ರಾಯರಚೂರಿನಲ್ಲಿ - ಜಯರಾಯರ ಆತ್ಮಾ*

 *ರಾಯರಚೂರಿನಲ್ಲಿ - ಜಯರಾಯರ ಆತ್ಮಾ*


ಪ್ರಭುಗಳಾದ ರಾಯರ ಸ್ಥಾನವಾದ ಮಂತ್ರಾಲಯದ ಚೂರು ಎನಿಸಿರುವ ನಮ್ಮ ರಾಯಚೂರಿನಲ್ಲಿ, ಜಯರಾಯರ ಅಂತರಂಗ ಎಂದೇ ಪ್ರಸಿದ್ಧರಾದ ಶ್ರೀಸತ್ಯಾತ್ಮತೀರ್ಥರ ಭವ್ಯ ದಿವ್ಯ ದಿಗ್ವಿಜಯ. 


ತುಂಬ ವರ್ಷಗಳ ತರುವಾಯ ಎಂಟುದಿನಗಳ ದಿಗ್ವಿಜಯದ ಹಾದಿಯನ್ನು ಕರುಣಿಸಿದವರು ಸ್ಚಯಂ ಶ್ರೀಗಳವರು. ಇದು ಅವರ ಮಹತ್ಕರುಣೆ. 


ಪ್ರತಿನಿತ್ಯವೂ ಉಪಾಸ್ಯ ದೇವರುಗಳಾದ ಶ್ರೀರಾಮದೇವರ ದರ್ಶನ, ಭಕ್ತರಿಗೆ ಬೆಳಿಗ್ಗೆ ಪಾಠ, ಮಧ್ಯಾಹ್ನ ತೀರ್ಥಪ್ರಸಾದ, ಸಾಯಂ ಅಮೃತೋಪದೇಶ. ಈ ನಿಟ್ಟಿನಲ್ಲಿ ದಿವ್ಯವಾಗಿ ವೈಭವದಿಂದ ಜರುಗಿತು. 



*ಪಾಠದ ಪರಿಣಾಮ...*


ಬೆಳಿಗ್ಗೆ ಶ್ರೀಗಳವರ ಪಾಠ ಸತ್ಯನಾಥ ಕಾಲೋನಿಯ ಮಠದಲ್ಲಿ ಏರ್ಪಡಿಸಲಾಗಿತ್ತು.   ತೀವ್ರವಾದ ಛಳಿಯನ್ನೂ ಗಮನಿಸಿದೆ ಪಾಠದ ಪೂರ್ಣ ಸದ್ಚಿನಿಯೋಗವನ್ನು ಪಡೆದವರು ಭಕ್ತರು. ನಿತ್ಯವೂ ಪಾಠ ಬಿಡಲೇಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡರು. ಇದು ನಿಜವಾದ ಕ್ರಾಂತಿ. 


ಪ್ರತಿನಿತ್ಯ ಒಂದೊಂದು ಬಡಾವಣೆಗಳಿಗೆ ಹೋಗಿ ಅಲ್ಲಿಯೇ ಪಾದಪೂಜೆ, ಮುದ್ರಾಧಾರಣೆ, ಅನುಗ್ರಹ ಸಂದೇಶ, ರಾಮದೇವರ ದರ್ಶನ ಇತ್ಯಾದಿ ನೆರೆವೇರಿಸಿ ಎಲ್ಲ ಬಡಾವಣೆಗಳಲ್ಲೂ ತಮ್ಮ ಪಾದಧೂಳಿಯನ್ನು ಪಸರಿಸಿದರು. 


*ಸಮಗ್ರ ತತ್ವಪ್ರಕಾಶಿಕಾ ಪರೀಕ್ಷೆ*


ಸರ್ವಮೂಲಗ್ರಂಥಗಳ್ಲಿ ಗ್ರಂಥರಾಜ ಎಂದರೆ *ಸೂತ್ರಭಾಷ್ಯವೇ* ಇದು ಜಗತ್ಪ್ರಸಿದ್ಧ. ಸೂತ್ರಭಾಷ್ಯಕ್ಕೆ ಮೇರು ಟೀಕೆ *ತತ್ವಪ್ರಕಾಶಿಕಾ* ಸಮಗ್ರವಾದ ತತ್ವಪ್ರಕಾಶಿಕಾ ಗ್ರಂಥವನ್ನು ಎಂಟು ಗಂಟೆಗಳ ಕಾಲ ಅವ್ಯಾಹತವಾಗಿ, ಹೊರವೂರಿನ ಅನೇಕ ವಿದ್ವನ್ಮಣಿಗಳ ಸಮ್ಮುಖದಲ್ಲಿ, ಶ್ರೀಗಳವರ ಅಧ್ಯಕ್ಷತೆಯಲ್ಲಿ ಅತ್ಯಂತ ಅದ್ದೂರಿಯಾಗಿ ಕೊಟ್ಟ ಪರೀಕ್ಷೆಯನ್ನು ಗಮನಿಸಿದಾಗ ಮೈ ರೋಮಾಂಛವಾಗುತ್ತಿತ್ತು. ಆ ನಿಟ್ಟಿನಲ್ಲಿ ಅತ್ಯಂತ ವೈಭವದಿಂದ ಪರೀಕ್ಷೆ ಜರುಗಿತು. 


*ಸಾಯಂ ಅಮೃತಾತ್ಮ ಹಬ್ಬ*


ಸಾಯಂಕಾಲ ಆತ್ಮರ ಅಮೃತೋಪದೇಶಹ ಮಹಾಹಬ್ಬ. ನೋಡಲು ಎರಡು ಕಣ್ಣು ಸಾಲದು. ಎಲ್ಲಿ ನೋಡಿದರಲ್ಲಿ ಜನವೋಜನವೋ ಜನ. ಕನಿಷ್ಟ ಎರಡು ಸಾವಿರ ಜನರಗಿಂತಲೂ ಹೆಚ್ಚಿನ ಜನ ಭಾಗವಹಿಸಿತ್ತು. *ಸತ್ಯನಾಥ ಮಾಹಾತ್ಮ್ಯರತ್ನಾಕರ ಹಾಗೂ ಸತ್ಯನಾಥಾಭ್ಯುದಯ* ಈ ಎರಡು ದಿವ್ಯಗ್ರಂಥಗಳ ವೈಭವ ಅಲ್ಲಿ ಗುರುಭಕ್ತಿ, ಗುರುಗಳ ಅನುಗ್ರಹದಿಂದ ಅನಿಷ್ಟನಿವೃತ್ತಿ, ಇಷ್ಟಪ್ರಾಪ್ತಿ ಇತ್ಯಾದಿ ನೂರಾರು ವಿಷಯಗಳನ್ನು ತಮ್ಮ ದಿವ್ಯ ಅಮೃತೋಪದೇಶದಲ್ಲಿ ತಿಳುಹಿಸಿ ಅನುಗ್ರಹಿಸಿದರು. 


ಪ್ರತಿನಿತ್ಯವೂ ಅನೇಕ ಹಿರಿಯ ವಿದ್ವಾಂಸರುಗಳಿಂದ ವೈಭವದ, ಅಪರೂಪದ ವಿಷಯಗಳ ಉಪನ್ಯಾಸಗಳನ್ನೂ ಆಯೋಜಿಸಿದ್ದರು. ಆ ಎಲ್ಲ ಉಪನ್ಯಾಸಗಳೂ ವೈಭವದಿಂದಲೇ ಜರುಗಿದವು. 


