*ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ*
*ಕೃಷ್ಣನ ಭಕ್ತಿಭೂಮಿಯಲ್ಲಿ ಜ್ಙಾನವೈಭವ*
*ಮೋಕ್ಷದಾಯಕ - ಮಥುರಾ*
ಮೋಕ್ಷಕ್ಕೆ ಆವಶ್ಯಕವಾದ ಸಾಧನೆಗಳನ್ನು ಹೆಚ್ಚೆಚ್ಚು ಮಾಡಿಸುವ ಏಳು ಕ್ಷೇತ್ರಗಳಲ್ಲಿ ಅತ್ಯುತ್ತಮ ಕ್ಷೇತ್ರ ಮಥುರಾ ಕ್ಷೇತ್ರ. ಮಥುರಾ ವೃಂದಾವನ ಗೋಕುಲ ಈ ಪ್ರಾಂತಗಳಲ್ಲಿ ಸಚ್ಚಿದಾನಂದ ಮೂರ್ತಿಯಾದ, ನಮ್ಮಲ್ಲೆರ ಇಷ್ಟ ದೈವನಾದ, ಅಖಿಲಪ್ರದನಾದ, ಸರ್ವಾನಿಷ್ಟನಿವಾರಕನಾದ, ಶ್ರೀಕೃಷ್ಣನ ಪಾದಧೂಳಿ ಕಣ ಕಣಕಣಗಳಲ್ಲಿ ಪಡೆದ ಕ್ಷೇತ್ರ ಅದು ಮಥರಾಕ್ಷೇತ್ರ.
ಶ್ರೀಕೃಷ್ಣನ ನಿತ್ಯ ಸನ್ನಿಧಾನವಿರುವ, ಕೃಷ್ಣನ ಅಧಿಷ್ಠಾನ ಪ್ರತಿಮೆಯಂತಿರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಮಥುರಾ. ಕೃಷ್ಣನ ಸನ್ನಿಧಾ ಇರುವದರಿಂದಲೇ ದೇವಾಧಿದೇವತೆಗಳು, ಋಷಿಮುನಿಗಳು, ಸಾಧಕರು, ವಿರಕ್ತರು ಬಂದು ಸಾಧನೆಮಾಡಿಕೊಂಡ ಕ್ಷೇತ್ರ ಮಥುರಾಕ್ಷೇತ್ರ.
*ಭಕ್ತಿ ತುಂಬಿದ ನಾಡು*
ಮಥುರಾ ಪಟ್ಟಣಕ್ಕೆ ದೇಶ ವಿದೇಶಗಳಿಂದ ಭಕ್ತರು ಓಡೋಡಿ ಬರುತ್ತಾರೆ. ಮೈ ಮರೆಯುತ್ತಾರೆ. ನಿರಂತ ಕೃಷ್ಣನಾಮಸ್ಮರಿಸುತ್ತಾರೆ. ಮಥುರಾ ವೃಂದಾವನ ಹಾಗೂ ಗೋವರ್ಧನ ಈ ಕ್ಷೇತ್ರಗಳ ಪ್ರದಕ್ಷಿಣೆ ಹಾಕ್ತಾರೆ. ಪ್ರತಿಯೊಂದು ಕ್ಷೇತ್ರವೂ ಕನಿಷ್ಠ ಹದಿನೈದು km ಗೂ ಹೆಚ್ಚಾದ ಪರಿಸರ ಹೊಂದಿದೆ. ಸಂಪೂರ್ಣ ಊರು ಬೆಟ್ಟಗಳಿಗೆ ಹೆಜ್ಜೆ ನಮಸ್ಕಾರ ಹಾಕ್ತಾರೆ. ಹಾಡು ಭಜನೆ ನಾಮಸ್ಮರಣೆ ಇತ್ಯಾದಿಗಳಿಂದ ಭಕ್ತಿ ಭೂಮಿಯಾಗಿದೆ ಮಥುರಾ ವೃಂದಾವನಕ್ಷೇತ್ರಗಳು.
