾಸ
ಗೋಪಾಲದಾಸ
ವಿಜಯಾಶ್ರಮ ಸಿರಿವಾರ


Comments