ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*
*ಶ್ರೀಸತ್ಯಾತ್ಮತೀರ್ಥರ ೨೯ನೇಯ ಚಾತುರ್ಮಾಸ್ಯ*
ಉತ್ತರಾದಿ ಮಠಾಧೀಶರಾದ ಶ್ರೀಶ್ರೀಗಳವರು ತಮ್ಮ ೨೯ ನೇಯ ಚಾತುರ್ಮಾಸ್ಯ ಸಂಕಲ್ಪಕ್ಕಾಗಿ ಮುಂಬಯಿ ಆಗಮಿಸಿದ್ದಾರೆ.
"ಮೋಹನಗರಿ ಮಾಯಾನಗರೀ ಎಂದೇ ಪ್ರಸಿದ್ದವಾದ ಮುಂಬಯಿ ಮಹನಾಗರವನ್ನು, ಮಹಾವಿರಾಗಿಗಳಾದ, ತತ್ವಜ್ಙಾನದ ಗಣಿಗಳಾದ, ಭಗವಂತನ ಅನೇಕಗುಣಗಳಿಗೆ ಪ್ರತಿಬಿಂಬಗುಣಗಳನ್ನು ರೂಢಿಸಿಕೊಂಡಿರುವ, ಶ್ರೀಮದಾಚಾರ್ಯರಿಂದಾರಂಭಿಸಿ ಹಿರಿಯಶ್ರೀಗಳವರೆಗೆ ಎಲ್ಲ ಗುರುಗಳ ಮೂರ್ತಿಗಳಾದ ಶ್ರೀಶ್ರೀಗಳವರು ಇಂದಿನ ಶುಭ ಅವಸರದಲ್ಲಿ ಮುಂಬಯಿಯನ್ನು ಪ್ರವೇಶಿಸಿದರು.
*ಸತ್ಯಧ್ಯಾನ ವಿದ್ಯಾಪೀಠ*
ದ್ವೈತವಾಙ್ಮಯ ಪ್ರಪಂಚದಲ್ಲಿ ತುಂಬ ಪ್ರಾಚೀನ ವಿದ್ಯಾಸಂಸ್ಥೆ ಪರಮಪೂಜ್ಯ ಮಾಹುಲೀ ಹಿರಿಯಾಚಾರ್ಯರು ಸಂಸ್ಥಾಪಿಸಿದ, ಇಂದು ಪೂಜ್ಯ ಮಾಹುಲೀ ಆಚಾರ್ಯರು ಕುಲಪತಿಗಳಾಗಿ ನಡೆಸುತ್ತಿರುವ ಸಂಸ್ಥೆ ಅದು *ಸತ್ಯಧ್ಯಾನ ವಿದ್ಯಾಪೀಠ - ವಾಣೀವಿಹಾರ ವಿದ್ಯಾಲಯ* ಇದು ಜಗತ್ಪ್ರಸಿದ್ಧ. ಈ ಸತ್ಯಧ್ಯಾನ ವಿದ್ಯಾಪೀಠದಲ್ಲಿ ೧೯೭೩ ರಲ್ಲೇ ಶ್ರೀಶ್ರೀಸತ್ಯಪ್ರಮೋದತೀರ್ಥರು ಚಾತುರ್ಮಾಸ್ಯಗೈದಿದ್ದರು. ಆ ವರುಷವೇ ಸರ್ವಜ್ಙಾಚಾರ್ಯರು (ಶ್ರೀಸತ್ಯಾತ್ಮರು) ಅವತಾರಗೈದ ವರುಷವೂ ಆಗಿತ್ತು.
