ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*
ಸತ್ಯಧ್ಯಾನವಿದ್ಯಾಪೀಠ ನಾನಾತರಹದ ಪ್ರೋತ್ಸಾಹನೆಗಳ, ವಿವಿಧ ವಿಚಾರಗಳ, ಹೊ ಆವಿಷಗಕಾರಗಳ, ಬಹುಮುಖ ಕೃತಿಗಳ (ಕಾರ್ಯಗಳ) ಕೈಗನ್ನಡಿ.
*Madhwa idol*
ನೂರಾರು ಹೊಸ ಹೆಜ್ಜೆಗಳಲ್ಲಿ Madhwa idol ಇದೂ ವಿನೂತನ ಹೆಜ್ಜೆ. ಮುಂಬಯಿ ಪ್ರಾಂತದ ನೂರಾರು ಆಸಕ್ತ ಕಲಾಕಾರರುಗಳನ್ನು ಆಕರ್ಷಿಸಿ ಕಲಾಕೃತಿಗಳನ್ನು ನಿರ್ಮಿಸುವದು *Madhwa idol* ಉದ್ಯೇಶ್ಯ.
ವಿಷ್ಣು ಭಕ್ತಿಯನ್ನು ಸಾರುವ, ವಿಷ್ಣುವಿನಲ್ಲಿ ನಿಷ್ಠೆಯನ್ನು ಬೆಳೆಸುವ, ಮನಸ್ಸಿಗೆ ನೆಮ್ಮೆದಿಯನ್ನೂ ಕೊಡುವ, entertainment ಕೊಡುವ, ಸರಿ ದಾರಿಯನ್ನು ಬೋಧಿಸುವ, ಅಹಂಕಾರಗಳಿಗೆ ಕಡಿವಾಣ ಹಾಕುವ, ಹತಾಶಯನ್ನು ಕತ್ತರಿಸುವ, ಜೀವನೋತ್ಸಾಹವನ್ನು ಕೊಡುವ ನೂರಾರು ಹಾಡುಗಳು ಇವೆ. ಆ ಎಲ್ಲ ಹಾಡುಗಳೂ ವೈಷ್ಣವರ ನಾಲಿಗೆಯ ತುದಿಗೆ ಇರಬೇಕು ಇದು ಪರಮಪೂಜ್ಯ ಪರಮಾಚಾರ್ಯರ ಸಂಕಲ್ಪ. ಸಾಕಾರಮಾಡಿದವರು ಪೂಜ್ಯ ಆಚಾರ್ಯರು. ಯುವಕರ ಕಣ್ಮಣಿಯಾದ ಪಂ ವಿಶ್ವಪ್ರಜ್ಙಾಚಾರ್ಯರು ಮನೆಮನೆಗೆ, ಮಕ್ಕಳುಮರಿಗಳವರೆಗೂ ತಲುಪುವಂತೆ ಮಾಡುತ್ತಿದ್ದಾರೆ.
*ಪಂ ವಿಶ್ವಪ್ರಜ್ಙಾಚಾರ್ಯರ ಕನಸಿನ ಕೂಸು*
ಪಂ ವಿಶ್ವಪ್ರಜ್ಙಾಚಾರ್ಯರು ನಿರಂತರ ಶ್ರಮವಹಿಸಿ, ಆಸಕ್ತಿಯನ್ನು ತೋರಿ, ಪ್ರೋತ್ಸಾಹಿಸಿ, ಶ್ರೀಗಳವರ ಪರಮಾನುಗ್ರಹದ ಬೆಳಕಿನದಾರಿಯನ್ನು ತೋರಿ ನೂರಾರು ಯುವಕ - ಯುವತಿ- ಹಿರಿಯ- ಕಿರಿಯ ಎಲ್ಲರನ್ನೂ ಒಗ್ಗೂಡಿಸಿ ಈ ವೈಭವದ *Madhwa idol* ಅನ್ನು ಹುಟ್ಟು ಹಾಕಿದ್ದಾರೆ.