*ಕೃಷ್ಣ ಜನ್ಮ ಭೂಮಿ*
ಕೃಷ್ಣ ಅವತರಿಸಿ ಆ ಜನ್ಮಭೂಮಿ ಜೈಲು ಒಳಗೆ ಪ್ರವೇಶಿಸಿದರೆ ದೇವಭೂಮಿಯಲ್ಲಿ ಹೋದ ಅನುಭವ. ಜನ್ಮಕಳೆಯುವ ಸ್ವಾಮಿಯ ಜನ್ಮಸ್ಥಾನ. ಇಷ್ಟಾರ್ಥಪ್ರದನ ಜನ್ಮಸ್ಥಾನ. ವಿಶ್ವರೂಪ ತೋರಿದವನ ಜನ್ಮಸ್ಥಾನ. ಗೀತೆ ಉಪದೇಶಿಸಿದವನ ಜನ್ಮಸ್ಥಾನ. ಪಾಂಡವಪ್ರಿಯನ ಜನ್ಮಸ್ಥಾನ. ನಮ್ಮ ಪರಮೇಷ್ಟ ದೈವನ ಜನ್ಮಸ್ಥಾನ. ಊಹೆಗೆ ನಿಲಕದು.
*ಭಕ್ತಿಭೂಮಿಯಲ್ಲಿ, ಭಕ್ತಿಯುಕ್ತ ಜ್ಙಾನದ ಸುರಿಮಳೆ*
ಭಕ್ತಿಭೂಮಿಯಾದ ಮಥುರಾ ಪಟ್ಟಣದಲ್ಲಿ ಜ್ಙಾನಮೇರುವಾದ ಪೂ ಗುರುಗಳಿ (ಮಾಹುಲೀ ಆಚಾರ್ಯರ) ವೈಭವದ ಸಂಪೂರ್ಣ ಶ್ರೀಮದ್ಭಾಗವತ ಜ್ಙಾನದ ಸುರಿಮಳೆ. ಪ್ರತಿನಿತ್ಯವೂ ಪ್ರಾತಃ ಆರು ಗಂಟೆಯಿಂದ ೧೦ ಗಂ ಯವರೆಗೂ ನಿರಂತರ ಭಾಗವತ ಉಪನ್ಯಾಸ. ಒಂದೊಂದು ಸ್ಕಂಧದಲ್ಲಿಯೂ ಇರುವ ಅತ್ಯಪರೂಪದ ವಿಷಗಳು.
ತಮ್ಮ ಜನ್ಮದಿನದ ಪ್ರಯುಕ್ತ ಅನೇಕರ ಅನೇಕವಿಧದ ಪಾರ್ಟಿಗಳಿಗೆ ಕರೆದೊಯ್ದರೆ, ನಮ್ಮ ಗುರುಗಳು ತುಂಬ ವಿಶಿಷ್ಟರೀತಿಯಲ್ಲಿ *ಆರುವತ್ತೈದುವರ್ಷದ ಅನುಭಾವದಿಂದ ಉಂಟಾದ ಅನುಪಾಕದ ಸುರುಚಿಯ ಸವಿಯ ಸಾಗರವನ್ನೇ ಹರಿಸಿ ಪರಮಾನುಗ್ರಹಮಾಡಿದ ಹೆದ್ದೈವ ನಮ್ಮ ಗುರುಗಳು.
ಪಂ ವಿಶ್ವಪ್ರಜ್ಙಾಚಾರ್ಯರು ದಶಮಸ್ಕಂಧದ ಕೃಷ್ಣಾವತಾರದ ವರ್ಣನೆಯನ್ನು ಒಂದು ಹೊಸ ದೃಷ್ಟಿಕೋಣದಲ್ಲಿ ಪ್ರತಿವಿಷಯವನ್ನೂ ಮನಮುಟ್ಟುವ ಹಾಗೆ ಕುಣಿದು ಕುಪ್ಪಳಿಸುವ ಹಾಗೆ ಅನೇಕ ಯುವಕರಿಗೆ ಮಾರ್ಗದರ್ಶನವಾಗುವಂತೆ ಜ್ಙಾನದ ಸವಿಯನ್ನು ಇನ್ನೂ ಹೆಚ್ಚಿನ ರುಚಿಬರುವಂತೆ ಮಾಡಿದರು.
*ಶ್ರೀಮದ್ಭಾಗವತ ಸ್ವಾಹಾಕಾರ*
ಪಂ ವಿಶ್ವಪ್ರಜ್ಙಾಚಾರ್ಯರ ನೇತೃತ್ವದಲ್ಲಿ, ಪೂ ಆಚಾರ್ಯರ ದಿವ್ಯ ಸನ್ನಿಧಾನದಲ್ಲಿ, ಕೃಷ್ಣನ ಭೂಮಿಯಲ್ಲಿ, ಕೃಷ್ಣ ಓಡಾಡಿದ ಸ್ಥಳದಲ್ಲಿ, ಅನೇಕ ವಿದ್ಚಾಂಸರುಗಳಿಂದ ಜರುಗಿದ ವರ್ಣನಾತೀತವಾದ ದಶಮಸ್ಕಂಧ ಭಾಗವತ ಸ್ವಾಹಾಕಾರ.
ಇಪ್ಪತ್ರೈದಕ್ಕೂ ಹೆಚ್ಚಾದ ವಿದ್ವಾಂಸರುಗಳಿಂದ ವೈಭವದ ಸ್ವಾಹಾಕಾರ. ಪ್ರತಿಯೊಬ್ಬರೂ ಸಂಪೂರ್ಣವಾಗಿ ಸ್ವಾಹಾಕಾರವನ್ನು ಮಾಡಿದ್ದು ಇನ್ನೂ ಹೆಚ್ಚಿನ ವೈಭವ. ಉಳಿದೆಲ್ಲ ಹೋಮ ಹವನಗಳ ಅರ್ಥವಾಗುವದಿಲ್ಲ. ಶ್ಲೋಕ ಶ್ಲೋಕ ಅರ್ಥವಾಗುವ, ಚಿಂತನೆಗೆ ತಂದುಕೊಳ್ಳಲು ಸಾಧ್ಯವಿರುವ, ಪ್ರತ್ಯಕ್ಷರಗಳ್ಲಿ ಕೃಷ್ಣನೇ ನಿಂತಿರುವ, ಪ್ರತಿಯೊಬ್ಬರಿಂದ ಸಂಪೂರ್ಣ ದಶಮಸ್ಕಂಧದ ಸ್ವಾಹಾರ.
ಮಧ್ಯೆ ಮಧ್ಯೆ ನಾನಾವಿಧ ದಾನ, ಜಪ, ಪಾರಾಯಣ, ಪಿತೃಗಳ ಆರಾಧನೆ, ನಾಮಸ್ಮರಣೆ, ನೃತ್ಯ. ಜೊತೆಗೆ ವೈಭವದ ರುಚಿರುಚಿಯಾದ ಪರಿಶುದ್ಧವಾದ, ಪೂಜ್ಯ ಆಚಾರ್ಯರಯಾಜಮಾನ್ಯದ, ಪರಿಶುದ್ಧವಾದ, ಶ್ರೀಕೃಷ್ಣಾರ್ಪಿತವಾದ ಅಮೃತದಂಥ ಪರಿಶುದ್ದ ವೈಶ್ವಾನರ ಯಜ್ಙ ಹಾಗೂ ಅನ್ನದಾನ.
*ಜ್ಙಾನಗಂಗೆಯಲ್ಲಿ ಮುಣುಗಿದ ನಂತರ ಭಕ್ತಿಯೆಂಬ ಆಕಾಶದಲ್ಲಿ ವಿಹಾರ*
ಯಜ್ಙ ದಾನ ತಪಸ್ಸು ಜ್ಙಾನಸಂಪಾದನೆ ಆದತರುವಾಯ ಭಕ್ತಿ ಮಾರ್ಗಗಳಲ್ಲಿ ಮಥುರಾ ವೃಂದಾವನ ಗೋವರ್ಧನಗಿರಿ ಗೋಕುಲ ರಮಣರೇಥಿ ಇತ್ಯಾದಿ ಕ್ಷೇತ್ರಗಳಲ್ಲಿ ಬವಕ್ತಿಪಥದಲ್ಲಿ ವಿಹಾರ.
ಅಜ್ಙಾನಾಂಧಕಾರವನ್ನು ಕಳಚಿಕೊಳ್ಳಲು ದೀಪಾರಾಧನೆ, ಇಷ್ಟಾರ್ಥಗಳನ್ನು ಪಡೆಯಲು ಉಂಜಲೋತ್ಸವ, ಕೊನೆಗೆ ಉಪಹಾರ.
ರಾತ್ರಿ ಹನ್ನೆರಡು ಒಂದರವರೆಗೆ ಗುಗಳೊಂದಿಗೆ ಶ್ರಕೃಷ್ಣನ ಆನುಭಾವಿಕ ಕಥಾನಕಗಳನ್ನು ಅನುಭವದಕಡಲಿನಲ್ಲಿ ಮಿಂದಾಡುವದು. ಹೀಗೆ ಒಂದೊಂದೂ ವರ್ಣನಾತೀತ.
*ಉತ್ತಮ ಸ್ವಾರ್ಥಿಗಳು ನಮ್ಮ ಗುರುಗಳು*
ಸಾಮಾನ್ಯವಾಗಿ ತಾವು ತಮ್ಮ ಸಾಧನೆ ತಮಗೆ ಬಹಳ ಮುಖ್ಯ. ಅಂತಹ ಈ ಕಾಲದಲ್ಲಿ ನಮ್ಮಂತಹ ನೂರಾರು ಭಕ್ತರನ್ನು ತಮ್ಮವರನ್ನಾಗಿ ಮಾಡಿಕೊಂಡು ತಮ್ಮ ಸಾಧನಾಪಥದಲ್ಲಿ ನಮ್ಮಂತಹವರನ್ನೂ ಕರೆದೊಯ್ದು ಸಾಧನೆ ಮಾಡಿಸಿ, ಸ್ವಯಂ ಅನುಗ್ರಹಿಸಿ, ಕೃಷ್ಣನಿಗೆ ಪ್ರೀತಿಪಾತ್ರರಾಗುವಂತೆ ಮಾಡುವದೇನಿದೆ ಅದು ಕೇವಲ ನಮ್ಮ ಗುರುಗಳು ನಮ್ಮನ್ನು ತಮ್ಮವರೆಂದು ಭಾವಿಸಿಕೊಂಡದ್ದಕ್ಕೆ ಮಾತ್ರ. ಅಂತಹ *ಸಂಪೂರ್ಣ ಕರುಣಾಪೂರ್ಣವಾಗಿ ಅನುಗ್ರಹೋನ್ಮುಖರಾಗಿದ್ದರು ಪೂ ಆಚಾರ್ಯರು. ಗುರುಚರಣಗಳಿಗೆ ಅನಂತ ಅನಂತ ಅನಂತ ವಂದನೆಗಳನ್ನು ಮಾತ್ರ ಸಲ್ಲಿಸಲು ನನಗೆ ಸಾಧ್ಯ....🙏🏽🙏🏽🙏🏽*
step 1 ರಿಂಸ 8 ವರೆಗೆ ದ್ವಾರಕಾಕ್ಕೆ ಬರಲು ಆದೇಶಿಸಿಯೇ, ಸಂಕಲ್ಪವನ್ನು ಮಾಡಿಸಿಯೇ ಮುಂದೂ ಸಾಧನೆ ನಡೆಯಬೇಕು ಎಂಬ ಭಾವನಯಲ್ಲೆ ಅನುಗ್ರಹಿಸಿದರು.
Comments