ಶ್ರೀಸರ್ವಜ್ಙಾಚಾರ್ಯರ ಸಂಪೂರ್ಣ ಬಾಲ್ಯ ಅವಸ್ಥೆ ವಿದ್ಯಾಪೀಠದಲ್ಲಿಯೆ. ಸಮಗ್ರ ಶಾಸ್ತ್ರಾಧ್ಯಯನ ಪೂ ಮಾಹುಲೀ ಆಚಾರ್ಯರಲ್ಲಿಯೇ. ನಿರಂತರ ಅಧ್ಯಯನಶೀಲರು. ನಿರಂತರ ಉತ್ಸಾಹ. ವಿದ್ಯಾರ್ಥಿಪ್ರೇಮ. ವಿದ್ಯಾಪೀಠದ ಮೇಲಿನ ಅಪ್ರತಿಮ ಭಕ್ತಿ, ಗುರುಗಳಲ್ಲಿಯ ಅಕಾಟ್ಯ ವಿಶ್ವಾಸ, ಅವರ ಪ್ರಚಂಡವಾದ ಧೈರ್ಯ, ಅಪ್ರತಿಮ ಬುದ್ಧಿಶಕ್ತಿ ಇತ್ಯಾದಿ ಗುಣಮಟ್ಟವಾದ ಗುಣಗಳಿಂದ ಯುಕ್ತರಾಗಿ ಇಳಿಯ ವಯಸ್ಸಿನಲ್ಲೆ ಗುಣಗಳಗಣಿಯಾಗಿದ್ದರು. ಅವರ ನೂರಾರು ಗುಣಗಳು, ಒಂದೊಂದೂ ಊಹಾತೀತ ಅತ್ಯಾಶ್ಚರ್ಯತಮವೇ ಆಗಿತ್ತು.
ಸಮಗ್ರ ಚತುಃಶಾಸ್ತ್ರ, ಇತಿಹಾಸ, ವೇದ, ವೇದಾಂಗ, ಪುರಾಣ, ನ್ಯಾಯ, ವ್ಯಾಕರಣ, ಅದ್ವೈತ, ವಿಶಿಷ್ಟಾದ್ವೈತ, ಸಾಂಖ್ಯ, ಬೌದ್ಧ, ಜೈನ, ಸಾಹಿತ್ಯ, ದಾಸಸಾಹಿತ್ಯ, ಪೌರ್ವಾತ್ಯ, ಪಾಶ್ಚಿಮಾತ್ಯ, ಆಂಗ್ಲ, ಇತ್ಯಾದಿ ಇತ್ಯಾದಿ ಎಲ್ಲ ಶಾಸ್ತ್ರಗಳ ಅಧ್ಯಯನ ಮುಗಿಸಿ ೧೯೯೫ ರಲ್ಲಿ ಶ್ರೀಮನ್ಯಾಯಸುಧಾ ಮಂಗಳವನ್ನು ಮುಗಿಸಿಕೊಂಡರು. ಈ ಮಧ್ಯದಲ್ಲಿಯೇ ಅನೇಕ ವಾಕ್ಯಾರ್ಥಗಳನ್ನೂ ಮಾಡಿದ್ದರು. ನಂತರವೂ ಅವರ ವಾಕ್ಯಾರ್ಥ ಶೈಲಿ, ವಿದ್ವತ್ತು, ವೈರಾಗ್ಯ ಎಲ್ಲವನ್ನೂ ಗಮನಿಸಿದ ಶ್ರೀಶ್ರೀಸತ್ಯಪ್ರಮೋದತೀರ್ಥರು *ಪಂ ಸರ್ವಜ್ಙಾಚಾರ್ಯರನ್ನು, ಸರ್ವಜ್ಙಪೀಠದಲ್ಲಿ, "ಶ್ರೀಶ್ರೀಸತ್ಯಾತ್ಮತೀರ್ಥರು"* ಎಂದು ನಾಮಕರಣ ಮಾಡಿ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡರು.
*ದೇಶದಿಗ್ವಿಜಯ*
ಕರ್ನಾಟಕ, ದೇಹಲಿ, ಉತ್ತರಪ್ರದೇಶ, ಬಿಹಾರ, ಅಸ್ಸಾಂ, ಉತ್ತರಾಖಂಡ, ಗುಜರಾತ, ಮಹಾರಾಷ್ಟ್ರ, ಆಂಧ್ರ, ತೆಳಂಗಾಣ, ಓರಿಸ್ಸಾ, ಕೇರಳ, ತಮಿಳನಾಡು, ಗೋವಾ, ಜೈಪುರ, ಮಧ್ಯಪ್ರದೇಶ, ಇತ್ಯಾದಿ ಇತ್ಯಾದಿ ನಾನಾರಾಜ್ಯಗಳಲ್ಲಿ ಸಾವಿರ ಸಾವಿರ ಕ್ಷೇತ್ರಗಳಲ್ಲಿ, ನಾನಾವಿಧ ದೇಶಕಳಲ್ಲಿ ದಿಗ್ವಿಜಯ ಮಾಡುವ ಮುಖಾಂತರ ವೈಷ್ಣವದೀಕ್ಷೆಯನ್ನು ಕೊಟ್ಟವರು ಶ್ರೀಗಳವರು.
*ಪಂಡಿತಾಚಾರ್ಯರುಗಳಲ್ಲಿ ಭೀಮನೇ*
ಸ್ವಯಂ ತತ್ವಜ್ಙಾನದ ಗಣಿಗಳಾದ ಶ್ರೀಗಳವರು ನೂರಾರು ವಿದ್ವಾಂಸರುಗಳನ್ನು ಸಿದ್ಧಪಡಿಸಿದರು. ಸಾವಿರಾರು ವಿದ್ವಾಂಸರ ಪೋಷಕರು ಆದರು. ದೇಶದ ಉದ್ದಗಲದಲ್ಲಿ ಧರ್ಮ ಜ್ಙಾನ ಉಳಿಸಿದರು ಬೆಳಿಸಿದರು. ಭೀಮಸೇನದೇವರ ಹಾಗೆ ಒಂದೊಂದು ಊರುಗಳಲ್ಲಿ ಐದೈದು ವಿದ್ವಾಂಸರುಗಳನ್ನು ಇರಿಸಿ ಧರ್ಮ ಜ್ಙಾನದ ಉಳಿವಿಗಾಗಿ ಬೆಳಯುವಿಕೆಗಾಗಿ ನಿರಂತರ ಪರಿಶ್ರಮದಲ್ಲಿ ಯಶಸ್ವಿಯಾದವರು. ಇಂದಿಗೂ ಆ ಕಾರ್ಯ ದಿನೆ ದಿನೇ ಬೇಳೆಯುತ್ತಾ ಸಾಗಿದೆ.
*ದಾನದಲ್ಲಿ ಧರ್ಮರಾಜನೇ*
ಒಂದು ಅಶ್ವಮೇಧಯಾಗಕ್ಕೆ ಐದುಪಟ್ಟು ದಾನ ಕೊಡುವ ಮುಖಾಂತರ ಐದು ಅಶ್ವಮೇಧಯಾಗದ ಫಲವನ್ನು ಪಡೆದ ಧರ್ಮರಾಜನ ಮೂರ್ತಿಮತ್ ರೂಪ ಶ್ರೀಗಳವರು. ತಮ್ಮ ಈ ೨೯ ವರ್ಷದ ಪ್ರಾತಸ್ಸವನದಲ್ಲೇ ಅವರು ದಾನ ಮಾಡದ ವಸ್ತುವಿಲ್ಲ. *ಹಿರಣ್ಯ ಭೂ ಗೋ ಸುವರ್ಣ ರಜತ ವಸ್ತ್ರ ಅನ್ನ ವಿದ್ಯಾ ಧನ ಮೊದಲಾದ ಮೊದಲಾದ ನಾನಾವಿಧ ದಾನಗಳನ್ನು, ಸಾವಿರ ಸಾವಿರ ವಿಷ್ಣುಭಕ್ತರಾದ ವಿದ್ಚಾಂಸುರುಗಳಿಗೆ ಐದೈದುಪಟ್ಟು ಹೆಚ್ಚಾಗಿ ದಾನ ಮಾಡಿದ ವೈಭವದ ಕೀರ್ತಿ ನಮ್ಮ ಶ್ರೀಗಳವರದ್ದು.*
*ತಮ್ಮ ೨೯ನೇಯ ಚಾತುರ್ಮಾಸ್ಯ*
ಪ್ರಕೃತ ತಾವು ಅವತರಿಸಿದ, ಅಧ್ಯಯನ ಮಾಡಿದ, ತಮ್ಮದೇ ಆದ ವಿದ್ಯಾಪೀಠದಲ್ಲಿ ತಾವೇ, ತಮ್ಮ ೨೯ನೇಯ ಚಾತುರ್ಮಾಸ್ಯಕ್ಕೆ ಮುಂಯಿಗೆ ಆಗಮಿಸಿ ಕುಳಿತಿರುವದು ಸತ್ಯಧ್ಯಾನವಿದ್ಯಾಪೀಠದ ಹಾಗೂ ಮುಂಬಯಿಗರಿಗೆ ಒಂದು ಹೆಮ್ಮೆಯ ಸಂಗತಿ. ನಮಗೆಲ್ಲ ಸುವರ್ಣ ಅವಕಾಶ.
