Posts

Showing posts from June, 2019

*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು*

Image
*ಜಯರಾಯರ ಅನುಗ್ರಹದ ಕುಡಿಯೇ ಶ್ರೀ ವಿಜಯೀಂದ್ರರು* ಇಂದು ಮಹಾಮಹಿಮೋತರಾದ ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಮಹೋತ್ಸವ. ಶ್ರೀ ವಿಜಯೀಂದ್ರರ ಅನುಗ್ರಹದಿಂದ ನಾವು ಇಂದು ವಿಜಯಿ ಆಗುವ ಲಕ್ಷಣಗಳು ತೋರುತ್ತಿವೆ. ವಿಜಯೀಂದ್ರರಂತಹ ಪ್ರಭುಗಳು ಇರದಿದ್ದರೆ ನಮಗೆ ವಿಜಯ ಕನಸಿನ ಕಮಲವಾಗಬಹುದಾಗಿತ್ತು. ಶ್ರೀ ವಿಜಯೀಂದ್ರರು ಇರುವಾಗಲೂ ನಾವು ವಿಜಯಿಗಳಾಗಿಲ್ಲ ಇದು ನಮ್ಮ ದೌರ್ಭಾಗ್ಯ.  ಶ್ರೀಶ್ರೀ ವಿಜಯೀಂದ್ರ ಗುರುಸಾರ್ವಭೌಮರು ತಾವು ಸ್ವತಹ ವಿಜಯಿಗಳಾಗಿ, ನಂಬಿದ  ನಮ್ಮೆಲ್ಲರನ್ನೂ ವಿಜಯಿಗಳನ್ನಾಗಿ ಮಾಡಲು ಅವರಿಗೆಲ್ಲಿಯದು ಶಕ್ತಿ ?? ಎಂದು ಯೋಚಿಸಿದರೆ...  ಉತ್ತರವಿಷ್ಟೆ *ಮಾನ್ಯಖೇಟದ ಜಯರಾಯರಲ್ಲಿಯ ನಂಬಿಕೆ, ಜಯರಾಯರ ಅನುಗ್ರಹ.* ಅಂತೆಯೇ ವಿಜಯಿಗಳು ಅಷ್ಟೇ ಅಲ್ಲದೆ *ಜಗನ್ಮಾನ್ಯರೂ ಆದರು.* *ಶ್ರೀಮಟ್ಟೀಕಾಕೃತ್ಪಾದರ ಮಹಾನ್ ಭಕ್ತರು* ಎಪ್ಪತ್ತೆರಡು ವಿದ್ಯೆಗಳಲ್ಲಿ ಪಾರಂಗತರು ನಮ್ಮ ಇಂದಿನ ಕಥಾನಾಯಕರು ಶ್ರೀವಿಜಯೀಂದ್ರರು. ಎಲ್ಲ ವಿದ್ಯೆಗಳೂ ಒಲೆದು ಬಂದಿರುವದು, ಮತ್ತು ಆ ವಿದ್ಯೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವದು ಜಯರಾಯರ ಅನುಗ್ರಹದ ಬಲದಿಂದಲೇ.  ಪ್ರಭುಗಳ ಒಂದು ಮಹಿಮೆ ಸುಂದರ ಕಥೆ... ಸಕಲವಿದ್ಯೆಗಳಲ್ಲಿಯೂ ಜಯ ವಿಜಯೀಂದ್ರರದ್ದು. ಒಂದೊಂದು ವಿದ್ಯೆಯಲ್ಲಿ ಪಾರಂಗತರಾದ ನಾನಾ ವಾದಿವಿದ್ವಾಂಸರುಗಳೆಲ್ಲ ಇವರ ವಿದ್ಯೆಯಮುಂದೆ ತಲೆಬಾಗುವದೊಂದೇ ಫಲವಾಗಿತ್ತು. ಕೊನೆಯ ಅಸ್ತ್ರವಾಗಿ *ಬ್ರಹ...

*ಭೂಮಿ ಹಾಗೂ ಜಲ.. ನಮ್ಮವರು*

Image
*ಭೂಮಿ ಹಾ ಗೂ ಜಲ.. ನಮ್ಮವರು* ಭೂಮಿ ಹಾಗೂ ಜಲ (ನೀರು) ಇವುಗಳ ಅನ್ಯೋನ್ಯತೆ,  ಇವುಗಳಲ್ಲಿಯ ಹೊಂದಾಣಿಕೆ ಉತ್ತಮವಾಗಿರುವಂತಹದ್ದು. ಅಂತೆಯೆ ಭೂ ಜಲ ಗಳು ಸೃಷ್ಟಿಯಾದಾಗಿನಿಂದ ಕೂಡಿ ಇದ್ದರೂ ಒಂದರೆಕ್ಷಣ ವೈ ಮನಸ್ಯವಿಲ್ಲ. ಪರಸ್ಪರ ಉಪಕಾರ ಪ್ರತ್ಯುಪಕಾರಗಳ ಪ್ರತಿಸ್ಪಂದನೆಯಿಂದ  ಈ ವಿಶಿಷ್ಟ ತರಹದ ಅನ್ಯೋನ್ಯತೆ ಗಾಢತೆ ನಿಗೂಢವಾಗಿಯೇ ಉಳಿಸಿಕೊಂಡಿವೆ. ಪೃಥ್ವಿಜಲಗಳಂತೆಯೇ ನಾವು ಇರುವದು ತುಂಬ ಉತ್ತಮ ಎಂದೆನಿಸುತ್ತದೆ.  *ಭೂಮಿಗೆ ಜಲ ಹೊಂದಿಕೊಂಡಿದ್ದೇ ಹೆಚ್ಚು...* ನೀರಿನ ಸ್ವಭಾವ ಹರಿಯುವದು. ಆ ಹರಿಯುವಿಕೆಗೆ ಸ್ಥಳ ಕೊಟ್ಟಿರುವದು ಭೂಮಿ. ಹೀಗಿರುವಾಗ ಭೂಮಿ ಹೇಗೆಲ್ಲ ಸ್ಥಳಕೊಟ್ಟಿದೆ ಹಾಗೆ ಹರಿಯುತ್ತಾ ಸಾಗುತ್ತದೆ. ಅಂಕವಂಕಾಗಿ ಹರಿಯಬಹುದು, ನೇರವಾಗಿಯೂ ಹರಿಯಬಹುದು. ಪೃಥಿವಿ ಎತ್ತರವಾಗಿದ್ದರೆ ತಿರುಗಿ ಉಲ್ಟಾ ಹರಿಯುತ್ತದೆ,  ಹದವಾಗಿದ್ದರೆ ಇಂಗಿ ಹೋಗತ್ತೆ.. ಅಂತೂ ಪೃಥ್ವಿ ಹೇಗಿರತ್ತೆ ಹಾಗೆ ಹೊಂದಿಕೊಂಡು ಹೋಗತ್ತೆ ಅಂತೆಯೆ ತನ್ನ ಗಮ್ಯವನ್ನು ತಾನು ಸಹಜವಾಗಿ ಸೇರುತ್ತದೆ. *ತನ್ನ ಗಮ್ಯ ಸೇರುವದೇ ಜಲಕ್ಕೆ ಅತಿಮುಖ್ಯವೇ ಹೊರತು, ಈ ಪೃಥ್ವಿ ಸರಿಯಾಗಿ ಯಾಕೆ ಹಾದಿಕೊಟ್ಟಿಲ್ಲ ಎಂದು ಜಗಳ ಮಾಡ್ತಾ ಕೂಡುವದು ಅಲ್ಲ.* ಹಾಗೆಯೇ... ನಮಗೆ ನಮ್ಮ ಗಮ್ಯ ಸ್ಥಾನ ತಲುಪುವ ಉದ್ದೇಶ್ಯವಿದ್ದರೆ ನಿನ್ನವರೊಟ್ಟಿಗೆ ನೀನು ಹೊಂದಿಕೊಂಡು ಅವರು ಹೇಗಿರುತ್ತಾರೆಯೋ ಹಾಗೆ ಅವರೆದುರಿಗೆ ತಗ್ಗಿ ಬಗ್ಗಿ, ಮಾರ್ಗಾಂತರ...

*ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ..*

*ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ..* "ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ" ನೀರಿನಲ್ಲಿಯೇ ನಾವು ಇದ್ದೇವೆ ಆದರೆ ಮತ್ತೂ ನೀರಡಿಕೆ ನೀರು ಬೇಕು ಎಂದರಚಿದರೆ ನಮ್ಮನ್ನು ನಾಲ್ಕು ಜನ ಏನನಬಹುದು... ?? ಹೀಗಿದೆ ಇಂದಿನ  ನಮ್ಮ ಅವಸ್ಥೆ.  ಮಾನವನ ಬದುಕು ಸುಖಕ್ಕಾಗಿ. ಸುಖವಿರುವದು ಎಮ್ಮಲ್ಲಿಯೇ. ಆದರೆ ಹುಡುಕುತ್ತಿರುವದು ಮಾತ್ರ ಜಗತ್ತಿನಲ್ಲೆಲ್ಲ.  ಸುಖ‌ ಕೊಡುವವ ದೇವ.‌ ಸ್ವಯಂ ಸುಖ ಪೂರ್ಣನಾಗಿ ನಮ್ಮಲ್ಲಿಯೇ ಇದ್ದಾನೆ ಆದರೂ ಆ ಸುಖ ಕೊಡುವ, ಸುಖಪೂರ್ಣ ದೇವರನ್ನು ಅವಜ್ಙೆ ಮಾಡಿ,  ತಿರಸ್ಕರಿಸಿ, ಮರೆತು ಬಾಹ್ಯ ನೂರಾರು ಪದಾರ್ಥಗಳಿಂದ ಸುಖವನ್ನು ಹಂಬಲಿಸುತ್ತಿದ್ದೇವೆ.  ಇಂತಹ ನಮ್ಮನ್ಮು ಮೂರ್ಖ ಅನ್ನದೆ ಏನ್ನೇನು ತಾನೆ ಹೇಳಿಯಾರು...  ಸರ್ವ ಸಮೃದ್ಧಿ ಕೊಡುವ ಗಾಯತ್ರಿ ಇದೆ. ದೇವತೆಗಳು ಇದ್ದಾರೆ. ತತ್ವಜ್ಙಾನವಿದೆ. ಭಕ್ತಿ ಇದೆ ,ಸ್ವಯಂ ದೇವರು ಇದ್ದಸನೆ ಇವಗಳನ್ನು ಗಾಳಿಗೆ ತೂರಿ ಏಂಟಾರು ಗಂಟೆ ದುಡಿದರೂ ಹಣ ಬಂದೀತು ಸುಖ ಸಮೃದ್ಧಿ ವೈಭವ ಸಂತೋಷ ಬಾರದು.  *ಸುಖ ಸಿಗುವದು ಉಚಿತವೇ ಹೊರತು ಹಣದಿಂದ ಸಿಗುವದಿಲ್ಲ* "ಯಾವದು ಉಚಿತವೋ ಅದು ಕಿಮ್ಮತ್ತು ಕಳೆದುಕೊಳ್ಳುತ್ತದೆ. ಯಾವುದಕ್ಕೆ ಬೆಲೆ ಇದೆಯೋ ಅದಕ್ಕೆ ತುಂಬ ಬೇಡಿಕೆ" ಅಂತೆಯೆ ಹಿತ್ತಲ ಗಿಡ ಮದ್ದಲ್ಲ ಅಂ...

*ಭಕ್ತ್ಯೈವ - ತುಷ್ಯತಿ*

Image
*ಭಕ್ತ್ಯೈವ - ತುಷ್ಯತಿ* ಸಾಧಕನಾದ ಜೀವ,  ಸಿದ್ದಿಕೊಡುವವ ದೇವ. "ಸಾಧಕನಲ್ಲಿ ಇರುವವದು ಮೊಟ್ಟ ಮೊದಲಗುಣ  ಭಕ್ತಿ ಎಂದಾದರೆ. ದೇವನಿಂದ ಪಡೆಯುವ ಅತೀ ಶ್ರೇಷ್ಠ ಫಲ ಭಗತ್ಪ್ರೀತಿ"  ಇವೆರಡೂ ಇರುವದು ಅನಿವಾರ್ಯ.  ಅಂತೆಯೇ ಶ್ರೀಮದಾಚಾರ್ಯರು *ಭಕ್ತ್ಯೈವ ತುಷ್ಯತಿ* ಭಕ್ತಿಯಿಂದಲೆ ಭಗವತ್ಪ್ರೀತಿ ಎಂದರು.  ಈ ವಾಕ್ಯಕ್ಕೆ ಮೂಲಾಧಾರವಾಗಿ ವೇದವ್ಯಾಸರು *ಭಕ್ತಪ್ರಿಯಮ್* ಎಂದು ಹೇಳಿದರು.  *ಜ್ಙಾನೇನೈವ ಭಕ್ತಿಃ* ಭಕ್ತಿ ಬರುವದು ಉಂಟಾಗುವದು  ಕೈ ಮುಗುದೆ, ಕಾಲು ಮುಗುದೆ, ಉರುಳುಹಾಕಿದೆ, ಇನ್ನೇನೋ ದೈಹಿಕ  ನೂರು ಮಾಡಿದರೂ ಅದು ಭಕ್ತಿ ಎಂದಿನಿಸದು. ಅವುಗಳಿಂದ ಅಥವಾ ಕೈ ಮುಗಿ ಎಂದರೆ ಭಕ್ತಿ ಪುಟ್ಟದು. "ನಾನಾವಿಧ ಗುಣಗಳ ಜ್ಙಾನದಲ್ಲಿ ಮುಳುಗಿದಾಗಲೇ ಭಕ್ತಿ ಪುಟ್ಟುವದು" ಜ್ಙಾನ ಬೆಳೆದಂತೆ ಬೆಳಿಯುವದು. ಜ್ಙಾನಶುದ್ಧವಾದಂತೆ ಭಕ್ತಿ ದೃಢವಾಗುವದು. ಭಕ್ತಿ ಪುಟ್ಟಲು ಜ್ಙಾನವೇ ಮೂಲ. ಜ್ಙಾನವಿಲ್ಲದ ಭಕ್ತಿ "ಕುರುಡಭಕ್ತಿ" ಎಂದೇ ಅನಿಸುವದು. ಭಕ್ತಿ ಹಾಗಾಗಲೇ ಬಾರದು ಎಂಬ ಬಯಕೆ ಇರುವವರೆಲ್ಲರೂ ತತ್ವಜ್ಙಾನದಲ್ಲಿಯೇ ತೊಡಗಿಕೊಂಡರು.  *ವೈರಾಗ್ಯದಿಂದಲೇ ಜ್ಙಾನ* ವಿಜಯದಾಸರು ಹೇಳಿದಂತೆ "ಜ್ಙಾನವಿಲ್ಲದೇ ಮೋಕ್ಷವಿಲ್ಲ*  ಎಂದು ಹೇಳಿದಂತೆ ಮುಕ್ತಿಗೋಸ್ಕರ ಭಕ್ತಿ, ಭಕ್ತಿಗೋಸ್ಕರ ಜ್ಙಾನ. ಜ್ಙಾನಕ್ಕಾಗಿ ವೈರಾಗ್ಯ.  ಭೋಗಿಯಾದವಗೆ ಜ್ಙಾನ ಹಗಲುಗನಸಾಗಬಹುದು. ಅದು ನ...

*ಹಾದಿಯಲ್ಲಿ ನೂರು ರೂಪಾಯಿ ಸಿಕ್ಕರೆ.......*

*ಹಾದಿಯಲ್ಲಿ ನೂರು ರೂಪಾಯಿ ಸಿಕ್ಕರೆ.......* ಜೀವನದಲ್ಲಿ ಹಣವೇ ಮುಖ್ಯವಲ್ಲ ಹಣವೂ ಮುಖ್ಯ ಅಷ್ಟೆ. ಆ ಹಣ ಎಷ್ಟು ಉತ್ತಮ ಪ್ರಾಮಾಣಿಕವೋ ಅಷ್ಟು ಆ ಹಣ ಸಾರ್ಥಕ. ಎಷ್ಟು ಅಪ್ರಾಮಾಣಿಕವೋ ಅಷ್ಟು ನಮಗೆ ಅನುಪಯುಕ್ತ.  ಹಣ ಹೊಟ್ಟೆ ತುಂಬಿಸಲು. ಪ್ರಾಮಾಣಿಕ ಹಣ ದೇವರಿಗೆ ನಿವೇದಿತ ಪದಾರ್ಥದಿಂದ ಹೊಟ್ಟೆ ತುಂಬಿಸಿದರೆ, ಅಪ್ರಾಮಾಣಿಕ ಹಣ ರೋಡಿನಲ್ಲಿ ಗೋಲಗಪ್ಪಾ ತಿನಿಸಿ ಹೊಟ್ಟೆ ತುಂಬಿಸೀತು. ಪ್ರಾಮಾಣಿಕ ಹಣ ನೆಮ್ಮದಿಯ ಉಸಿರಾಡಿಸಲು ಅನುವಾದರೆ, ಅಪ್ರಾಮಾಣಿಕ ಹಣ ಶಾಂತಿ ಸಮೃದ್ಧಿ ನೆಮ್ಮದಿಯನ್ನೇ ಕೆಡಿಸಿ ಹಾಕುತ್ತದೆ.  ನಾವು ವಿದ್ಯಾಪೀಠದಲ್ಲಿ ಇರುವಾಗ ಎಲ್ಲಿಯಾದರೂ "ಒಂದುಡ್ಡು ಸಿಕ್ಕರೆ, ಹಿರಿಯರು ಹೆಳುತ್ತಿದ್ದರು ಹುಂಡಿಯಲ್ಲಿ ಹಾಕು" ಎಂದು ಹೇಳಿ ಹಾಕಿಸುತ್ತಿದ್ದರು. ಏಕೇ ಎಂದು ಕೇಳಿದರೆ ಈಗ ಅರ್ಥವಾಗುದಿಲ್ಲ. ಹೇಳಿದ್ದು ಕೇಳಬೇಕು ಎಂದಷ್ಟೆ ಹೇಳುತ್ತಿದ್ದರು. ಆ ಮಾತಿನ ಅರ್ಥ ಮೊನ್ನೆ ನಮ್ಮ ಗೆಳೆಯನ ಜೊತೆಗೆ ಸುಮ್ಮನೆ ಮಾತಾಡುತ್ತಿರುವಾಗ ಸ್ಪಷ್ಟವಾಯಿತು.  ಒಬ್ಬ ಬಂದದ್ದರಲ್ಲಿ ತಿಂದು ಉಂಡು ಜೀವನ ನಡೆಸುವ ಬಡವ. ಬಹಳ ದುಡ್ಡಿಲ್ಲ. ದಿನದ ಒಪ್ಪತ್ತು ಊಟಕ್ಕೂ ಕಷ್ಟ. ಆದರೆ ಇದ್ದದ್ದರಲ್ಲಿ ಬಂದದ್ದರಲ್ಲಿ ತುಂಬ ಸಮಾಧಾನ. ಕಷ್ಟ ಎಂದು ಎಂದಿಗೂ ಚಿಂತೆ ಮಾಡಿಲ್ಲ. ಎಂದಿಗೂ ಟೆನ್ಶನ್ ಮಾಡಿಕೊಂಡ ಉದಾಹರಣೆಯೇ ಇಲ್ಲ. ಯಾಕೆಂದರೆ ಅವ ಒಬ್ಬ ಸಾಮಾನ್ಯ ಬಡವ.  ಅವನಿಗೆ ಒಂದು ದಿನ ಬೆಳಗಿನ ಝಾವಾ ಹಾದಿಯಲ್ಲಿ ...

*ಯೋಗವೊಂದೇ ಮನಸ್ಸು - ದೇಹ - ಇಂದ್ರಿಯಗಳ ಪೋಷಕ*

Image
*ಯೋಗವೊಂದೇ ಮನಸ್ಸು - ದೇಹ - ಇಂದ್ರಿಯಗಳ ಪೋಷಕ* ಭಾರತೀಯ ಪ್ರಾಚೀನರು ತಮ್ಮ ದೀರ್ಘಕಾಲೀನ ಸುಖ ಶಾಂತಿ ಸಮೃದ್ಧಿಗೆ ಆರಿಸಿಕೊಂಡ  ಸಂಸ್ಕೃತಿಗಳು ಅನೇಕ. ಅವುಗಳಲ್ಲಿ "ಯೋಗವೂ" ಒಂದು. ಪ್ರಾಚೀನರಲ್ಲಿ ಬಡತನವಿತ್ತು, ಒತ್ತಡವಿರಲಿಲ್ಲ. ದಾರಿದ್ರ್ಯ ಇತ್ತು ಹಪಹಪಿ ಇರಲಿಲ್ಲ. ಒತ್ತಡ ಬರಲು ಆಸ್ಪದವೇ ಇರಲಿಲ್ಲ. ಅವರ ಜೀವನದಲ್ಲಿ ಯೋಗ ಹಾಸು ಹೊಕ್ಕಾಗಿತ್ತು.  "ಅಷ್ಟಾಂಗ ಯೋಗ" "ಯಮ - ನಿಯಮ - ಆಸನ-  ಪ್ರಾಣಾಯಾಮ- ಪ್ರತ್ಯಾಹಾರ - ಧಾರಣ - ಧ್ಯಾನ - ಸಮಾಧಿ" ಈ ರೂಪದಲ್ಲಿ ನಿರಂತರ ಯೋಗ ನಡೀತಾ ಇತ್ತು. ಈ ಎಂಟರಲ್ಲಿ "ದೇಹ - ಇಂದ್ರಿಯ - ಮನಸ್ಸು -  ಆತ್ಮಾ ಇವೆಲ್ಲದಕ್ಕೂ ಅಭೂತಪೂರ್ವ ಶಕ್ತಿ ಒದಗಿಸುವ ಸಾಮರ್ಥ್ಯ ಅಡಗಿದೆ.  *ರೋಗ ಬಂದಮೇಲೆ ಯೋಗ" ಕಂಡದ್ದು ತಿನ್ನುವಾಸೆ. ಯಾವುದರಲ್ಲಿಯೂ ನಿಯಮವಿಲ್ಲ. ಪ್ರಾಣಾಯಾಮ ಎಂದರೆ ಮೂಗು ಹಿಡಿತಾರೆಯೇ ಹೊರತು ಹೇಗೆ ಮಾಡಬೇಕು ತಿಳಿದಿಲ್ಲ. ಧ್ಯಾನ ಧಾರಣ ಸಮಾಧಿ ದೂರದ ಮಾತೇ. ಶುಗರ್ ಬಿಪಿ ಥೈರಾಡ್ ಮೊಣಕಾಲು ನೋವು ಇತ್ಯಾದಿ ಇತ್ಯಾದಿ ಬಂದ ಮೇಲೆ ಯೋಗಕ್ಕೆ ಮೊರೆ ಹೋಗ್ತೇವೆ...  *ರೋಗ ಬಾರದಿರಲೇ ಯೋಗ....* ಎಂಟನೇಯವರ್ಷ ಬರುವದರಲ್ಲಿ ಮಾತೃ ಭೋಜನ ಮುಗಿಯಿತೋ ಅವನಿಗೆ ತಿನ್ನುವ ಉಣ್ಣುವ ಆಹಾರಕ್ಕೆ ನಿಯಮ ಬಂತು. ಉಡುವ ತೊಡುವ ಬಟ್ಟೆಗೆ ನಿಯಮ ಬಂತು. ಪ್ರಾಣಾಯಾಮ ಕಲಿಸಿಕೊಟ್ಟರು, ಸೂರ್ಯ ನಮಸ್ಕಾರ ಹಾಕಿಸಿದರು, ಪದ್ಮಾಸನದಲ...

*ನಾಳೆ ಬಾ....... ಎಂದು ಸತ್ಯಪೂರ್ಣರೇ ಬರಿಯಬೇಕು*

Image
"ನಾಳೆ ಬಾ" ಎಂದು ಸತ್ಯಪೂರ್ಣರೇ ಬರಿಯಬೇಕು "ನಾಳೆ ಬಾ" ಎಂದು ಮನೆಯ ಬಾಗಿಲಿಗೆ ಬರೆದಿರುವದನ್ನು ನಾವು ಹಿಂದೇ ನೋಡಿದ್ದೇವೆ. ಪುನಹ ಇಂದು ನೋಡೊದಾಗ ಮತ್ತೆ ನೆನಪಾಯ್ತು. ಯಾಕೆ ಹಾಗೆ ಬರೆದಿರುತ್ತಾರೆ ಎಂದರೆ, ಮನೆಗೆ ನಿತ್ಯವೂ ಮಾರಿ ಬರುತ್ತಾಳೆ, ಒಳಬಂದರೆ ಅವಳು ತುಂಬ ಪೀಡೆ ಕೊಡುತ್ತಾಳೆ, "ನಾಳೆ ಬಾ" ಎಂದು ಬರೆದಾಗ ಅದನ್ನು ಓದಿ ತಿರುಗಿ ಹೋಗುತ್ತಾಳೆ. ಪುನಹ ನಾಳೆ ಬಂದಾಗ ಅದೇರೀತಿ ಇರುತ್ತದೆ. ಅಂತೂ ಆ ಮಾರಿ ಒಳಬರಲು ಬಿಡಬಾರದು ಎಂದು "ನಾಳೆ ಬಾ" ಎಂದು ಬರೆಯುವ ರೂಢಿ. ಇದು ಇರಲಿ..  *ಈ ತರಹದ ಮಾರಿ ಗಳು ಇಂದು ಅನೇಕ ಇವೆ..* ನಮ್ಮ ಮೇಲೆ ಧಾಳಿ ಮಾಡಿ, ನಮ್ಮನ್ನು ಉನ್ನತಿಗೆ ಏರಿಸದಂತೆ ಮಾಡಿ ನಿಂತ ಸ್ಥಳದಿಂದ ಕದಲಿಸದ ಸ್ಥಿರವಾಗಿ ನಿಲ್ಲಿಸುವ ಅಥವಾ ಇನ್ನೂ ಕೆಳಗೆ ಇಳಿಸುವ  ಅನೇಕ ಮಾರಿಗಳಲ್ಲಿ ಒಂದು‌ ಮಾಹಾಮಾರಿ  ಅದು *ನಾಳೆ ಮಾಡುವೆ* ಎಂಬ ಆಲಸ್ಯ.  ಸಂಧ್ಯಾವಂದನೆ ಮಾಡು "ನಾಳೆಯಿಂದ ಆರಂಭಿಸುವೆ. ಜಪ ಮಾಡು ನಾಳೆ. ದೇವರ ಪೂಜೆ ಮಾಡು ನಾಳೆ. ಓದು ನಾಳೆಯಿಂದ ಪಕ್ಕ. ಇನ್ನೇನೋ ಕೆಲಸ ಮಾಡು ನಾಳೆ ಇಂದ ನಿಶ್ಚಿತ. ಏಕಾದಶಿ ಮಾಡು ನಾಳೆ. ಧರ್ಮಕರ್ಮ ಆರಂಭಿಸು ನಾಳೆ. ಹೀಗೆ ಪ್ರತಿಯೊಂದೂ ನಾಳೆ ಇಂದ ಅಂತ ಅಂದು ಕೊಂಡರೆ "ನಾಳೆಯ ದಿನ ಇಂದು ಆದಾಗ, ಪುನಹ ನಾಳೆ ಎಂಬ ವರಲು ಮಾತು ಬರುವದು ಸಹಜ" ಹೀಗೆ ಪ್ರತಿಯೊಂದು ಸಾಧನೆಯನ್ನೂ ಮುಂದೂಡುತ್ತಾ ಸಾಗಿಸುವದು...

*ಒಲೆಯ ಮೇಲೆ ಅಕ್ಕಿ ಇಟ್ಟು, ಹುಳಿಯಾಗಿಲ್ಲ ಎಂದು ಹತಾಶರಾದರೆ............*

*ಒಲೆಯ ಮೇಲೆ ಅಕ್ಕಿ ಇಟ್ಟು, ಹುಳಿಯಾಗಿಲ್ಲ ಎಂದು ಹತಾಶರಾದರೆ............* "ಸಾಧನ ಶರೀರವಿದು" "ಸಾಧನೆಯ ಮಾರ್ಗದಲ್ಲಿಯೇ ಜನನ" "ಸಾಧಮನೆಯ ಮಾರ್ಗಪ್ರೇರಿಸುವ ಗುರುಗಳು" "ನಮಗೂ  ಸಾಧನೆಯ ತಿಳುವಳಿಕೆ ಇದೆ" "ಸಾಧನೆಯನ್ನೂ ಮಾಡುತ್ತೇವೆ" ಇಂದಿನ ಹೊರ ಪ್ರಪಂಚವನ್ನು ಗಮನಿಸಿದಾಗ ಒಂದರ್ಥವಾಗುತ್ತದೆ "ಇಷ್ಟೆಲ್ಲ ದೊರಕಿ ಬಂದಿರುವದು ಕೇವಲ ದೇವರ ಅನಂತ ಹಾಗೂ ಅಪಾರ ಕರುಣೆಯಿಂದ ಮಾತ್ರ" ಎಂದು.  *ಸಾಧನೆ ಎಂದರೆ ಏನು....*  ಸಾಧನೆಗಳು ಇರುವದೇ ಪಡೆಯಲು ಸಾಧಿಸಲು.‌ ಉದ್ದೇಶಿತ ಫಲ ಪಡೆಯದ ಸಾಧನೆ / ಸಿದ್ಧಿಯಾಗದ ಸಿದ್ಧಿಯನ್ನೆ ತಂದು ಕೊಡದ ಸಾಧ‌ನೆ ಸಾಧನೆಯೆಂದೇ ಅನಿಸದು.  *ಸಾಧನೆ ಮಾಡಿದ್ದೇನೆ ಸಿದ್ಧಿಸಿಲ್ಲವೇಕೆ... ???* ತೊಗರೆ ಬೇಳೆ ವಲಿಯಮೇಲೆ ಇಟ್ಡಿದ್ದೇನೆ ಅನ್ನವೇಕಾಗಿಲ್ಲ... ?? ಎಂದು ಯೋಚಿಸಿ ಕಂಗಾಲಾಗಿ  ತಲಿಕೆಡಿಸಿಕೊಂಡು ಅಡಿಗೆ ಮಾಡುವದೇ ಬಿಟ್ಡರೆ ನನ್ನಂತಹ ಮೂರ್ಖ ಇನ್ನಿಬ್ಬಿರಲಾರರು.  ಅದೇರೀತಿಯಾಗಿ,  ಸಂಧ್ಯಾವಂದನೆ/ ಜಪ/ ದೇವರ ಪೂಜೆ/ ಅಧ್ಯಯನ/ ಚಿಂತನೆ/ ಮೊದಲಾದ ಎಲ್ಲ ಎಲ್ಲ ಸಾಧನೆಗಳೂ  "ಭಕ್ತಿ ಸಿದ್ಧಿಗೋಸ್ಕರ/ ವಿಷ್ಣು ಪ್ರೀತಿಗೋಸ್ಕರವೇ. ಆ ಎಲ್ಲ ತರಹದ  ಸಾಧನೆಗಳನ್ನೂ ಮಾಡಿ"  ನನ್ನ ಮಾನಸಿಕವಾದ ಕ್ಷಣಿಕವಾದ ಕಂಡ ಅಪೇಕ್ಷಗಳು ಈಡೇರಿಲ್ಲ ಎಂದು ಬೇಸರಿಸಿಕೊಂಡು ದೇವರಿಂದಲೇ ವಿಮುಖರಾದರೆ "ಆ ಸಾಧ್ಯ ಸಿದ್...

*ಶ್ರದ್ಧೆಯಿಂದ ಸಿದ್ಧಿ.....*

Image
*ಶ್ರದ್ಧೆಯಿಂದ ಸಿದ್ಧಿ.....* ಯಾವುದೇ ಕಾರ್ಯ ನೂರರಷ್ಟು ಪ್ರತಿಫಲ‌ ನೀಡಬೇಕಾದರೆ ಅವನ ಬೆನ್ನಿಗೆ ಆ ಕರ್ಯದ ವಿಷಯದಲ್ಲಿ ನಿತರಾಂ ಶ್ರದ್ಧೆ ಇರಬೇಕು. *ಶ್ರದ್ಧಾವಾನ್ ಲಭತೇ ಪೂರ್ಣಂ* ಹೀಗೆ ಅನೇಕ ಮಾತುಗಳು ಶ್ರದ್ಧೆಯ ವಿಷಯದಲ್ಲಿ ತೋರಿ ಬರುತ್ತವೆ.  ಶ್ರದ್ಧೆಯಿಂದಲೇ ಜೀವನ, ಶ್ರದ್ಧೆಯಿಂದಲೇ ಜೀವನ ಸಾರ್ಥಕ, ಶ್ರದ್ಧೆಯೇ ಜೀವನದ ತಳಹದಿ, ಶ್ರದ್ಧೆಯೇ ಆಧ್ಯಾಥಮಿಕ ಸೌಧದ ಅಡಿಪಾಯ, ಶ್ರದ್ಧೆಯೇ ದೇವರ ದರ್ಶನ ಕೃಪೆ ಪಡೆಯಲು ಇರುವ ದಿವ್ಯ ಸಾಧನ. ಶ್ರದ್ಧೆಯಿದ್ದರೆ ಎಲ್ಲವೂ ಸಾಧ್ಯ. ಅಸಾಧ್ಯವೆಂಬ ಮಾತೇ ಬರುವದಿಲ್ಲ.  *ಅಮೂಲ್ಯವಾದ ಶ್ರದ್ಧೆ ಒಂದೇ ದಿನದಲ್ಲಿ ದೊರಕುವದೇ....* ಶ್ರದ್ಧೆಗಾಗಿ ಅನ್ನ ನೀರು ತೊರೆಯಬೇಕು, ಎದ್ದು ಬಿದ್ದು ಆತನನ್ನು ಸ್ಮರಿಸುತ್ತಾ, ವಿದ್ಯೆ ವಿನಯಗಳನ್ನು ಗಳಿಸಿಕೊಂಡು, ಸಹನ ಮೊದಲಾದ ಅನೇಕ ಗುಣಗಳನ್ನು ರೂಢಿಸಿಕೊಂಡಾಗ, ಆ ದಾರಿಯಲ್ಲಿ ತುಂಬ ಪಯಣಿಸಿದಾಗ ಶ್ರದ್ಧೆ ಮೈಗೂಡುವದು.  *ಈಜಲು ಕಲಿಯಲು ನೀರಿಗೆ ಇಳಿಯಲೇಬೇಕು.....* ನದಿ ಭಾವಿ ಇವುಗಳ ಹೊರಗೆ ನಿಂತು ಈಜಲು ಕಲಿಯುವೆ ಅಂದರೆ ಅಸಾಧ್ಯದ ಮಾತೇ, ಹಾಗೆಯೇ ಆದ್ಯಾತ್ಮಿಕ ಮಾರ್ಗದಲ್ಲಿಳಿಯದೇ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುತ್ತೆವೆ ಎಂಬುವದು ಅಷ್ಟೇ ಅಸಾಧ್ಯದ ಮಾತು.  ನೀರಿಗಿಳಿದ ಮೇಲೆ ಅಂಜುತ್ತಾನೆ. ಒಂದೆರಡು ಬಾರಿ ವಿಫಲನೂ ಆಗುತ್ತಾನೆ. ಹಾಗೆಂದು ಈಜುವ ಪ್ರಯತ್ನವನ್ನೇ ಬಿಟ್ಟರೆ ಆ ದಡ ಎಂದಿಗೂ ಸೇರಲಾರ ಅದ...

*ಮಾಡು ಧರಣಿಯಾ ಬೇಡು ವರಗಳ.....*

Image
*ಮಾಡು ಧರಣಿಯಾ ಬೇಡು ವರಗಳ.....* ವರಗಳನ್ನು ಬೇಡುವವರು ನಾವು. ಬೇಡುವ ಹಕ್ಕು ಬರುವದು, ವರ ಪಡೆಯಲು ಬೇಕಾದ ಶ್ರೀಹರಿ ತೃಪ್ತಿಯನ್ನು ಮಾಡಿಸಿದಾಗ, ವರ ಕೊಡುವ ಶ್ರೀಹರಿಯ ಮಾತು ಕೇಳಿದಾಗ. ದೇವರ ಈ ಸರ್ಕಾರದಲ್ಲಿ, ಮಾತು ಕೇಳದೆ, ದೇವರನ್ನು ತುಷ್ಟಿಗೊಳಿಸದೇ, ದೇವರ ವಿರುದ್ಧವಾಗಿಯೇ ನಡೆದರೆ ಏನೂ ಪಡೆಯಲು ಸಾಧ್ಯವಿಲ್ಲ.  *ಅನಂತ ಅಪರಾಧ ಎನ್ನಲ್ಲಿ ಇರಲಾಗಿ ಬಿನ್ನಹಕೆ ಬಾಯಿಲ್ಲವಯ್ಯ* ಶ್ರೀಹರಿ ಹೇಳಿದ್ದು ಕೇಳದೆ, ವಿಧಿಸ್ಸದ್ದೆಲ್ಲವನ್ನೂ ಗಾಳಿಗೆ ತೂರಿ, ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿರುವ ಕಾರಣ, ಅನಂತ ಅಪರಾಧ ಎದುರಿಸಿದಾಗ ಫಲಕೊಡುವ  ದೇವರಿಗೆ ನಮ್ಮ ಮುಖ ತೋರಿಸುವ / ದೇವರೆದುರಿಗೆ ಬಿನ್ನೈಸುವ ಯೋಗ್ಯತೆಯನ್ನೇ  ಕಳೆದುಕೊಂಡಿದ್ದೇವೆ.  *ಮಾಡು ಧರಣಿ, ಬೇಡು ವರ* ಅಪೇಕ್ಷಿತವಾದದನ್ನು ಪಡೆಯಲು *ಧರಣಿ* ಮಾಡುವದು ಅಂದಿನಿಂದ ಕಂಡು ಬಂದ ವಿಧಾನ. ಧರಣಿ strike ಮಾಡಿ ಪಡೆಯುವದು ಸೂಕ್ತ ವಿಧಾನ. ಆದರೆ ಧರಣಾ ಕೂಡುವದು ಏನಿದೆ "ಒಂದು ಅನ್ಯಾಯ ನಡೆದಾಗ, ಇನ್ನೊಂದು ನಾನು ಸರಿ ಮಾರ್ಗದಲ್ಲಿ ಇದ್ದೇನೆ, ನನಗೆ ಮೋಸ ವಾಗ್ತಿದೆ" ಎಂಬ ಸ್ಥಿತಿ ಬಂದಾಗ. ಇಲ್ಲದಿದ್ದರೆ ನಮ್ಮ ಧರಣಿಗೆ ಬಿಡಿಕಾಸಿನ ಕಿಮ್ಮತ್ತೂ ಸಿಗುವದಿಲ್ಲ.  ದೇವರ ಈ ಸರ್ಕಾರದಲ್ಲಿ ಅನ್ಯಾಯವೆಂಬುವದು ಇಲ್ಲ. "ನಾನು ಮಾಡಿದ್ದೇನೆ ಆದರೆ  ಪಡೆದಿಲ್ಲ" ಎಂಬ ಮೋಸವೂ ಸರ್ವಥಾ ಇಲ್ಲ. "ನಾ ಏನು ಮಾಡಿದ್ದೇನೆ ಅದನ್ನೇ ಪಡೆಯುತ...

*ನಾಯಿಗೆ ಕೂಡಲು ಪುರುಸೊತ್ತು ಇಲ್ಲ, ಮಾಡಲು ಏನೂ ಕೆಲಸವಿಲ್ಲ.....*

*ನಾಯಿಗೆ ಕೂಡಲು ಪುರುಸೊತ್ತು ಇಲ್ಲ, ಮಾಡಲು ಏನೂ ಕೆಲಸವಿಲ್ಲ.....* ಏನು ಹೇಳಿದರೂ ನನಗೆ ಸಮಯವೇ ಇಲ್ಲ, ನಾನು ತುಂಬ ಬ್ಯುಸಿ, ನನ್ನಿಂದಾಗದು, ಈ ಮಾತುಗಳನ್ನು ಅನೇಕ ಕಡೆ ಕೇಳಿರುತ್ತೇವೆ. ನನಗೆ ಸಮಯ ಬೇಕಾದಷ್ಟು ಇದೆ, ಸಮಯದ ಕೊರತೆ ಇಲ್ಲ ಎಂದು ಹೇಳುವವರು ತುಂಬಾ ವಿರಳ. ಆದರೆ "ಟೈಮೇ ಇಲ್ಲ- ಸಮಯವಿಲ್ಲ" ಎಂದು ಹೇಳುವವರೇ ಎಲ್ಲರು.  ಮುಂಬಯಿ ಅಲ್ಲಿರುವಾಗ ನನಗೊಬ್ಬರು "ಮುಂಬಯಿಯಲ್ಲಿ ಯಾರಿಗೂ ಸಮಯ ಇಲ್ಲ. ಏನು ಮಾಡುತ್ತೇವೆ ಎಂದು ಕೇಳಬೇಡ" ಎಂದು ಹೀಗೆ ಹೇಳಿದ ಮಾತು ಕೇಳಿದ  ನೆನಪು. ಹಾಗೆ ನೋಡಿದರೆ ನಾವೂ ಏನೂ ಮಾಡುತ್ತಿಲ್ಲ, ಸಮಯ ಮಾತ್ರವಿಲ್ಲ. ಅಂತಹವರಿಗಾಗಿಯೇ.... "ನಾಯಿಗೆ ಕೂಡಲು ಪುರುಸೊತ್ತು ಇಲ್ಲ, ಮಾಡಲು ಏನೂ ಕೆಲಸವಿಲ್ಲ"  ಈ ಗಾದೆ ಮಾತು... ಹೀಗೆಂದ ಮಾತ್ರಕ್ಕೆ ಏನೂ ಮಾಡುವದೇ ಇಲ್ಲ ಎಂದು ಹೇಳಲು ಹೊರಟಿಲ್ಲ. ಏನೇನೋ ಮಾಡುತ್ತೇವೆ. ಯಾವುದು ಉಪಯುಕ್ತ, ಎಷ್ಟು ಉಪಯುಕ್ತ, ಯಾವದು ಅನುಪಯುಕ್ತ ಎಂಬುವದರ ಕಡೆ ಗಮನವಿರುವದಿಲ್ಲ. ಹೆಚ್ಚು ಅನುಪಯುಕ್ತಗಳನ್ನೇ ಮಾಡುತ್ತಿರುತ್ತೇವೆ. "ಉಪಯುಕ್ತ ಅನುಪಯುಕ್ತ ಯಾವದು ಎಂದು ವಿಂಗಡಿಸಿಕೊಂಡರೆ ಸಮಯವ ಅವಶ್ಯವಾಗಿ ಸಿಕ್ಕೇ ಸಿಗುವದು." *ಅನುಪಯುಕ್ತ ಕೆಲಸವೇ ಅಪ್ಯಾಯಮಾನ...* ಕೆಲವೊಮ್ಮೆ ಅನುಪಯುಕ್ತ ಕೆಲಸವೇ ಅತ್ಯಂತ ಆಪ್ಯಾಯಮಾನವಾಗಿರುತ್ತದೆ. ಅಂತೆಯೇ ಅದರಲ್ಲಿ ತುಂಬ ತೊಡಗಿಕೊಳ್ಳುತ್ತೇವೆ. ಅಲ್ಲಿಯೇ ತುಂಬ ಸಮ...

*ದೈವ ಕೃಪೆಯ ಕಾವಲು.....*

Image
*ದೈವ ಕೃಪೆಯ ಕಾವಲು.....* ದೈವವನ್ನು ನಂಬದ ಜನರಿಗೆ ಕಾವಲುಗಾರರನೇಕರ ಅವಶ್ಯಕತೆ ಇಂದು ಇದೆ. ಯಾರು ಪೂರ್ಣ ಮಟ್ಟದ ದೈವವನ್ನು ನಂಬಿ, ಆ ದೇವನನ್ನೇ ಕಾವಲುಗಾರನನ್ನಾಗಿ ಪಡೆದಿದ್ದಾನೆ ಅವನಿಗೆ ಮತ್ಯಾವ ಕಾವಲುಗಾರರ ಅವಶ್ಯಕತೆ ಬೀಳುವದೇ ಇಲ್ಲ.  ಇಂದು ಕಾವಲುಗಾರ ಮನೆ ಕಾಯ್ತಿರುತ್ತಾನೆ. ಹೊರಗಿನಿಂದ ಒಳಗೆ ಯಾರೂ  ಬರದ ಹಾಗೆ ಅಥವಾ ಒಳಗಿನ ಪದಾರ್ಥ ಬೆರೊಬ್ಬ ಹೊರಗೆ ಒಯ್ಯದ ಹಾಗೆ ನೋಡಿಕೊಳ್ಳಬಹುದು. ಆದರೆ ಒಳಗೇ, ಒಳಗಿರುವವರಿಂದಲೆ ಅವಗಢಗಳು ನಡೆದಾಗ ಅವನು ಅಸಹಾಯಕ ಅಷ್ಟೇ ಅಲ್ಲ ಅನುಪಯುಕ್ತನೂ ಹೌದು. ಅಂತೆಯೇ ಟೀಜೋರಿ ಲಾಕ್ ಮಾಡುವ ಪ್ರಸಂಗ.  ದೈವೀಕೃಪೆಯ ಅಮೋಘ ಕಾವಲನ್ನು ಪಡೆದ ವ್ಯಕ್ತಿಗೆ ಹೊರ ದಾಳಿಗಳೂ ಇರುವದಿಲ್ಲ, ಒಳಗೂ ದಾಳಿಗಳಾಗುವದಿಲ್ಲ, ಮನಸ್ಸನಲ್ಲಿಯೂ ಯಾವುದೇ ತರಹದ ಧಾಳಿಗಳೂ ಆಗುವದಿಲ್ಲ ಹಾಗೆ ದೈವೀಬಲ ನಮ್ಮನ್ನು ಸಂರಕ್ಷಿಸುತ್ತದೆ.  *ದೈವೀ ಕೃಪೆಯ ಪರಾಕಾಷ್ಠೆ ದ್ರೌಪದಿಯಲ್ಲಿ ಕಾಣುತ್ತೇವೆ...* ದ್ರೌಪದೀದೇವಿಯು ಗುರು ಹಿರಿಯರು ಕುಳಿತ, ಪತಿಯರು ಇರುವ ಅತ್ಯತ್ತಮ ಸಭೆಯಲ್ಲಿ ಮಾನಭಂಗವಾಗುವ ಪ್ರಸಂಗ ಎದುರಾದರೆ, ಬಲಾಢ್ಯ ಪತಿಗಳೂ ಕೈಚೆಲ್ಲಿ ಕುಳಿತ ದುರ್ಭರ ಪ್ರಸಂಗ ಎದುರಾದಾಗ ಆ ದ್ರೌಪದಿಯನ್ನು ರಕ್ಷಿಸಿರುವದು ಯಾವದು... ?? *ದೈವೀ ಕೃಪೆಯೆಂಬ ಕಾವಲುಗಾರನೇ* ರಕ್ಷಿಸಿರುವದು ಪ್ರಸಿದ್ಧವಲ್ಲವೆ.... *ಜ್ಙಾನಿಗಳ ಒಂದು ಅನುಭವ....* ಈ ಜಗದ ಕಿತ್ತಾಟ ನೋಡಿ ಬೇಸತ್ತ ಜ್ಙ...

*ಅಳಲೂ ಆಗದ, ಆಳಲೂ ಆಗದ ಅವಸ್ಥೆ ಅವಲೋಕನದಲ್ಲಿ.....*

Image
*ಅಳಲೂ ಆಗದ, ಆಳಲೂ ಆಗದ ಅವಸ್ಥೆಯ ಅವಲೋಕನದಲ್ಲಿ.....* "ಆಳಲೂ ಆಗದ, ಆಳಲೂ ಆಗದ ಅವಸ್ಥೆ" ಇದೊಂದು ವಿಚಿತ್ರ ಅವಸ್ಥೆ. ಈ ಅವಸ್ಥೆ ಮುಕ್ತಿಯೋಗ್ಯರೆಲ್ಲರೂ ಪಡೆಯುವ ಅವಸ್ಥೆ.  ಆಳಲು ಬಾರದ ಮನುಷ್ಯ ಅಳುವ, ಆಳ್ವಿಕೆಯಲ್ಲಿ ಒಳಗಾದ ಮನುಷ್ಯ ಅಳುವ. ಅಳು ಪರಿಹರಿಸಿಕೊಳ್ಳಲು ಆಳಲು ತೊಡಗುವ. ಆಳುವದರಲ್ಲಿ ವಿಫಲನಾದಾಗ, ಆಳ್ವಿಕೆಯಲ್ಲಿ ಸಿಗುವ, ಮತ್ತೆ ಅಳು, ಹೀಗೆಯೇ ಸಂಸಾರದ ಸ್ಥಿತಿಗತಿ...  ಗೊಂದಲದ ನಿರ್ಧಾರಗಳಿಂದ ವ್ಯಸನಗಳ ಗೂಡು ಆಗುವ. ವ್ಯಸನಗಳಿರುವಾಗ ನಗು ಮುಖವಾಡವಾಗಿರುತ್ತದೆಯೆ ಹೊರತು ನೈಜವಾಗಿರುವದಿಲ್ಲ. ನೈಜ ನಗು ನಮ್ಮದಾಗಲು ಗೊಂದಲಗಳೆಲ್ಲವನ್ನೂ ಹೊರಹಾಗಿ ಮನಸದಸನ್ನು ಹಸ ಮಾಡುವದು ಅನಿವಾರ್ಯ.  ಮನಸ್ಸಿನಲ್ಲಿ ಗೊಂದಲಗಳು ಇರುವಾಗ ನಿರ್ಣಯಗಳೆಲ್ಲವೂ ಎಡವಟ್ಟು ಆಗಿರುತ್ತವೆ. ಎಡವಟ್ಟು ನಿರ್ಣಯಗಳಿಂದ ಇಂದಿಲ್ಲ ನಾಳೆ ಅಳುವದಂತೂ ತಪ್ಪಿದ್ದಲ್ಲ.  ಅಳುವವನಿಗೆ ಆಳುವದು ಎಂದಿಗೂ ಬರುವದಿಲ್ಲ. ಆಳುವವನಿಗೆ ಅಳು ಬಿಟ್ಟಿದ್ದಲ್ಲ. ಆಳುವದರಿಂದ ದೂರಾದವ ಅಳುವನ್ನು ಕಳೆದುಕೊಳ್ಳುವದರ ಜೊತೆಗೆ ಹರಿಗೆ ಪ್ರಿಯನೂ ಆಗುವ. ಅಳುವಿಲ್ಲದ ಹರಿಪ್ರಿಯನಿಗೆ ಮುಕ್ತಿಯೊಂದೇ ಮಾರ್ಗ....  ಸರಿಯಾದ ನಿರ್ಣಯಕ್ಕೆ ಬೇಕು ನಿರ್ಮಲ, ಶುದ್ಧ, ಸ್ವಚ್ಛ, ಕಲಬೆರಿಕೆಯಿಲ್ಲದ  ಮನಸ್ಸು.  ಶುದ್ಧ ಸ್ವಚ್ಛ ಕಲಬೆರಿಕೆ ರಹಿತ ಮನಸ್ಸಿಗೆ *ಏಕಾಗ್ರತೆ* ಅನಿವಾರ್ಯ. ಏಕಾಗ್ರತೆ ಬರುವದು ಹೇಗೆ.. ??  ...

*ಊಟ - ನಿದ್ರೆ ಮಾಡಲು ಬರುತ್ತದೆಯಾ..... ???*

Image
*ಊಟ - ನಿದ್ರೆ ಮಾಡಲು ಬರುತ್ತದೆಯಾ..... ???* "ಊಟ - ನಿದ್ರೆ ಮಾಡಲು ಬರುತ್ತದೆಯಾ..... ???ಬರತ್ತೆ ಎಂದೆ. ಹಾಗಾದರೆ ನಿನಗೆ ಊಟ ನಿದ್ರೆ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು." ನನಗೋ  ಈ ಮಾತಿಗೆ ಏನು ಉತ್ತರಿಸಬೇಕೋ ಸ್ವಲ್ಪ ಗೊಂದಲವಾಯಿತು. "ಮಾತಾಡಿ ಅವಮಾನಕ್ಕೆ ಗುರಿಯಾಗುವದಕ್ಕಿಂತಲೂ, ಮಾತಾಡದೇ ಗೌರವ ಉಳಿಸಿಕೊಳ್ಳುವದು ಲೇಸು" ಎಂದು ಭಾವಿಸಿ ಸುಮ್ಮನಾದೆ.  ಅಂದಿನಿಂದ ಅನೇಕ ದಿನಗಳವರೆಗೆ "ಊಟ - ನಿದ್ರೆ ಮಾಡಲು ಕಲೆತೆಯಾ..... ???" ತಲೆಯಲ್ಲಿ ಕೊರಿತಾ ಇದೆ. ಮೊನ್ನೆ ಉಡಪಿಯಲ್ಲಿ ಉಥತರಾದಿ ಮಠ ಶ್ರೀಗಳನ್ನು ಹಾಗೂ ಫಲಿಮಾರು ಮಠ ಶ್ರೀಗಳನ್ನು ನೋಡಿದಾಗ ಉತ್ತರ ಸಿಕ್ಕಿತು.  ಉತ್ತರ ಕೊನೆಗೆ ತಿಳಿಯೋಣ...  ಊಟ ಹಾಗೂ ನಿದ್ರೆಯೇ ಜೀವನದ ಉದ್ಯೇಶ್ಯ ಆದರೆ ಇಂದು ನಮಗೆ ಅಕ್ಷರಶಃ ಊಟ ಹಾಗೂ ನಿದ್ರೆ ಮಾಡಲೇ ಬರುವದಿಲ್ಲ. ಇಂದಿನ ಯುವಕರಿಗೆ ಈ ಎರಡನ್ನೂ ಚೆನ್ನಾಗಿ ಕಲಿಸುವದು ಅನಿವಾರ್ಯ.  "ಊಟ ಮಾಡುವದು ಪುಷ್ಟನಾಗಿ ಇರಲು. ನಿದ್ರೆ ಮಾಡುವದು  ಆಯಾಸ ದಣಿವು ಕಳೆದುಕೊಳ್ಳಲು." ಆದರೆ ಇಂದು ಊಟ ಹೀಗಾಗಿರತ್ತೆ ಎಂದರೆ ಊಟವಾದ ಕ್ಷಣಕ್ಕೆ ತುಂಬಾ ಆಯಾಸು ದಣಿವಾಗಿ, ಕಣ್ಣು ಮುಚ್ಚಲೇ ಆರಂಭಿಸಿರುತ್ತದೆ. ನಿದ್ರೆ ಆವರಿಸಿಯೇ ಬಿಡುತ್ತದೆ. ದಿನದ ದಣಿವು ನಿವಾರಿಸಿಕೊಳ್ಳಲು ನಿದ್ರೆ ಅನಿವಾರ್ಯ. ಎಂಟು ಗಂಟೆ ಮಾಲಗಿ ಎದ್ದರೂ, ಎದ್ದಾಕ್ಷಣ ಲವಲವಿಕೆ ಇರದೇ,  ಇನ್ನೂ ಆಯಾಸ ದಣಿವು ...

*ಹುಚ್ಚುತನ ಗುಣಪಡಿಸಲು ಮಹಾ ಹುಚ್ಚನೇ ಆಗಬೇಕು...*

*ಹುಚ್ಚುತನ ಗುಣಪಡಿಸಲು ಮಹಾ ಹುಚ್ಚನೇ ಆಗಬೇಕು...* ಹುಚ್ಚು ಅನೇಕವಿಧ.‌ ಹುಚ್ಚು ಬಿಡಿಸುವ ಪ್ರಯತ್ನ ಮಾಡುವವರೂ ಅನೇಕ. ಯಶಸ್ವಿಯಾಗುವವರು ಕೆಲವರೇ. ಆ ಯಶಸ್ವೀ ಪುರುಷ ಹುಚ್ಚನಿಗಿಂತಲೂ ಮಹಾ ಹುಚ್ಚನೇ ಆಗಿರುವ.  ಒಂದು ಪಟ್ಟಣ. ಪಟ್ಟಣದಲ್ಲಿ ಸಾಮಂತರಾಜ. ಆ ರಾಜನ ಮಗನಿಗೆ ಒಂದು ವಿಚಿತ್ರ ಹುಚ್ಚು.  ನಾಯಿಯ ಥರಹ ಬೌ ಬೌ ಎಂದು ಒದರುವ, ಬೆತ್ತಲೆ ಓಡಾಡುವ. ನಾಯಿ ತರಹ ಕಂಡದ್ದು ನೆಕ್ಕಿ ತಿನ್ನುವ. ಈ ತರಹ ನಾಯಿ ಹುಚ್ಚು ಬಡಿದುಕೊಂಕಡಿತ್ತು.  ಯುವರಾಜನಿಗಿರುವ ಈ ಹುಚ್ಚು ಬಿಡಿಸಲು ಶತಪ್ರಯತ್ನ ಮಾಡಿದ. ನೂರಾರು ಪ್ರಸಿದ್ಧ ವೈದ್ಯರೂ ಬಂದರು. ಮಂತ್ರ- ತಂತ್ರಗಳಿಗೂ ಹುಚ್ಚು ಬಗಿಹಿರಿಯಲಿಲ್ಲ. ಕೊನೆಗೆ ಹತಾಶನಾಗಿ ಆಸೆಯೇ ಬಿಟ್ಟ.  ಒಂದು ದಿನ  *ನ್ಯಾಸ*  ರಾಜನ ಬಳಿ ಬಂದು ಹೇಳಿದ. "ನಿನ್ನ ಮಗನಿಗಿರುವ ಹುಚ್ಚು ನಾನು ಬಿಡಿಸುವೆ" ಎಂದು. ರಾಜನಿಗೋ ಈ ನ್ಯಾಸನನ್ನು ನೋಡಿದಾಗಲೇ ಒಂದು ತರಹ ಕಸಿವಿಸಿ. ಇವನೋ ನೋಡಲೇ ಹುಚ್ಚು ವೇಷ. ಹುಚ್ಚರ ತರಹ ಮಾತು.  "ನೀನೇ ಮಹಾ ಹುಚ್ಚ ಇದ್ದಿಯಾ, ಅವನ ಹುಚ್ಚೇನು ಬಿಡಿಸುತ್ತೀ" ಎಂದು ರೇಗಿಯೇ ಬಿಟ್ಟ ರಾಜ. *ಹುಚ್ಚರ ಹುಚ್ಚುತನ ಬಿಡಿಸಲು ಮಹಾ ಹುಚ್ಚರೇ ಬೇಕು* ನನಗೊಂದು ಆಸ್ಪದ ಕೊಡು ಪ್ರಯತ್ನ ಮಾಡುವೆನೆಂದು.  ಈ ಮಹಾ ಹುಚ್ಚ, ಆ ಹುಚ್ಚನ ಬಳಿ ನಾಯಿಯ ಹಾಗೆ ಬೌ ಬೌ ಎಂದು ಒದರುತ್ತಾ ಓಡಿ ಪಕ್ಕ ಹೋಗಿ ಕುಳಿತ. ಯುವರಾಜ ಕೇಳಿದ ನೀ ಹೇಗೇಕೆ ಒದರೋದು.....