ಎರಡೆರಡು (ಒಂದು ಅಥವಾ ಎರಡು) ಉಪವಾಸಗಳು ಎದುರಾದರೂ ಉಪವಾಸಗಳನ್ನು ಮಾಡಿ ರಾಮದೇವರ ದರ್ಶನ ತೀರ್ಥಕ್ಕಾಗಿ ಸುಮಾರು ಬೆಳಿಗ್ಗೆ ಹನ್ನೊಂದಕ್ಕೆ ಬಂದ ಭಕ್ತವರ್ಗ  ಸಾಯಂಕಾಲ ಆರು ಗಂಟೆಯವರೆಗೂ ಕಾಯ್ದು ತೀರ್ಥ ಸ್ವೀಕಾರ ಮಾಡಿರುವದನ್ನು ಗಮನಿಸಿದಾಗ ಆ ಭಕ್ತರ ವೈಭವ ವಿಶ್ವಾಸಗಳನ್ನು ಗಮನಿಸಿ ಆಶ್ಚರ್ಯವಾಯಿತು. 


ನೂರಾರು ತರಹದ ಭಕ್ತವರ್ಗಕ್ಕೆ, ಅವರವರ ಕಷ್ಟಗಳ ಪರಿಹಾರಕ್ಕೂ ಅಪರೂಪದ ಮಾರ್ಗದರ್ಶನವನ್ನು ಸೇವೆಯನ್ನು ವಿಧಿಸಿ ಅನುಗ್ರಹಿಸರು. ಅನೇಕರು ಕಷ್ಟಪರಿಹರಿಸಿಕೊಂಡರು, ಇನ್ನನೇಕರು ಕಷ್ಟತೀರುತ್ತವೆ ಎಂಬ ಪೂರಗಣ ಭರವಸರಯಲ್ಲಿ ಇದ್ದರು. ಸನ್ಮಂಗಳಗಳು ಆಗುತ್ತವೆ ಎಂಬ ಪೂರ್ಣ ವಿಷ್ವಾಸದಲ್ಲಿ ಹಲವರಿದ್ದರು. 


ಈ ತರಹದ ದಿವ್ಯ ಭವ್ಯ ಕಾರ್ಯಕ್ರಮವನ್ನು  ಕಾರ್ಯಕ್ರಮ ಚತುರರಾದ, ಮುತ್ಸದ್ಧಿಗಳಾದ, ಅನುಭವವೃದ್ಧರಾದ, ಶ್ರೀಗಳವರ ಕಾರ್ಯಕ್ರಮ ಮಾಡಲೇಬೇಕೆಂಬ ಹಠ ತೊಟ್ಟ, ಪರಿಶ್ರಮಿಗಳಾದ, ಉತ್ಸಾಹದ ಚಿಲುಮೆಗಳಾದ *ಪಂ ಶ್ರೀಹರಿ ಆಚಾರ್ಯ, ಪಂ ಮುಕುಂದಾಚಾರ್ಯ ಪಂ ಕಾರ್ತಿಕ ಆಚಾರ್ಯ -  ಅಧ್ಯಕ್ಷರಾದ ಜಯತೀರ್ಥ ದಾಸ ಹಾಗೂ  ಇನ್ನನೇಕ  ಸದ್ಗ್ರಹಸ್ಥರ, ರಾಯಚೂರಿನ ಭಕ್ತವರ್ಗದ ಸಹಾಕಾರದೊಂದಿಗೆ ಬಹಳೇ ವೈಭವದಿಂದ ನೆರೆವೇರಿಸಿದರು.*


*ಶ್ರೀಗಳವರಿಗೆ ಬಹಳ ಸಂತೋಷವಾಯಿತು.....* 


ನಮ್ಮ ರಾಯಚೂರಿಗೆ ನಿರಂತರ ಪ್ರತಿವರ್ಷವೂ ಬರಲಿ, ಈ ಬಾರಿ ಕರೆತಂದ ವಿಶ್ವಮಧ್ವಮಹಾಪರಿಷತ್ತಿನ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭನಂದನಗಳು....💐💐🌹🌹🌹

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*