*ಪರಮಪೂಜ್ಯ ಆಚಾರ್ಯರು*
ಶ್ರೀಮಠದ ದೀಕ್ಷಾಬದ್ದ ಸ್ವರೂಪವಿರುವ, ತತ್ವಜ್ಙಾನದ ಮೇರುವಾದ, ಉಪಾಸನೆ ಚಿಂತನೆಗಳನ್ನು ಮೈರೂಢಿಸಿಕೊಂಡ, ಶ್ರೀಮನ್ಯಾಯಸುಧಾ ಸರ್ವಮೂಲ ಶ್ರೀಮದ್ಭಾಗವತ ಮಹಾಭಾರತ ಗಳನ್ನು ನರನಾಡಿಗಳಲ್ಲಿ ಇರಿಸಿಕೊಂಡ, ನೂರಾರು ವಿದ್ವಾಂಸರುಗಳನ್ನು ಸಿದ್ಧಪಡಿಸಿದ, ಧರ್ಮದ ಜ್ಙಾನದ ಅಳಿವು ಉಳಿವುಗಾಗಿ ತಮ್ಮ ಜೀವನವನ್ನೇ ಸವಿಸಿದ, ಪ್ರತಿಶ್ವಾಸೋಚ್ಛ್ವಾಸವನ್ನೂ ಅಪರೋಕ್ಷಜ್ಙಾನಕ್ಕಾಗಿಯೇ ಮೀಸಲಿಟ್ಟ, ನನ್ನಂತಹ ಲಕ್ಷಲಕ್ಷಜನರ ಉದ್ಧಾರ ಮಾಡಿದ, ನಮ್ಮ ಪಾಲಿಗೆ *ಓಡಾಡುವ ಶ್ರೀಯಾದವಾರ್ಯರು* ಎಂದೇ ಪ್ರಸಿದ್ಧರಾದ *ಪರಮಪೂಜ್ಯ ಮಾಹುಲೀ ಆಚಾರ್ಯರ ಯಾಜಮಾನ್ಯ* ಪಂ ವಿದ್ಯಾಧೀಶಾಚಾರ್ಯರ ಹಾಗೂ ಯುವಕರ ಆಶಾಕಿರಣರಾದ ಪಂ ವಿಶ್ವಪ್ರಜ್ಙಾಚಾರ್ಯರ ಸದೃಢವಾದ, ಸಂಪದ್ಭರಿತವಾದ, ಆಧ್ಚರ್ಯ, ಹನುಮನಂಥಹ ನೂರಾರು ವಿದುಷರೆಲ್ಲ ಸೇವಕರು.
*ಹಾಗಾದರೆ ಈ ಚಾತುರ್ಮಾಸ್ಯ ಹೇಗಿರಬಹುದು.....???*
ಭಾಗವಹಿಸಿದಾಗಲೇ, ಅನುಭವಿಸಿದಾಗಲೇ, ಅರ್ಥವಾಗುವದು. ನಾವೆಲ್ಲ ಹೋಗೋಣ. ಭಾಗವಹಿಸೋಣ.
*✍🏽ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments