*ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ*


 *ಪಂ ವಿಶ್ವಪ್ರಜ್ಙಾಚಾರ್ಯರಿಂದ ಭವ್ಯ ಹಾಗೂ ದಿವ್ಯವಾಗಿ ನಡೆಯುತ್ತಿರುವ ಶ್ರೀಮನ್ಯಾಯಸುಧಾ ಮಂಗಳ*


ಐತಿಹಾಸಿಕ ಶ್ರೀಮನ್ಯಾಯಸುಧಾ ಮಂಗಳ 


೧) ತಮ್ಮ ಕೇವಲ ನಾಲವತ್ತನೇಯ ವಯಸ್ಸಿಗೆ ಏರಡನೇಯ ಮಂಗಳ‌ಮಹೋತ್ಸವ. ೨) ಏರಡನೇಯ ಸುಧಾಮಂಗಳದಲ್ಲಿಯೇ ಏಳು ಜನರಿಂದ ಸಮಗ್ರ ಶ್ರೀಮನ್ಯಾಯಸುಧಾ ಪರೀಕ್ಷೆ. ೩) ಎರಡೂ ಸುಧಾಮಂಗಳ ಸೇರಿಸಿ ಆರವತ್ತು ವಿದ್ಯಾರ್ಥಿಗಳಿಗೆ ಸುಧಾ ಪಾಠ ಹೀಗೆ ಹಲವಾರುಕಾರಣಗಳಿಂದ ತಮ್ಮ ಈ ಸುಧಾಮಂಗಳವನ್ನು ಐತಿಹಾಸಿಕವಾಗಿರಿಸಿದ್ದಾರೆ ಪಂ ವಿಶ್ವಪ್ರಜ್ಙಾಚಾರ್ಯರು. 


ಆಗಮಿಸಿದ ಯತಿವರೇಣ್ಯರುಗಳು, ಆಹ್ವಾನಿತ ವಿದುಷರು, ಭಾಗವಹಿಸಿದ ಈ ಜನಸ್ತೋಮ ಇವುಗಳನ್ನು ಗಮನಿಸಿದರೆ ಈ ಮುಂಬಯಿಯಲ್ಲೂ ಇಷ್ಟು ಧಾರ್ಮಿಕ, ವಿಷ್ಣುಭಕ್ತ ಇದ್ದಾರೆ ಅವರಲ್ಲಿ ಯಾವ ಮಟ್ಟಿಗೆ ಧರ್ಮ ಜಾಗೃತಿ ಆಗಿರಬಹುದು ಎಂದು ಯೋಚಿಸಲೂ ಅಸಾಧ್ಯದ ಮಾತೇ. 


ನೂರಾರು ಜನ ಪರೀಕ್ಷಕರು, ಅವರು ಕೇಳುವ ಪ್ರಶ್ನೆಗಳು, ವಿದ್ಯಾರ್ಥಿಗಳು ಕೊಡುವ ಥಟ್ಟನೆ ಉತ್ತರಗಳು ಇವುಗಳನ್ನು ಗಮನಿಸಿದರೆ ನಮ್ಮ ಗುರುಪುತ್ರರಾದ, ವೈಯಕ್ತಿಕವಾಗಿ ನನ್ನ ಅತ್ಯಂತ ಆತ್ಮೀಯ ಮಿತ್ರರೂ ಆದ ವಿಶ್ವಪ್ರಜ್ಙಾಚಾರ್ಯರ ಪರಿಶ್ರಮ, ತಪಸ್ಸು, ವಿದ್ಯಾರ್ಥಿವಾತ್ಸಲ್ಯ ವಿದ್ಯಾರ್ಥಿಗಳ ಮಹಿಮಾ ಹಾಗೂ ವಿದ್ಯಾರ್ಥಿಗಳ ಗುರುಭಕ್ತಿ ಇತ್ಯಾದಿಗಳಲ್ಲವೂ ಎದ್ದು ಬರುತ್ತಿತ್ತು. 


ಮಂಗಳಾನುವಾದ 


ಪಂ ವಿಶ್ವಪ್ರಜ್ಙಾಚಾರ್ಯರು ಮಂಗಳಾನುವಾದವನ್ನು ಶ್ರೀಮನ್ಯಾಯಸುಧಾ  ಹಾಗೂ ಟಿಪ್ಪಣಿಗಳಲ್ಲಿಯ ಎಲ್ಲ ವಿಷಯಗಳನ್ನೂ ಸಂಗ್ರಹಿಸಿ  "ವೇದಾಪೌರುಷೇಯತ್ವ ವಾದವನ್ನು" ಅತ್ಯಂತ ಸಮರ್ಥವಾಗಿ ಪ್ರತಿಪಾದನೆ ಮಾಡಿದರು. ಎಲ್ಲ ವಿದ್ವಾಂಸರೂ ತಲೆತೂಗಿದರು. ವಿರಾಜಮಾನರಾದ  ಶ್ರೀಶ್ರೀಸತ್ಯಾತ್ಮತೀರ್ಥರು ಪೂರ್ಣ ಹರಿಸಿದರು.


ಶ್ರೀಗಳವರ ಆಶೀರ್ವಾದ 


ಯತಿಕುಲಮುಕುಟರಂತೆ ವಿರಾಜಮಾನರಾದ ಶ್ರೀಶ್ರೀಗಳವರು ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ವಿಶ್ವಪ್ರಜ್ಙಾಚಾರ್ಯರ ಮಂಗಳಾನುವಾದವನ್ನು ನೋಡಿ ಪೂರ್ಣಾನುಗ್ರಹವನ್ನು ಮಾಡುವ ಮುಖಾಂತರ ಪಂ ವಿಶ್ವಪ್ರಜ್ಙಾಚಾರ್ಯರನ್ನೂ ಹಾಗೂ ಪೂಜ್ಯ ಮಾಹುಲೀ ಆಚಾರ್ಯರನ್ನೂ ಹರಿಸಿದರು ಹಾರೈಸಿದರು. 


ಪಂ ವಿದ್ಯಾಧೀಶಾಚಾರ್ಯ ಗುತ್ತಲ್ ಅವರು ವಿಶ್ವಪ್ರಜ್ಙಾಚಾರ್ಯರ ಪಾಂಡಿತ್ಯ ಪರಿಶ್ರಮ ವಿದ್ಯಾರ್ಥವಾತ್ಸಲ್ಯ ವಿದ್ಯಾರ್ಥಿಗಳಿಗಾಗಿ ಇರುವ ಸಮರ್ಪಣಾಭಾವ ಇವುಗಳನ್ನು ಮೆಚ್ಚಿ ಹಾರೈಸಿದರು. 


ಈ ಪ್ರಸಂಗದಲ್ಲಿ‌ಸತ್ಯಧ್ಯಾನವಿದ್ಯಾಪೀಠ ಇದು ಜ್ಙಾನಪೀಠ, ಭಕ್ತಿ ಪೀಠ, ವಾತ್ಸಲ್ಯ ಪೀಠ ಗುಭಕ್ತಿಪೀಠ ಎಂದು ಉದ್ಗರಿಸುವದಲ್ಲದೇ  "ಸತ್ಯಧ್ಯಾನರ ಮನೆ" ಉದ್ಗಾರ ತೆರೆದ ಪಂ ಸತ್ಯಧ್ಯಾನಾಚಾರ್ಯ ಕಟ್ಟಿಯವರು ಹರಿಸಿದರು. 


ಇನ್ನೂ ಕೆಲವರ್ಷಗಳಲ್ಲೇ ನೂರುಜನ ವಿದ್ವಾಂಸರು ಪಂ ವಿಶ್ವಪ್ರಜ್ಙಾಚಾರ್ಯರ ಗರಡಿಯಲ್ಲಿ  ಸಿದ್ಧರಾಗಿ ಬರುತ್ತಾರೆ ಎಂದು ಪಂ ಪ್ರದ್ಯುಮ್ನಾಚಾರ್ಯರು  ಭವಿಷ್ಯ ನುಡಿದರು. ಪಂ ಪದ್ಮನಾಭಾಚಾರ್ಯರು ನಮ್ಮ ವಿದ್ಯಾಪೀಠದಿಂದ ಮುನ್ನೂರು ಸುಂಧಾಮಂಗಳಗಳು ನೇರವೇರುತ್ತವೆ ಎಂದು ತಿಳಿಸಿದರು. 


ಇಂದಿನ ಈ ಶುಭ ಅವಸರದಲ್ಲಿ ಐದು ಸಾವಿರ ಜನರಿಗೆ ನಾನಾ ಭಕ್ಷ್ಯಭೋಜ್ಯಗಳಿಂದ ಕೂಡಿದ  ಅನ್ನಸಂತರ್ಪಣವೂ ವೈಭವದಿಂದ ಆಯಿತು. ಇಂದಿನ ಈ ಕಾಲದ ಯಜಮಾನ  ಅಡಿಗೆಮಾಡುವವರು ಬಡಿಸುವವರು ಶುದ್ಧತೆಯನ್ನು ಬಲ್ಲ ಜನರಿಗೆ, "ಪೂಜ್ಯ ಆಚಾರ್ಯರ ಯಾಜಮಾನ್ಯ, ಪರಿಶುದ್ಧ ಅಡಿಗೆ, ಸ್ವಾಮಿಗಳಿಂದ ರಾಮದೇವರ ನೈವೇದ್ಯ, ವಿದ್ವಾಂಸರೇ ಬಡಿಸುವದು" ಇವುಗಳನ್ನು ಗಮನಿಸಿದಾಗ ಆ ವೈಶ್ವಾನರನೇ ಪ್ರತೀ ಎಲೆಯಿಂದ ಎದ್ದುಬಂದು ಭುಂಜಿಸುತ್ತಿದ್ದ ಎಂದು ಕ್ಷಣಕ್ಷಣಕ್ಕೂ ಅನಿಸುತ್ತಿತ್ತು. 


ನೆರದ ವಿದ್ವಾಂಸರು, ಭಾಗವಹಿಸಿದ ಸದ್ಭಕ್ತರೂ ತುಂಬ ತುಂಬ ಸಂತೋಷದಿಂದ ಹರಿಸಿ ಶ್ರೀಮನ್ಯಾಯಸುಧಾ ಪ್ರಸಾದವನ್ನು ಸ್ವೀಕರಿಸಿ ವಿದ್ಯಾಪೀಠವು ಇತೋಪ್ಯತಿಶಯವಾಗಿ ಅಭಿವೃದ್ಧತಾಂ ಅಭಿವೃದ್ಧತಾಂ ಎಂದು ಉದ್ಗಾರ ತೆಗೆದರು. 


ಈ ಹತ್ತುದಿನದ ಎಲ್ಲ ಕಾರ್ಯಕ್ರಮವೂ ಪೂಜ್ಯ ಮಾಹುಲೀ ಆಚಾರ್ಯರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರೆವೇರಿತು


*✍🏽ನ್ಯಾಸ...*

ಗೋಪಾಲ ದಾಸ

ವಿಜಯಾಶ್ರಮ,

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*