*ಭಾಗಹಿಸಿದವರ ವೈಭವ*
ಕೆಲವರು ಸುಧಾ ವಿದ್ವಾಂಸರು, ಹಲವರು ಸುಧಾ ಆಧ್ಯಯನಶೀಲರು ಒಂದೆಡೆಯಾದರೆ ಲೌಕಿಕರಲ್ಲಿ engineer - doctor- topper - advocate- ಉನ್ನತ ಶೀಕ್ಷಣದ ವಿದ್ಯಾರ್ಥಿಗಳು, ಉನ್ನತ ಕೆಲಸದಲ್ಲಿ ಇರುವ ಹಿರಿಯರು, ಅನೇಕ ಗೃಹಣಿಯರು ಹೀಗೆ ನಾನಾತರಹದ ವಿಷ್ಣು ಭಕ್ತರು ಭಾಗವಹಿಸಿದ್ದಾರೆ.
ಈ ಎಲ್ಲರೂ ಚಾತುರ್ಮಾಸ್ಯದ ಸದವಕಾಶದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಅನೇಕ ಸ್ವಯಂಸೇವಕರು ಇಲ್ಲಿ ಭಾಗವಹಿಸಿದ್ದಾರೆ.
ದಾಸಸಾಹಿತ್ಯದ ಪರಮಶ್ರೇಷ್ಠ ಜ್ಙಾನಿಗಳಾದ ಪರಪಮೂಜ್ಯ ಆಚಾರ್ಯರ ಅಧ್ಯಕ್ಷತೆ ಹಾಗೂ ಯಾಜಮಾನ್ಯ. ಶ್ರೀಯುತ ಶೇಷಗಿರಿದಾಸ, ಶ್ರೀಯುತ ನರಸಿಂಹನಾಯಕ್, ಶ್ರೀಯುತ ಅನಂತ ಕುಲಕರ್ಣಿ ಮುಂತಾದ ಅನೇಕ ವಿದುಷರು ನಿರ್ಣಾಯಕರಾಗಿರುವ. ವಿದ್ಯಾಪೀಠದ ಅನೇಕ ಹಿರಿಯ ವಿದ್ವಾಂಸರುಗಳ ಹಾಗೂ ನೈಕ ಸದ್ಗೃಹಸ್ಥರ ಸಮ್ಮುಖದಲ್ಲಿ ನಡೆಯುತ್ತಿರು ಈ ಕಾರ್ಯಕ್ರಮ *ಪರಮಪೂಜ್ಯ ಮಹಾಸ್ವಾಮಿಗಳಿಗೆ ಪರಮಹರ್ಷ ತಂದುಕೊಟ್ಟಿರುತ್ತದೆ* ಎನ್ನುವದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಶ್ರೀಗಳವರು ಮಹಾಸ್ವಾಮಿಗಳು ಪರಮಾನುಗ್ರಹ ದೊರೆಯುವಂತಾಗಲಿ.
*madhwa idol* ಒಲಿಯುವದು ಒಬ್ಬಿಬ್ಬರಿಗೆ ಮಾತ್ರ. ಆದರೆ ಭಾಗವಹಿಸಿದ ಎಲ್ಲರೂ ನೂರಾರು ಹಾಡುಗಳನ್ನು ಕಲಿಯುವದೇ ಮುಖ್ಯ *Madhwa idol* ನ ಮುಖ್ಯ ಉದ್ಯೆಶ್ಯ. ಮನೆಮನೆಯಲ್ಲಿ ಮನಮನಗಳಲ್ಲಿ ನೂರಾರುಹಾಡುಗಳು ರಿಂಗಣಿಸಲಿ. ದೇವರನಾಮಸ್ಮರಣ ನಿರಂತ ಸಾಗಲಿ.
ಆಯೋಜಕರಿಗೆ ಭಾಗವಹಿಸಿದ ಎಲ್ಲ ಕಲಾಕಾರರುಗಳಿಗೆ judges ಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಪೂರ್ವಕ ವಂದೆನಗಳು ಅಭಿನಂದನೆಗಳು.
*✍🏽ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments